For Quick Alerts
ALLOW NOTIFICATIONS  
For Daily Alerts

ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು

|

ಮಂದವಾದ ಕೂದಲು ಹೆಣ್ಣಾಗಲಿ, ಗಂಡಾಗಲಿ ಅವರ ಮುಖಕ್ಕೆ ವಿಶೇಷ ಮೆರುಗು ನೀಡುತ್ತದೆ. ಕೂದಲು ಉದುರಿ ತುಂಬಾ ತೆಳ್ಳಗಾದರೆ ಮುಖ ಎಷ್ಟೇ ಅಂದವಾಗಿದ್ದರೂ ಏನೋ ಕೊರತೆ ಇರುವಂತೆ ಕಾಣುವುದು. ಆದ್ದರಿಂದ ಪ್ರತಿಯೊಬ್ಬರೂ ಮಂದವಾದ ಕೂದಲು ಬಯಸುತ್ತಾರೆ.

worst foods that cause hair loss

ಆದರೆ ಮಂದವಾದ ಕೂದಲನ್ನು ಕಾಪಾಡಿಕೊಳ್ಳುವುದೇ ಈಗೀನ ಕಾಲದಲ್ಲಿ ದೊಡ್ಡ ಸವಾಲು. ಏಕೆಂದರೆ ಕಲುಷಿತ ವಾತಾವರಣ, ನಮ್ಮ ಅನಾರೋಗ್ಯಕರ ಆಹಾರಶೈಲಿ ಎಲ್ಲವೂ ನಮ್ಮ ಕೂದಲು ಉದುರಲು ಕಾರಣವಾಗುತ್ತದೆ.

ನಾವಿಲ್ಲಿ ನೀವು ಕೂದಲಿನ ಆರೈಕೆ ಬಗ್ಗೆ ತುಂಬಾ ಗಮನ ನೀಡುತ್ತಿದ್ದರೆ ಅಥವಾ ಕೂದಲು ಉದುರಬಾರದು ಎಂದು ನೀವು ಬಯಸುತ್ತಿದ್ದರೆ ಯಾವ ಆಹಾರ ದೂರವಿಡಬೇಕು ನೋಡಿ:

1. ಸಕ್ಕರೆ

1. ಸಕ್ಕರೆ

ಸಕ್ಕರೆ ಸಿಹಿಯಾಗಿ ಬಾಯಿಗಷ್ಟೇ ರುಚಿ, ಆದರೆ ದೇಹಕ್ಕಲ್ಲ. ನೀವು ಸಕ್ಕರೆಯಂಶ, ಕಾರ್ಬೋಹೈಡ್ರೇಟ್, ಪಿಷ್ಠ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಲೆಯದಲ್ಲ. ಇದು ದೇಹದಲ್ಲಿ ಇನ್ಸುಲಿನ್‌ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ನಿಮಗೆ ಈಗಾಗಲೇ ಕೂದಲು ಉದುರುವ ಸಮಸ್ಯೆಯಿದ್ದರೆ ಸಕ್ಕರೆ ದೂರವಿಡಿ.

2. ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ

2. ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ

ಗ್ಲೈಸೆಮಿಕ್ ಇಂಡೆಕ್ಸ್ ಅಧಿಕ ಇರುವ ಆಹಾರ ಸೇವಿಸುವುದರಿಂದ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾಗುವುದು. ಇದರಿಂದ ಕೂಡ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಬರೀ ಕೂದಲು ಉದುರುವ ದೃಷ್ಟಿಯಿಂದ ಮಾತ್ರವಲ್ಲ, ಮಧುಮೇಹ ನಿಯಂತ್ರಣದ ದೃಷ್ಟಿಯಿಂದಲೂ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕ ಇರುವ ಆಹಾರ ಸೇವನೆ ಕಡಿಮೆ ಮಾಡುವುದು ಒಳ್ಳೆಯದು.

3. ಮದ್ಯ

3. ಮದ್ಯ

ಕೂದಲಿ ಆರೋಗ್ಯವನ್ನು ಕೆರಾಟಿನ್ ಎಂಬ ಪ್ರೊಟೀನ್ ಕಾಪಾಡುತ್ತಿರುತ್ತದೆ. ಇದು ಕೂದಲು ಉದ್ದವಾಗಿ ಬೆಳೆಯುವಂತೆ ಮಾಡುವುದು ಆದರೆ ಮದ್ಯ ಈ ಪ್ರೊಟೀನ್‌ ಸಿಂಥಸೆಸ್ ಮೇಲೆ ಕೆಟ್ಟ ಪರಿಣಾಮ ಬೀರುವುದು. ಅಧಿಕ ಮದ್ಯಮಾನ ಮಾಡುವುದರಿಂದ ಕೂದಲಿನ ಬುಡ ಬಲಹೀನವಾಗುವುದು.

4. ಡಯಟ್ ಸೋಡಾ

4. ಡಯಟ್ ಸೋಡಾ

ಡಯಟ್‌ ಸೋಡಾದಲ್ಲಿ ಕೃತಕ ಸಿಹಿಯಂಶವಿದ್ದು ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮಗೆ ಕೂದಲು ಉದುರುವ ಸಮಸ್ಯೆಯಿದ್ದರೆ ಡಯಟ್‌ ಸೋಡಾ ಕುಡಿಯುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

 5. ಜಂಕ್ ಫುಡ್‌

5. ಜಂಕ್ ಫುಡ್‌

ಜಂಕ್ ಫುಡ್‌ನಲ್ಲಿ ಸ್ಯಾಚುರೇಟಡ್‌ ಹಾಗೂ ಮೋನೋಸ್ಯಾಚುರೇಟಡ್ ಕೊಬ್ಬಿನಂಶವಿದ್ದು ಇದು ಮೂ ತೂಕ ಹೆಚ್ಚಿಸುವುದು, ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಅಲ್ಲದೆ ಕೂದಲು ಉದುರುವ ಸಮಸ್ಯೆ ಕೂಡ ಉಂಟಾಗುತ್ತದೆ. ಎಣ್ಣೆಯಂಶವಿರುವ ಅಧಿಕ ಇರುವ ಆಹಾರ ಹೆಚ್ಚಾಗಿ ತಿನ್ನುವುದರಿಂದ ತಲೆ ಬುಡದಲ್ಲಿ ಎಣ್ಣೆಯಂಶ ಹೆಚ್ಚು ಉತ್ಪತ್ತಿಯಾಗುವುದು. ಇದರಿಂದ ಕೂದಲಿನ ಬುಡ ಬಲಹೀನವಾಗುವುದು.

6. ಹಸಿ ಮೊಟ್ಟೆಯ ಬಿಳಿ

6. ಹಸಿ ಮೊಟ್ಟೆಯ ಬಿಳಿ

ಮೊಟ್ಟೆ ಕೂದಲಿಗೆ ತುಂಬಾನೇ ಒಳ್ಳೆಯದು, ಆದರೆ ಹಸಿ ಮೊಟ್ಟೆ ತಿನ್ನಬೇಡಿ. ಹಸಿ ಮೊಟ್ಟೆ ತಿನ್ನುವುದರಿಂದ ಬಯೋಟಿನ್‌ ಕೊರತೆ ಉಂಟಾಗುವುದು. ಹಸಿ ಮೊಟ್ಟೆಯಲ್ಲಿ ಅವಿದಿನ್ ಎಂಬ ಅಂಶ ಇರುತ್ತದೆ, ಇದು ಕರುಳು ಬಯೋಟಿನ್‌ ಹೀರಿಕೊಳ್ಳುವುದನ್ನು ತಡೆಗಟ್ಟುತ್ತದೆ. ಇದರಿಂದಾಗಿ ಕೂದಲಿಗೆ ಅವಶ್ಯಕವಾದ ಪ್ರೊಟೀನ್ ಸಿಗದೆ ಕೂದಲು ಬಲಹೀನವಾಗುವುದು. ಬೇಯಿಸಿದ ಮೊಟ್ಟೆ, ಆಮ್ಲೆಟ್ ಇವುಗಳನ್ನು ತಿನ್ನುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

7. ಕೆಲ ಬಗೆಯ ಮೀನು

7. ಕೆಲ ಬಗೆಯ ಮೀನು

ಸಮುದ್ರಾಹಾರವಾದ ಕತ್ತಿ ಮೀನು, ಬಂಗುಡೆ, ಶಾರ್ಕ್‌, ಕೆಲವೊಂದು ಬಗೆಯ ತುನಾ ಇವುಗಳಲ್ಲಿ ಪಾದರಸ ಅಂಶ ಅಧಿಕವಿರುತ್ತದೆ. ಇವುಗಳು ಕೂಡ ಕೂದಲು ಉದುರಲು ಕಾರಣವಾಗುವುದು.

English summary

List of Worst Foods That Cause Hair Loss in Kannada

Here are list of worst foods that cause hair loss, read on...
X
Desktop Bottom Promotion