Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇಕಪ್ ಪ್ರಿಯರಿಗೆ ಒಂದಿಷ್ಟು ಸರಳೋಪಾಯಗಳು
ಮೇಕಪ್ ಎಂದರೆ ವಿಶ್ವವನ್ನು ಗೆಲ್ಲಲು ಹೋಗುವವರಿಗಾಗಿ ಇರುವ ಹೆಚ್ಚಿನ ಆತ್ಮ ವಿಶ್ವಾಸವೆಂದೆ ಅರ್ಥ. ಮೇಕಪ್ ಇಲ್ಲದೆ ಹೊರಗೆ ಹೋಗುವುದು ಎಂದರೆ ಅರ್ಧಂಬರ್ಧ ಬಟ್ಟೆಯನ್ನು ಧರಿಸಿಕೊಂಡು ಹೊರಗೆ ಹೋದ ಹಾಗೆ ಇರುತ್ತದೆ. ಬಹುಶಃ ಇದು ಐಲೈನರ್ ಮತ್ತು ಲಿಪ್ ಗ್ಲಾಸ್ಸ್ ಅಥವಾ ಪ್ರೈಮರ್, ಫೌಂಡೇಶನ್, ಐ ಶಾಡೋ, ಬ್ಲಷರ್ ಇತ್ಯಾದಿಗಳನ್ನು ಒಳಗೊಂಡಿರುವ ಪರಿಪೂರ್ಣ ಮೇಕಪ್ ಆಗಿರಬಹುದು.
ಹೀಗೆ ಮೇಕಪ್ ಎಂಬುದು ಒಬ್ಬ ವ್ಯಕ್ತಿಯ ಅವಿಭಾಜ್ಯ ಅಂಗವಾದಾಗ, ಅದನ್ನು ಇಡೀ ದಿನ ಉಳಿಸಿಕೊಳ್ಳುವ ಇಚ್ಛೆ ಯಾರಿಗೆ ತಾನೆ ಇರುವುದಿಲ್ಲ. ಎಷ್ಟು ಬಾರಿ ನೀವು ಬೆಳಿಗೆಯೇ ಮೇಕಪ್ ಜೊತೆಗೆ ಮನೆಯಿಂದ ಹೊರ ಬರುವುದಿಲ್ಲ, ಅದೇ ಮೇಕಪ್ ಮಧ್ಯಾಹ್ನದ ಹೊತ್ತಿಗೆ ಮಂಕಾಗಿ ಹೋಗಿರುವುದಿಲ್ಲ?

ಅಷ್ಟೇ ಏಕೆ ಕೆಲವೊಮ್ಮೆ ನೀವು ಸಭೆ ಸಮಾರಂಭಗಳು ಮತ್ತು ಮಹತ್ವದ ಕಾರ್ಯಕ್ರಮಗಳ ಸಲುವಾಗಿ ಮೇಕಪ್ ಧರಿಸಿಕೊಂಡು ಹೋಗಿರುತ್ತೀರಿ, ಆದರೆ ಆ ಸಮಾರಂಭದ ನಡುವೆಯೇ ನಿಮ್ಮ ಮೇಕಪ್ ಮಧ್ಯಾಹ್ನ ಆಗುವಷ್ಟರಲ್ಲಿ ನಿಮ್ಮ ನಿಜವಾದ ಬಣ್ಣ ಬಯಲು ಮಾಡಿ ಬಿಟ್ಟಾಗ ನಿಮಗೆ ಎಷ್ಟು ಮುಜುಗರವಾಗುವುದಿಲ್ಲ? ಇದನ್ನು ತಪ್ಪಿಸಲು ನಮ್ಮ ಬಳಿ ಕೆಲವೊಂದು ಸಲಹೆಗಳಿವೆ .ಇವುಗಳನ್ನು ಪಾಲಿಸಿ, ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಿ ಜೊತೆಗೆ ಇದರಿಂದ ನಿಮಗಾಗುವ ಮುಜುಗರವನ್ನು ತಪ್ಪಿಸಿಕೊಳ್ಳಿ.
ಸ್ವಚ್ಛತೆ
ಸ್ವಚ್ಛತೆಯು ತ್ವಚೆಗೆ ಅತ್ಯಗತ್ಯವಾಗಿ ಬೇಕಾಗಿರುತ್ತದೆ ಎಂಬುದನ್ನು ಮರೆಯಬಾರದು. ಅದರಲ್ಲಿ ಬೆಳಗೆಯಿಂದ ಸಂಜೆಯವರೆಗೆ ಮೇಕಪನ್ನು ಉಳಿಸಿಕೊಳ್ಳುವಂತಹ ಸಾಹಸಕ್ಕೆ ಕೈಹಾಕಿದಾಗ ಇದರ ಅಗತ್ಯ ಎಂದಿಗಿಂತ ಹೆಚ್ಚಾಗಿರುತ್ತದೆ. ಏಕೆಂದರೆ ಕೊಳೆಯಾದ ಮುಖದಲ್ಲಿ ಮೇಕಪ್ ತುಂಬಾ ಹೊತ್ತು ನಿಲ್ಲುವುದಿಲ್ಲ. ತ್ವಚೆಯಲ್ಲಿರುವ ಹೆಚ್ಚಿನಂಶ ಜಿಡ್ಡನ್ನು ತೆಗೆಯುವಷ್ಟರ ಮಟ್ಟಕ್ಕೆ ಕ್ಲೀನ್ಸರ್ ಇರಬೇಕು. ಇದರ ಜೊತೆಗೆ ರಾತ್ರಿ ಮಲಗುವ ಮುನ್ನ ಮೇಕಪನ್ನು ತೆಗೆದು ಮಲಗುವ ಅಭ್ಯಾಸ ಸಹ ತಪ್ಪದೆ ಇರಿಸಿಕೊಳ್ಳಬೇಕು. ಇದರಿಂದ ತ್ವಚೆಗೆ ಸ್ವಲ್ಪ ಆರಾಮ ದೊರೆತು ನಾಳೆ ಇನ್ನೂ ಕಳೆಯಿಂದ ಕೂಡುತ್ತದೆ. ಮದುಮಗಳ ಅಂದದ ಕಣ್ಣಿನ ಚೆಂದ ಹೆಚ್ಚಿಸಲು ಸೂಕ್ತ ಸಲಹೆಗಳು
ಮೊಯಿಶ್ಚರ್
ಯಾವ ಮಾದರಿಯ ತ್ವಚೆ ನಿಮಗಿದೆ ಎಂಬುದು ವಿಷಯವೇ ಅಲ್ಲ. ಮೊಯಿಶ್ಚರ್ ಮಾಡಿದ್ದೀರಾ?- ಅದು ಆಂತರಿಕವಾಗಿಯಾದರು ಇರಬಹುದು, ಬಾಹ್ಯವಾಗಿಯಾದರು ಇರಬಹುದು. ಸಾಕಷ್ಟು ನೀರನ್ನು ಸೇವಿಸಿ ಮತ್ತು ನಿಮ್ಮ ತ್ವಚೆಗೆ ಸರಿಹೊಂದುವ ಮೊಯಿಶ್ಚರೈಸರನ್ನು ಲೇಪಿಸಿ. ಏಕೆಂದರೆ ಒಣ ತ್ವಚೆಯನ್ನು ನಿಭಾಯಿಸುವುದು ಕಷ್ಟ. SPF-15 ಹೊಂದಿರುವ ಎಣ್ಣೆ ರಹಿತವಾದ ಮೊಯಿಶ್ಚರೈಸರ್ ಎಲ್ಲರಿಗು ಒಪ್ಪುವಂತಹದಾಗಿರುತ್ತದೆ.
ಎಕ್ಸ್‌ಫೋಲಿಯೇಟ್
ನಮ್ಮ ತ್ವಚೆಯು ಸದಾ ನವೀಕರಣ ಕಾರ್ಯಕ್ಕೆ ಒಳಪಡುತ್ತಲೆ ಇರುತ್ತದೆ. ಹಳೆಯ ತ್ವಚೆಯು ಹೋಗಿ, ಹೊಸ ತ್ವಚೆಯು ಬರುತ್ತ ಇರುತ್ತದೆ. ಆದ್ದರಿಂದ ಹಳೆಯ ತ್ವಚೆಯನ್ನು ತೆಗೆಯುವ ಎಕ್ಸ್‌ಫೋಲಿಯೆಟ್ ಮಾಡುವ ಸ್ಕ್ರಬ್ ನಮಗೆ ಅತ್ಯಾವಶ್ಯಕ. ಮೃದುವಾದ ತ್ವಚೆಯ ಮೇಲು ಸಹ ಇದನ್ನು ಮಾಡುವುದರಿಂದ ಮೇಕಪ್ ದೀರ್ಘ ಕಾಲ ಉಳಿಯುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ಎಕ್ಸ್‌ಫೋಲಿಯೇಟ್ ಮಾಡಿ.
ಲಿಪ್ ಲೈನರ್
ವಾಟರ್‌ಪ್ರೂಫ್ ಉತ್ಪನ್ನಗಳನ್ನು ಬಳಸಿ



Click it and Unblock the Notifications



