Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತನ್ನತ್ತ ಸೆಳೆಯಬಲ್ಲ ಮೇಕಪ್‌ನ, ಹಿಂದಿರುವ ಸತ್ಯಾಸತ್ಯತೆ
ಹುಡುಗಿಯರು ಒಂದು ಕಡೆ ಸೇರಿದರೆ ಮೊದಲು ಬಟ್ಟೆ ಬಗ್ಗೆ ಮಾತನಾಡುತ್ತಾರೆ, ಇಲ್ಲವೇ ಮೇಕಪ್ ಬಗ್ಗೆ ಮಾತನಾಡುತ್ತಾರೆ. ಹಾಗೆಂದು ಇವರು ಏನು ಮಾಡೆಲ್‌ಗಳು ಅಥವಾ ನಟಿಯರು ಅಲ್ಲ. ತಮಾಷೆ ಏನಪ್ಪಾ ಎಂದರೆ ಬಹುತೇಕ ಹುಡುಗಿಯರು ಮತ್ತು ಮಹಿಳೆಯರು ಹವ್ಯಾಸಕ್ಕೆಂದು ಸುಮ್ಮನೆ ಮೇಕಪ್ ಮಾಡಿಕೊಳ್ಳುತ್ತಾರೆ.
ಇನ್ನೂ ಕೆಲವರು ತಾವು ತುಂಬಾ ಬೇಸರ ಅಥವಾ ದುಃಖದಲ್ಲಿದ್ದಾಗ ಅದನ್ನು ಮರೆಮಾಚಲು ಮೇಕಪ್ ಮಾಡಿಕೊಳ್ಳುತ್ತಾರೆ! ಆದರೆ ನಾವು ಇಂದು ಹೇಳುತ್ತಿರುವುದು ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಅನಾಹುತ ಮಾಡಿಸಿಕೊಂಡವರ ಕತೆ. ಇಂತಹ ಅನಾಹುತಗಳನ್ನು ನೀವು ಮಾಡಲು ಇಷ್ಟಪಡುವುದಿಲ್ಲ ಎಂದು ನಾವು ಖಾತ್ರಿ ನೀಡುತ್ತೇವೆ. ಬನ್ನಿ ಅವು ಯಾವುವು ಎಂದು ನೋಡೋಣ.

ಕಪ್ಪು ಲಿಪ್‌ಸ್ಟಿಕ್
ಕಪ್ಪು ನೋಡಲು ಗಾಢವಾಗಿ ಮತ್ತು ಕ್ಲಾಸ್ಸಿಯಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನೀವು ಕಪ್ಪು ಬಟ್ಟೆ ಅಥವಾ ಸ್ಮೋಕೀ ಐ ಮೇಕಪ್ ಧರಿಸಿದಾಗ ಇದು ಒಪ್ಪುತ್ತದೆ. ಆದರೆ ಸಾಮಾನ್ಯ ಉಡುಗೆಯ ಜೊತೆಗೆ ಕಪ್ಪು ಲಿಪ್ ಸ್ಟಿಕ್ ಧರಿಸಿದಿರಿ, ಜನ ನೋಡಿ ನಗುತ್ತಾರೆ.
ಲಿಪ್‌ಸ್ಟಿಕ್ ಅನ್ನು ಬ್ಲಷ್ ಆಗಿ ಬಳಸುವುದು
ಲಿಪ್‌ಸ್ಟಿಕ್ ಅನ್ನು ಕೆನ್ನೆಯ ಮೇಲೆ ಬ್ಲಷ್ ಆಗಿ ಬಳಸುವುದು ಒಳ್ಳೆಯ ಆಲೋಚನೆಯಲ್ಲ. ನಿಮ್ಮ ಲಿಪ್‌ಸ್ಟಿಕ್ ಆಧಾರದ ಮೇಲೆ ನಿಮ್ಮ ಕೆನ್ನೆಗಳು ಗ್ರೀಸೀ ಅಥವಾ ಒಣ ತ್ವಚೆಯ ರೀತಿ ಕಾಣುತ್ತದೆ.
ತುಂಬಾ ಸ್ಮೋಕೀ ಐಸ್ ಬೇಡ
ಸರಿಯಾಗಿ ಮಾಡಲಿಲ್ಲವಾದಲ್ಲಿ ಇದು ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತೆ ಕಾಣುತ್ತದೆ. ಇದರಿಂದ ನೀವು ಜಾಂಬಿ ರೀತಿ ಕಾಣುತ್ತೀರಿ. ನೋಡುವವರ ಕಣ್ಣಿಗೆ ಅಣುಕು ದೆವ್ವ, ವ್ಯಾಂಪೈರ್ ರೀತಿ ನೀವು ಕಾಣಿಸಿಕೊಂಡರೆ ಅಚ್ಚರಿಯೇನಲ್ಲ.
ಹಾರ್ಸ್ ಫೆದರ್ ನೇಲ್ ಆರ್ಟ್
ಉಗುರುಗಳು ಸಹ ಸೌಂದರ್ಯಕ್ಕೆ ಕೊಡುಗೆಯನ್ನು ನೀಡುತ್ತವೆ. ಪಾಲಿಕ್ರೊಮ್ಯಾಟಿಕ್ ಫೆದರ್‌ಗಳು ಕುದುರೆಗಳ ಸೌಂದರ್ಯವನ್ನು ಹೆಚ್ಚಿಸಲು ಇರುವುದು ನಿಮಗಲ್ಲ ಎಂದು ಮೊದಲು ತಿಳಿಯಿರಿ.
ರೈನ್‌ಬೋ ಲಿಪ್ಸ್
ಬಹುವರ್ಣದ ಈ ಲುಕ್ ಬಾನಿಗೆ ಚೆಂದವೇ ಹೊರತು, ನಿಮ್ಮ ತುಟಿಗಲ್ಲ. ಇದು ನೋಡಲು ಸುಂದರವಾಗಿರುತ್ತದೆ. ಆದರೆ ಇದನ್ನು ಮೇಕಪ್ ಆಗಿ ಬಳಸುವುದು ಒಳ್ಳೆಯದಲ್ಲ. ಏಳು ಬಣ್ಣಗಳನ್ನು ತುಟಿಯ ಮೇಲೆ ಧರಿಸಿಕೊಂಡರೆ, ತಮಾಷೆಗೆ ಎಡೆ ಮಾಡಿಕೊಡುತ್ತೀರಿ.
ಸ್ಮಡ್ಜಡ್ ಮಸ್ಕಾರ ಕಣ್ಣಿನ ಕೆಳಗೆ
ಮಸ್ಕಾರ ನಿಮ್ಮ ಕಣ್ಣುಗಳನ್ನು ಚೆನ್ನಾಗಿ ಕಾಣಿಸುತ್ತದೆ. ಆದರೆ ಸ್ಮಡ್ಜಡ್ ಮಸ್ಕಾರ ಮಾತ್ರ ಬಳಸಬೇಡಿ. ಇದು ನಿಮಗೆ ಒಂದು ಭಯಾನಕ ಲುಕ್ ಒದಗಿಸುತ್ತದೆ. ನೋಡಿದವರು ಓಡಿ ಹೋಗಬೇಕು, ಆಗಿರುತ್ತದೆ!



Click it and Unblock the Notifications


