For Quick Alerts
ALLOW NOTIFICATIONS  
For Daily Alerts

ಮೇಕಪ್ ಬ್ಯಾಗ್‌ನಲ್ಲಿ ಇರಲೇಬೇಕಾದ ಸಾಮಗ್ರಿಗಳು

|

ಮೇಕಪ್ ಬಗ್ಗೆ ಇಂದಿನ ಮಹಿಳೆಯರಿಗೆ ಹೇಳಬೇಕಾಗಿಲ್ಲ. ಯಾಕೆಂದರೆ ಅವರಿಗೆ ಪ್ರತಿಯೊಂದು ಅಂಗೈಯಲ್ಲಿರುವ ಮೊಬೈಲ್ ನಲ್ಲಿ ಸಿಗುವುದು. ಆದರೆ ಹೊಸದಾಗಿ ಮೇಕಪ್ ಹಚ್ಚಿಕೊಳ್ಳಲು ಶುರು ಮಾಡಿದವರು ಕೆಲವೊಂದು ವಿಚಾರಗಳನ್ನು ಗಮನಿಸಬೇಕು. ಯಾಕೆಂದರೆ ಇದು ಮುಂದೆ ಅವರಿಗೆ ತುಂಬಾ ನೆರವಿಗೆ ಬರುವುದು. ಮೇಕಪ್ ನಲ್ಲಿ ಮಾಡುವಂತಹ ತಪ್ಪುಗಳನ್ನು ಇದರಿಂದ ತಪ್ಪಿಸಬಹುದು. ಹೊಸದಾಗಿ ಮೇಕಪ್ ಹಚ್ಚಿಕೊಳ್ಳಲು ಆರಂಭಿಸಿದ ವೇಳೆ ಬೇರೆಯವರು ಹೇಳಿದರೆಂದು ಪ್ರತಿಯೊಂದು ಉತ್ಪನ್ನವನ್ನು ತಂದು ಮೇಕಪ್ ಮಾಡಿಕೊಳ್ಳುವರು. ಆದರೆ ಇದರಿಂದ ಹಲವಾರು ರೀತಿಯ ಹಾನಿಯಾಗುವುದು ಮತ್ತು ಮುಖದ ನೈಜ ಸೌಂದರ್ಯವು ಕೆಟ್ಟು ಹೋಗಬಹುದು.

Makeup Bag

ಇಂತಹ ಸಂದರ್ಭದಲ್ಲಿ ನೀವು ಮಾಡಬೇಕಾದರೆ ಕೆಲಸವೆಂದರೆ ಈ ಲೇಖನದಲ್ಲಿ ಹೇಳಿರುವಂತಹ ಕ್ರಮಗಳನ್ನು ಪಾಲಿಸಿಕೊಂಡು ಹೋಗಿ. ನೀವು ಮೇಕಪ್ ಗಾಗಿ ಒಂದು ಸಣ್ಣ ಬ್ಯಾಗ್ ನ್ನು ಇಟ್ಟುಕೊಳ್ಳಿ. ಅದರಲ್ಲಿ ಬೇಕಿರುವಂತಹ ಎಲ್ಲಾ ಉತ್ಪನ್ನಗಳನ್ನು ಹಾಕಿಕೊಳ್ಳಿ. ಹಾಗೆ ನೀವು ಮೇಕಪ್ ಸಾಮಗ್ರಿಗಳನ್ನು ಖರೀದಿಸಲು ಹೋದಾಗ ತುಂಬಾ ಎಚ್ಚರಿಕೆ ವಹಿಸಬೇಕು. ಅದರಲ್ಲಿ ಬೆರೆಸಿರುವಂತಹ ರಾಸಾಯನಿಕಗಳ ಬಗ್ಗೆ ಗಮನಹರಿಸಿ ಖರೀದಿ ಮಾಡಬೇಕು. ಮೇಕಪ್ ಬ್ಯಾಗ್ ನಲ್ಲಿ ನೀವು ಏನೆಲ್ಲಾ ಇಟ್ಟುಕೊಳ್ಳಬಹುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಅದನ್ನು ತಿಳಿಯಲು ತಯಾರಾಗಿ...

ಮೊಶ್ಚಿರೈಸರ್

ಮೊಶ್ಚಿರೈಸರ್

ಮೊಶ್ಚಿರೈಸರ್ ನ ಪ್ರಾಮುಖ್ಯತೆ ಏನು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಮೇಕಪ್ ನಲ್ಲಿ ಯಾವುದೇ ಅಡೆತಡೆಗಳು ಇಲ್ಲದಂತೆ ಮಾಡಲು ನೀವು ಮೊಶ್ಚಿರೈಸರ್ ನ ಬೇಸ್ ಹಾಕಿಕೊಳ್ಳಬೇಕು. ಮೊಶ್ಚಿರೈಸರ್ ಚರ್ಮಕ್ಕೆ ತೇವಾಂಶ ನೀಡುವುದು ಮತ್ತು ಮೇಕಪ್ ಹಾಕಿದ ಬಳಿಕ ಚರ್ಮವು ಅತಿಯಾಗಿ ಎಣ್ಣೆಯಂಶ ಸ್ರವಿಸುವುದನ್ನು ತಡೆಯುವುದು. ನೀವು ತುಂಬಾ ಲಘುವಾಗಿರುವಂತಹ ಮೊಶ್ಚಿರೈಸರ್ ನ್ನು ಆಯ್ಕೆ ಮಾಡಿಕೊಳ್ಳಿ. ಇದನ್ನು ಚರ್ಮವು ಬೇಗನೆ ಹೀರಿಕೊಳ್ಳುವುದು.

ಫೌಂಡೇಶನ್

ಫೌಂಡೇಶನ್

ಇಂದಿನ ದಿನಗಳಲ್ಲಿ ಅತಿಯಾದ ಕಲುಷಿತ ವಾತಾವರಣ ಮತ್ತು ಧೂಳು ಹಾಗೂ ಇನ್ನಿತರ ಕಲ್ಮಷದಿಂದಾಗಿ ಚರ್ಮದ ಬಣ್ಣವನ್ನು ಹೆಚ್ಚಿಸುವುದು ಒಂದು ಕನಸಾಗಿರುವುದು. ಇಂತಹ ಸಂದರ್ಭದಲ್ಲಿ ಫೌಂಡೇಶನ್ ಪ್ರಮುಖ ಪಾತ್ರ ವಹಿಸುವುದು. ಒಳ್ಳೆಯ ರೀತಿಯ ಫೌಂಡೇಶನ್ ನ್ನು ನೀವು ಖರೀದಿ ಮಾಡಿ ಮತ್ತು ಅದು ಚರ್ಮದ ಕಲೆಗಳನ್ನು ಮರೆಮಾಚುವಂತಿರಲಿ. ಇದು ನಿಮ್ಮ ಚರ್ಮದ ನೈಸರ್ಗಿಕ ಬಣ್ಣಕ್ಕೆ ಹೊಂದಿಕೊಳ್ಳುವಂತಿರಲಿ. ನಿಮ್ಮ ನಿರೀಕ್ಷೆಯ ಬಣ್ಣವು ಸಿಗದೇ ಇದ್ದಾಗ ನೀವು ಎರಡು ಬಣ್ಣಗಳನ್ನು ಸೇರಿಸಿಕೊಂಡು ನಿಮಗೆ ಬೇಕಿರುವಂತಹ ಬಣ್ಣವನ್ನು ಪಡೆಯಬಹುದು.

ಕನ್ಸಿಲರ್

ಕನ್ಸಿಲರ್

ಕಪ್ಪು ಕಲೆಗಳು, ಬೊಕ್ಕೆಗಳು ಮತ್ತು ವರ್ಣ ಕುಂದುವುದನ್ನು ನಿವಾರಣೆ ಮಾಡಲು ಕನ್ಸಿಲರ್ ಬೇಕೇಬೇಕು. ಇದು ಸಂಪೂರ್ಣ ಮುಖವನ್ನು ಆವರಿಸಿಕೊಂಡು ಚರ್ಮಕ್ಕೆ ಕಾಂತಿ ನೀಡುವುದು. ಇದು ಫೌಂಡೇಶನ್ ತಲುಪದ ಜಾಗಕ್ಕೂ ತಲುಪುವುದು. ಕ್ರೀಮ್ ಮೂಲದ ಅಥವಾ ಕಣ್ಣಿನ ಕೆಳಗಡೆ ರೋಲ್ ಮಾಡುವಂತಹ ಕನ್ಸಿಲರ್ ಬಳಸಿ ಕೊಳ್ಳಬಹುದು. ಇದು ಬಳಸಲು ತುಂಬಾ ಸುಲಭ ಮತ್ತು ಕಣ್ಣಿನ ಕೆಳಗಡೆ ಕಾಣಿಸುವ ಊತ ನಿವಾರಣೆ ಮಾಡುವುದು.

ಐಲೈನರ್

ಐಲೈನರ್

ಮೇಕಪ್ ನಲ್ಲಿ ಐ ಲೈನರ್ ಎನ್ನುವುದು ತುಂಬಾ ಮುಖ್ಯ ಭಾಗವಾಗಿದೆ. ಐ ಲೈನರ್ ನಿಂದ ಕಣ್ಣುಗಳು ತುಂಬಾ ಸುಂದರ ಹಾಗೂ ಎದ್ದುಕಾಣುವಂತೆ ಮಾಡುವುದು. ಐ ಲೈನರ್ ನಿಂದ ನಿಮ್ಮ ಕಣ್ಣುಗಳಿಗೆ ಬೇಕಿರುವಂತಹ ಸೌಂಧರ್ಯವು ಸಿಗುವುದು. ಐ ಲೈನರ್ ಬಳಸಲು ನೀವು ಹೊಸಬರಾಗಿದ್ದರೆ ಆಗ ನೀವು ಗ್ಲೈಡ್ ಆನ್ ಐ ಪೆನ್ಸಿಲ್ ಅಥವಾ ಲಿಕ್ವಿಡ್ ಐ ಲೈನರ್ ಬಳಸಿಕೊಳ್ಳಬಹುದು.

ತುಟಿ ಮತ್ತು ಕೆನ್ನೆಗೆ ಟಿಂಟ್

ತುಟಿ ಮತ್ತು ಕೆನ್ನೆಗೆ ಟಿಂಟ್

ಮೇಕಪ್ ನಲ್ಲಿ ತುಟಿ ಮತ್ತು ಕೆನ್ನೆಯ ಟಿಂಟ್ ಎಲ್ಲವೂ ಆಗಿರುವುದು. ಮೇಕಪ್ ಮಾಡಿಕೊಳ್ಳಲು ನಿಮಗೆ ಹೆಚ್ಚಿನ ಸಮಯವಿಲ್ಲದೆ ಇದ್ದರೆ ಆಗ ನೀವು ಕೆನ್ನೆಗೆ ಸ್ವಲ್ಪ ಬಣ್ಣ ಹಚ್ಚಿಕೊಂಡು ಇದನ್ನು ಮುಗಿಸಿಬಿಡಬಹುದು. ತುಟಿಗಳಿಗೆ ಬಣ್ಣ ಕೊಡುವುದು ಕೂಡ ಮೇಕಪ್ ಗೆ ಜೀವ ತುಂಬುವುದು. ನೀವು ಖರೀದಿ ಮಾಡಲು ಬಯಸುವುದಾದರೆ ಆಗ ಕ್ರೀಮ್ ಫಾರ್ಮುಲಾ ಆಯ್ಕೆ ಮಾಡಿ. ಇದು ಒಂದು ರೀತಿಯಲ್ಲಿ ಟು ಇನ್ ವನ್ ಉತ್ಪನ್ನವಾಗಿದೆ. ಇದು ತುಂಬಾ ಸುಲಭವಾಗಿ ನಿಮ್ಮ ಬ್ಯಾಗ್ ನಲ್ಲಿ ಕುಳಿತುಕೊಳ್ಳುವುದು.

ಹುಬ್ಬುಗಳು

ಹುಬ್ಬುಗಳು

ಹುಬ್ಬುಗಳನ್ನು ಸರಿಪಡಿಸುವುದರಿಂದ ಮೇಕಪ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ನೀವು ಭಾವಿಸಿರಬಹುದು. ಆದರೆ ಇದು ನಿಜವಲ್ಲ. ನೀವು ಹುಬ್ಬುಗಳನ್ನು ಸರಿಯಾಗಿ ಕತ್ತರಿಸಿಕೊಂಡರೆ ಆಗ ಮೇಕಪ್ ನಲ್ಲಿ ತುಂಬಾ ಭಿನ್ನವಾದ ಪರಿಣಾಮ ಬೀರುವುದು. ನೀವು ಒಳ್ಳೆಯ ಹುಬ್ಬುಗಳ ಜೆಲ್ ಅಥವಾ ಪೌಡರ್ ನಂತಹ ಉತ್ಪನ್ನ ಖರೀದಿ ಮಾಡಿದರೆ ಆಗ ಅದರಿಂದ ನೈಸರ್ಗಿಕ ಕಾಂತಿ ಸಿಗುವುದು. ನೀವು ನೈಸರ್ಗಿಕವಾಗಿ ಹುಬ್ಬುಗಳನ್ನು ತಯಾರಿಸಿಕೊಳ್ಳಿ ಮತ್ತು ಅಂಚುಗಳು ತುಂಬಾ ಹರಿತವಾಗಿರಲಿ.

English summary

6 Must haves for your Makeup Bag

If you are someone who just stepped into the world of makeup, it is normal to feel overwhelmed with the amount of makeup stacked in stores. It is important to have a good amount of makeup in your bag that makes it easy to achieve an everyday look, especially when you are in a hurry. Once you have the basics in your bag, you will be able to achieve any makeup look in no time. Here is a guide to every makeup basics that you should own and include in your makeup bag.
Story first published: Tuesday, March 5, 2019, 13:28 [IST]
X
Desktop Bottom Promotion