For Quick Alerts
ALLOW NOTIFICATIONS  
For Daily Alerts

ಕೂದಲು ಕಪ್ಪಾಗಿಯೇ ಇರಲು ಇಲ್ಲಿದೆ ಬೆಸ್ಟ್ ಮನೆಮದ್ದುಗಳು

|

ಕಪ್ಪು ಕೂದಲು ಎಲ್ಲರ ಆಸೆ. ಪ್ರತಿಯೊಬ್ಬರಿಗೂ ತಮ್ಮ ಕೂದಲು ಹೆಚ್ಚು ಅವಧಿಗೆ ಕಪ್ಪಾಗಿಯೇ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕಪ್ಪು ವರ್ಣದ ಕೂದಲು ಉತ್ತಮ ಆರೋಗ್ಯದ ಸಂಕೇತ ಕೂಡ. ವಯಸ್ಸಲ್ಲದ ವಯಸ್ಸಲ್ಲಿ ಕೂದಲು ಬಿಳಿಯಾಗುವುದು ಅನಾರೋಗ್ಯವನ್ನು ಸೂಚಿಸುತ್ತದೆ. ಕಲುಷಿತ ವಾತಾವರಣ, ಬಿಸಿ, ಸೂರ್ಯನ ನೇರಳಾತೀತ ಕಿರಣಗಳ ಪರಿಣಾಮಗಳು ಮತ್ತು ಸರಿಯಾಗಿ ಕೂದಲಿನ ಆರೈಕೆ ಇಲ್ಲದೆ ಇರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಕೆಲವರಿಗೆ ಕೂದಲು ಬೇಗನೆ ಬೆಳ್ಳಗಾಗುವ ಸಾಧ್ಯತೆ ಇದೆ.

Natural And Permanent Solution For White Hairs

ಇಂತಹ ಹಲವು ಸಮಸ್ಯೆಗಳಿಂದಾಗಿ ಕೂದಲು ತನ್ನ ನೈಸರ್ಗಿಕ ಬಣ್ಣವನ್ನು ಕಳೆದುಕೊಳ್ಳುತ್ತದೆ ಮತ್ತು ಕೂದಲಿನ ಬಣ್ಣ ನೈಸರ್ಗಿಕವಾಗಿ ಕಪ್ಪಿರುವುದು ಬಿಳಿಯಾಗುತ್ತದೆ ಅಥವಾ ಬೂದು ಬಣ್ಣಕ್ಕೆ ತಿರುಗುತ್ತಾ ಸಾಗುತ್ತದೆ. ನಾವು ಈ ಲೇಖನದಲ್ಲಿ ಹೆಚ್ಚು ಅವಧಿಗೆ ಕೂದಲು ಕಪ್ಪಾಗಿ ಇರುವುದಕ್ಕೆ ಏನು ಮಾಡಬೇಕು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಕೂದಲು ಕಪ್ಪಗಾಗುವುದು ಹೇಗೆ?

ಕೂದಲು ಕಪ್ಪಗಾಗುವುದು ಹೇಗೆ?

ಕೂದಲಿನಲ್ಲಿರುವ ಮೆಲನಿನ್ ಎಂಬ ಅಂಶವು ಕೂದಲು ಕಪ್ಪು ಬಣ್ಣದಲ್ಲಿರುವುದಕ್ಕೆ ಕಾರಣವಾಗಿರುತ್ತದೆ. ನಿಮ್ಮ ನೈಸರ್ಗಿಕ ಕೂದಲಿನ ಬಣ್ಣವನ್ನು ಎರಡು ವಿಧವಾದ ಮೆಲನಿನ್ ಗಳು ನಿರ್ಧರಿಸುತ್ತದೆ. ವಯಸ್ಸಲ್ಲದ ವಯಸ್ಸಲ್ಲಿ ಕೂದಲು ಬಿಳಿಯಾಗುವುದಕ್ಕೆ ಹಲವು ಕಾರಣಗಳಿವೆ. ಅತಿಯಾದ ಕೆಮಿಕಲ್ ಗಳ ಬಳಕೆ, ಒತ್ತಡ, ಬಿಸಿ ಇತ್ಯಾದಿಗಳು ಕೂದಲನ್ನು ಹಾಳು ಮಾಡುತ್ತದೆ. ಇವೆಲ್ಲವೂ ಕೂದಲು ತನ್ನ ನೈಸರ್ಗಿಕ ಪಿಗ್ಮೆಂಟೇಷನ್ ನ್ನು ಕಳೆದುಕೊಂಡು ಬಿಳಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ.

ನೈಸರ್ಗಿಕ ಪದಾರ್ಥಗಳನ್ನು ನಿಮ್ಮ ಕೂದಲಿಗೆ ಸೇರಿಸುವುದರಿಂದಾಗಿ ನಿಮ್ಮ ಕೂದಲಿನ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಕೂದಲನ್ನು ಹೆಚ್ಚು ಗಾಢ ಕಪ್ಪು ಬಣ್ಣದಲ್ಲಿ ಇಡುವಂತೆ ಮಾಡಬಹುದಾದ ಕೆಲವು ಪದಾರ್ಥಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಕೂದಲನ್ನು ಕಪ್ಪಾಗಿ ಇಡುವ ನೈಸರ್ಗಿಕ ಹೇರ್ ಡೈಗಳು

ಕೂದಲನ್ನು ಕಪ್ಪಾಗಿ ಇಡುವ ನೈಸರ್ಗಿಕ ಹೇರ್ ಡೈಗಳು

ಕಾಫಿ

ಕಾಫಿಯಲ್ಲಿರುವ ಕೆಫೀನ್ ಅಂಶವು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಆಂಡ್ರೋಜೆನೆಟಿಕ್ ಆಲೋಫೇಸಿಯಾ ಕೇಸ್ ಗಳಲ್ಲಿ ಇದು ನೆರವು ನೀಡುತ್ತದೆ. ಕೂದಲಿನ ಆಯಸ್ಸನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಕಾಫಿ ಹೊಂದಿದೆ.ಕಾಫಿಯನ್ನು ಕೂದಲಿನ ಬಣ್ಣ ಕೆಂಪು ಮತ್ತು ಕಪ್ಪು ವರ್ಣಕ್ಕೆ ತಿರುಗಿಸುವುದಕ್ಕಾಗಿ ಬಳಸಲಾಗುತ್ತದೆ.

ಭೃಂಗರಾಜ

ಭೃಂಗರಾಜ

ಭೃಂಗರಾಜ ಅಥವಾ ಫಾಲ್ಸ್ ಡೈಸಿಯನ್ನು ಶತಮಾನಗಳಿಂದಲೂ ಕೂಡ ಆಯುರ್ವೇದದ ಪ್ರಕಾರ ಕೂದಲನ್ನು ಕಪ್ಪಾಗಿ ಇಡುವುದಕ್ಕಾಗಿ ಬಳಸಲಾಗುತ್ತಿದೆ. ಇದು ನೈಸರ್ಗಿಕವಾಗಿರುವ ಕೂದಲಿನ ಬಣ್ಣವನ್ನು ದೀರ್ಘಾವಧಿಗೆ ಹೆಚ್ಚುವಂತೆ ಮಾಡುತ್ತದೆ. ಇದು ಪ್ರಾಣಿಗಳಲ್ಲೂ ಕೂಡ ಕೂದಲನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.

ಇದರಲ್ಲಿ ಅಲ್ಕಲೈಡ್ಸ್, ಫ್ಲೆವನಾಯ್ಡ್ಸ್, ಪಾಲಿಅಸಲೈನ್ಸ್,ಟ್ರೈಟಪೆನ್ಸ್, ಮತ್ತು ಗ್ಲಿಸರಾಯ್ಡ್ಸ್ ಗಳಿವೆ. ಇವುಗಳೆಲ್ಲವೂ ಈ ಸಸ್ಯವನ್ನು ಉತ್ತಮ ಹೇರ್ ಡೈಯಂತೆ ವರ್ತಿಸುವಂತೆ ಮಾಡುತ್ತದೆ. ಇದು ಕೇವಲ ನಿಮ್ಮ ಕೂದಲನ್ನು ಗಾಢವಾಗಿಸುವುದು ಮಾತ್ರವಲ್ಲ ಬದಲಾಗಿ ಕೂದಲಿನ ಬೆಳವಣಿಗೆಗೂ ಕೂಡ ನೆರವು ನೀಡುತ್ತದೆ.

ಟೀ

ಟೀ

ಚೀನಾದ ಔಷಧಿಗಳಲ್ಲಿ ಮತ್ತು ಭಾರತೀಯ ಆಯುರ್ವೇದದಲ್ಲಿ ಹಲವು ಶತಮಾನಗಳಿಂದಲೂ ಬ್ಲಾಕ್ ಟೀಯನ್ನು ನೈಸರ್ಗಿಕವಾದ ಕೂದಲಿನ ಡೈ ಆಗಿ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಟೆನ್ನೀಸ್ ಅಂಶವಿದ್ದು ಇದು ಕೂದಲಿನ ಬಣ್ಣದ ಗಾಢತೆಯನ್ನು ಅಧಿಕಗೊಳಿಸುತ್ತದೆ.

ಮದರಂಗಿ: ಮದರಂಗಿ ಅತ್ಯಂತ ಪ್ರಸಿದ್ಧಿಯಲ್ಲಿರುವ ಪ್ರಮುಖ ನೈಸರ್ಗಿಕ ಹೇರ್ ಡೈ ಆಗಿದೆ. ಇದರಲ್ಲಿ ಲಾಯ್ಸನ್ ಅನ್ನೋ ಅಂಶವಿದ್ದು ಇದು ಕೆಂಪು-ಕೇಸರಿ ಮಿಶ್ರಿತ ವಸ್ತುವಾಗಿದೆ. ಇದು ಕೂದಲಿಗೆ ಗಾಢ ಬಣ್ಣವನ್ನು ಕರುಣಿಸುತ್ತದೆ. ಅವಧಿಗೂ ಮುನ್ನವೇ ಕೂದಲು ಬಿಳಿಯಾಗುವಿಕೆಯನ್ನು ತಡೆಯುವ ಸಾಮರ್ಥ್ಯವು ಮದರಂಗಿಗೆ ಇದೆ.

ನೆಲ್ಲಿಕಾಯಿ: ಇಂಡಿಯನ್ ಗೂಸ್ಬೆರಿಯೆಂದು ಕರೆಯುವ ನೆಲ್ಲಿಕಾಯಿ ಕೂದಲಿನ ಆರೋಗ್ಯ ಮತ್ತು ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡುವ ಸಾಮರ್ಥ್ಯವನ್ನು ಹೊಂದಿದೆ. ಕೂದಲಿನ ಬಣ್ಣವು ಗಾಢವಾಗಿ ಇರುವುದಕ್ಕಾಗಿ ಇದನ್ನು ಹೇರಳಾಗಿ ಬಳಕೆ ಮಾಡಲಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶವು ಕೂದಲು ಉದುರುವಿಕೆಯನ್ನು ಕೂಡ ತಡೆಯುವ ಶಕ್ತಿ ಹೊಂದಿದೆ.

ಇಂಡಿಗೋ

ಇಂಡಿಗೋ

ಇಂಡಿಗೋ ನೈಸರ್ಗಿಕ ನೀಲಿ ಬಣ್ಣವನ್ನು ಹೊಂದಿದೆ. ಇದನ್ನು ಕೂಡ ಕೂದಲು ಕಪ್ಪಗಾಗುವಂತೆ ಮಾಡುವುದಕ್ಕೆ ಬಳಕೆ ಮಾಡಲಾಗುತ್ತದೆ.

ನಾವಿಲ್ಲಿ ಕೆಲವು ಎಣ್ಣೆಗಳನ್ನು ತಿಳಿಸಿಕೊಡುತ್ತಿದ್ದೇವೆ. ಈ ಮೇಲಿನ ವಸ್ತುಗಳನ್ನು ಈ ಕೆಳಗಿನ ಎಣ್ಣೆಯೊಂದಿಗೆ ಸೇರಿಸಿ ಬಳಕೆ ಮಾಡಿದರೂ ಕೂಡ ಕೂದಲು ಉತ್ತಮವಾಗುತ್ತದೆ.

ನಾವಿಲ್ಲಿ ಕೆಲವು ಎಣ್ಣೆಗಳನ್ನು ತಿಳಿಸಿಕೊಡುತ್ತಿದ್ದೇವೆ. ಈ ಮೇಲಿನ ವಸ್ತುಗಳನ್ನು ಈ ಕೆಳಗಿನ ಎಣ್ಣೆಯೊಂದಿಗೆ ಸೇರಿಸಿ ಬಳಕೆ ಮಾಡಿದರೂ ಕೂಡ ಕೂದಲು ಉತ್ತಮವಾಗುತ್ತದೆ.

ತೆಂಗಿನ ಎಣ್ಣೆ

ಇದು ಕೂದಲು ಉದುರುವಿಕೆಯನ್ನು ಮತ್ತು ಕೂದಲು ಅವಧಿಗೂ ಮುನ್ನವೇ ಬಿಳಿಯಾಗುವುದನ್ನು ಇದು ತಡೆಯುತ್ತದೆ. ಕೂದಲಿನ ಬುಡವನ್ನು ಗಟ್ಟಿಗೊಳಿಸುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೂದಲಿನ ಬುಡಕ್ಕೆ ಅತ್ಯುತ್ತಮವಾಗಿರುವ ಆಲಿವ್ ಎಣ್ಣೆಯು ಕೂದಲಿನ ತೇವಾಂಶ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದು ಕೂದಲಿನ ಬಣ್ಣವನ್ನು ನೈಸರ್ಗಿಕವಾಗಿ ಕಾಪಾಡಿ ನಿಮ್ಮ ಕೂದಲು ಉದುರುವುದು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದಕ್ಕೂ ಕೂಡ ನೆರವು ನೀಡುತ್ತದೆ.

ಜೊಜೊಬಾ ಆಯಿಲ್

ಜೊಜೊಬಾ ಆಯಿಲ್

ಜೊಜೊಬಾ ಎಣ್ಣೆಯಲ್ಲೂ ಕೂಡ ಕೂದಲಿನ ತೇವಾಂಶ ಕಾಪಾಡುವ ಶಕ್ತಿ ಇದೆ ಮತ್ತು ಕೂದಲು ಮತ್ತು ಕೂದಲಿನ ಬುಡದ ಆರೋಗ್ಯವನ್ನು ವೃದ್ಧಿಸುವುದಕ್ಕೆ ಇದು ಸಹಾಯ ಮಾಡುತ್ತದೆ.

ಆರ್ಗನ್ ಆಯಿಲ್

ಆರ್ಗನ್ ಆಯಿಲ್

ಆರ್ಗನ್ ಎಣ್ಣೆ ಕೂದಲಿನ ಬೆಳವಣಿಗೆಗೆ ನೆರವು ನೀಡುತ್ತದೆ.ಕೂದಲಿನ ತೇವಾಂಶ ಕಾಪಾಡಿ, ನೈಸರ್ಗಿಕವಾಗಿ ಕೂದಲಿನ ಬಣ್ಣ ಕಾಪಾಡುವುದಕ್ಕೆ ಇದು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲ ಕೂದಲಿನ ತುಂಡಾಗುವಿಕೆಯೂ ಕೂಡ ಇದರಿಂದ ನಿವಾರಣೆಯಾಗುತ್ತದೆ.

ಕೂದಲನ್ನು ಕಪ್ಪಾಗಿ ಇಟ್ಟುಕೊಳ್ಳುವುದಕ್ಕೆ ಸಲಹೆಗಳು

ಕೂದಲನ್ನು ಕಪ್ಪಾಗಿ ಇಟ್ಟುಕೊಳ್ಳುವುದಕ್ಕೆ ಸಲಹೆಗಳು

  • ನಿಮ್ಮ ಕೂದಲಿನ ಜೊತೆಗೆ ಮೃದುವಾಗಿರಿ. ಕೂದಲನ್ನು ಬಾಚುವಾಗ, ಮಸಾಜ್ ಮಾಡುವಾಗ ಅಥವಾ ಕೂದಲಿನ ಸ್ಟೈಲ್ ಮಾಡುವಾಗ ಅದರ ಜಾಗರೂಕತೆ ನಿಮಗೆ ಇರಲೇಬೇಕು. ಕೂದಲಿನ ನಿರಂತರವಾಗಿ ಎಣ್ಣೆ ಹಚ್ಚುವುದನ್ನು ಮರೆಯಬೇಡಿ. ಕೆಲವು ಎಣ್ಣೆಗಳು ಉದಾಹರಣೆಗೆ ಕೊಬ್ಬರಿ ಎಣ್ಣೆಯು ನಿಮ್ಮ ಕೂದಲಿನ ಬುಡವನ್ನು ದೃಢವಾಗಿಸುತ್ತದೆ.
  • ಕೆಲವು ಎಣ್ಣೆಗಳನ್ನು ಬಿಸಿ ಮಾಡುವುದರಿಂದ ಉದಾಹರಣೆಗೆ ಆಲಿವ್ ಎಣ್ಣೆಯನ್ನು ಬಿಸಿ ಮಾಡುವುದರಿಂದ ಕೂದಲು ಮೃದುತ್ವ ಅಧಿಕವಾಗುತ್ತದೆ.
  • ಆಗಾಗ ನಿಮ್ಮ ಕೂದಲಿಗೆ ಮಸಾಜ್ ಮಾಡುವುದನ್ನು ಮರೆಯಬೇಡಿ. ಅಧ್ಯಯನವೊಂದು ಹೇಳುವ ಪ್ರಕಾರ ನೀವು ಕೂದಲಗೆ ಮಸಾಜ್ ಮಾಡುವುದರ ಪರಿಣಾಮವಾಗಿ ರಕ್ತಸಂಚಾರ ಅಧಿಕವಾಗುತ್ತದೆ ಮತ್ತು ಕೂದಲಿನ ದಟ್ಟತೆ ಹೆಚ್ಚುತ್ತದೆ.
  • ಕೂದಲಿನ ಚಿಕಿತ್ಸೆಗಳು ಉದಾಹರಣೆಗೆ ಕೆರಾಟಿನ್ ಟ್ರೀಟ್ಮೆಂಟ್ ನೈಸರ್ಗಿಕ ಕೂದಲಿನ ಬಣ್ಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಪ್ರೊಟೀನ್ ಕಂಟೆಂಟ್ ಕೂದಲಿನಲ್ಲಿ ಹೆಚ್ಚಾಗಿ ಕೂದಲು ಹಾಳಾಗುವುದನ್ನು ತಡೆಯುತ್ತದೆ.
  • ನಿಮ್ಮ ಕೂದಲಿಗೆ ಹೊಂದಾಣಿಕೆಯಾಗುವ ಬಾಚಣಿಗೆಯನ್ನು ಬಳಕೆ ಮಾಡಿ. ನಿಮ್ಮ ನೇರ ಕೂದಲು ಅಥವಾ ಅಲೆಗಳಂತಿರುವ ಕೂದಲಾಗಿದ್ದಲ್ಲಿ ಅಗಲ ಬಾಯಿ ಇರುವ ಬಾಚಣಿಗೆಯನ್ನು ಬಳಕೆ ಮಾಡಿ. ನಿಮ್ಮದು ಗುಂಗುರು ಕೂದಲುಗಳಾಗಿದ್ದಲ್ಲಿ ಬ್ರಿಸ್ಟಲ್ ಬ್ರಷ್ ಗಳನ್ನು ಬಳಸುವುದು ಸೂಕ್ತ. ನಿಧಾನವಾಗಿ ಕೂದಲು ಬಾಚುವ ಅಭ್ಯಾಸ ಇಟ್ಟುಕೊಳ್ಳಿ.
  • ಕೂದಲನ್ನು ಕಪ್ಪಾಗಿ ಇಟ್ಟುಕೊಳ್ಳುವುದಕ್ಕೆ ಸಲಹೆಗಳು

    ಕೂದಲನ್ನು ಕಪ್ಪಾಗಿ ಇಟ್ಟುಕೊಳ್ಳುವುದಕ್ಕೆ ಸಲಹೆಗಳು

    • ಕೂದಲು ಒದ್ದೆ ಇರುವಾಗ ಬಾಚಬೇಡಿ. 70% ಹಿಗ್ಗುವಿಕೆಯನ್ನು ಒದ್ದೆ ಕೂದಲು ತಡೆಯುತ್ತದೆ. ಹಾಗಾಗಿ ಬಾಚುವಾಗ ಕೂದಲು ಕತ್ತರಿಸಿಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
    • ಸರಿಯಾದ ರೀತಿಯಲ್ಲಿ ನಿಮ್ಮ ಟವೆಲ್ ನ ಬಳಕೆ ಮಾಡಿ. ಮೃದುವಾದ ಟವೆಲ್ ನಿಂದ ನಿಮ್ಮ ಕೂದಲನ್ನು ಒಣಗಿಸಿ.
    • ಸಲ್ಫೇಟ್ ಅಂಶ ಮತ್ತು ಪಾರಾಬೆನ್ಸ್ ಇರುವ ಶಾಂಪೂ ಗಳನ್ನು ಆದಷ್ಟು ಕಡಿತಗೊಳಿಸಿ.ಇವುಗಳು ನಿಮ್ಮ ಸ್ಕ್ಯಾಪ್ ಗೆ ಸಮಸ್ಯೆ ಮಾಡುತ್ತದೆ ಮತ್ತು ಗಾಢವಾದ ಕೆಮಿಕಲ್ ಗಳಾಗಿರುವುದರಿಂದಾಗಿ ಕೂದಲನ್ನು ಹಾಳು ಮಾಡುತ್ತದೆ ಮತ್ತು ಕೂದಲು ತುಂಡಾಗುತ್ತದೆ.
    • ನಿಮ್ಮ ಸ್ಕಾಲ್ಪ್ ಮತ್ತು ಕೂದಲು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.ಪ್ರತಿ ಮೂರು ದಿನಕ್ಕೆ ಒಮ್ಮೆಯಾದಲೂ ತಲೆಸ್ನಾನ ಮಾಡಿ.ಶಾಂಪೂವಿನಿಂದ ಮಸಾಜ್ ಮಾಡಿ ಸ್ಕಾಲ್ಪ್ ಮತ್ತು ಕೂದಲನ್ನು ತೊಳೆದು ಎಲ್ಲಾ ಕೊಳೆಯನ್ನು ನಿವಾರಣೆ ಮಾಡಿ.
    • ವಾರಕ್ಕೆ ಒಮ್ಮೆಯಾದರೂ ಕೂದಲಿಗೆ ಕಂಡೀಷನರ್ ಬಳಸಿ. ಕಾನ್ಸನ್ಟ್ರೇಟ್ ಮಾಡಲಾಗಿರುವ ಪೋಷಕಾಂಶಗಳು ಕೂದಲನ್ನು ಉತ್ತಮಗೊಳಿಸುತ್ತದೆ.
    • ಅತೀ ಹೆಚ್ಚು ಕೆಮಿಕಲ್ ಗಳ ಬಳಕೆಯನ್ನು ನಿಲ್ಲಿಸಿ.ಹೇರಳವಾಗಿ ಕೂದಲಿನ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಡಿ. ಕೆಮಿಕಲ್ ಗಳಿಂದ ಕೂಡಿರುವ ಟ್ರೀಟ್ ಮೆಂಟ್ ಗಳು ನಿಮ್ಮ ಕೂದಲಿನ ಆಯಸ್ಸನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಉದುರುವುದು ಅಧಿಕವಾಗುತ್ತದೆ.
    • ಅತಿಯಾಗಿ ಹೇರ್ ಸ್ಟೈಲ್ ಮಾಡುವುದನ್ನು ತಪ್ಪಿಸಿ. ಗಟ್ಟಿಯಾಗಿ ಪೋನಿ ಟೈಲ್ ಹಾಕಿಕೊಳ್ಳುವುದು, ಪಿಗ್ಟೈಲ್ ಮತ್ತು ಗಟ್ಟಿಯಾದ ಜಡೆ ಹೆಣೆಯುವಿಕೆ ಒಳ್ಳೆಯದಲ್ಲ.
    • ಸರಿಯಾದ ಪೋಷಕಾಂಶ ಪಡೆದುಕೊಳ್ಳುವುದನ್ನು ಮರೆಯಬೇಡಿ.

      • ಕೂದಲು ಉದುರುವುದು ನಿಲ್ಲಬೇಕೆಂದರೆ ಸರಿಯಾದ ಆಹಾರ ಕ್ರಮವೂ ಇರಬೇಕಾಗುತ್ತದೆ. ಕೂದಲಿನ ಬೆಳವಣಿಗೆಗೂ ಕೂಡ ಇದು ಸಹಕಾರಿ. ಅಷ್ಟೇ ಅಲ್ಲ ವ್ಯಾಯಾಮ ಮತ್ತು ಯೋಗ ಮಾಡುವುದರಿಂದಲೂ ಕೂಡ ಕೂದಲಿನ ಆರೋಗ್ಯ ಹೆಚ್ಚುತ್ತದೆ. ಒತ್ತಡ ರಹಿತ ಜೀವನಶೈಲಿಯೂ ಕೂಡ ಬಹಳ ಮುಖ್ಯ.
      • ಇದೀಗ ನಿಮ್ಮ ಕೂದಲು ಕಪ್ಪಾಗಿರುವುದಕ್ಕೆ ನೀವೇನು ಮಾಡಬೇಕು ಎಂಬುದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇವೆ. ಸರಿಯಾದ ಕಾಳಜಿಯು ನಿಮ್ಮ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೆಲನಿನ್ ಅಂಶವನ್ನು ಹೆಚ್ಚಿಸುವಂತಹ ಆಹಾರ ಪದಾರ್ಥಗಳ ಸೇವನೆ ಇರಲಿ. ಮೇಲಿನ ಎಲ್ಲಾ ಟಿಪ್ಸ್ ಗಳನ್ನು ಮನದಲ್ಲಿಟ್ಟುಕೊಂಡು ಜೀವನ ನಡೆಸಿ. ಆಗ ನಿಮ್ಮ ಕೂದಲು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವಂತೆ ಇರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

English summary

Natural Remedies To Reduce White (Gray) Hair

Here we are discussing about Natural And Permanent Solution For White Hairs. In this article, we break down what makes hair black and how you can keep it dark. Read on to know more.
X
Desktop Bottom Promotion