For Quick Alerts
ALLOW NOTIFICATIONS  
For Daily Alerts

ಮೇಕಪ್‌ ಕಿಟ್ ಸೋಂಕಾಣು ಕೂರದಂತೆ ಸ್ಯಾನಿಟೈಸ್ ಮಾಡುವುದು ಹೇಗೆ?

|

ಕೋವಿಡ್ -19 ಸಮಯದಲ್ಲಿ ನಾವು ಸಾಧ್ಯವಾದಷ್ಟು ಸೋಂಕುರಹಿತವಾಗಿರಲು ಪ್ರಯತ್ನಿಸಬೇಕು. ಅದು ನಾವು ತಿನ್ನುವ ಆಹಾರವಾಗಿರಬಹುದು ಅಥವಾ ಬಳಸುವ ಯಾವುದೇ ವಸ್ತುಗಳಾಗಿರಬಹುದು.

clean and sanitise your make up ki

ಅದರಂತೆ ನಾವು ನಿತ್ಯ ಬಳಸುವ ನಮ್ಮ ಸೌಂದರ್ಯವರ್ಧಕಗಳು ಅಂದರೆ ಮೇಕಪ್ ಕಿಟ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಅಗತ್ಯ. ಕೇವಲ ಕರೊನಾ ಸಮಯದಲ್ಲಿ ಮಾತ್ರವಲ್ಲದೇ ಎಲ್ಲಾ ಸಮಯದಲ್ಲೂ ಮೇಕಪ್ ಕಿಟ್ ಸ್ವಚ್ಛವಾಗಿಟ್ಟುಕೊಳ್ಳುವುದು ತ್ವಚೆಯ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು!

ಮೇಕಪ್ ಕಿಟ್ ಅನ್ನು ಹದಿನೈದು ದಿನಕ್ಕೊಮ್ಮೆ ಸೋಂಕುರಹಿತಗೊಳಿಸಬೇಕು ಎಂದು ಸೌಂದರ್ಯ ತಜ್ಞರು ಹೇಳುತ್ತಾರೆ.

ಮೇಕಪ್ ಕಿಟ್ ಅನ್ನು ಹದಿನೈದು ದಿನಕ್ಕೊಮ್ಮೆ ಸೋಂಕುರಹಿತಗೊಳಿಸಬೇಕು ಎಂದು ಸೌಂದರ್ಯ ತಜ್ಞರು ಹೇಳುತ್ತಾರೆ.

ನಿಮ್ಮ ತ್ವಚೆಯನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿಡಲು ದಿನದ ಕೊನೆಯಲ್ಲಿ ನಿಮ್ಮ ಮೇಕಪ್ ನ್ನು ತೆಗೆಯುವುದು ಅತ್ಯಗತ್ಯ. ನಿಯಮಿತ ತ್ವಚೆಯ ರಕ್ಷಣೆಯ ದಿನಚರಿಯನ್ನು ಅನುಸರಿಸುವುದರ ಜೊತೆಗೆ, ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಮೇಕಪ್ ಕಿಟ್ ಅನ್ನು ಕೂಡ ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳುವುದು ಬಹಳ ಮುಖ್ಯ.

ಹಾನಿಗೊಳಗಾದ / ಡೆಡ್ ಸ್ಕಿನ್ ಕೋಶಗಳು, ಕೊಳಕು, ಎಣ್ಣೆ ಮತ್ತು ಬ್ಯಾಕ್ಟೀರಿಯಾಗಳು ನಿಮ್ಮ ಫೌಂಡೇಶನ್ ಸ್ಪಂಜು, ಮೇಕಪ್ ಬ್ರಷ್ ಗಳು ಮತ್ತು ಲಿಪ್ಸ್ಟಿಕ್ಗಳಲ್ಲಿ ಸಂಗ್ರಹವಾಗಬಹುದು. ನಿಮ್ಮ ಮುಖದ ಮೇಲೆ ಈ ಕೊಳಕು ಅಥವಾ ಆರೋಗ್ಯಕರವಲ್ಲದ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮದ ಕಿರಿಕಿರಿ, ಕೆಂಪು ಗುಳ್ಳೆಗಳು, ದದ್ದುಗಳು, ಮುಚ್ಚಿಹೋಗಿರುವ ರಂಧ್ರಗಳು, ಬ್ಲ್ಯಾಕ್ಹೆಡ್ಸ್, ವೈಟ್ಹೆಡ್ಸ್, ಮಿಲಿಯಾ ಮತ್ತು ಮೊಡವೆ ಮೊದಲಾದವುಗಳು ಉಂಟಾಗಲು ಕಾರಣವಾಗಬಹುದು.

ಕಲುಷಿತ ಸೌಂದರ್ಯವರ್ಧಕಗಳು ಮತ್ತು ಮೇಕ್ಅಪ್ ಪರಿಕರಗಳನ್ನು ಬಳಸುವುದರಿಂದ ಕಾಂಜಂಕ್ಟಿವಿಟಿಸ್, ಸ್ಟ್ಯಾಫ್, ಇ-ಕೋಲಿ, ಶಿಲೀಂಧ್ರಗಳ ಸೋಂಕು ಮತ್ತು ಶೀತ ಹುಣ್ಣುಗಳಂತಹ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.

ಮೇಕಪ್ ಕಿಟ್ ಅನ್ನು ಹದಿನೈದು ದಿನಕ್ಕೊಮ್ಮೆ ಸೋಂಕುರಹಿತಗೊಳಿಸಬೇಕು ಎಂದು ಸೌಂದರ್ಯ ತಜ್ಞರು ಹೇಳುತ್ತಾರೆ. ಬ್ರಷ್ಗಳು, ಮಿಶ್ರಿತ ಸ್ಪಂಜನ್ನು ವಾರಕ್ಕೊಮ್ಮೆ ತೊಳೆಯಬೇಕು. ಲೋಹ ಅಥವಾ ಪ್ಲಾಸ್ಟಿಕ್ ಉಪಕರಣಗಳನ್ನು ಸಹ ವಾರಕ್ಕೊಮ್ಮೆ ಸೋಂಕುರಹಿತಗೊಳಿಸಬೇಕು.

ಅಂದಹಾಗೆ, ನೀವು ನಿಮ್ಮ ಮೇಕಪ್ ಕಿಟ್ ಅನ್ನು ನೀವು ಕೊನೆಯ ಬಾರಿಗೆ ಸ್ವಚ್ಛಗೊಳಿಸಿದ್ದು ಯಾವಾಗ? ಅದು ನಿಮಗೆ ನೆನಪಿನಲ್ಲಿಲ್ಲದಿದ್ದರೆ, ನಿಮ್ಮ ಎಲ್ಲಾ ಸೌಂದರ್ಯ ಸಾಧನಗಳನ್ನು ತೆಗೆದುಕೊಂಡು ಇದೀಗ ಅವುಗಳನ್ನು ಸ್ವಚ್ಛಗೊಳಿಸುವ ಸಮಯ! ನಿಮ್ಮ ಮೇಕಪ್ ಕಿಟ್ ಅನ್ನು ಸ್ವಚ್ಛಗೊಳಿಸಲು ಮತ್ತು ಸೋಂಕುರಹಿತಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ:

ಮೇಕಪ್ ಬ್ರಷ್ ಗಳು

ಮೇಕಪ್ ಬ್ರಷ್ ಗಳು

ನಿಮ್ಮ ಮೇಕಪ್ ಬ್ರಷ್ ಗಳನ್ನು ಪೌಂಡೇಶನ್ ಮತ್ತು ಕಣ್ಣಿಗೆ ಹಚ್ಚುವ ಬಣ್ಣ ಅಥವಾ ಐ ಶ್ಯಾಡೊಗಳು ಉಳಿಯದಂತೆ ಸ್ವಚ್ಛವಾಗಿರಿಸಿಕೊಳ್ಳಿ. ತ್ವರಿತ ಶುದ್ಧೀಕರಣಕ್ಕಾಗಿ ನೀವು ಬ್ರಷ್ ಕ್ಲೆನ್ಸರ್ ಅಥವಾ ಪೇಪರ್ ಟವೆಲ್ ಗಳನ್ನು ಬಳಸಬಹುದು. ಬ್ರಷ್ ನಲ್ಲಿನ ಹೆಚ್ಚುವರಿ ಮೇಕ್ಅಪ್ ಅನ್ನು ತೆಗೆದುಹಾಕಲು, ಮೇಕಪ್ ಬ್ರಷ್ ಗಳನ್ನು ತಂಪಾದ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಬ್ರಷ್ ಕ್ಲೀನರ್ ಗಳನ್ನೂ ಬಳಸಿ ತೊಳೆಯಿರಿ. ಬ್ರಷ್ಗಳನ್ನು ತೊಳೆಯುವಾಗ ಯಾವುದೇ ಕೊಳಕು ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ತೊಳೆಯುವಾಗ ನಿಮ್ಮ ಅಂಗೈಯಲ್ಲಿ ಅದನ್ನು ಸಂಪೂರ್ಣವಾಗಿ ತಿಕ್ಕಿ ಸ್ವಚ್ಛಗೊಳಿಸಬೇಕು. ಅವು ಸ್ವಚ್ಛಗೊಂಡಿದ್ದು ನಿಮಗೆ ಕಾಣುವವರೆಗೆ ತೊಳೆಯಿರಿ. ಬ್ರಷ್ ಗಳನ್ನು ತೊಳೆದ ನಂತರ, ಅವುಗಳನ್ನು ಮೇಲ್ಮುಖವಾಗಿರಿಸಿ ಮತ್ತು ಒಣಗಲು ಬಿಡಿ.

ಮೇಕಪ್ ಸ್ಪಂಜುಗಳು

ಮೇಕಪ್ ಸ್ಪಂಜುಗಳು

ಮೇಕಪ್ ಪರಿಕರಗಳಾದ ಬ್ಲೆಂಡಿಂಗ್ ಸ್ಪಂಜುಗಳು ಅಥವಾ ಮುಖದ ಶುದ್ಧೀಕರಣ ಬ್ರಷ್ ಗಳನ್ನು ಪ್ರತಿ ಬಳಕೆಯ ನಂತರ ಒಣಗಲು ಬಿಡಬೇಕು, ಇಲ್ಲದಿದ್ದರೆ ಅವುಗಳಲ್ಲಿ ಶಿಲೀಂಧ್ರಗಳು ಬೆಳೆಯಬಹುದು.

ನಿಮ್ಮ ಮೇಕಪ್ ಸ್ಪಂಜನ್ನು ಸ್ವಚ್ಛಗೊಳಿಸಲು ಈ ವಿಧಾನಗಳನ್ನು ಅನುಸರಿಸಿ -

ಮೇಕಪ್ ಸ್ಪಂಜನ್ನು ಸಂಪೂರ್ಣವಾಗಿ ಒದ್ದೆಯಾಗುವವರೆಗೆ ನಲ್ಲಿ ನೀರಿನ ಅಡಿಯಲ್ಲಿಟ್ಟು ಹಿಸುಕಿ.

ಶುದ್ಧೀಕರಣ ದ್ರವವನ್ನು (ಕ್ಲೆಂಜಿಂಗ್ ಲಿಕ್ವಿಡ್) ಸೇರಿಸಿ ಅಥವಾ ಸ್ಪಂಜಿನ ಮೇಲೆ ಸೋಪ್ ಬಾರ್ ಅನ್ನು ಉಜ್ಜಿಕೊಳ್ಳಿ

ಸ್ಪಂಜನ್ನು ನಿಮ್ಮ ಒದ್ದೆಯಾದ ಕೈಯಲ್ಲಿ ಚೆನ್ನಾಗಿ ಉಜ್ಜಿ ಅದನ್ನು ಸ್ವಚ್ಛಗೊಳಿಸಿ.

ನಂತರ ಸ್ವಂಜಿನಲ್ಲಿ ಸ್ವಚ್ಛವಾದ ನೀರು ಬರುವವರೆಗೆ ಹಿಸುಕಿ ತೊಳೆಯಿರಿ.

ಈಗ ನಿಮ್ಮ ಸ್ಪಂಜನ್ನು ಒಂದು ಬದಿಗೆ ಇರಿಸಿ ಮತ್ತು ಗಾಳಿಯಲ್ಲಿ ಒಣಗಲು ಬಿಡಿ.

ಈ ಶುದ್ಧೀಕರಣ ಕಾರ್ಯವನ್ನು ನೀವು ತಪ್ಪಿಸಲು ಬಯಸಿದರೆ, ಬಿಸಾಡಬಹುದಾದ ಲೇಪಕಗಳನ್ನು ಮತ್ತು ಸ್ಪಂಜುಗಳನ್ನು ಬಳಸಿ, ನೀವು ಕೆಲವು ಬಳಕೆಗಳ ನಂತರ ಅದನ್ನು ಬಿಸಾಡಬಹುದು.

ಲಿಕ್ವಿಡ್ ಅಥವಾ ಕ್ರೀಮ್ ಫೌಂಡೇಶನ್

ಲಿಕ್ವಿಡ್ ಅಥವಾ ಕ್ರೀಮ್ ಫೌಂಡೇಶನ್

ನಿಮ್ಮ ಫೌಂಡೇಶನ್ ಕ್ರೀಮ್ ಗಳನ್ನು ಸ್ವಚ್ಛಗೊಳಿಸುವುದು ಸಾಧ್ಯವಿಲ್ಲದ ಮಾತು. ಹಾಗಾಗಿ ಇಂಥ ಕ್ರೀಮ್ ಗಳಲ್ಲಿ ನಿಮ್ಮ ಬೆರಳುಗಳನ್ನು ಅದ್ದದೇ ಇರುವುದು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ. ಉತ್ಪನ್ನವನ್ನು ಬಳಸಲು ಸ್ವಚ್ಛವಾದ ಕಾಟನ್ ಬಡ್ ಗಳು ಸ್ಪಂಜು ಅಥವಾ ಚಾಕು ಮುಂತಾದ ನೈರ್ಮಲ್ಯದಾಯಕ ವಸ್ತುಗಳನ್ನು ಬಳಸಿ.

ಲಿಪ್ಸ್ಟಿಕ್ ಮತ್ತು ಕನ್ಸೀಲರ್ ಗಳು

ಲಿಪ್ಸ್ಟಿಕ್ ಮತ್ತು ಕನ್ಸೀಲರ್ ಗಳು

ನಿಮ್ಮ ಸ್ಟಿಕ್ (ತಿರುಗಿಸಬಹುದಾದ) ಉತ್ಪನ್ನವನ್ನು ಸ್ವಲ್ಪಮಟ್ಟಿಗೆ ತಿರುಗಿಸಿ ಮತ್ತು ಅದು ಮೇಲೆ ಬಂದ ನಂತರ ಕಾಟನ್ ಬಡ್ ಬಳಸಿ ತೆಳುವಾದ ಪದರವನ್ನು ತೆಗೆದುಹಾಕಿ. ನಂತರ ಐಸೊಪ್ರೊಪಿಲ್ ಆಲ್ಕೋಹಾಲ್ ನ್ನು ಸಿಂಪಡಿಸಿ ಅದನ್ನು ಸ್ವಚ್ಛಗೊಳಿಸಿ. ನಂತರ ಶುದ್ಧವಾದ ಕಾಟನ್ ನಿಂದ ಒರೆಸಿ ಗಾಳಿಗೆ ಒಣಗಲು ಬಿಡಿ. ನಿಮ್ಮ ಲಿಪ್ಸ್ಟಿಕ್ ಮತ್ತು ಕನ್ಸಿಲರ್ ಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸುವುದು ಒಳ್ಳೆಯದು.

ಪೆನ್ಸಿಲ್ಗಳು

ಪೆನ್ಸಿಲ್ಗಳು

ಪ್ರತಿ ಬಳಕೆಗೆ ಮೊದಲು ನಿಮ್ಮ ಐಲೈನರ್ ಮತ್ತು ಲಿಪ್ಲೈನರ್ ಪೆನ್ಸಿಲ್ಗಳನ್ನು ಚೂಪಾಗಿಸಿ. ನೀವು ತಿರುಗಿಸಬಹುದಾದಂತಹ ಉತ್ಪನ್ನಗಳನ್ನು ಬಳಸುತ್ತಿದ್ದರೆ, ಸ್ವಲ್ಪ ಆಲ್ಕೋಹಾನ್ ನ್ನು ಹತ್ತಿ ಪ್ಯಾಡ್ಗೆ ಸಿಂಪಡಿಸಿ ಮತ್ತು ಅದನ್ನು ಬಳಸುವ ಮೊದಲು ಪೆನ್ಸಿಲ್ನ ತುದಿಯನ್ನು ಒರೆಸಿ.

ಪೌಡರ್ ಗಳು

ಪೌಡರ್ ಗಳು

ನಿಮ್ಮ ಒತ್ತಿ ಹಚ್ಚುವಂತಹ ಪೌಡರ್ ಮೇಕಪ್ ಉತ್ಪನ್ನಗಳಾದ ಐಷಾಡೋ, ಬ್ಲಶ್, ಬ್ರಾಂಜರ್ ಮತ್ತು ಟು ವೇ ಕೇಕ್ ಮೊದಲಾದವುಗಳ ಮೇಲೆ ಕೊಳಕು ಮತ್ತು ತೈಲಗಳು ಸಂಗ್ರಹವಾಗಬಹುದು. ಹಾಗಾಗಿ ಚಾಕುವಿನಂತಹ ಸಲಕರಣೆಯನ್ನು ಬಳಸಿ, ಉತ್ಪನ್ನದ ತೆಳುವಾದ ಪದರವನ್ನು ನಿಧಾನವಾಗಿ ಉಜ್ಜಿಕೊಳ್ಳಿ. ನಂತರ ಸ್ವಲ್ಪ ಆಲ್ಕೋಹಾಲ್ ಸಿಂಪಡಿಸಿ ಅದನ್ನು ಗಾಳಿಯಲ್ಲಿ ಒಣಗಲು ಬಿಡಿ.

ಈ ವಿಧಾನಗಳು ನಿಮ್ಮ ಸೌಂದರ್ಯದ ಜೊತೆಗೆ ತ್ವಚೆಯ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

English summary

How To Clean And Sanitise Your Make Up Kit in Kannada

Here are tips clean and sanitise your make up kit Read on
Story first published: Saturday, August 29, 2020, 10:14 [IST]
X
Desktop Bottom Promotion