For Quick Alerts
ALLOW NOTIFICATIONS  
For Daily Alerts

ಪ್ರೇಮಿಗಳ ದಿನದಂದು ಈ ಸ್ಪೆಷಲ್ ಹೇರ್ ಸ್ಟೈಲ್ ಗಳನ್ನು ಟ್ರೈ ಮಾಡಿ

|

ಪ್ರೇಮಿಗಳ ದಿನಾಚರಣೆ ಇನ್ನೆರಡು ದಿನಗಳಲ್ಲೇ ಬರಲಿದೆ. ಪ್ರತಿಯೊಬ್ಬರೂ ಈ ದಿನಕ್ಕೆ ಭರ್ಜರಿಯಾಗಿ ತಯಾರಾಗುತ್ತಿದ್ದಾರೆ. ತನ್ನ ಸಂಗಾತಿಗೆ ಏನು ಗಿಫ್ಟ್ ನೀಡುವುದು? ಯಾವ ರೀತಿ ಪ್ರೀತಿ ವ್ಯಕ್ತಪಡಿಸುವುದು? ಹೇಗೆ ಸರ್ಪೈಸ್ ನೀಡುವುದು? ಈ ದಿನವನ್ನು ಹೇಗೆ ಕಳೆಯುವುದು? ಹೀಗೆ ಹಲವಾರು ತಯಾರಿಗಳನ್ನು ಮಾಡಿಕೊಂಡಿರುತ್ತಾರೆ. ಇನ್ನೂ ನಮ್ಮ ಹುಡುಗಿಯರ ಸಮಸ್ಯೆಯಂತೂ ಹೇಳತೀರದು. ಯಾವ ಡ್ರೆಸ್ ಹಾಕುವುದು? ಹೇರ್ ಸ್ಟೈನ್ ಹೇಗೆ ಮಾಡುವುದು? ಈ ತರಹ ಯೋಚನೆ ಮಾಡುತ್ತಿರುತ್ತಾರೆ. ಇಂತಹವರಿಗಾಗಿ ನಾವಿಂದು ನಿಮ್ಮ ಸಂಗಾತಿಯನ್ನು ಸೆಳೆಯುವಂತಹ ಡಿಫರೆಂಟ್ ಹೇರ್ ಸ್ಟೈಲ್ ಗಳ ಬಗ್ಗೆ ಹೇಳಿದ್ದೇವೆ. ನಿಮ್ಮ ಕೂದಲು ಚಿಕ್ಕದಾಗಿರಲಿ ಉದ್ದವಾಗಿರಲಿ, ಸುರುಳಿಯಾಗಿರಲಿ ಅಥವಾ ನೇರವಾಗಿರಲಿ, ನಿಮಗಾಗಿ ಇಲ್ಲಿ ವಿವಿಧ ಕೇಶವಿನ್ಯಾಸಗಳನ್ನು ತಂದಿದ್ದೇವೆ. ಇದು ಪ್ರೇಮಿಗಳ ದಿನಕ್ಕೆ ಹೇಳಿ ಮಾಡಿಸಿರುವಂತಹ ಹೇರ್ ಸ್ಟೈಲ್. ಇವುಗಳನ್ನು ನೀವು ಟ್ರೈ ಮಾಡಿ, ನಿಮ್ಮ ಹುಡುಗ ಕಣ್ಣು ನಿಮ್ಮ ಕೂದಲ ಮೇಲೆ ಬೀಳುವ ಹಾಗೆ ಮಾಡಿಕೊಳ್ಳಿ.

ವ್ಯಾಲೆಂಟೈನ್ಸ್ ಡೇ ಗೆ ಡಿಫರೆಂಟ್ ಹೇರ್ ಸ್ಟೈಲ್ ಗಳು ಇಲ್ಲಿವೆ:

 1. ಸೈಡ್ ಬ್ರೇಡ್:

1. ಸೈಡ್ ಬ್ರೇಡ್:

ಈ ಸಡಿಲವಾದ ಮತ್ತು ಗೊಂದಲಮಯವಾದ ಜಡೆ ಎಲ್ಲದಕ್ಕಿಂತಲೂ ಸುಲಭ ಹಾಗೂ ಸರಳವಾಗಿರುವಂತದ್ದು, ಆದರೆ ಫಿಶ್‌ಟೇಲ್ ಬ್ರೇಡ್ ಅನ್ನು ಹೇಗೆ ಮಾಡಬೇಕೆಂದು ನೀವು ತಿಳಿದಿರಬೇಕು. ಇದನ್ನು ನೀವು ನಿಮ್ಮ ವ್ಯಾಲೆಂಟೈನ್ ಅನ್ನು ಭೇಟಿಯಾಗಲು ಹೊರಟಾಗ ಹಾಕಿಕೊಳ್ಳಬಹುದು. ಜಡೆ ಹಾಕಿ ಎದುರು ಚುರು ಕೂದಲು ಇಳಿಬಿಟ್ಟರೆ ನಿಮ್ಮ ಹೇರ್ ಸ್ಟೈಲ್ ಗೆ ಮತ್ತಷ್ಟು ಮೆರಗು ನೀಡುತ್ತದೆ.

2. ಮೆಸ್ಸಿ ಪೋನಿ:

2. ಮೆಸ್ಸಿ ಪೋನಿ:

ಇದು ಸ್ಸರಳವಾದ ಆದರೆ ಇನ್ನಷ್ಟು ರೋಮ್ಯಾಂಟಿಕ್ ಆಗಿ ಇರುವಂತಹ ಕೇಶ ವಿನ್ಯಾಸ. ಸುಲಭವಾಗಿ ಅತೀ ವೇಗವಾಗಿ ರೆಡಿ ಆಗಬೇಕೆನ್ನುವವರಿಗೆ ಇದು ಸೂಕ್ತವಾದ ಆಯ್ಕೆ ಆಗಿದೆ. ಇದನ್ನು ಸಣ್ಣ ಮತ್ತು ಮಧ್ಯಮ ಕೂದಲಿಗೆ ವಿನ್ಯಾಸಗೊಳಿಸಲಾಗಿದ್ದರೂ, ಇದು ಹೆಚ್ಚು ಉದ್ದ ಕೂದಲು ಹೊಂದಿರುವವರಿಗೆ ಉತ್ತಮ ಫಲಿತಾಂಶ ನೀಡುತ್ತದೆ.

3. ಫೇಸ್ ಫ್ರೇಮಿಂಗ್ ಬ್ಯಾಂಗ್ಸ್:

3. ಫೇಸ್ ಫ್ರೇಮಿಂಗ್ ಬ್ಯಾಂಗ್ಸ್:

ಮೆಸ್ಸಿ ಪಫ್ ಮತ್ತು ಬ್ಯಾಂಗ್ಸ್ ಅನ್ನು ದೈನಂದಿನ ನೋಟಕ್ಕೆ ವಿನ್ಯಾಸಗೊಳಿಸಲಾಗಿದ್ದರೂ, ಇದು ಒಂದು ಪ್ರಣಯ ಸಂದರ್ಭಕ್ಕೂ ಸಾಕಷ್ಟು ಸುಂದರವಾಗಿರುತ್ತದೆ. ಕರ್ಲಿ ಅಥವಾ ಸುರುಳಿಯಾದ ಕೂದಲು ಹೊಂದಿರುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಇಲ್ಲವಾದಲ್ಲಿ ರೆಡಿಮೇಡ್ ಸುರುಳಿ ಬನ್ ಗಳನ್ನು ಸಹ ಬಳಸಬಹುದು.

4. ಲೋ ಬನ್:

4. ಲೋ ಬನ್:

ಇದು ಪ್ರಸ್ತುತ ಟ್ರೆಂಡ್ ನಲ್ಲಿರುವ ಹೇರ್ ಸ್ಟೈಲ್ ಆಗಿದೆ. ಹೆಚ್ಚಾಗಿ ಎಲ್ಲಾ ಹೆಂಗಳೆಯರು ಬಳಸುವ ಕೇಶವಿನ್ಯಾಸವಾಘಿದೆ. ಲೋ ಬನ್ ಪ್ರೇಮಿಗಳ ದಿನಕ್ಕೆ ಸುಲಭವಾದ ಕೇಶಾಲಂಕಾರವಾಗಿದ್ದು ಅದು ನಿಮ್ಮ ನೋಟಕ್ಕೆ ಪರಿಪೂರ್ಣ ರೋಮ್ಯಾಂಟಿಕ್ ಸ್ಪರ್ಶವನ್ನು ನೀಡುತ್ತದೆ. ಲೋ ಬನ್ ಹಾಖಿ ಅದಕ್ಕೆ ಮುತ್ತುಗಳನ್ನು ಇಟ್ಟರೆ ಮತ್ತಷ್ಟು ಅಟ್ರ್ಯಾಕ್ಟಿವ್ ಆಗಿ ಕಾಣುತ್ತದೆ.

 5. ಹಾಫ್-ಅಪ್, ಹಾಫ್-ಡೌನ್:

5. ಹಾಫ್-ಅಪ್, ಹಾಫ್-ಡೌನ್:

ಹಾಫ್- ಅಪ್ ಮತ್ತು ಹಾಫ್- ಡೌನ್ ನೋಟವನ್ನು ಪ್ರೀತಿಸುತ್ತೀರಾ? ಹಾಗಾದರೆ ಪ್ರೇಮಿಗಳ ದಿನದಂದು ಇದನ್ನು ಟ್ರೈ ಮಾಡಿ. ಯಾವುದೇ ಸ್ಟ್ರೈಟ್ನರ್ ಬಳಸದೇ ಸುಲಭವಾಗಿ ಇದನ್ನು ತಯಾರಿಸಬಹುದು. ಕೂದಲನ್ನು ಎತ್ತಿ ಕಟ್ಟಿ ಎರಡು ಕಡೆ ಕೂದಲನ್ನು ಇಳಿಬಿಟ್ಟರೆ ಸೂಪರ್ ಆಗಿ ನಿಮ್ಮ ಲುಕ್ ಕಾಣುತ್ತದೆ.

6.ಟ್ವಿಸ್ಟೆಡ್ ಪೋನಿಟೇಲ್:

6.ಟ್ವಿಸ್ಟೆಡ್ ಪೋನಿಟೇಲ್:

ಲೋ ಪೋನಿಟೇಲ್ ನೀವು ಮಾಡಬಹುದಾದ ಸುಲಭವಾದ ಕೇಶವಿನ್ಯಾಸವಾದರೂ, ಟ್ವಿಸ್ಟೆಡ್ ಪೋನಿಟೇಲ್ ಇನ್ನೂ ರೋಮ್ಯಾಂಟಿಕ್ ಹೇರ್ ಸ್ಟೈಲ್ ಆಗಿದೆ. ಈ ಕೇಶವಿನ್ಯಾಸ ಭದ್ರವಾಗಿ ನಿಲ್ಲುತ್ತದೆ ಇದೇ ಈ ಕೇಶವಿನ್ಯಾಸಕ್ಕಿರುವ ವಿಶೇಷತೆಯಾಗಿದೆ.

7. ಹೈ ಬನ್

7. ಹೈ ಬನ್

ಇದೊಂದು ಎಲ್ಲಾ ಹೆಣ್ಣುಮಕ್ಕಳ ಆಲ್ ಟೈಮ್ ಫೇವರೆಟ್ ಹಾಗೂ ಅತ್ಯಂತ ಸುಲಭವಾದ ಹೇರ್ ಸ್ಟೈಲ್ ಆಗಿದೆ. ಯಾವುದೇ ಕಿರಿಕಿರಿ ಇಲ್ಲದ, ಹೆಚ್ಚು ಸಮಯದ್ ಅಗತ್ಯವಿಲ್ಲದ ಹೇರ್ ಸ್ಟೈಲ್ ಇದಾಗಿದ್ದು, ಪ್ರೇಮಿಗಳ ದಿನಾಚರಣೆಗೆ ಸೂಕ್ತವಾಗಿದೆ. ಉದ್ದವಾದ ಕೂದಲು ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

8. ಹಾಲಿವುಡ್ ಗ್ಲಾಮ್ ವೇವ್ಸ್:

8. ಹಾಲಿವುಡ್ ಗ್ಲಾಮ್ ವೇವ್ಸ್:

ಈ ಸ್ಟೈಲ್ ಸ್ವಲ್ಪ ಹೆಚ್ಚು ಗ್ಲಾಮರಸ್ ನೊಟವನ್ನು ಬಯಸುವವರಿಗೆ ಈ ಕೇಶವಿನ್ಯಾಸ ಒಂದೊಳ್ಳೆ ಆಯ್ಕೆಯಾಗಿದೆ. ಫ್ರೀ ಹೇರ್ ಸ್ಟೈಲ್ ಇಷ್ಟಪಡುವವರಿಗೆ ಈ ಕೇಶವಿನ್ಯಾಸವನ್ನು ವ್ಯಾಲೆಂಟೈನ್ಸ್ ಡೇಯಂದು ಪ್ರಯತ್ನಿಸಿ ನೋಡಿ.

English summary

Romantic Hairstyles To Look Stylish On Valentine's Day

Here we told about Romantic Hairstyles To Look Stylish On Valentine's Day, read on
Story first published: Friday, February 12, 2021, 15:21 [IST]
X
Desktop Bottom Promotion