For Quick Alerts
ALLOW NOTIFICATIONS  
For Daily Alerts

ಮುಖದ ತ್ವಚೆ ಒಡೆದಿದ್ದರೆ ಉಪಶಮನ ಹೇಗೆ?

By ಲೇಖಕ
|

ನಿಮ್ಮ ದೇಹದಲ್ಲಿ ಉಂಟಾಗುವ ಎಲ್ಲ ರೀತಿಯ ತ್ವಚೆಯ ಸಮಸ್ಯೆಗಳು ಮುಖ್ಯವಾಗಿ ಕಠಿಣ ಹವಾಮಾನ, ಕಳಪೆ ಸೌಂದರ್ಯ ಪ್ರಸಾದನ ಸಾಮಗ್ರಿಗಳು ಮತ್ತು ಕಡಿಮೆ ಆರ್ದ್ರತೆಯ ಪರಿಣಾಮವಾಗಿ ಉಂಟಾಗುತ್ತದೆ. ಇದರಿಂದಾಗಿ ತ್ವಚೆಯು ಒಡೆಯುತ್ತದೆ ಮತ್ತು ಅಲ್ಲಲ್ಲಿ ಕೆಂಪು ಮಚ್ಚೆಗಳಾಗುತ್ತವೆ.

ಇದರೊಂದಿಗೆ ಅಲರ್ಜಿಗಳು ಸಹ ಚರ್ಮಕ್ಕೆ ತುರಿಕೆ ಮತ್ತು ಕೆಂಪು ಮಚ್ಚೆಗಳಾಗುವಂತಹ ಸಮಸ್ಯೆಗಳನ್ನುಂಟು ಮಾಡುತ್ತದೆ. ಇದಕ್ಕೆ ನೋವಿಲ್ಲದ, ನಂಜಿಲ್ಲದ ಪರಿಹಾರವನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಿಮಗಾಗಿ ಕೆಲವು ಪರಿಹಾರಗಳು ಇಲ್ಲಿವೆ;-

How to Heal Cracked Skin on the Face

ಹಂತಗಳು

1. ಮೊದಲಿಗೆ ನಿಮ್ಮ ಮುಖವನ್ನು ಸಾಮಾನ್ಯಕ್ಕಿಂತ ವೇಗವಾಗಿ ಮತ್ತು ಶುಭ್ರವಾಗಿ ತೊಳೆಯಿರಿ. ತೊಳೆಯುವಾಗ ನಿಮ್ಮ ಮುಖಕ್ಕೆ ನೀರು ಮತ್ತು ಮಾರ್ಜಕಗಳು ಕಡಿಮೆ ಪ್ರಮಾಣದಲ್ಲಿ ತಾಗಿದಷ್ಟು ಒಳ್ಳೆಯದು. ಇದಕ್ಕಾಗಿ ಮೆದುವಾದ ಸೋಪ್ ಮತ್ತು ಕ್ಲೀನ್ಸರ್ ಗಳನ್ನು ಬಳಸಿ, ಸ್ಕ್ರಬ್ಬರ್ ಗಳನ್ನು ಬಳಸದೆ ಇದ್ದಷ್ಟು ಉತ್ತಮ.

2. ಬಿಸಿ ನೀರಿನಲ್ಲಿ ಸ್ನಾನ ಮತ್ತು ಶವರ್ ಗಳನ್ನು ಬಳಸಬೇಡಿ. ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಬಳಸಿ. ನಿಮ್ಮ ಮುಖವನ್ನು ಉಜ್ಜುವ ಬದಲು ಒಣಗಲು ಬಿಡಿ.

3. ನಿಮ್ಮ ಮುಖಕ್ಕೆ ಮೊಯಿಶ್ಚರೈಜರ್ ಲೇಪಿಸಿ. ಇವುಗಳು ಮುಖದಲ್ಲಿ ಉಂಟಾಗುವ ಗುಳ್ಳೆ , ಕಜ್ಜಿ ಮುಂತಾದವುಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಈ ಲೋಶನ್‍ಗಳು ಲೋಳೆಯಂತಿರುತ್ತವೆಯಾದರು ಅಲ್ಕೋಹಾಲ್‍ ಅಂಶವನ್ನು ಹೊಂದಿರುತ್ತದೆ. ಹಾಗಾಗಿ ನೀವು ಜಿಡ್ಡಿನಿಂದ ಕೂಡಿದ ಮುಲಾಮು ಅಥವಾ ಕ್ರೀಮ್ ಉಪಯೋಗಿಸದಿದ್ದ ಪಕ್ಷದಲ್ಲಿ ಮಾತ್ರ ಬಳಸಿ. ನಿಮಗೆ ನೋವಿದ್ದರೆ ಜಿಡ್ಡುರಹಿತ ಉತ್ಪನ್ನಗಳನ್ನೆ ಬಳಸಿ.

4.ಹಾಗಾಗ್ಗೆ ನಿಮ್ಮ ಮುಖಕ್ಕೆ ಒಣ ಮತ್ತು ತುರಿಕೆ ನಿರೋದಕವಾದ ಕರ್ಟಿಸೋನ್ ಕ್ರೀಮನ್ನು ಹಚ್ಚಿ. ಇದು 1-2 ವಾರ ಹಚ್ಚಿದರೆ ಉತ್ತಮ. ಈ ಕ್ರೀಮನ್ನು ಎಲ್ಲಿ ಅವಶ್ಯಕವೊ ಅಲ್ಲಿ ಮಾತ್ರ ಹಚ್ಚಿ, ಮುಖವೆಲ್ಲ ಹಚ್ಚ ಬೇಡಿ. ಹಾಗೆ ಮಾಡಿದರೆ ನಂಜು ಎಲ್ಲ ಕಡೆ ಪಸರಿಸುತ್ತದೆ. ಹಾಗು ಒಂದೆರಡು ದಿನಕ್ಕಿಂತ ಹೆಚ್ಚಿಗೆ ಹಚ್ಚಬೇಡಿ. ಮೊದಲಿಗೆ ಕರ್ಟಿಸೋನ್ ಕ್ರೀಮನ್ನು ಹಚ್ಚಿ, ನಂತರ ಮೊಯಿಶ್ಚರೈಜರ್ ಹಚ್ಚಿ.

ಒಂದು ವೇಳೆ ನೀವು ಬಳಸುವ ಮುಲಾಮಿನಿಂದ ನಿಮ್ಮ ತ್ವಚೆ ಸುಡುತ್ತಿದ್ದರೆ ಅಥವಾ ಕೆಂಪಾಗುತ್ತಿದ್ದರೆ, ತಕ್ಷಣ ಅದನ್ನು ಬಳಸುವುದನ್ನು ನಿಲ್ಲಿಸಿ. ಈ ಮುಲಾಮುಗಳಲ್ಲಿ ಕಠೋರವಾದಂತಹ ರಾಸಾಯನಿಕಗಳು ಇರುತ್ತವೆ. ಅವು ನಿಮ್ಮ ತ್ವಚೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು.

ಈ ತುರಿಕೆ ನೀರೊಧಕ ಮುಲಾಮುಗಳಲ್ಲಿ ಮೆಂಥಾಲ್ ಅಥವಾ ಕರ್ಪೂರವನ್ನು ಬಳಸಿರುತ್ತಾರೆ. ಇವು ಮುಖದ ತ್ವಚೆಗೆ ಪೂರಕವಾದ ಗುಣಗಳನ್ನು ಹೊಂದಿರುತ್ತವೆ. ತುರಿಕೆಯನ್ನು ನಿಲ್ಲಿಸಿದರೆ, ನೀವು ನಿಮ್ಮ ಮುಖದ ಅಂದಗೆಡಿಸಿಕೊಳ್ಳುವುದನ್ನು ನಿಲ್ಲಿಸಿದಂತೆಯೆ.

5. ನಿಮ್ಮ ಮನೆಯಲ್ಲಿ ಆರ್ದ್ರತೆಯನ್ನು ಹೆಚ್ಚಿಸುವ ಹ್ಯುಮಿಡಿಫೈಯರ್ ಗಳನ್ನು ಇಡಿ. ಇವು ನಿಮ್ಮ ಮನೆಯಲ್ಲಿರುವ ಅಧಿಕ ಒಣ ಗಾಳಿಯನ್ನು ಹೊರದೂಡಿ, ನಿಮ್ಮ ತ್ವಚೆ ಒಣಗುವುದನ್ನು ಮತ್ತು ಒಡೆಯುವುದನ್ನು ತಡೆಯುತ್ತದೆ.

6. ನಿಮ್ಮ ಮುಖಕ್ಕೆ ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮೊಯಿಶ್ಚರೈಜರ್ ಲೇಪಿಸಿ. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದ ನಂತರ ಮಾತ್ರ ಲೇಪಿಸುವುದನ್ನು ಮರೆಯಬೇಡಿ. ನಿಮ್ಮ ಮುಖದಲ್ಲಿ ಮೊಯಿಶ್ಚರೈಜರ್ ಹೆಚ್ಚಿದಷ್ಟು ನಿಮ್ಮ ಮುಖದಲ್ಲಿ ತುರಿಕೆ ಮತ್ತು ಒಡೆತಗಳು ಸಂಭವಿಸುವುದಿಲ್ಲ.

7. ನಿಮ್ಮ ಡಾಕ್ಟರ್ ಅಥವಾ ಚರ್ಮ ರೋಗ ತಙ್ಞರನ್ನು ನಿಮ್ಮ ತ್ವಚೆಯ ವಿಚಾರವಾಗಿ ಸಂಪರ್ಕಿಸಿ. ಚರ್ಮರೋಗಗಳು ವಂಶವಾಹಿಗಳಿಂದ, ಹಾರ್ಮೊನ್‍ಗಳ ಅಸಮತೋಲನದಿಂದ, ನಂಜುಕಾರಕಗಳಿಂದ ಅಥವಾ ಜಂತುಹುಳುಗಳಿಂದ ಸಂಭವಿಸುತ್ತದೆ. ಈ ಸಮಸ್ಯೆಗಳಿಗೆ ತಙ್ಞರಿಂದ ಚಿಕಿತ್ಸೆ ಅತ್ಯಗತ್ಯವಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಸಮಸ್ಯೆಯು ಒಣ ಚರ್ಮದಿಂದ ಉಂಟಾಗಿದ್ದರೆ, ನಿಮ್ಮ ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಬಹುದು. ಇದು ಮನೆ ಮದ್ದು ಮತ್ತು ಮುಂತಾದ ಉತ್ಪನ್ನಗಳಿಗಿಂತ ಉತ್ತಮವಾದುದು.

Read more about: ತ್ವಚೆ ಮುಖ skin face
English summary

How to Heal Cracked Skin on the Face | Tips For Skin care | ನಿಮ್ಮ ಮುಖದಲ್ಲಿ ಉಂಟಾದ ಒಡೆದ ತ್ವಚೆಗೆ ಉಪಶಮನ ಮಾಡುವುದು ಹೇಗೆ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Allergies can also cause skin to itch and redden. You will want to know how to heal cracked skin on the face to avoid the pain and possible infection that can occur when skin isn't kept supple.
X
Desktop Bottom Promotion