For Quick Alerts
ALLOW NOTIFICATIONS  
For Daily Alerts

ಹರಳೆಣ್ಣೆ, ಆಲೀವ್‌ ಎಣ್ಣೆಗಳನ್ನು ಈ ರೀತಿ ಹಚ್ಚಿದರೆ ಕೂದಲು ಉದುರುತ್ತೆ, ಹುಷಾರ್!

|

ಮೃದು ಹಾಗೂ ಸೊಂಪಾದ ಕೂದಲಿಗೆ ನಾನಾ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಅದರಲ್ಲಿ ಒಂದು ವಿವಿಧ ತೈಲಗಳ ಬಳಕೆ. ಗಿಡಮೂಲಿಕೆಗಳಿಂದ ಹಿಡಿದು, ರಾಸಾಯನಿಕಯುಕ್ತ ಎಣ್ಣೆಗಳವರೆಗೂ ಸಾಕಷ್ಟು ವೈವಿಧ್ಯತೆ ಈ ತೈಲಗಳಲ್ಲಿದೆ. ಆದರೆ, ಯಾರೋ ಹೇಳಿದರೆಂದು ಅಥವಾ ಇನ್ಯಾವುದೋ ಜಾಹೀರಾತಿನಲ್ಲಿ ಬಂದಿದೆಯಂದು ಎಲ್ಲಾ ತೈಲಗಳನ್ನು ಕೂದಲಿಗೆ ಬಳಸುವುದು ಸರಿಯಲ್ಲ. ಅವುಗಳನ್ನು ಹೆಚ್ಚಿನವು ಕೂದಲಿಗೆ ಹಾನಿಕಾರಕವಾಗಿರುತ್ತದೆ. ಆದ್ದರಿಂದ ಅಂತಹ ಎಣ್ಣೆಗಳಿಂದ ದೂರವಿರಬೇಕು. ಹಾಗಾದರೆ, ಕೂದಲಿಗೆ ಹಾನಿಕಾರಕವಾದ ಎಣ್ಣೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಕೂದಲಿಗೆ ಹಾನಿಕಾರಕವಾದ ಎಣ್ಣೆಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಆಲಿವ್‌ ಎಣ್ಣೆ:

ಆಲಿವ್‌ ಎಣ್ಣೆ:

ಮೃದು ಮತ್ತು ನೇರವಾದ ಕೂದಲಿಗೆ ಆಲಿವ್ ಎಣ್ಣೆಯನ್ನು ಬಳಸುವುದು ಒಳ್ಳೆಯದಲ್ಲ, ಏಕೆಂದರೆ ಇದು ಕೂದಲನ್ನು ಭಾರವಾಗಿಸುತ್ತದೆ ಮತ್ತು ಜಿಡ್ಡಿನನ್ನಾಗಿ ಮಾಡುತ್ತದೆ. ಈ ಎಣ್ಣೆಯು ಒಲಿಯುರೊಪಿನ್ ಎಂಬ ಅಂಶವನ್ನು ಹೊಂದಿರುತ್ತದೆ, ಇದು ಕೂದಲಿನ ಬೆಳವಣಿಗೆಯ ಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಈ ಎಣ್ಣೆಯು ಕಾಮೆಡೋಜೆನಿಕ್ ಸ್ವಭಾವವನ್ನು ಹೊಂದಿದ್ದು, ಇದರಿಂದಾಗಿ ಇದು ನೆತ್ತಿಯ ಚರ್ಮದ ರಂಧ್ರಗಳನ್ನು ಮುಚ್ಚಿ ಮೊಡವೆಗಳನ್ನು ಉಂಟುಮಾಡುತ್ತದೆ. ಯಾರಿಗಾದರೂ ಮೊಡವೆ ಇದ್ದರೆ, ಆಲಿವ್ ಎಣ್ಣೆಯನ್ನು ಬಳಸುವುದನ್ನು ತಪ್ಪಿಸಿ.

ಹರಳೆಣ್ಣೆ:

ಹರಳೆಣ್ಣೆ:

ಕೂದಲಿನ ಬೆಳವಣಿಗೆಗೆ ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಬಳಸುವ ಅನೇಕ ಜನರಿದ್ದಾರೆ. ಇದು ಕೂದಲಿಗೆ ಬಲವನ್ನು ನೀಡಿ, ಸದೃಢವಾಗಿ ಬೆಳೆಯುವಂತೆ ಮಾಡುತ್ತದೆ. ಆದರೆ, ಇದನ್ನು ನೇರವಾಗಿ ಕೂದಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದನ್ನು ತಪ್ಪಿಸಿ. ಇದು ಜಿಡ್ಡು ಹಾಗೂ ಅಂಟಾಗಿರುವುದರಿಂದ, ನೆತ್ತಿಯ ಮೇಲಿನ ಕೂದಲು ಜಟಿಲವಾಗುತ್ತದೆ ಮತ್ತು ಕೂದಲನ್ನು ಬಿಡಿಸುವಾಗ ಸಾಕಷ್ಟು ಕೂದಲು ಉದುರುತ್ತದೆ. ಆದ್ದರಿಂದ ಇದನ್ನು ಬಳಸುವಾಗ ಇತರ ಎಣ್ಣೆಗಳೊಂದಿಗೆ ಹದಗೊಳಿಸಿ ಬಳಸುವುದು ಉತ್ತಮ.

ಖನಿಜ ತೈಲ:

ಖನಿಜ ತೈಲ:

ಖನಿಜ ತೈಲವು ಹೆಚ್ಚಾಗಿ ಪೆಟ್ರೋಲಿಯಂ, ಬಿಳಿ ಪೆಟ್ರೋಲಿಯಂ ಮತ್ತು ಪ್ಯಾರಾಫಿನ್ ಮೇಣದ ರೂಪದಲ್ಲಿರುತ್ತದೆ. ಈ ಪದಾರ್ಥಗಳು ಕೂದಲಿಗೆ ಹಾನಿಕಾರಕ. ಇದು ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಯಾವುದೇ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಖರೀದಿಸುವ ಮೊದಲು, ಅದರಲ್ಲಿ ಖನಿಜ ತೈಲವಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಖನಿಜ ತೈಲವು ನೆತ್ತಿಯಲ್ಲಿ ಕೆಂಪು, ಊತ, ತುರಿಕೆ, ಸುಡುವಿಕೆ ಅಥವಾ ದದ್ದುಗಳಂತಹ ಅನೇಕ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ.

ಕರ್ಪೂರದ ಎಣ್ಣೆ:

ಕರ್ಪೂರದ ಎಣ್ಣೆ:

ಕರ್ಪೂರದ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಕೆಲಸ ಮಾಡುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಇದು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಇದು ಚರ್ಮ ಮತ್ತು ನೆತ್ತಿಯ ಮೇಲೆ ಕಠಿಣವಾಗಿರುವುದರಿಂದ ಒಣ ಚರ್ಮ, ಮೊಡವೆ, ದದ್ದುಗಳು ಮತ್ತು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ಕೂದಲಿಗೆ ಕರ್ಪೂರದೆಣ್ಣೆಯನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.

ನಿಂಬೆ ಎಣ್ಣೆ:

ನಿಂಬೆ ಎಣ್ಣೆ:

ನಿಂಬೆ ಎಣ್ಣೆ ಹಲವಾರು ರಾಸಾಯನಿಕಗಳ ಕೇಂದ್ರೀಕೃತ ಸಂಯೋಜನೆಯನ್ನು ಒಳಗೊಂಡಿದೆ. ನಿಮ್ಮ ಕೂದಲಿಗೆ ನಿಂಬೆ ಎಣ್ಣೆಯನ್ನು ಬಳಸಬೇಡಿ ಏಕೆಂದರೆ ಅದು ನೈಸರ್ಗಿಕವಾಗಿ ಆಮ್ಲೀಯವಾಗಿರುತ್ತದೆ, ಇದು ಕೂದಲಿನ ತುದಿಗಳನ್ನು ಕುಗ್ಗಿಸಲು ಕಾರಣವಾಗಬಹುದು. ಸರಿಯಾಗಿ ಬಳಸದಿದ್ದರೆ ಅದು ಹಾನಿಕಾರಕವಾಗಬಹುದು. ಆದ್ದರಿಂದ ಕೂದಲಿಗೆ ನಿಂಬೆಯನ್ನು ಬಳಸುವಾಗ ನಿಯಮಿತವಾಗಿರಿ ಅಥವಾ ಆದಷ್ಟು ತ್ಯಜಿಸಲು ಪ್ರಯತ್ನಿಸಿ.

English summary

These Oils are not Beneficial for Hair, use them Cautiously

Here we talking about These Oils are not beneficial for hair, use them cautiously, read on
X
Desktop Bottom Promotion