For Quick Alerts
ALLOW NOTIFICATIONS  
For Daily Alerts

ಮೇಕಪ್ ಮಾಡುವಾಗ ಪದೇ ಪದೇ ಹಳೆಯ ಮೇಕಪ್‌ ಬ್ರಷ್‌ ಬಳಸುವುದು ತುಂಬಾನೇ ಅಪಾಯಕಾರಿ!

|

ಮೇಕಪ್ ಬ್ರಷ್ಹಾಗೂ ಬ್ಲೆಂಡರ್‌ಗಳು ಬಹುತೇಕ ಎಲ್ಲ ಯುವತಿಯರ ಅಚ್ಚು ಮೆಚ್ಚಿನ ಹಾಗೂ ಅತಿ ಅಗತ್ಯ ಮೇಕಪ್ ಸಾಧನಗಳಾಗಿವೆ. ಮುಖದ ಮೇಲೆ ಫೌಂಡೇಶನ್ ಹಚ್ಚಿಕೊಳ್ಳುವುದಿರಬಹುದು, ಗಲ್ಲಕ್ಕೆ ಹೊಳಪು ನೀಡಬಹುದಾಗಿರಬಹುದು ಎಲ್ಲದಕ್ಕೂ ಈ ಬ್ರಷ್ಹಾಗೂ ಬ್ಲೆಂಡರ್‌ಗಳು ಬೇಕೆ ಬೇಕು. ಪ್ರತಿದಿನ ಮೇಕಪ್ ಮಾಡಿಕೊಳ್ಳಲು ಬ್ರಷ್ಹಾಗೂ ಬ್ಲೆಂಡರ್‌ಗಳನ್ನು ಬಳಸುವುದರಿಂದ ಅವು ಪ್ರತಿನಿತ್ಯ ನಿಮ್ಮ ಚರ್ಮದ ಸಂಪರ್ಕಕ್ಕೆ ಬರುತ್ತವೆ.

ಆದರೆ ಬಹಳ ಸಮಯದಿಂದ ಅವೇ ಹಳೆಯ ಮೇಕಪ್ ಬ್ರಷ್ಹಾಗೂ ಬ್ಲೆಂಡರ್‌ಗಳನ್ನು ನೀವು ಬಳಸುತ್ತಿರುವಿರಾ? ಹಾಗಾದರೆ ಅದರಿಂದ ಏನೆಲ್ಲ ಪರಿಣಾಮಗಳಾಗಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೀವೇ ನೋಡಿ.

Dangers of Using the old Makeup Brushes for a Long Time

ಹಳೆಯ ಬ್ರಷ್ಹಾಗೂ ಬ್ಲೆಂಡರ್‌ಗಳನ್ನೇ ಬಹುಕಾಲದವರೆಗೆ ಉಪಯೋಗಿಸುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ. ದಿನಗಳೆದಂತೆ ಬ್ರಷ್ಹಾಗೂ ಸ್ಪಾಂಜ್‌ಗಳ ಮೇಲೆ ಕೀಟಾಣುಗಳು, ಬ್ಯಾಕ್ಟೀರಿಯಾ ಮತ್ತು ಧೂಳು ಸಂಗ್ರಹವಾಗುತ್ತವೆ. ಹೀಗಾಗಿ ಪ್ರತಿ ಬಾರಿ ಅವನ್ನು ಉಪಯೋಗಿಸಿದಾಗ ಕೀಟಾಣು ಹಾಗೂ ಬ್ಯಾಕ್ಟೀರಿಯಾಗಳನ್ನು ನಿಮ್ಮ ಚರ್ಮದ ರಂಧ್ರದೊಳಗೆ ನುಸುಳಲು ನೀವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ದೀರ್ಘಕಾಲದವರೆಗೆ ಹಳೆಯ ಬ್ರಷ್ಹಾಗೂ ಬ್ಲೆಂಡರ್‌ಗಳನ್ನೇ ಉಪಯೋಗಿಸುವುದರಿಂದ ಗಂಭೀರ ಸ್ವರೂಪದ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಹಳೆಯ ಬ್ರಷ್ಹಾಗೂ ಬ್ಲೆಂಡರ್‌ಗಳಿಂದ ಮೇಕಪ್ ಮಾಡಿಕೊಳ್ಳುವುದರಿಂದ ಉಂಟಾಗಬಹುದಾದ ಅಪಾಯಗಳು:

ಬ್ಯಾಕ್ಟೀರಿಯಾಗಳ ಬೆಳವಣಿಗೆ

ಬ್ಯಾಕ್ಟೀರಿಯಾಗಳ ಬೆಳವಣಿಗೆ

ಬಹುಕಾಲದಿಂದ ಅವೇ ಮೇಕಪ್ ಸಾಧನಗಳನ್ನು ಬಳಸುತ್ತಿದ್ದರೆ ಅವುಗಳಲ್ಲಿ ಬ್ಯಾಕ್ಟೀರಿಯಾ, ಧೂಳು, ಕಸ ಮತ್ತು ಸತ್ತ ಚರ್ಮದ ಜೀವಕೋಶಗಳು ಸಂಗ್ರಹಗೊಳ್ಳುತ್ತವೆ. ಮತ್ತೆ ಅವೇ ಸಾಧನಗಳನ್ನು ಬಳಸುವುದರಿಂದ ಪ್ರತಿದಿನ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮ ಪ್ರವೇಶಿಸಲು ಅವಕಾಶ ಮಾಡಿದಂತಾಗುತ್ತದೆ. ಇದರಿಂದ ಗಂಭೀರವಾದ ಚರ್ಮದ ಸೋಂಕು ಹಾಗೂ ಇನ್ನಿತರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿರುತ್ತವೆ.

ಹಳೆಯ ಹಾಗೂ ಹೊಲಸಾದ ಮೇಕಪ್ ಬ್ರಷ್ಬಳಕೆಯಿಂದ 'ಸ್ಟಾಫ್' ಎಂಬ ಬ್ಯಾಕ್ಟೀರಿಯಾ ಸೋಂಕು ಮಹಿಳೆಯರಲ್ಲಿ ಕಂಡು ಬರುತ್ತದೆ. ಮೇಕಪ್ ಮಾಡಿಕೊಳ್ಳುವಾಗ ಈ ಬ್ಯಾಕ್ಟೀರಿಯಾಗಳು ದೇಹದ ಇತರ ಭಾಗಕ್ಕೂ ಹರಡುತ್ತವೆ. ಇದರಿಂದ ಆಗಾಗ ಚರ್ಮದ ತುರಿಕೆ ಕಂಡು ಬರಬಹುದು. ಹೀಗಾಗಿ ಸಮಸ್ಯೆ ಕೈ ಮೀರುವ ಮುನ್ನ ನಿಮ್ಮ ಹಳೆಯ ಮೇಕಪ್ ಸಾಧನಗಳನ್ನು ಬದಲಾಯಿಸಿ.

Most Read: ಅಪಾಯಕ್ಕೆ ಆಹ್ವಾನ ನೀಡುವ ನಿಮ್ಮ ಮೇಕಪ್ ಕಿಟ್ ಬಗ್ಗೆ ಎಚ್ಚರ

ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚುವ ಅಪಾಯ

ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚುವ ಅಪಾಯ

ತೈಲ ಹಾಗೂ ಬೆವರಿನ ಬಿಡುಗಡೆಗಾಗಿ ಚರ್ಮದ ಮೇಲೆ ಅತಿ ಸೂಕ್ಷ್ಮವಾದ ರಂಧ್ರಗಳಿರುತ್ತವೆ. ಈ ರಂಧ್ರಗಳು ಮುಚ್ಚಿಹೋದಲ್ಲಿ ಚರ್ಮದ ಮೇಲೆ ಕಪ್ಪು, ಬಿಳಿ ಕಲೆಗಳು, ಮೊಡವೆಗಳು ಉಂಟಾಗಿ ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಧೂಳು ಹಾಗೂ ಮಣ್ಣು ಹಿಡಿದ ಹಳೆಯ ಮೇಕಪ್ ಬ್ರಶ್‌ನಿಂದ ಚರ್ಮದ ಮೇಲಿನ ಸೂಕ್ಷ್ಮ ರಂಧ್ರಗಳು ಮುಚ್ಚಿ ಹೋಗಬಹುದು. ಹೀಗಾಗಿ ಮೇಕಪ್‌ನಿಂದ ಚರ್ಮಕ್ಕೆ ಹೊಳಪು ನೀಡುವ ಬದಲು ಹಳೆ ಬ್ರಶ್‌ನಿಂದ ಚರ್ಮ ಕಳೆಗುಂದುವಂತಾಗಲು ಅವಕಾಶ ನೀಡಬೇಡಿ.

ಹಾಳಾಗುವ ಮೇಕಪ್ ಕ್ರಿಯೆ

ಹಾಳಾಗುವ ಮೇಕಪ್ ಕ್ರಿಯೆ

ಕೇವಲ ಸೋಂಕು ಮಾತ್ರವಲ್ಲದೆ ಹಳೆ ಬ್ರಶ್‌ನಿಂದ ಮೇಕಪ್ ಮಾಡಿಕೊಳ್ಳುವುದರಿಂದ ಇಡೀ ಮೇಕಪ್ ಕ್ರಿಯೆಯೇ ಹಾಳಾಗುತ್ತದೆ. ಧೂಳು, ಮಣ್ಣು ಹಿಡಿದ ಬ್ರಶ್‌ನಿಂದ ಸಮಾಂತರವಾಗಿ ಮೇಕಪ್ ಮಾಡಲು ಸಾಧ್ಯವಾಗದಿರಬಹುದು. ಹಾಳಾದ ಬ್ರಷ್ಕಾರಣದಿಂದ ಪದೇ ಪದೇ ಮೇಕಪ್ ಹಚ್ಚಬೇಕಾಗುವುದರಿಂದ ಎಲ್ಲೆಡೆ ಸಮಾನವಾಗಿ ಮೇಕಪ್ ಮಾಡಲಾಗುವುದಿಲ್ಲ. ಎಷ್ಟೆಲ್ಲ ಪ್ರಯತ್ನ ಪಟ್ಟರೂ ನೀವು ಬಯಸಿದ ಮೇಕಪ್ ಸೌಂದರ್ಯ ನಿಮ್ಮದಾಗದಿರಬಹುದು.

Most Read: ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಚರ್ಮದಲ್ಲಿ ಉರಿ ಅನುಭವ

ಚರ್ಮದಲ್ಲಿ ಉರಿ ಅನುಭವ

ಚರ್ಮದ ಮೇಲೆ ಜಿಡ್ಡು ಹಾಗೂ ಧೂಳು ಸಂಗ್ರಹವಾದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಬ್ಯಾಕ್ಟೀರಿಯಾ ಹಾಗೂ ಧೂಳಿನಿಂದ ಚರ್ಮ ಬಿರುಕು ಬಿಟ್ಟು ಸೋಂಕು ತಗುಲಬಹುದು. ಹೊಸ ಹಾಗೂ ಸ್ವಚ್ಛವಾದ ಮೇಕಪ್ ಬ್ರಶ್‌ಗಳು ಮೃದುವಾಗಿರುವುದರಿಂದ ಚರ್ಮಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಆದರೆ ಹಳೆಯ ಬ್ರಶ್‌ಗಳು ಬಿರುಸಾಗಿರುವುದರಿಂದ ಚರ್ಮದ ಮೇಲೆ ಗೀರುಗಳುಂಟಾಗಿ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಇದರಿಂದ ಚರ್ಮದಲ್ಲಿ ತುರಿಕೆ, ಉರಿಯ ಅನುಭವ ಆಗಬಹುದು.

Most Read: ಮೀನು ಸೇವಿಸಿದರೆ, ಹೃದಯಕ್ಕೆ ಒಳ್ಳೆಯದು ಅಲ್ಲದೆ ಹಲವಾರು ಕಾಯಿಲೆಗಳನ್ನೂ ನಿವಾರಿಸಬಹುದು

ಮೊಡವೆಗಳುಂಟಾಗುವ ಅಪಾಯ

ಮೊಡವೆಗಳುಂಟಾಗುವ ಅಪಾಯ

ನೀವು ಬಳಸುವ ಮೇಕಪ್ ಸಾಧನಗಳಿಂದಲೂ ಮೊಡವೆಗಳುಂಟಾಗಬಹುದು ಎಂಬುದು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ. ಅದೇ ಹಳೆಯ ಬ್ರಷ್ಹಾಗೂ ಬ್ಲೆಂಡರ್‌ಗಳನ್ನು ಬಳಸುವುದರಿಂದ ನಿಮಗೆ ಗೊತ್ತಿಲ್ಲದೆ ಅನೇಕ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮವನ್ನು ಪ್ರವೇಶಿಸುತ್ತವೆ. ಇದರಿಂದ ಮೊಡವೆ ಬರಬಹುದು ಹಾಗೂ 'ಸ್ಟಾಫ್' ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು. ಯಾವಾಗಲೂ ದುಬಾರಿ ಬೆಲೆಯ ಮೇಕಪ್ ಸಾಧನಗಳನ್ನು ಕೊಳ್ಳುವ ಬದಲು ಮಧ್ಯಮ ಬೆಲೆಯ ಸಾಧನಗಳನ್ನು ಕಂಡು ಅವುಗಳನ್ನು ಆಗಾಗ ಬದಲಾಯಿಸುವುದು ಜಾಣತನವಾಗಿದೆ. ಜೊತೆಗೆ ತಿಂಗಳಿಗೆ ಎರಡು ಬಾರಿಯಾದರೂ ನಿಮ್ಮ ಮೇಕಪ್ ಸಾಧನಗಳನ್ನು ತೊಳೆದು ಸ್ವಚ್ಛಗೊಳಿಸಬೇಕು.

English summary

Dangers of Using the old Makeup Brushes for a Long Time

Makeup brushes and blenders are the most favourite makeup tools of every girl. From applying the foundation evenly on your face to adding the little blush on your cheeks, they do everything for you. You use your makeup blenders and brushes daily and they come in contact with your skin every day. But are you using the same makeup brushes from a long time? Using the same makeup equipment for a long time can possess many dangers to the skin.
X
Desktop Bottom Promotion