For Quick Alerts
ALLOW NOTIFICATIONS  
For Daily Alerts

ಅಪಾಯಕ್ಕೆ ಆಹ್ವಾನ ನೀಡುವ ನಿಮ್ಮ ಮೇಕಪ್ ಕಿಟ್ ಬಗ್ಗೆ ಎಚ್ಚರ

By SU.Ra
|

ಸೌಂದರ್ಯ ಅನ್ನೋದು ಕೆಲವು ಮಹಿಳೆಯರಿಗೆ ದೇವರು ಕೊಟ್ಟ ವರದಂತೆ. ಆದ್ರೆ ಇನ್ನು ಕೆಲವರಿಗೆ ಸ್ವಲ್ಪ ಮೇಕಪ್ ಹಚ್ಚಿಕೊಂಡಾಗ್ಲೇ ಅವರು ಸೌಂದರ್ಯವತಿಯಂತೆ ಕಾಣೋದು. ನಿಜ. ನ್ಯಾಚುರಲ್ ಬ್ಯೂಟಿ ಯಾವಾಗ್ಲೂ ಕೂಡ ಉತ್ತಮವೇ.. ಹಾಗಂತ ಈಗಿನ ಜಮಾನದಲ್ಲಿ ಮೇಕಪ್ ಇಲ್ಲದೇ ಇರೋಕೆ ಆಗುತ್ತಾ ಹೇಳಿ.

ಹಾಗೆ ಒಂದು ರೌಂಡ್ ಮಾರ್ಕೆಟ್ ಗೆ ಹೋಗಿ ಬರ್ಬೇಕು, ತರಕಾರಿ ತಗೊಂಡು ಬರೋಕೆ ಹೊರಗಡೆ ಹೋಗ್ತಾ ಇದ್ದೀವಿ ಅಂದ್ರೂ ಮೇಕಪ್ ಮಾಡ್ಕೊಂಡೇ ಹೋಗೋ ಮಹಿಳೆಯರಿದ್ದಾರೆ. ಮನೆಯಿಂದ ಹೊರಗೆ ಕಾಲಿಡುವಾಗ ಮೇಕಪ್ ಇರಬೇಕು ಅನ್ನೋದು ಅವರ ಪಾಲಿಸಿ.. ಹಾಗಿರುವಾಗ ಪ್ರತಿ ಮಹಿಳೆಯರ ಬಳಿಯೂ ಮೇಕಪ್ ಕಿಟ್ ಇರೋದು ಸರ್ವೇ ಸಾಮಾನ್ಯ.

ಒಬ್ಬೊಬ್ಬರದ್ದು ಒಂದೊಂದು ರೀತಿಯ ಮೇಕಪ್ ಬ್ಯಾಗ್ ಯಾವಾಗ್ಲೂ ಅವರ ಜೊತೆಯೇ ಇರುತ್ತೆ. ಕೆಲವರಂತೂ ಆಫೀಸ್ ಬ್ಯಾಗ್ ನಲ್ಲಿ ಮೇಕಪ್ ಕಿಟ್ ಇಟ್ಕೊಂಡೇ ಹೋಗ್ತಾರೆ. ಆದ್ರೆ ಹೀಗೆ ಮೇಕಪ್ ಕಿಟ್ ಇಟ್ಕೊಳ್ಳೋ ಪ್ರತಿ ಮಹಿಳೆಯೂ ತನ್ನ ಮೇಕಪ್ ಕಿಟ್ ಸ್ವಚ್ಛವಾಗಿದ್ಯಾ ಅನ್ನೋದನ್ನು ಖಾತ್ರಿ ಮಾಡ್ಕೊಳ್ಳಿ. ಎಷ್ಟು ದಿನಗಳಿಗೊಮ್ಮೆ ನೀವು ನಿಮ್ಮ ಮೇಕಪ್ ಬ್ಯಾಗ್ ಕ್ಲೀನ್ ಮಾಡ್ತೀರಾ?ಆಗಾಗ ನಿಮ್ಮ ಮೇಕಪ್ ಬ್ಯಾಗ್ ಕ್ಲೀನ್ ಮಾಡದೇ ಇದ್ರೆ ನಿಮ್ಮ ಮೇಕಪ್ ಮೆಟಿರಿಯಲ್ ಗಳು ಹಾಳಾಗೋದು ಮಾತ್ರವಲ್ಲ. ನಿಮ್ಮ ಮುಖದ ಸೌಂದರ್ಯ ಕೂಡ ಹಾಳಾಗಿ ಪ್ರಮುಖವಾಗಿ ಬ್ಯಾಗ್ ನಲ್ಲಿರುವ ಬ್ರಷ್, ಕಂಟೈನರ್ ಗಳು, ಲಿಪ್ ಸ್ಟಿಕ್, ಲಿಪ್ ಗ್ಲಾಸ್, ಕಾಜಲ್ ಪೆನ್ಸಿಲ್, ಮಸ್ಕರಾಗಳೆಲ್ಲವೂ ಸ್ವಚ್ಚವಾಗಿದ್ಯಾ ನೋಡಿಕೊಳ್ಳಿ. ಅಪ್ಪಿತಪ್ಪಿಯೂ ಮುಖಕ್ಕೆ ಇಂತಹ ಮೇಕಪ್‌ ಅನ್ನು ಬಳಸಬೇಡಿ!

Tips to keep your makeup kit clean

ಬ್ರಷ್‌ಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ

ಹೆಚ್ಚಿನವ್ರು ಮೇಕಪ್ ಮಾಡಿಕೊಂಡ ನಂತ್ರ ತಮ್ಮ ಬ್ರಷ್ ಗಳನ್ನು ಹಾಗೆಯೇ ಬ್ಯಾಗ್ ನಲ್ಲಿ ಇಟ್ಟುಕೊಂಡು ಬಿಡ್ತಾರೆ. ಅಪರೂಪಕ್ಕೊಮ್ಮೆ ನೀರಿನಲ್ಲಿ ಅದ್ದಿ ತೆಗೆಯೋ ಅಭ್ಯಾಸವಿರುತ್ತೆ ಅಷ್ಟೇ. ಆದ್ರೆ ಹೀಗೆ ಮಾಡೋದ್ರಿಂದ ನಿಮ್ಮ ಬ್ರಷ್ ಗಳು ಕ್ಲೀನ್ ಆಗಿ ಇರೋದಿಲ್ಲ. ನಿಮ್ಮ ಮೇಕಪ್ ಕಿಟ್ ನಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳಿಗೆ ಆಹ್ವಾನ ನೀಡುವ ಮೊದಲ ವಸ್ತುಗಳು ಅಂದ್ರೆ ಮೇಕಪ್ ಬ್ರಷ್ ಗಳು.. ಹಾಗಾಗಿ ಅಟ್ ಲೀಸ್ಟ್ ಕಣ್ಣಿನ ಕಾಡಿಗೆ ಬ್ರಷ್, ಲಿಪ್ ಸ್ಟಿಕ್ ಬ್ರಷ್, ಐ ಶಾಡೋ ಹಚ್ಚಿಕೊಳ್ಳಲು ಬಳಸುವ ಬ್ರಷ್, ಚೀಕ್ ರೋಸ್ ಬ್ರಷ್, ಕಾಂಪ್ಯಾಕ್ಟ್ ಬ್ರಷ್ ಹೀಗೆ ಎಲ್ಲಾ ಬ್ರಷ್ ಗಳನ್ನು ಆಗಾಗ ಮೈಲ್ಡ್ ಶಾಂಪೂ ಬಳಸಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಡ್ರೈ ಮಾಡಿ ನಂತ್ರ ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ.

ಮೇಕಪ್ ಕಂಟೈನರ್ ಗಳನ್ನು ಆಗಾಗ ತೊಳೆಯಿರಿ

ಒಂದು ಸಣ್ಣ ಕಾಟನ್ ಬಟ್ಟೆ ಇಲ್ಲವೇ ಹತ್ತಿಯ ತುಂಡನ್ನು ತೆಗೆದುಕೊಂಡು ಅದನ್ನು ಶಾಂಪೂ ಸೋಕಿದ ನೊರೆ ನೀರಿನಲ್ಲಿ ಅದ್ದಿ ತೆಗೆದು ನಿಮ್ಮ ಕಂಟೈನರ್ ಗಳನ್ನು ಸ್ವಚ್ವಗೊಳಿಸಿ. ತಿಂಗಳಿಗೊಮ್ಮೆಯಾದ್ರೂ ನೀವಿದನ್ನು ಮಾಡಲೇಬೇಕು. ಮೇಕಪ್ ಕಿಟ್ ಯಾವಾಗಲೂ ಡ್ರೈ ಆಗಿರುವಂತೆ ನೋಡಿಕೊಳ್ಳಿ. ತಾಯ್ತನದ ಅವಧಿಯಲ್ಲಿ ಮೇಕಪ್ ಕಿಟ್ ಬಗ್ಗೆ ಎಚ್ಚರವಿರಲ್ಲಿ!

ಪ್ರೊಡಕ್ಟ್ ಗಳು ಚೆಲ್ಲದಂತೆ ಜಾಗೃತೆ ವಹಿಸಿ

ಪ್ರತಿಬಾರಿ ಮೇಕಪ್ ಮೆಟಿರಿಯಲ್ ಬಳಸಿದಾಗಲೂ ಅವುಗಳ ಮುಚ್ಚಳವನ್ನು ಸರಿಯಾಗಿ ಹಾಕಿದ್ದೀರಾ ಗಮನಿಸಿಕೊಳ್ಳಿ. ಸುಖಾಸುಮ್ಮನೆ ಗಡಿಬಿಡಿಯಲ್ಲಿ ಬಳಸಿ ಅದನ್ನು ಹಾಗೆಯೇ ಬ್ಯಾಗ್ ನಲ್ಲಿ ತುಂಬಿ ಇಡಬೇಡಿ. ಹೀಗೆ ಮಾಡೋದ್ರಿಂದ ಮೇಕಪ್ ಮೆಟಿರಿಯಲ್ ಹಾಳಾಗೋದು ಅಷ್ಟೇ ಅಲ್ಲ, ಅದು ನಿಮ್ಮ ಚರ್ಮಕ್ಕೂ ಹಾನಿ ಮಾಡುತ್ತೆ. ಮೆಕಪ್ ಕಿಟ್ ಕೂಡ ಕೊಳೆಯಾಗುವಂತೆ ಮಾಡುತ್ತೆ.

Tips to keep your makeup kit clean

ಹಳೆಯ ಪ್ರೊಡಕ್ಟ್ ಗಳನ್ನು ಬಳಸ್ಬೇಡಿ

ಕೆಲವು ಪ್ರೊಡಕ್ಟ್ ಗಳು ಇನ್ನೂ ಎಕ್ಸ್ ಪೈರ್ ಆಗಿರೋದಿಲ್ಲ, ಹಾಗಾಗಿ ಅದನ್ನು ಎಸೆಯಲು ನಿಮ್ಗೆ ಮನಸ್ಸಿರೋದಿಲ್ಲ.ಆದ್ರೆ ಅದು ಹಿಂದೊಮ್ಮೆ ಮೇಕಪ್ ಬ್ಯಾಗ್ ನಲ್ಲಿ ಚೆಲ್ಲಿ, ಅಥವಾ ಕ್ಯಾಪ್ ಸರಿಯಾಗಿ ಹಾಕದ ಕಾರಣದಿಂದ ಬ್ಯಾಕ್ಟೀರಿಯಾಗಳ ದಾಳಿಗೆ ಒಳಗಾಗಿರುತ್ತೆ. ಈ ಸೂಕ್ಷ್ಮ ವಿಚಾರ ನಿಮ್ಗೆ ಗೊತ್ತಾಗುವುದೇ ಇಲ್ಲ. ಪದೇ ಪದೇ ಅದೇ ಮೇಕಪ್ ಮೆಟಿರಿಯಲ್ ಗಳನ್ನು ಬಳಸುತ್ತಲೇ ಇರ್ತೀರ. ಹಾಗಾಗಿ ಆಗಾಗ ಕಿಟ್‌ ಸ್ವಚ್ಛಗೊಳಿಸುವಾಗ ಇಂತಹ ಪ್ರೊಡಕ್ಟ್ ಗಳನ್ನುವೇಸ್ಟ್ ಆಗುತ್ತೆ ಅಂತ ಯೋಚಿಸದೆ ಹೊರಗೆ ಹಾಕುವ ಅಭ್ಯಾಸ ಇಟ್ಟುಕೊಳ್ಳಿ. ಇಲ್ಲ ಅಂದ್ರೆ ನಿಮ್ಮ ಸೌಂದರ್ಯಕ್ಕೆ ನೀವೇ ಕೊಳ್ಳಿ ಇಟ್ಟುಕೊಳ್ತಾ ಇದ್ದೀರ ಅನ್ನೋದನ್ನುಮರೀಬೇಡಿ.

ಕಿಟ್ ಯಾವ ಮೆಟಿರಿಯಲ್ ನಿಂದ ತಯಾರಿಸಿರೋದು

ಒಂದು ವೇಳೆ ನಿಮ್ಮ ಕಿಟ್ ಬಟ್ಟೆಯಿಂದ ತಯಾರಿಸಿರೋದಾದ್ರೆ ಆಗಾಗ ಸೋಪ್ ವಾಟರ್ ನಿಂದ ತೊಳೆಯಬಹುದು. ಹಾಗಾಗಿ ತಿಂಗಳಿಗೊಮ್ಮೆಯಾದ್ರೂ ಅದನ್ನು ಡ್ರೈ ಕ್ಲೀನ್ ಇಲ್ಲವೆ, ವಾಷಿಂಗ್ ಮೆಷಿನ್ ನಲ್ಲಿ ವಾಷ್‌ ಮಾಡುವಂತ ಕಿಟ್ ಆಗಿದ್ದಲ್ಲಿ, ಇಲ್ಲವೇ ಕೈಯಲ್ಲೇ ವಾಷ್ ಮಾಡುವ ಮೆಟಿರಿಯಲ್ ನ ಬಟ್ಟೆಯಾಗಿದ್ದಲ್ಲಿ ವಾಷ್ ಮಾಡಿ. ಇನ್ನು ಪ್ಲಾಸ್ಟಿಕ್ ಅಥ್ವಾ ಮರದ ಕಿಟ್ ಆಗಿದ್ದಲ್ಲಿ ಒಂದು ಸ್ಪಾಂಜ್ ನಿಂದ ಇಲ್ಲವೇ ಹತ್ತಿಯಿಂದ ಕ್ಲೀನ್ಮಾಡುವುದು ಸೂಕ್ತ.

ಸಾರ್ವಜನಿಕ ಕಿಟ್ ಆಗಿ ಬಿಟ್ರೆ ಏನು ಮಾಡೋದು

ಹೆಚ್ಚಿನ ಸಂದರ್ಬದಲ್ಲಿ ಫ್ರೆಂಡ್ಸ್ ಜೊತೆ, ಫ್ಯಾಮಿಲಿ ಜೊತೆ ಹೊರಗಡೆ ಹೋಗಿದ್ದಾಗ ನಿಮ್ಮ ಪರ್ಸನಲ್ ಮೇಕಪ್ ಕಿಟ್ ಕೂಡ ಸಾರ್ವಜನಿಕವಾಗಿ ಬಿಡುತ್ತೆ. ಅದು ಸರ್ವೇಸಾಮಾನ್ಯ ಕೂಡ. ಎಲ್ಲರೂ ನಿಮ್ಮ ಮೇಕಪ್‌ ಮೆಟಿರಿಯಲ್ ಗಳನ್ನು ಶೇರ್ ಮಾಡಿಕೊಳ್ತಾರೆ. ಆಗಲ್ಲ ಮೆಟಿರಿಯಲ್ ಗಳು ಚೆಲ್ಲಾಪಿಲ್ಲಿಯಾಗೋದು ಮಾತ್ರವಲ್ಲ, ಹಾಳಾಗುವ ಸಾಧ್ಯತೆಯೂ ಇರುತ್ತೆ. ಅಷ್ಟೇ ಅಲ್ಲ ಮೇಕಪ್ ಕಿಟ್ ಕೂಡ ಕೊಳೆಯಾಗುವ ಸಾಧ್ಯತೆ ಹೆಚ್ಚು. ಹೀಗೆ ನಿಮ್ಮ ಕಿಟ್ ಬಳಕೆಯಾದ ಮಾರನೇ ದಿನವೇ ವಾಷ್ ಮಾಡೋದನ್ನು ಯಾವುದೇ ಕಾರಣಕ್ಕೂ ಮರೀಬೇಡಿ.

English summary

Tips to keep your makeup kit clean

Adhering to a skincare regime is one way of keeping your skin healthy. But if you neglect your makeup kit, you are inviting problems. Be it brushes or the containers in which you keep your blush-on, lipstick, eyeshadow and more, make sure to clean them, says a makeup expert.
Story first published: Friday, December 11, 2015, 9:09 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more