For Quick Alerts
ALLOW NOTIFICATIONS  
For Daily Alerts

ಪುರುಷರೇ, ನಿಮ್ಮ ಕೂದಲು ಇತ್ತೀಚೆಗೆ ಉದುರುತ್ತಿದೆಯೇ, ನೀವು ತಿಳಿಯಲೇಬೇಕಾದ ಅಂಶಗಳಿವು

|

ವಯಸ್ಸಾದ ಹಾಗೆಲ್ಲ ದೇಹಾರೋಗ್ಯ ಅನ್ನೋದು ಎಲ್ಲ ಆಯಾಮಗಳಲ್ಲೂ ತನ್ನ ಗುಣಮಟ್ಟನಾ ಕಳ್ಕೊಳ್ತಾ ಸಾಗುತ್ತೆ. ಅದುವರೆಗೂ ಬಳ್ಳಿಯಂತೆ ಬಳುಕ್ತಾ ಇದ್ದ ಮೈ ದಪ್ಪ ಆಗೋದು, ದೃಷ್ಟಿ ತೀಕ್ಷ್ಣತೆ ಕ್ಷೀಣಿಸೋದು, ಚರ್ಮಗಳಲ್ಲಿ ಕಾಣಿಸಿಕೊಳ್ಳೋ ನೆರಿಗೆಗಳು... ಹೀಗೆ ಒಂದಾ ಎರಡಾ ?!! ದೇಹದ ವಿಷಯದಲ್ಲಿ ಇನ್ನೂ ಏನೇನೆಲ್ಲ ಗುಣಮಟ್ಟಗಳನ್ನ ಕಳ್ಕೋತಾ ಹೋಗುತ್ತೋ ಗೊತ್ತಿಲ್ಲ. ಆದರೆ ಗಂಡಸರ ವಿಚಾರದಲ್ಲಿ ಮಾತ್ರ, ವಯಸ್ಸಾದಂತೆಲ್ಲ ಕೂದಲನ್ನ ಕಳ್ಕೋಳ್ಳೋದರ ವಿಚಾರದಲ್ಲೋ ಅಥವಾ ಕೂದಲು ಬೂದುಬಣ್ಣಕ್ಕೆ ತಿರುಗುವ ವಿಚಾರದಲ್ಲೋ ಅವರು ಏಗಬೇಕಾಗಿ ಬರೋದಂತೂ ಸರ್ವೇಸಾಮಾನ್ಯ.

ಈ ಎರಡು ಕಿರಿಕಿರಿಗಳಿಗೆ ಪರಿಹಾರವೇ ಇಲ್ಲವೇನೂ ಅಂತಾ ಅನ್ನಿಸಿದ್ರೂ ಆಶ್ಚರ್ಯವೇನಿಲ್ಲ. ಆದರೆ, ಈ ಕಿರಿಕಿರಿಗಳಿಗೆ ಕಾರಣವಾಗೋ ಸಂಗತಿಗಳಾದ್ರೂ ಯಾವ್ಯಾವುವು ಅನ್ನೋದನ್ನ ತಿಳ್ಕೊಂಡ್ರೆ ಅವನ್ನ ಸ್ವಲ್ಪ ಮುಂದೂಡುವುದಕ್ಕಾದರೂ ಪ್ರಯತ್ನಿಸಬಹುದೇನೋ ?!! ವಿಪರೀತ ಮಾನಸಿಕ ಒತ್ತಡವಿರೋ ಪರಿಸ್ಥಿತಿಯನ್ನೂ ಒಳಗೊಂಡ ಹಾಗೆ ಕೂದಲು ಅವಧಿಗೆ ಮುನ್ನವೇ ಉದುರೋಕೆ ಅಥವಾ ಬೂದುಬಣ್ಣದತ್ತ ತಿರುಗೋಕೆ ಕಾರಣಗಳು ಹಲವಾರು ಇರಬಹುದು. ಅವುಗಳಲ್ಲಿ ಕೆಲವನ್ನಾದರೂ ನಾವು ತಿಳಿದುಕೊಂಡರೆ, ಸ್ವಲ್ಪಮಟ್ಟಿಗಾದರೂ ದುಷ್ಪರಿಣಾಮವನ್ನ ತಡೆಗಟ್ಟೋಕೆ ಸಾಧ್ಯ ಆದೀತು.

1. ಕೂದಲ ನಷ್ಟ ಯಾವ ನಮೂನೆಯದ್ದು ಅನ್ನೋದನ್ನ ನಿರ್ಧರಿಸಿ

1. ಕೂದಲ ನಷ್ಟ ಯಾವ ನಮೂನೆಯದ್ದು ಅನ್ನೋದನ್ನ ನಿರ್ಧರಿಸಿ

ತಲೆಯ ಮಧ್ಯಭಾಗದ ಕೂದಲು ಉದುರೋದು ಪುರುಷರಲ್ಲಿ ಕಂಡುಬರೋ ಒಂದು ಸಾಮಾನ್ಯ ಅಂಶ. ಅದು ಅನುವಂಶೀಯತೆ ಕಾರಣವಾಗಿರಬಹುದು ಅಥವಾ ಶರೀರವು ತನ್ನ ವಿರುದ್ಧ ಸ್ವಯಂ ತಾನೇ ದಾಳಿ ಮಾಡೋದರ ಮೂಲಕ ತಲೆಗೂದಲ ನಷ್ಟಕ್ಕೆ ದಾರಿಮಾಡಿ ಕೊಡೋವಂತಹ ಆಟೋಇಮ್ಯೂನ್ ಕಂಡೀಷನ್ ಇರಬಹುದು. ನಿರ್ಧಿಷ್ಟ ಋತುಮಾನಕ್ಕಷ್ಟೇ ಸೀಮಿತವಾದ ರೀತಿಯಲ್ಲಿ ತಲೆಯ ಕೂದಲು ಉದುರೋದರ ಮೂಲಕ ನಿಮ್ಮನ್ನ ಹೆದರಿಸೋ ಧಾಟಿಯ ಕೂದಲುದುರುವಿಕೆಯೂ ಇರಬಹುದು. ಹಾಗಾಗಿ, ನಿಮ್ಮ ವಿಚಾರದಲ್ಲಿ ಈ ತಲೆಗೂದಲ ಉದುರುವಿಕೆ ಯಾವ ಸ್ವರೂಪದ್ದು ಅಂತಾ ನಿರ್ಧರಿಸೋ ಪ್ರಯತ್ನ ಮಾಡೋದು ತುಂಬಾ ಒಳ್ಳೇದು.

ಪುರುಷ ಮಾದರಿಯ ಕೂದಲುದುರುವಿಕೆಯಲ್ಲಿ, ಸರ್ವೇಸಾಮಾನ್ಯವಾಗಿ ನೆತ್ತಿಯ ಭಾಗದಿಂದ ಅಥವಾ ತಲೆಯ ಪಾರ್ಶ್ವಭಾಗಗಳಿಂದ ಸತತವಾಗಿ ಕೂದಲು ವಿರಳಗೊಳ್ಳುತ್ತಾ ಹೋಗುತ್ತದೆ.

2. ತಜ್ಞರಲ್ಲಿ ಮಾತನಾಡಿರಿ

2. ತಜ್ಞರಲ್ಲಿ ಮಾತನಾಡಿರಿ

"ಗುರುತರ ಕಾರಣವಿಲ್ಲದೇ ತಲೆಗೂದಲು ತುಂಬಾ ಉದುರುತ್ತಿದೆ" ಅಂತೇನಾದರೂ ನಿಮಗನಿಸಿದಲ್ಲಿ, ತಜ್ಞ ವೈದ್ಯರನ್ನ ಕಾಣಿರಿ ಹಾಗೂ ಕೂದಲ ನಷ್ಟದ ಕಾರಣವನ್ನ ಕಂಡುಕೊಳ್ಳಿರಿ. ಪುರುಷ ಮಾದರಿಯ ತಲೆಗೂದಲುದುರುವಿಕೆಗೆ ಪ್ರಸ್ತುತ ಸಮಗ್ರ ಕಾರಣವು ತಿಳಿದಿಲ್ಲವಾದರೂ ಕೂಡ, ಡೈಹೈಡ್ರೋಟೆಸ್ಟೋಸ್ಟಿರೋನ್ (ಡಿ.ಹೆಚ್.ಟಿ) ಎಂಬ ಹಾರ್ಮೋನಿನ ಪಾತ್ರವು ಇದರಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಡಿ.ಹೆಚ್.ಟಿ. ತಲೆಗೂದಲ ಬುಡಭಾಗದಲ್ಲಿ ಸಾಂದ್ರವಾದಂತೆಲ್ಲ ಅದು ತಲೆಗೂದಲ ಮುಂದಿನ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತದೆ. ಇನ್ನು ಇನ್ನಿತರ ಕಾರಣಗಳೆಂದರೆ ಅಲೋಪೇಷಿಯಾ ಏರಾಟಾ ಅನ್ನೋ ಪರಿಸ್ಥಿತಿ (ಆಯಾಕಟ್ಟಿನ ಜಾಗಗಳಲ್ಲಿ ಕೂದಲು ಉದುರೋದು), ಟ್ರೈಕೋಟಿಲ್ಲೋಮೇನಿಯಾ (ಪೆಡುಸು ಕೂದಲ ಬೆಳವಣಿಗೆ) ಹಾಗೂ ಆ್ಯಂಡ್ರೋಜೆನಿಕ್ ಅಲೋಪೇಷಿಯಾ (ತಲೆಗೂದಲು ತೆಳುವಾಗೋದು).

3. ನಿಮ್ಮ ಕೂದಲು ಅದೆಷ್ಟು ತ್ವರಿತವಾಗಿ ಉದುರೋ ಸಾಧ್ಯತೆ ಇದೆ?

3. ನಿಮ್ಮ ಕೂದಲು ಅದೆಷ್ಟು ತ್ವರಿತವಾಗಿ ಉದುರೋ ಸಾಧ್ಯತೆ ಇದೆ?

ನಿಮ್ಮ ಕೂದಲು ಈಗಾಗಲೇ ತೆಳುವಾಗೋದಕ್ಕೋ ಇಲ್ಲಾ ಉದುರೋದಕ್ಕೋ ಶುರುವಿಟ್ಟುಕೊಂಡಿದ್ದರೆ, ತಲೆ ಬೋಳಾಗೋದಕ್ಕೆ ಎಷ್ಟು ಕಾಲ ಬೇಕಾಗುತ್ತೆ ಅನ್ನೋದನ್ನ ನಿರ್ಧರಿಸೋಕೆ ಸಾಧ್ಯವಿಲ್ಲ. ಆದರೂ ಕೂಡ, ಸರ್ವೇಸಾಮಾನ್ಯವಾಗಿ, ಹಾಗೆ ಸಂಪೂರ್ಣವಾಗಿ ತಲೆ ಬೋಳಾಗೋದಕ್ಕೆ 5 ರಿಂದ 25 ವರ್ಷಗಳ ಕಾಲ ಹಿಡಿಯುತ್ತದೆ. ಈ ಕಾಲಾವಧಿ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಯಗೊಳ್ಳುತ್ತದೆ.

4. ಕೂದಲು ನಷ್ಟವಾಗೋದನ್ನ ತಡೆಗಟ್ಟೋಕೆ ಸಾಧ್ಯವೇ ?

4. ಕೂದಲು ನಷ್ಟವಾಗೋದನ್ನ ತಡೆಗಟ್ಟೋಕೆ ಸಾಧ್ಯವೇ ?

ದುರದೃಷ್ಟವಶಾತ್, ಕೂದಲುದುರುವಿಕೆಯನ್ನ ತಡೆಗಟ್ಟೋಕೆ ಸಾಧ್ಯವಿಲ್ಲ. ಕ್ರಮೇಣವಾಗಿ ಕೂದಲು ಉದುರೋದನ್ನ ಪೂರ್ಣಪ್ರಮಾಣದಲ್ಲಿ ತಡೆಗಟ್ಟೋಕೆ ಸಾಧ್ಯ ಆಗೋಲ್ಲ. ಆದರೂ ಕೂಡ, ಕೇಶರಾಶಿಯ ನಷ್ಟಕ್ಕೆ ಕಾರಣವಾಗೋವಂತಹ ಅಲೋಪೇಷಿಯಾ ಏರಾಟಾದಂತಹ ಪರಿಸ್ಥಿತಿಗಳನ್ನ ಸೂಕ್ತ ಜೌಷಧೋಪಚಾರದ ಮೂಲಕ ನಿವಾರಿಸಿಕೊಳ್ಳಬಹುದು. ಕೂದಲನ್ನ ಯಾವಾಗಲೂ ಹಿಂದಕ್ಕೆಳೆದು ಕಟ್ಟೋದರಿಂದ ಉಂಟಾಗೋವಂತಹ ಟ್ರ್ಯಾಕ್ಷನ್ ಅಲೋಪೀಷಿಯಾವನ್ನ ಹಾಗೆ ಮಾಡದೇ ಇರೋದರ (ಅರ್ಥಾತ್ ಕೂದಲನ್ನ ಎಳೆದು ಹಿಂದೆ ಕಟ್ಟದೇ ಇರೋದರ ಮೂಲಕ) ಮೂಲಕ ತಡೆಗಟ್ಟಬಹುದು.

5. ಆದ ನಷ್ಟವನ್ನ ಮರಳಿ ಸರಿಪಡಿಸಲು ಸಾಧ್ಯವೇ ?

5. ಆದ ನಷ್ಟವನ್ನ ಮರಳಿ ಸರಿಪಡಿಸಲು ಸಾಧ್ಯವೇ ?

ಕೂದಲ ನಷ್ಟಕ್ಕೆ ಚಿಕಿತ್ಸೆಗಳು ಲಭ್ಯವಿದ್ದು, ಅವು ಒಂದೆರಡು ದಶಕಗಳಿಂದಷ್ಟೇ ಲಭ್ಯವಾಗುತ್ತಿವೆ ಅನ್ನೋ ವಿಷಯ ನಿಮಗೂ ಗೊತ್ತಿರಬಹುದು. ಬಾಯಿಯ ಮೂಲಕ ತೆಗೆದುಕೊಳ್ಳುವ ಜೌಷಧಗಳಿಂದ ಹಿಡಿದು ಲೋಷನ್ ಗಳವರೆಗೆ, ಹೇರ್ ಟ್ರಾನ್ಸ್ ಪ್ಲಾಂಟ್ ಗಳು, ಹೇರ್ ಟ್ಯಾಟೂಗಳಂತಹ ವಿವಿಧ ಬಗೆಯ ಚಿಕಿತ್ಸೆಗಳಿವು. ಇವುಗಳಲ್ಲಿ ಯಾವುದು ಬೇಕಾದರೂ ಇಂದು ಸುಲಭವಾಗಿ ಲಭ್ಯವಿದೆ. ಆದರೆ, ಈ ಎಲ್ಲ ಆಯ್ಕೆಗಳನ್ನ ಬಹಳ ಜಾಗರೂಕವಾಗಿ ಪರಿಶೀಲಿಸಿ ಪರಿಗಣಿಸಬೇಕಾದುದು ಅತ್ಯಗತ್ಯ.

6. ಇನ್ನಿತರ ಪರ್ಯಾಯ ಮಾರ್ಗೋಪಾಯಗಳು

6. ಇನ್ನಿತರ ಪರ್ಯಾಯ ಮಾರ್ಗೋಪಾಯಗಳು

ಇಂತಹ ಜೌಷಧಗಳು ಹಾಗೂ ಚಿಕಿತ್ಸಾ ವಿಧಾನಗಳ ಗೊಡವೆಯೇ ನಿಮಗೆ ಬೇಡ ಎಂದಾದಲ್ಲಿ, ನಿಮ್ಮ ಕೇಶವಿನ್ಯಾಸವನ್ನೇ ನಿಮ್ಮ ಕೂದಲಿನ ಈಗಿನ ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಳ್ಳಿ!! ಕಡಿಮೆ ಕೂದಲಿರೋ ಪುರುಷರಿಗೂ ಹೇಳಿಮಾಡಿಸಿರೋವಂತಹ ವಿವಿಧ ಕೇಶವಿನ್ಯಾಸಗಳು ಲಭ್ಯವಿವೆ. ಬಝ್ ಕಟ್ ನಿಂದ ಆರಂಭಿಸಿ ಬಗೆಬಗೆಯ ಇತರ ಹೇರ್ ಸ್ಟೈಲ್ ಗಳವರೆಗೂ, ನಿಮಗೊಪ್ಪುವಂತಹ ಯಾವುದಾದರೊಂದು ಹೇರ್ ಸ್ಟೈಲ್ ಅನ್ನ ನಿಮ್ಮದಾಗಿಸಿಕೊಳ್ಳೋದರ ಮೂಲಕ, ನಿಮ್ಮ ತಲೆಯ ಮೇಲೆ ಮೂಡ್ತಾ ಇರೋ ಆ ಎಮ್-ಆಕಾರದ ರೇಖೆಯನ್ನ ಮರೆಮಾಚಿಕೊಳ್ಳಿ!!

English summary

Things Every Man Should Know When They Start Experiencing Hair Loss For The First Time

Here are things every man should know when they start experiencing hair loss for first time, read on.
Story first published: Wednesday, December 9, 2020, 12:52 [IST]
X
Desktop Bottom Promotion