For Quick Alerts
ALLOW NOTIFICATIONS  
For Daily Alerts

ಈ ಆಯುರ್ವೇದ ವಸ್ತುಗಳಲ್ಲಿ ಸೌಂದರ್ಯ ಇಮ್ಮಡಿಗೊಳಿಸುವ ಶಕ್ತಿಯಿದೆ!

|

ಕಾಂತಿಯುತ ತ್ವಚೆಗಾಗಿ ಪ್ರತಿದಿನ ನಾನಾ ಸರ್ಕಸ್‌ಗಳನ್ನು ಮಾಡುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಫಲಿತಾಂಶ ಕೊಟ್ಟರೆ, ಉಳಿದವು ಹಾನಿ ಮಾಡುವುದೇ ಹೆಚ್ಚು. ಈ ಹಾನಿಯನ್ನು ತಡೆಗಟ್ಟಲು ಆಯುರ್ವೇದದ ಮೊರೆ ಹೋಗುವುದು ಉತ್ತಮ. ಅದರ ಫಲಿತಾಂಶ ತಡವಾದರೂ, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ, ಏಕೆಂದರೆ, ಅವು ನೈಸರ್ಗಿಕವಾಗಿರತ್ತವೆ.

ಅದೇ ರೀತಿ ನಾವಿಂದು, ತ್ವಚೆಯ ರಕ್ಷಣೆಗೆ ನಿಮ್ಮ ದೈನಂದಿನ ಜೀವನದಲ್ಲಿ ಸೇರಿಸಿಕೊಳ್ಳಬೇಕಾದ ಕೆಲವೊಂದು ಆಯುರ್ವೇದ ಪದಾರ್ಥಗಳ ಬಗ್ಗೆ ಮಾತನಾಡಲಿದ್ದೇವೆ. ಇವುಗಳನ್ನು ಯಾವುದೇ ಭಯವಿಲ್ಲದೇ ನಿಮ್ಮ ಸೌಂದರ್ಯ ರಕ್ಷಣೆಯಲ್ಲಿ ಬಳಸಿಕೊಳ್ಳಬಹುದು.

ತ್ವಚೆಯ ರಕ್ಷಣೆಗೆ ಆಯುರ್ವೇದ ಪರಿಹಾರವನ್ನು ಈ ಕೆಳಗೆ ನೀಡಲಾಗಿದೆ:

ಕೇಸರಿ:

ಕೇಸರಿ:

ಕೇಸರಿಯು ಸೌಂದರ್ಯ ಆರೈಕೆಗೆ ಪರಿಪೂರ್ಣವಾದ ಘಟಕಾಂಶವಾಗಿದೆ. ಈಜಿಪ್ಟ್, ಕಾಶ್ಮೀರಿ ಮತ್ತು ಇತರ ಸಂಸ್ಕೃತಿಗಳ ಭಾಗವಾಗಿರುವ ಕೇಸರಿ ನಿಮ್ಮ ಚರ್ಮಕ್ಕೆ ಒಂದು ಆಶೀರ್ವಾದವಾಗಿದೆ. ಈ ಮೂಲಿಕೆಯು ಪಿಗ್ಮೆಂಟೇಶನ್, ಬಣ್ಣ ಸುಧಾರಣೆ ಮತ್ತು ಮೊಡವೆಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ. ಉತ್ಕರ್ಷಣ ನಿರೋಧಕವಾಗಿ, ಇದು ಪರಿಸರದ ಒತ್ತಡಗಳಿಂದ ಚರ್ಮವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕ್ರೋಸಿನ್ ಮತ್ತು ಕ್ರೋಸೆಟಿನ್ ಎಂಬ ಎರಡು ವಿಧದ ಶಕ್ತಿಯುತ ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿದ್ದು, ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ. ಆದ್ದರಿಂದ ಇದನ್ನು ನಿಮ್ಮ ಸೌಂದರ್ಯ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು.

ತುಪ್ಪ:

ತುಪ್ಪ:

ತುಪ್ಪವು ನಿಮ್ಮ ಚರ್ಮ ಮತ್ತು ನಿಮ್ಮ ದೇಹಕ್ಕೆ ಒಳ್ಳೆಯದು. ಇದು ತೇವಾಂಶ ಮತ್ತು ಪೋಷಣೆಯಿಂದ ತುಂಬಿದ ಉತ್ತಮ ಕೊಬ್ಬಾಗಿದ್ದು, ಚರ್ಮಕ್ಕೆ ಆರೋಗ್ಯಕರವಾದ ಮಾಯಿಶ್ಚರೈಸರ್‌ಗಳಲ್ಲಿ ಒಂದಾಗಿದೆ. ಆಯುರ್ವೇದವು ತುಪ್ಪದ ಬಳಕೆಯನ್ನು ಪ್ರತಿಪಾದಿಸುತ್ತದೆ ಏಕೆಂದರೆ ಇದು ಎಲ್ಲಾ ಕೊಬ್ಬುಗಳಿಗಿಂತ ಅತ್ಯುತ್ತಮವಾಗಿದೆ. ಇದರ ಪ್ರಮುಖ ಪ್ರಯೋಜನಗಳೆಂದರೆ ಕಾಂತಿಯನ್ನು ಸುಧಾರಿಸುತ್ತದೆ, ಚರ್ಮವನ್ನು ಪುನರ್ಯೌವನಗೊಳಿಸುತ್ತದೆ ಮತ್ತು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ.

ಬೇವು:

ಬೇವು:

ಇದು ಕಹಿಯಾದರೂ, ಚರ್ಮಕ್ಕೆ ಉತ್ತಮ. ಕಹಿಬೇವು ರಕ್ತ ಶುದ್ಧೀಕರಣದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ. ಇದರ ಕೂಲಿಂಗ್ ಗುಣಲಕ್ಷಣಗಳು ಪಿತ್ತ ಹಾಗೂ ಕಫ ದೋಷಗಳನ್ನು ಸಮತೋಲಗೊಳಿಸಲು ಸಹಾಯ ಮಾಡುವುದು. ಈ ಮೂಲಕ ನಿರ್ವಿಶೀಕರಣ ಮತ್ತು ಮೊಡವೆ ಪೀಡಿತ ಚರ್ಮವನ್ನು ಸರಿಪಡಿಸುವುದು. ಈ ಶಕ್ತಿಯುತವಾದ ಮೂಲಿಕೆಯು ಚರ್ಮ ಮತ್ತು ಕೂದಲಿಗೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮ ಮತ್ತು ನೆತ್ತಿಯಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಂಡು, ತಲೆಹೊಟ್ಟು ಮತ್ತು ಎಣ್ಣೆಯುಕ್ತ ನೆತ್ತಿಯನ್ನು ಗುಣಪಡಿಸುತ್ತದೆ.

ಶ್ರೀಗಂಧ:

ಶ್ರೀಗಂಧ:

ತ್ವಚೆಯ ಒಳಗಿನ ಹೊಳಪನ್ನು ಅನ್‌ಲಾಕ್ ಮಾಡಲು ಇದು ಅತ್ಯುತ್ತಮ ಪದಾರ್ಥವಾಗಿದೆ. ಅದರ ಆರೊಮ್ಯಾಟಿಕ್ ಮತ್ತು ಪುನರುಜ್ಜೀವನಗೊಳಿಸುವ ಗುಣಲಕ್ಷಣಗಳಿಗೆ ಶ್ರೀಗಂಧ ಹೆಸರುವಾಸಿಯಾಗಿದ್ದು, ಮೊಡವೆ, ಮುಖದ ಕಾಂತಿ ಹೆಚ್ಚಳಕ್ಕೆ ಇದ್ನನು ಬಳಸಬಹುದು.

ಮುಲ್ತಾನಿ ಮಿಟ್ಟಿ :

ಮುಲ್ತಾನಿ ಮಿಟ್ಟಿ :

ಚರ್ಮದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮುಲ್ತಾನಿ ಮಿಟ್ಟಿ ಮಾಸ್ಕ್‌ ಉತ್ತಮ. ಇದು ಉರಿಯೂತ ವಿರೋಧು ಮತ್ತು ನಂಜುನಿರೋಧಕ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು, ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಸಮತೋಲನ, ತಂಪಾಗಿಸುವಿಕೆ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದ್ದು, ಮೊಡವೆ ಪೀಡಿತ ಚರ್ಮಕ್ಕೆ ಸೂಕ್ತವಾದ ಘಟಕಾಂಶವಾಗಿದೆ. ಇದು ಅತ್ಯುತ್ತಮವಾದ ಹೀರಿಕೊಳ್ಳುವ ಖನಿಜಗಳಿಂದ ಸಮೃದ್ಧವಾಗಿದ್ದು, ಮುಲ್ತಾನಿ ಮಿಟ್ಟಿಯನ್ನು ನಿಮ್ಮ ಮುಖದ ಮೇಲೆ ಹಚ್ಚುವುದರಿಂದ, ನಿಮಗೆ ತಾಜಾ ಮತ್ತು ಕಾಂತಿಯುತ ಭಾವನೆ ಸಿಗುವುದು.

ದಾಸವಾಳ:

ದಾಸವಾಳ:

ಈ ಹೂವಿನ ಹೆಸರನ್ನು ಹೇರ್‌ಕೇರ್ ಘಟಕಾಂಶವಾಗಿ ಹಲವು ಬಾರಿ ಕೇಳಿರುತ್ತೀತಿ. ಇದು ದಟ್ಟವಾದ ಮತ್ತು ಉದ್ದನೆಯ ಕೂದಲುಗಿಂತ ಹೆಚ್ಚಿನದನ್ನು ನೀಡುತ್ತದೆ. ದಾಸವಾಳದ ಹೂವುಗಳು ಮತ್ತು ಎಲೆಗಳೆರಡನ್ನೂ ಕೂದಲಿನ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ದಾಸವಾಳದಲ್ಲಿರುವ ಅಮೈನೋ ಆಮ್ಲಗಳು (ಕೆರಾಟಿನ್) ದಾಸವಾಳವನ್ನು ಅತ್ಯುತ್ತಮ ಕಂಡೀಷನರ್ ಆಗಿ ಮಾಡುತ್ತದೆ. ಇದು ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ, ಕೂದಲನ್ನು ಮೃದುಗೊಳಿಸುತ್ತದೆ.

ಕುಂಕುಮಾದಿ ತೈಲ:

ಕುಂಕುಮಾದಿ ತೈಲ:

ನಿಮ್ಮ ತ್ವಚೆಗೆ ದ್ರವರೂಪದ ಚಿನ್ನ ಎಂದು ಹೆಸರಿಸಲಾಗಿರುವ ಕುಂಕುಮಾದಿ ತೈಲವು, ವಯಸ್ಸಾದ, ಮಂದ ಮತ್ತು ಹೊಳಪು ಇಲ್ಲದ ಚರ್ಮಕ್ಕೆ ಇದು ಒಂದು ಆಶೀರ್ವಾದ. ವಿವಿಧ ಸಮಸ್ಯೆಗಳನ್ನು ನಿರ್ವಹಿಸಲು ಮತ್ತು ಚರ್ಮದ ನೈಸರ್ಗಿಕ ಹೊಳಪನ್ನು ಹೊರತರಲು ಇದು ಹೆಸರುವಾಸಿ. ಕುಂಕುಮಾದಿ ಎಣ್ಣೆಯು ಅತ್ಯಂತ ಪರಿಣಾಮಕಾರಿಯಾಗಲು ಅದರಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಅವುಗಳ ಶುದ್ಧ ರೂಪದಲ್ಲಿ ರೂಪಿಸಲಾಗಿದೆ. ತ್ವಚೆಯನ್ನು ಪೋಷಿಸುವ ಜೊತೆಗೆ, ಇದು ಕ್ಲೆನ್ಸರ್, ಟೋನರ್ ಮತ್ತು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

English summary

Must Use Ayurvedic Ingredients for Your Beauty Routine in Kannada

Here we talking about Must Use Ayurvedic Ingredients for Your Beauty Routine in Kannada, read on
Story first published: Tuesday, December 28, 2021, 17:50 [IST]
X
Desktop Bottom Promotion