For Quick Alerts
ALLOW NOTIFICATIONS  
For Daily Alerts

ಲಿಪ್ ಸ್ಟಿಕ್ ತುಟಿಗೆ ಮಾತ್ರವಲ್ಲ, ಹೀಗೂ ಬಳಸಿಕೊಳ್ಳಬಹುದು..

By Su.Ra
|

ಕೆಲವು ಮಹಿಳೆಯರಿಗೆ ಅವ್ರ ಬಳಿ ಇರುವ ಮೇಕಪ್ ವಸ್ತುಗಳಲ್ಲಿ ಎಲ್ಲದಕ್ಕಿಂತ ಹೆಚ್ಚು ಪ್ರೀತಿ ಇರೋದು ಲಿಪ್ ಸ್ಟಿಕ್ ಮೇಲೆ,. ಅದೇನೋ ಗೊತ್ತಿಲ್ಲ ಕಾಂಪ್ಯಾಕ್ಟ್, ಕಾಜಲ್, ಪೌಡರ್, ಬ್ಲಷರ್ ಯಾವುದೇ ಇಲ್ಲದೇ ಇದ್ರೂ ಓಕೆ, ಆದ್ರೆ ಲಿಪ್ ಸ್ಟಿಕ್ ಇಲ್ಲದೇ ಇರೋಕೆ ಆಗಲ್ಲ. ಲಿಪ್ ಸ್ಟಿಕ್ ಹಚ್ಚಿಕೊಂಡ್ರೆ ಏನೋ ಒಂಥರಾ ಸುಂದರವಾಗಿ ಕಾಣ್ತೀವಿ ಅನ್ನೋ ಮನೋಭಾವ ಅವರದ್ದು. ಅದ್ರಲ್ಲಿ ತಪ್ಪೇನು ಇಲ್ಲ ಬಿಡಿ. ಆದ್ರೆ ಲಿಪ್ ಸ್ಟಿಕ್ ಕೇವಲ ತುಟಿಗೆ ಮಾತ್ರವಲ್ಲ. ನೀವು ಸ್ವಲ್ಪ ಮೇಕಪ್ ಮಾಡ್ಕೊಳ್ಳೋದ್ರಲ್ಲಿ ಬುದ್ಧಿವಂತರಾಗಿದ್ರೆ ಲಿಪ್ ಸ್ಟಿಕ್ ಬಳಸಿ ಇನ್ನೂ ಸ್ಪೆಷಲ್ ಮತ್ತು ಸ್ಟೈಲಿಶ್ ಆಗಿ ಮೇಕಪ್ ಮಾಡಿಕೊಳ್ಳಬಹುದು..

ಮೇಕಪ್ ಅನ್ನು ಇಷ್ಟಪಟ್ಟು ಮಾಡಿಕೊಳ್ಳುವ ಮಹಿಳೆಯರಿಗೆ ಮೇಕಪ್ ಬಗ್ಗೆ ಎಷ್ಟೇ ಟಿಪ್ಸ್ ಕೊಟ್ರೂ ಬೇಸರವಿಲ್ಲ. ಇನ್ನೊಂದು ಟಿಪ್ಸ್, ಮತ್ತೊಂದು ಟಿಪ್ಸ್ ಬೇಕು ಅಂತ ಆಸೆ ಪಟ್ಟೇ ಪಡ್ತಾರೆ. ಅಂತಹ ಮಹಿಳೆಯರಿಗಾಗಿ ಈ ಲಿಪ್ ಸ್ಟಿಕ್ ಚಮತ್ಕಾರದ ಸ್ಟೋರಿಯನ್ನು ಹೇಳ್ತಾ ಇದ್ದೀವಿ.. ನಿಮ್ಮ ತುಟಿಗಳ ಸೌಂದರ್ಯಕ್ಕಾಗಿ ಮಾತ್ರವಲ್ಲ ಬದಲಾಗಿ ನಿಮ್ಮ ಓವರ್ ಆಲ್ ಲುಕ್ಕನ್ನೇ ಚೇಂಜ್ ಮಾಡುವ ತಾಕತ್ತು ಲಿಪ್ ಸ್ಟಿಕ್ ಗೆ ಇರುತ್ತೆ. ಹೇಗೆ ಅಂತೀರಾ,. ಈ ಸ್ಟೋರಿಯನ್ನು ಪೂರ್ತಿಯಾಗಿ ಓದಿ..

Uses for Lipstick Other Than Makeup

ಲಿಪ್ ಸ್ಟಿಕ್ ನ್ನೇ ಬ್ಲಷರ್ ಆಗಿ ಬಳಸಿ
ಬ್ಲಷರ್ ಖಾಲಿಯಾಗಿದೆ ಅಥ್ವಾ ಸರಿಯಾದ ಮ್ಯಾಚಿಂಗ್ ಬ್ಲಷರ್ ಇಲ್ಲದೇ ಇದ್ದಾಗ ನಿಮ್ಮ ಲಿಪ್ ಸ್ಟಿಕ್ ನಿಮ್ಮ ಬ್ಲಷರ್ ಆಗ್ಬಹುದು. ಲಿಪ್ ಸ್ಟಿಕ್ ಕ್ರೀಮ್ ಬ್ಲಷರ್ ಆಗಿ ಕೆಲ್ಸ ಮಾಡುತ್ತೆ. ಹೆಚ್ಚು ಸಮಯ ನಿಮ್ಮ ಮುಖದಲ್ಲಿ ಬ್ಲಷರ್ ಉಳಿಬೇಕು ಅನ್ನೋ ಸಂದರ್ಭದಲ್ಲಿ ಕೂಡ ನೀವು ಈ ಮೆಥೆಡ್ ಫಾಲೋ ಮಾಡ್ಬಹುದು.ಯಾಕಂದ್ರೆ ಲಿಪ್ ಸ್ಟಿಕ್ ಹೆಚ್ಚು ಸಮಯ ಬ್ಲಷರ್ ಆಗಿ ಉಳಿಯುತ್ತೆ ಮತ್ತು ನೀವು ಸರಿಯಾಗಿ ಬ್ಲೆಂಡ್ ಮಾಡಿ ಹಚ್ಚಿಕೊಂಡಿದ್ದಲ್ಲಿ ತುಂಬಾ ನ್ಯಾಚುರಲ್ ಲುಕ್ ನೀಡುತ್ತೆ.

ಲಿಪ್ ಸ್ಟಿಕ್ ಐ ಶಾಡೋ ಆದ್ರೆ ಹೇಗಿರುತ್ತೆ ಗೊತ್ತಾ
ಫಟಾಫಟ್ ಮೇಕಪ್ ಮಾಡಿಕೊಳ್ಳಲು ಇಚ್ಛಿಸುವವರಿಗಾಗಿ ಈ ಐಡಿಯಾ. ಐ ಶಾಡೋ ಬಾಕ್ಸ್ ನಲ್ಲಿ ಯಾವ ಕಲರ್ ಕೂಡ ಸ್ಯೂಟ್ ಆಗ್ತಿಲ್ಲ. ಅಥ್ವಾ ಐ ಶಾಡೋ ಖಾಲಿಯಾಗಿದೆ ಅಂತಹ ಸಂದರ್ಬದಲ್ಲಿ ನಿಮ್ಮ ಲಿಪ್ ಸ್ಟಿಕ್ ನಿಮ್ಮ ನೆರವಿಗೆ ಬರುತ್ತೆ. ಅದ್ರಲ್ಲೂ ಪಿಂಕ್, ರೆಡ್ ಶೇಡ್ನ ಲಿಪ್ ಸ್ಟಿಕ್ ಗಳು ಬೆಸ್ಟ್ ಐ ಶಾಡೋ ಗಳಾಗಿ ಕಾಣುತ್ತೆ. ಐ ಶಾಡೋ ಬದಲಿಗೆ ನಿಮ್ಮ ಲಿಪ್ ಸ್ಟಿಕ್ ನ್ನೇ ಲೈಟಾಗಿ ಹಚ್ಚಿ ನೋಡಿ. ಫೆಂಟಾಸ್ಟಿಕ್ ಲುಕ್ ನಿಮ್ಮದಾಗುತ್ತೆ.

ಲಿಪ್ ಸ್ಟಿಕ್ ಕೆಲವು ಸಂದರ್ಭದಲ್ಲಿ ಪೆನ್ ಆಗಿ ಬಳಕೆ ಆಗುತ್ತೆ
ವ್ಯಾನಿಟಿ ಬ್ಯಾಗ್ ನಲ್ಲಿ ಯಾವಾಗ್ಲೂ ಒಂದು ಪೆನ್ ಇಟ್ಟುಕೊಂಡಿರುವ ಅಭ್ಯಾಸ ಎಲ್ಲರಿಗೂ ಇರೋದಿಲ್ಲ. ಇದ್ರೂ ಕೂಡ ಪೆನ್ ಆಗಾಗ ಕಳೆದುಹೋಗೋದೆ ಜಾಸ್ತಿ. ಹಾಗಿರುವಾಗ ಯಾರೋ ಯಾವುದೋ ನಂಬರ್ ಕೊಟ್ರು, ಫಟಾಫಟ್ ಅಂತ ಬರೆದುಕೊಳ್ಳಬೇಕಿತ್ತು. ಅಥ್ವಾ ಯಾವುದೋ ಮರೆತು ಬಿಡುವ ವಿಚಾರವನ್ನು ನೋಟ್ ಮಾಡ್ಕೋಬೇಕಿತ್ತು ಅಂದಾಗ ಲಿಪ್ ಸ್ಟಿಕ್ ನಿಮ್ಗೆ ನೆರವಾಗುತ್ತೆ. ಟಿಶ್ಯೂ ಇಲ್ಲವೇ ಪೇಪರ್ ಮೇಲೆ ನೀವು ಆ ಮಾಹಿತಿಯನ್ನು ಲಿಪ್ ಸ್ಟಿಕ್ ಸಹಾಯದಿಂದ ಬರೆದುಕೊಳ್ಳಬಹುದು

ಲಿಪ್ ಸ್ಟಿಕ್ ನ್ನೇ ಲಿಪ್ ಗ್ಲಾಸ್ ಆಗಿ ಬಳಕೆ ಮಾಡ್ಬಹುದು
ಲಿಪ್ ಸ್ಟಿಕ್ ಇನ್ನೇನು ಖಾಲಿ ಆಗ್ತಾ ಬಂದಿದೆ. ಎಲ್ಲೋ ಹೌದುಅಲ್ಲ ಅನ್ನೋ ಲಿಪ್ ಸ್ಟಿಕ್ ಇದೆ. ಸರಿಯಾಗಿ ತುಟಿಗೆ ಹಚ್ಚಿಕೊಳ್ಳೋಕು ಆಗ್ತಿಲ್ಲ, ಎಸೆದು ಬಿಡೋದೇ ಸರಿ ಇನ್ನು ಬಳಕೆ ಮಾಡೋಕೆ ಆಗೋದಿಲ್ಲ ಅನ್ನೋ ಸ್ಥಿತಿಯಲ್ಲಿ ಇದ್ರೆ, ನೀವದನ್ನು ಲಿಪ್ ಗ್ಲಾಸ್ ಆಗಿ ಬಳಕೆ ಮಾಡ್ಬಹುದು. ಉಳಿದಿರುವ ಲಿಪ್ ಸ್ಟಿಕ್ ಸ್ವಲ್ಪ ವ್ಯಾಸಲೀನ್ ಮಿಕ್ಸ್ ಮಾಡ್ಕೊಂಡ್ರೆ ಬೊಂಬಾಟ್ ಆಗಿರುವ ಲಿಪ್ ಗ್ಲಾಸ್ ನಿಮ್ಮದಾಗುತ್ತೆ. ಟ್ರೈ ಮಾಡಿ ನೋಡಿ.

ಟ್ಯಾಟೋಗಳನ್ನು ತಾತ್ಕಾಲಿಕವಾಗಿ ಮುಚ್ಚಿಕೊಳ್ಳಲು ಬಳಸ್ಬಹುದು
ಕೆಲವರು ಟ್ಯಾಟೋ ಹಾಕಿಸಿಕೊಂಡಿರ್ತಾರೆ. ಆದ್ರೆ ಯಾವುದೋ ಸಂದರ್ಭದಲ್ಲಿ ಅದನ್ನು ತಾತ್ಕಾಲಿಕವಾಗಿ ಮುಚ್ಚಿಕೊಳ್ಳಬೇಕು ಅಂತ ಅನ್ನಿಸುತ್ತೆ. ಅಂತಹ ಸಂದರ್ಬದಲ್ಲಿ ನೀವು ಲಿಪ್ ಸ್ಟಿಕ್ ಬಳಕೆ ಮಾಡ್ಬಹುದು. ಎಸ್ಪೆಷಲಿ ರೆಡ್ ಲಿಪ್ ಸ್ಟಿಕ್ ನಿಂದ ಟ್ಯಾಟ್ ಕವರ್ ಮಾಡ್ಕೊಂಡು ಮೇಲಿಂದ ಪೌಡರ್ ಹಚ್ಚಿಕೊಂಡ್ರೆ, ನಿಮ್ಮ ಚರ್ಮದಲ್ಲಿ ಟ್ಯಾಟೋ ಇಲ್ಲದಂತೆಯೇ ಮಾಡಬಹುದು.

ಹೈಲೆಟರ್ ಆಗಿ ಮಾಡ್ಬಹುದು
ನಿಜ. ರೆಡ್ ಅಥವಾ ಪಿಂಕ್ ಲಿಪ್ ಸ್ಟಿಕ್ ನಿಂದ ನೀವು ಹೈಲೆಟ್ ಮಾಡ್ಕೊಳ್ಳೋದಕ್ಕೆ ಸಾಧ್ಯವಿಲ್ಲ. ಆದ್ರೆ ನ್ಯೂಟ್ರಲ್ ಬಣ್ಣಗಳಾದ ಕಂದು, ಕಂದುಮಿಶ್ರಿತ ಲೈಟ್ ಕಲರ್ ಗಳಿಂದ ನೀವು ನಿಮ್ಮ ಮೇಕಪ್ ನ ಹೈಲೆಟ್ ಮಾಡಿಕೊಳ್ಳಬಹುದು. ಕೆನ್ನೆ, ಹಣೆ ಮತ್ತು ಗಲ್ಲದ ಭಾಗವನ್ನು ಹೈಲೆಟ್ ಮಾಡ್ಕೊಳ್ಳೋಕೆ ಹೈಲೆಟರ್ರೇ ಬೇಕು ಅಂತೇನಿಲ್ಲ. ಜಸ್ಟ್ ಬ್ರೌನ್ ಶೇಡ್ ನ ಯಾವುದೇ ಲಿಪ್ ಸ್ಟಿಕ್ ಇದ್ರೂ ಸಾಕಾಗುತ್ತೆ. ಟ್ರೈ ಮಾಡಿ ನೋಡಿ..

English summary

Uses for Lipstick Other Than Makeup

When it comes to lipstick, we've pretty much tried every color and formula known to man—and we tend to get experimental with it. But unlike other beauty products with one use and one use only, you shouldn't stick to just one with your tube of happiness (yes, that's what we like to call it). Here are uses for lipstick you probably never thought of.
X
Desktop Bottom Promotion