For Quick Alerts
ALLOW NOTIFICATIONS  
For Daily Alerts

ಹೇರ್ ಡ್ರೈಯರ್‌ನಿಂದ ಕೂದಲಿಗೆ ಹಾನಿಯಾಗುತ್ತಿದ್ದರೆ, ಈ ಸಿಂಪಲ್ ಟ್ರಿಕ್ಸ್ ಬಳಸಿ

|

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಮ್ಮ ಕೂದಲು ಒಣಗಿಸುವುದೇ ದೊಡ್ಡ ಕೆಲಸವಾಗಿರುತ್ತೆ.. ಹೋರಹೋಗುವ ವೇಳೆ ಅಥವಾ ಪ್ರಯಾಣದ ಸಮಯದಲ್ಲಿ ಕೂದಲನ್ನು ನೈಸರ್ಗಿಕವಾಗಿ ಒಣಗಿಸಿಕೊಳ್ಳಲು ಸಮಯವಿಲ್ಲದೇ, ಬ್ಲೋ-ಡ್ರೈಯರ್ ಮೊರೆ ಹೋಗುವುದು ಸಾಮಾನ್ಯ. ಇದರ ಬಿಸಿ ಗಾಳಿಯಿಂದ ನಿಮ್ಮ ಕೂದಲೇನೋ ತಕ್ಷಣ ಒಣಗುವುದು, ಆದರೆ ಡ್ರೈಯರ್ ಬಳಕೆಯಿಂದ ನಿಮ್ಮ ಕೂದಲಿಗೆ ಹಾನಿ ಅಷ್ಟಿಷ್ಟಲ್ಲ. ಆದರೆ, ಇಲ್ಲಿ ನಾವು ಹೇಳಿರುವ ಸಲಹೆಗಳನ್ನು ಪಾಲಿಸಿದರೆ, ಬ್ಲೋ ಡ್ರೈಯರ್‌ನಿಂದ ನಿಮ್ಮ ಕೂದಲಿಗೆ ಆಗುವ ಹಾನಿಯ ಪ್ರಮಾಣವನ್ನು ತಡೆಯಬಹುದು. ಹಾಗಾದ್ರೆ, ಬನ್ನಿ, ಆ ಸಲಹೆಗಳೇನು ನೋಡೋಣ.

ಆರೋಗ್ಯಕರ ಕೂದಲುಗಾಗಿ ಬ್ಲೋ ಡ್ರೈಯರ್ ಬಳಸುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

1. ಕಂಡೀಷನರ್ ತಪ್ಪಿಸಲೇಬೇಡಿ:

1. ಕಂಡೀಷನರ್ ತಪ್ಪಿಸಲೇಬೇಡಿ:

ನೀವು ಬ್ಲೋ-ಡ್ರೈಯರ್ ಬಳಸುವವರಾಗಿದ್ದರೆ, ನಿಮ್ಮ ನಿರ್ಜೀವ ಕೂದಲಿಗೆ ಆಳವಾದ ಕಂಡೀಷನಿಂಗ್ ಉತ್ತಮ ಪರಿಹಾರ ಎಂದು ತಜ್ಞರು ಹೇಳುತ್ತಾರೆ. ಹೇರ್ ಕಂಡೀಷನಿಂಗ್ ನಿಮ್ಮ ಕೂದಲನ್ನು ಹೆಚ್ಚು ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ಉತ್ತಮ ಗುಣಮಟ್ಟದ ಕಂಡೀಷನರ್ ಬಳಕೆ ಮಾಡಲು ಮರೆಯದಿರಿ. ಇದರ ಜೊತೆಗೆ ನೀವು ಸಲೂನ್ ಚಿಕಿತ್ಸೆಗಳನ್ನು ಆರಿಸಿಕೊಳ್ಳಬಹುದು.

2. ಸಾಧ್ಯವಾದಗಲೆಲ್ಲಾ ನೈಸರ್ಗಿಕವಾಗಿ ಒಣಗಲು ಬಿಡಿ:

2. ಸಾಧ್ಯವಾದಗಲೆಲ್ಲಾ ನೈಸರ್ಗಿಕವಾಗಿ ಒಣಗಲು ಬಿಡಿ:

ಹೌದು, ನಿಮಗೆ ಸಮಯವಿಲ್ಲದಿದ್ದಾಗ ಬ್ಲೋ ಡ್ರೈಯರ್ ಬಳಕೆ ಮಾಡುವುದು ಸರಿ. ಆದರೆ, ನಿಮಗೆ ಹೊರಹೋಗಲು ಸಮಯವಿದ್ದರೆ, ಖಂಡಿತವಾಗಿಯೂ ಬ್ಲೋ ಡ್ರೈಯರ್ ಬಳಸದೇ ಇರಲು ಪ್ರಯತ್ನಿಸಿ. ಬದಲಾಗಿ, ನಿಮ್ಮ ಒದ್ದೆ ಕೂದಲನ್ನು ಹಾಗೆಯೇ ಗಾಳಿಯಲ್ಲಿ ಒಣಗಲು ಬಿಡಿ. ಇದು ಸಂಪೂರ್ಣ ಆರೋಗ್ಯಕರವಾಗಿದ್ದು, ನಿಮ್ಮ ಕೂದಲನ್ನು ಹಾನಿಯಿಂದ ತಡೆಯುವುದು.

3. ಕೂದಲನ್ನ ರಕ್ಷಿಸುವ ಸೀರಮ್ ಮರೆಯಬೇಡಿ:

3. ಕೂದಲನ್ನ ರಕ್ಷಿಸುವ ಸೀರಮ್ ಮರೆಯಬೇಡಿ:

ನಿಮ್ಮ ಕೂದಲನ್ನು ಬ್ಲೋ ಡ್ರೈಯರ್‌ನಿಂದ ಒಣಗಿಸಿಕೊಳ್ಳುವವರಾಗಿದ್ದರೆ, ಹೇರ್ ಸೀರಮ್ ಮಿಸ್ ಮಾಡಬಾರದಂತಹ ಅಂಶಗಳಲ್ಲಿ ಒಂದು. ನಿಮ್ಮ ಕೂದಲನ್ನು ಒಣಗಿಸುವ ಮೊದಲು ಹಾಗೂ ನಂತರ ಕೂದಲನ್ನು ರಕ್ಷಿಸುವ ಸೀರಮ್ ಅಥವಾ ಸ್ಪ್ರೇ ಅನ್ನು ಹಚ್ಚಲು ಮರೆಯಬೇಡಿ. ಇದು ಕೂದಲಿನ ಹಾನಿಯನ್ನು ತಡೆಯುವಲ್ಲಿ ಖಂಡಿತವಾಗಿ ಸಹಾಯ ಮಾಡುತ್ತದೆ.

4. ತಣ್ಣನೆಯ ಗಾಳಿ ಆಯ್ಕೆ ಮಾಡಿ:

4. ತಣ್ಣನೆಯ ಗಾಳಿ ಆಯ್ಕೆ ಮಾಡಿ:

ನಿಮ್ಮ ಡ್ರೈಯರ್ ನಲ್ಲಿ ತಂಪಾದ ಗಾಳಿಯನ್ನು ಆಯ್ಕೆ ಮಾಡುವ ಸೌಲಭ್ಯವಿದ್ದರೆ, ಆದಷ್ಟು ಬ್ಲೋ ಡ್ರೈಯರ್‌ನಲ್ಲಿ ತಂಪಾದ ಗಾಳಿಗೆ ಬದಲಾಯಿಸಲು ಪ್ರಯತ್ನಿಸಿ. ತಂಪಾದ ಗಾಳಿಯು ನಿಮ್ಮ ಕೂದಲು ದುರ್ಬಲಗೊಳ್ಳದೇ ಇರಲು ಮತ್ತು ಅದರ ಹೊಳಪನ್ನು ಕಳೆದುಕೊಳ್ಳದೇ ಇರಲು ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ಬಿಸಿ ಗಾಳಿಯಿಂದ ಕೂದಲು ಉದುರುವಿಕೆಯನ್ನು ಅನುಭವಿಸಬಹುದು.

5. ಹೇರ್ ಮಾಸ್ಕ್ ಬಳಸಿ:

5. ಹೇರ್ ಮಾಸ್ಕ್ ಬಳಸಿ:

ನಿಮ್ಮ ಕೂದಲನ್ನು ಬ್ಲೋ ಡ್ರೈಯರ್‌ನಲ್ಲಿ ಒಣಗಿಸುವುದು ದೈನಂದಿನ ಜೀವನದ ಒಂದು ಭಾಗವಾಗಿದ್ದರೆ ನೀವು ನಿಯಮಿತವಾಗಿ ಹೇರ್ ಮಾಸ್ಕ್‌ಗಳನ್ನು ಬಳಸುವುದು ಉತ್ತಮ. ಈ ಹೇರ್ ಮಾಸ್ಕ್‌ಗಳು ಕೂದಲಿಗೆ ಪೋಷಣೆಯನ್ನು ಒದಗಿಸಿ, ಕೂದಲ ಹೊಳಪು ಮತ್ತು ಪರಿಮಾಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದು. ಅಲ್ಲದೆ, ಕೆಲವು ಮನೆಯಲ್ಲಿಯೇ ತಯಾರಿಸಬಹುದಾದ ಹೇರ್ ಮಾಸ್ಕ್‌ಗಳನ್ನು ಪ್ರಯತ್ನಿಸಲು ಹಿಂಜರಿಯಬೇಡಿ.

6. ಆಹಾರದ ಬಗ್ಗೆಯೂ ಗಮನವಿರಲಿ:

6. ಆಹಾರದ ಬಗ್ಗೆಯೂ ಗಮನವಿರಲಿ:

ನೀವು ಏನು ತಿನ್ನುತ್ತೀರೋ ಅದು ನಿಮ್ಮ ಬಾಹ್ಯ ನೋಟದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯದಿರಿ. ಸಂಸ್ಕರಿತ ಆಹಾರವನ್ನು ಅತಿಯಾಗಿ ಸೇವಿಸಿದರೆ, ಅತಿಯಾದ ಮದ್ಯಪಾನದಲ್ಲಿ ತೊಡಗಿಸಿಕೊಂಡರೆ ಮತ್ತು ನಿದ್ರೆಯಿಂದ ವಂಚಿತರಾಗಿರುತ್ತಿದ್ದರೆ, ಎಲ್ಲಾ ಒತ್ತಡವು ನಿಮ್ಮ ಕೂದಲಿನ ಮೇಲೆ ಕಾಣಿಸಿಕೊಳ್ಳಬಹುದು. ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ಜೀವನಶೈಲಿಯನ್ನು ಪಾಲಿಸಿ. ಪರಿಣಾಮಕಾರಿ ಫಲಿತಾಂಶಗಳಿಗಾಗಿ ಪ್ರೋಟೀನ್-ಭರಿತ ಆಹಾರವನ್ನು ಪಡೆಯಿರಿ.

English summary

Tips and tricks while using a dryer to avoid hair damage in Kannada

Here we talking about Tips and tricks while using a dryer to avoid hair damage in Kannada, read on
Story first published: Saturday, September 24, 2022, 12:35 [IST]
X
Desktop Bottom Promotion