For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಹುಷಾರು! ಲಿಪ್‍ಸ್ಟಿಕ್ ಬಳಕೆಯಿಂದ ಹೀಗೂ ಆಗಬಹುದು!

By Divya Pandith
|

ಸೌಂದರ್ಯವನ್ನು ಆಕರ್ಷಣೆಯ ಕೇಂದ್ರಬಿಂದುವಾಗಿಸುವ ಸೌಂದರ್ಯವರ್ಧಕ ಉತ್ಪನ್ನಗಳು ಆರೋಗ್ಯದ ಮೇಲೆ ಪರಿಣಾಮಕಾರಿಯಾದ ಹಾನಿಯನ್ನು ಉಂಟುಮಾಡುವುದು. ಅದರಲ್ಲೂ ತುಟಿಯ ಬಣ್ಣಗಳಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು ಎಂದು ಅನೇಕ ಸಂಶೋಧನೆಗಳು ದೃಢಪಡಿಸಿವೆ.

ತುಟಿಗೆ ಬಣ್ಣ ಹಚ್ಚುವುದರಿಂದ ಮುಖದ ಸೌಂದರ್ಯ ದ್ವಿಗುಣಗೊಳ್ಳುವುದು. ಅಲ್ಲದೆ ಉತ್ತಮ ಆಕರ್ಷಣೆಯನ್ನು ನೀಡುವುದು. ಆಕರ್ಷಣೆ ಹಾಗೂ ಸೌಂದರ್ಯ ವರ್ಧನೆಗಾಗಿ ಬಳಸುವ ತುಟಿಯ ಬಣ್ಣ ಮಹಿಳೆಯರಿಗೊಂದು ಶಾಪವಾಗಬಹುದು. ಈ ಕುರಿತು ನಿಮಗೆ ಇನ್ನಷ್ಟು ವಿಚಾರವನ್ನು ತಿಳಿದುಕೊಳ್ಳಬೇಕು ಎಂದೆನಿಸಿದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

kannada

1. ಲೋಹಗಳನ್ನು ಒಳಗೊಂಡಿದೆ:
ಲಿಪ್‍ಸ್ಟಿಕ್ ಕ್ರೋಮಿಯಂ, ಕ್ಯಾಡ್ಮಿಯಂ ಮತ್ತು ಮೆಗ್ನಿಸಿಯಮ್‍ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ಇವುಗಳ ಲೇಪನವನ್ನು ಚರ್ಮದ ಮೇಲೆ ಅನ್ವಯಿಸುವುದರಿಂದ ಅಪಾಯಕಾರಿ ರೋಗಗಳು ಹಾಗೂ ಅಂಗಹೀನ ಉಂಟಾಗುವ ಸಾಧ್ಯತೆಗಳಿವೆ. ತುಟಿಯ ಬಣ್ಣ ಆಹಾರದ ಜೊತೆಗೆ ಹೊಟ್ಟೆಗೆ ರವಾನೆಯಾಗುತ್ತದೆ. ಇದರಲ್ಲಿರುವ ಕ್ಯಾಡ್ಮಿಯಮ್ ಅಂಶವು ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮೂತ್ರಪಿಂಡದ ವೈಫಲ್ಯತೆ ಉಂಟಾಗುವ ಸಾಧ್ಯತೆಗಳಿವೆ. ಅನೇಕ ಬಾರಿ ಲಿಪ್‍ಸ್ಟಿಕ್ ಬಳಕೆ ಮಾಡುವುದರಿಂದ ಹೊಟ್ಟೆ ಹುಣ್ಣು ಉಂಟಾಗುವ ಸಾಧ್ಯತೆಗಳಿರುತ್ತವೆ.

2. ಸೀಸವನ್ನು ಹೊಂದಿರುವುದು
ಬಹುತೇಕ ತುಟಿಯ ಬಣ್ಣಗಳಲ್ಲಿ ಸೀಸವನ್ನು ಬಳಸಲಾಗುತ್ತದೆ. ಈ ಸೀಸವು ನ್ಯೂರೋಟ್ಯಾಕ್ಸಿನ್ ಮತ್ತು ನರಮಂಡಲ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದು. ಅಲ್ಲದೆ ಮೆದುಳಿನ ಹಾನಿಗೂ ಕಾರಣವಾಗಬಹುದು. ಇದರಿಂದ ಸ್ತ್ರೀಯರು ಹಾರ್ಮೋನ್ ಅಸಮತೋಲನ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ. ಇದರ ಬಳಕೆ ಅಲ್ಪ ಪ್ರಮಾಣದಲ್ಲಿಯೇ ಆಗಿದ್ದರೂ ಪರಿಣಾಮ ಮಾತ್ರ ಬಹುದೊಡ್ಡ ಹಾನಿಯನ್ನುಂಟುಮಾಡುವುದು.

3. ಪೆಟ್ರೋ ಕೆಮಿಕಲ್ಸ್:
ತುಟಿಯ ಬಣ್ಣಗಳ ತಯಾರಿಕೆಗೆ ಬಳಸಲಾಗುವ ವಸ್ತುಗಳ ಪೈಕಿ ಪೆಟ್ರೋ ಕೆಮಿಕಲ್ಸ್ ಸಹ ಒಂದು. ಇದನ್ನು ಕಚ್ಚಾ ತೈಲ ಮತ್ತು ಅನಿಲಗಳಿಂದ ತಯಾರಿಸಲಾಗುತ್ತದೆ. ಇದರ ಬಳಕೆಯಿಂದ ಎಂಡ್ರೋಕ್ರೈನ್ ಅಡ್ಡಿಗೆ ಕಾರಣವಾಗುವುದು. ಇದರಿಂದ ಬೆಳವಣಿಗೆ, ಸಂತಾನೋತ್ಪತ್ತಿಯ ಸಮಸ್ಯೆ, ಬುದ್ಧಿಮತ್ತೆ ಉಂಟಾಗುವ ಸಾಧ್ಯತೆಗಳಿರುತ್ತವೆ.

4. ಫಾರ್ಮಾಲ್ಡಿಹೈಡ್ ಮತ್ತು ಮಿನರಲ್ ಎಣ್ಣೆ
ಫಾರ್ಮಾಲ್ಡಿಹೈಡ್ ಎಂಬುದು ಒಂದು ಸಂರಕ್ಷಕ. ಇದನ್ನು ಮಾನವನ ಕ್ಯಾನ್ಸರ್ ಜನಕ ಎಂತಲೂ ಕರೆಯುತ್ತಾರೆ. ದಮ್ಮು, ಕೆಮ್ಮು, ಕಣ್ಣುಗಳ ತೊಂದರೆ ಹಾಗೂ ಚರ್ಮದ ಮೇಲೆ ಕೆರೆತ, ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಹುಟ್ಟಿಸುತ್ತದೆ. ಖನಿಜ ತೈಲವು ರಂಧ್ರಗಳನ್ನು ಮುಚ್ಚಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲೆ ನೇರವಾಗಿ ಪರಿಣಾಮ ಬೀರುವುದು. ಅಲ್ಲದೆ ಅನೇಕ ಬಗೆಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

5. ಪ್ಯಾರಾಬೆನ್ಸ್ ಮತ್ತು ಬಿಸ್ಮತ್ ಆಕ್ಸಿ ಕ್ಲೋರೈಡ್
ತುಟಿಯ ಬಣ್ಣ ತಯಾರಿಸುವಲ್ಲಿ ಬಳಸಲಾಗುವ ಇನ್ನೆರಡು ಪದಾರ್ಥಗಳು ಎಂದರೆ ಪ್ಯಾರಾಬೆನ್ಸ್ ಮತ್ತು ಬಿಸ್ಮತ್ ಆಕ್ಸಿ ಕ್ಲೋರೈಡ್. ಇವು ಕ್ಯಾನ್ಸರ್ ಕಣವನ್ನು ಉತ್ಪಾದನೆ ಮಾಡಲು ಅವಕಾಶಕಲ್ಪಿಸಿಕೊಡುತ್ತವೆ. ಇದನ್ನು ಲಿಪ್‍ಸ್ಟಿಕ್ ಬಣ್ಣ ಬಹುಬೇಗ ಆರದಿರಲು ಬಳಸುತ್ತಾರೆ. ಆದರೆ ಅದು ದೇಹದ ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿರುತ್ತವೆ. ನಿಮಗೆ ತುಟಿಯ ಬಣ್ಣವನ್ನು ಬಳಸದೆ ಇರಲು ಸಾಧ್ಯವಿಲ್ಲ ಎಂದಾದರೆ ಆದಷ್ಟು ಗುಣಮಟ್ಟದ ತುಟಿ ಬಣ್ಣವನ್ನು ಬಳಸಿ. ಕಳಪೆ ಮಟ್ಟದ ಲಿಪ್‍ಸ್ಟಿಕ್‍ಗಳೊಂದಿಗೆ ರಾಜಿಮಾಡಿಕೊಳ್ಳದಿರಿ. ಮನೆಯಲ್ಲಿಯೇ ತಯಾರಿಸಿಕೊಳ್ಳುವ ತುಟಿಯ ಬಣ್ಣಗಳು ಅತ್ಯುತ್ತಮವಾದುದ್ದು.

English summary

BEWARE: Harmful Effects Of Lipsticks

Every woman will have her favourite lipstick shade in her cosmetic box. There is no doubt that it is important to highlight a woman’s lips. After all, they are referred to as the ‘rosy lips’. But, there are many disadvantages of using lipsticks because of the materials that are used in making them. Care should be taken to use lipsticks only on special occasions or make sure that you apply lipstick once a day only. The quality of the lipstick also matters. Always prefer quality products, avoid cheap and low grade ones. This will drastically solve most of the problems that are caused by the lipsticks.
Story first published: Saturday, January 27, 2018, 16:02 [IST]
X
Desktop Bottom Promotion