ಚಿಟಿಕೆ ಹೊಡೆಯುವುದರೊಳಗೆ, 'ಮೇಕಪ್' ಮಾಡಿ ಮುಗಿಸಿ!

By: Suma
Subscribe to Boldsky

ಸೌಂದರ್ಯ ಅನ್ನೋದು ಕೆಲವು ಮಹಿಳೆಯರಿಗೆ ದೇವರು ಕೊಟ್ಟ ವರದಂತೆ. ಆದ್ರೆ ಇನ್ನು ಕೆಲವರಿಗೆ ಸ್ವಲ್ಪ ಮೇಕಪ್ ಹಚ್ಚಿಕೊಂಡಾಗ್ಲೇ ಅವರು ಸೌಂದರ್ಯವತಿಯಂತೆ ಕಾಣೋದು. ನಿಜ. ನ್ಯಾಚುರಲ್ ಬ್ಯೂಟಿ ಯಾವಾಗ್ಲೂ ಕೂಡ ಉತ್ತಮವೇ.. ಹಾಗಂತ ಈಗಿನ ಜಮಾನದಲ್ಲಿ ಮೇಕಪ್ ಇಲ್ಲದೇ ಇರೋಕೆ ಆಗುತ್ತಾ ಹೇಳಿ..?

ಹಾಗೆ ಒಂದು ರೌಂಡ್ ಮಾರ್ಕೆಟ್‌ಗೆ ಹೋಗಿ ಬರ್ಬೇಕು, ತರಕಾರಿ ತಗೊಂಡು ಬರೋಕೆ ಹೊರಗಡೆ ಹೋಗ್ತಾ ಇದ್ದೀವಿ ಅಂದ್ರೂ ಮೇಕಪ್ ಮಾಡ್ಕೊಂಡೇ ಹೋಗೋ ಮಹಿಳೆಯರಿದ್ದಾರೆ. ಮನೆಯಿಂದ ಹೊರಗೆ ಕಾಲಿಡುವಾಗ ಮೇಕಪ್ ಇರಬೇಕು ಅನ್ನೋದು ಅವರ ಪಾಲಿಸಿ.. ತನ್ನತ್ತ ಸೆಳೆಯಬಲ್ಲ ಮೇಕಪ್‌ನ, ಹಿಂದಿರುವ ಸತ್ಯಾಸತ್ಯತೆ

ಅದು ಏನೇ ಇರಲಿ, ಆದರೆ ಮೇಕಪ್ ವಿಷ್ಯಕ್ಕೆ ಬಂದಾಗ ಮಹಿಳೆಯರು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ಅವರಿಗೆ ಸಾಕಷ್ಟು ಹೆಚ್ಚಿನ ಕಾಮೆಂಟ್‌ಗಳನ್ನೇ ಪುರುಷರು ಮಾಡುವುದನ್ನು ನಾವು ಕೇಳಿರುತ್ತೇವೆ ಅಲ್ಲವೇ? ಹಾಗಿದ್ದರೆ ಅವರ ಟೀಕೆಗಳಿಗೆ ನೀವು ಉತ್ತರಿಸುವುದು ಹೇಗೆಂದರೆ ಅತಿ ಕಡಿಮೆ ಸಮಯದಲ್ಲಿ ನೀವು ಸುಂದರವಾಗಿ ಕಂಡಾಗ ಮಾತ್ರ!! ಬಾಯಿ ಮಾತಿನಲ್ಲಿ ಅವರಿಗೆ ಉತ್ತರವನ್ನು ನೀಡದೇ ನಿಮ್ಮ ಸೌಂದರ್ಯದ ಮೂಲಕ ಕಾಮೆಂಟ್ ಮಾಡುವವರ ಬಾಯಿ ಮುಚ್ಚಿಸಿ ಅಂತೆಯೇ ಅತಿ ಕಡಿಮೆ ಸಮಯದಲ್ಲಿ ಮೇಕಪ್ ಮಾಡಿಕೊಂಡು ನಿಮ್ಮವರಿಂದ ಮೆಚ್ಚುಗೆಯನ್ನು ಗಳಿಸಿಕೊಳ್ಳಿ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಅತ್ಯಲ್ಪ ಅವಧಿಯಲ್ಲೇ ಅತಿ ಸುಂದರವಾಗಿ ಕಾಣುವ ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ... 

ಐ ಲೈನರ್ ಮತ್ತು ಕಾಜಲ್

ಐ ಲೈನರ್ ಮತ್ತು ಕಾಜಲ್

ನೀರು ಪ್ರತಿಶೋಧಕ ಕಾಜಲ್ ಮತ್ತು ಐಲೈನರ್‌ಗಳಿದ್ದರೂ ಅದು ಕೆಲವೊಮ್ಮೆ ಬೆವರು ತಡೆದುಕೊಳ್ಳಲಾರವು. ಈ ಸಮಯದಲ್ಲಿ ಐ ಲೈನರ್ ಬೇಸ್‌ಗಾಗಿ ದ್ರಾವಣದ ಐ ಲೈನರ್ ಅನ್ನು ಬಳಸಿ. ಅಂತೆಯೇ ಕಾಡಿಗೆಗಾಗಿ ಟ್ರಾನ್ಸ್ಯುಲೆಂಟ್ ಸೆಟ್ಟಿಂಗ್ ಪೌಡರ್ ಅನ್ನು ಬಳಸಿ.

ಮುಖ

ಮುಖ

ಫೌಂಡೇಶನ್‌ಗಳು ಬೇಗನೇ ಕರಗಿ ಹೋಗುತ್ತವೆ. ಇದಕ್ಕೂ ಮುನ್ನ ನಿಮ್ಮ ಮುಖವನ್ನು ಐಸ್ ಕ್ಯೂಬ್‌ನಿಂದ ಉಜ್ಜಿಕೊಳ್ಳಿ ಅಂತೆಯೇ ಸೆಟ್ಟಿಂಗ್ ಸ್ಪ್ರೇಯನ್ನು ಬಳಸಿಕೊಂಡು ಫೌಂಡೇಶನ್ ಅನ್ನು ಮುಖದಲ್ಲಿ ಸೆಟ್ ಮಾಡಿಕೊಳ್ಳಿ. ಟ್ರಾನ್ಸ್ಯುಲೆಂಟ್ ಪೌಡರ್ ಅನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ತುಟಿಯ ಮೇಕಪ್...

ತುಟಿಯ ಮೇಕಪ್...

ನಿಮ್ಮ ತುಟಿಗಳನ್ನು ಲಿಪ್ ಬಾಮ್ ಬಳಸಿಕೊಂಡು ಮಾಯಿಶ್ಚರೈಸ್ ಮಾಡಿಕೊಳ್ಳಿ ಮತ್ತು ತುಟಿಗಳಲ್ಲಿ ಗೀರು ಅಥವಾ ಒಡೆತಗಳು ಉಂಟಾಗದಂತೆ ಕಾಪಾಡಿಕೊಳ್ಳಿ. ತದನಂತರವೇ ಲಿಪ್‌ಸ್ಟಿಕ್ ಬಳಕೆ ಮಾಡಿ. ಅಂತೆಯೇ ದಿನವಿಡೀ ಲಿಪ್‌ಸ್ಟಿಕ್ ತುಟಿಗಳಲ್ಲಿ ಉಳಿಯಬೇಕು ಎಂದಾದಲ್ಲಿ ಟಿಶ್ಯೂ ಪೇಪರ್ ಬಳಸಿಕೊಂಡು ಅದನ್ನು ಸೆಟ್ ಮಾಡಿ.

ಕನ್ಸೀಲರ್

ಕನ್ಸೀಲರ್

ಇದನ್ನು ಆದಷ್ಟು ದಪ್ಪನಾಗಿ ಹಚ್ಚುವುದರಿಂದ ಇದು ಗೆರೆ ಇಲ್ಲವೇ ಕರಗಿ ಹೋಗಬಹುದು. ಇದಕ್ಕಾಗಿಯೇ ದಪ್ಪನಾಗಿ ಟ್ರಾನ್ಸ್ಯುಲೆಂಟ್ ಪೌಡರ್ ಹಚ್ಚಿ ಹೀಗೆ ಮಾಡುವುದರಿಂದ ಇದು ಹರಡದೆಯೇ ಒಂದೆಡೆ ಕೂರುತ್ತದೆ.

ಐ ಶ್ಯಾಡೊ

ಐ ಶ್ಯಾಡೊ

ಉತ್ತಮ ಗುಣಮಟ್ಟದ ಐ ಶ್ಯಾಡೊಗಳು ಏಳು ಗಂಟೆಯವರೆಗೆ ಉಳಿಯಲಿವೆ. ಐ ಶ್ಯಾಡೊ ಪ್ರೈಮರ್ ಅನ್ನು ಬಳಸಿಕೊಂಡು ನಿಮ್ಮ ತ್ವಚೆಗೆ ತಕ್ಕಂತೆ ಬೇಸ್ ರಚಿಸಿ. ಇದರಿಂದ ಹೆಚ್ಚು ಎದ್ದುಗಾಣುತ್ತದೆ ಮತ್ತು ದಿನವಿಡೀ ಹಾಳಾಗುವುದಿಲ್ಲ.

 
English summary

Tricks To Set Your Makeup Fast

Sometimes, in humidity, the makeup tends to melt off your face. That is never a pleasant sight. It looks cakey and doesn't feel too good either, if your makeup melts off your face. The trick lies in using the right kind of makeup and also depends on how you set the makeup.
Please Wait while comments are loading...
Subscribe Newsletter