For Quick Alerts
ALLOW NOTIFICATIONS  
For Daily Alerts

ದಟ್ಟ ಕೇಶರಾಶಿ ಪಡೆಯಲು, ಇವುಗಳ ಸೇವನೆಯನ್ನು ಆದಷ್ಟು ಕಡಿಮೆಮಾಡಿ

|

ಆರೋಗ್ಯಕರ, ಬಲವಾದ ಮತ್ತು ಉದ್ದ ಕೂದಲು ಪ್ರತಿಯೊಬ್ಬರ ಆಸೆಯಾಗಿದೆ. ಇಂತಹ ಸುಂದರ ಕೂದಲು ಪಡೆಯಲು ದುಬಾರಿ ಉತ್ಪನ್ನಗಳನ್ನು ಬಳಸುವುದು ಮಾತ್ರವಲ್ಲ, ಉತ್ತಮ ಪೋಷಕಾಂಶಗಳ ಅಗತ್ಯವಿದೆ.

ಪ್ರಸ್ತುತ ಜೀವನದಲ್ಲಿ ಒತ್ತಡವೂ ಕೂದಲುದುರುವಿಕೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಈ ಸಮಸ್ಯೆಗೆ ಕೊಡುಗೆ ನೀಡುವ ಮತ್ತೊಂದು ಅಂಶವೆಂದರೆ ನಾವು ಸೇವಿಸುವ ಆಹಾರ. ಕಳಪೆ ಆಹಾರವು ಕೂದಲಿನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿ, ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಅಂತಹ ಕೂದಲಿಗೆ ಹಾನಿ ಮಾಡುವಂತಹ ಆಹಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ನಾವು ಸೇವಿಸುವ ಯಾವ ಆಹಾರ ಕೂದಲುದುರುವಿಕೆಯನ್ನು ಹೆಚ್ಚಿಸುತ್ತವೆ ಎಂಬುದನ್ನು ಈ ಕೆಳಗೆ ಸವಿವರವಾಗಿ ನೀಡಲಾಗಿದೆ:

1. ಸಕ್ಕರೆ:

1. ಸಕ್ಕರೆ:

ಹೌದು, ಸಕ್ಕರೆ ನಿಮ್ಮ ಆರೋಗ್ಯಕ್ಕೂ ಎಷ್ಟು ಹಾನಿಕಾರಕವೋ, ಅಷ್ಟೇ ನಿಮ್ಮ ಕೂದಲಿಗೂ ಹಾನಿಕಾರಕ. ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗುವ ಇನ್ಸುಲಿನ್ ಪ್ರತಿರೋಧವು ನಿಮ್ಮ ಕೂದಲು ಉದುರುವಂತೆ ಮಾಡುತ್ತದೆ ಜೊತೆಗೆ ಪುರುಷರು ಮತ್ತು ಮಹಿಳೆಯರಲ್ಲಿ ಬೋಳಾಗುವುದಕ್ಕೆ ಕಾರಣವಾಗಬಹುದು ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. ಇನ್ಸುಲಿನ್ ಪ್ರತಿರೋಧದ ಹಿಂದಿನ ಪ್ರಮುಖ ಅಂಶವೆಂದರೆ ಸಕ್ಕರೆ, ಪಿಷ್ಟಗಳು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುವ ಆಹಾರ. ಇವುಗಳ ಸೇವನೆಯಿಂದ ಕೂದಲುದುರುವಿಕೆ ಹೆಚ್ಚಾಗುವುದು.

2. ಗ್ಲೈಸೆಮಿಕ್ ಅಂಶ ಹೆಚ್ಚಿರುವ ಆಹಾರಗಳು:

2. ಗ್ಲೈಸೆಮಿಕ್ ಅಂಶ ಹೆಚ್ಚಿರುವ ಆಹಾರಗಳು:

ಗ್ಲೈಸೆಮಿಕ್ ಅಂಶ ಅಧಿಕವಿರುವ ಆಹಾರಗಳು ಇನ್ಸುಲಿನ್ ಹೆಚ್ಚಳಕ್ಕೆ ಕಾರಣವಾಗುತ್ತವೆ. ಸಂಸ್ಕರಿಸಿದ ಹಿಟ್ಟು, ಬ್ರೆಡ್ ಮತ್ತು ಸಕ್ಕರೆಯಂತಹ ಆಹಾರಗಳು ಗ್ಲೈಸಮಿಕ್ ಅಂಶ ಹೆಚ್ಚಿರುವ ಆಹಾರಗಳಾಗಿವೆ. ಈ ಆಹಾರಗಳು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಇನ್ಸುಲಿನ್ ಮತ್ತು ಆಂಡ್ರೋಜೆನ್ ಗಳ ಹೆಚ್ಚಳವನ್ನು ಉಂಟುಮಾಡಬಹುದು. ಇದು ಕೂದಲು ಕಿರುಚೀಲಗಳಿಗೆ ಬಂಧಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

3.ಆಲ್ಕೋಹಾಲ್:

3.ಆಲ್ಕೋಹಾಲ್:

ಕೂದಲನ್ನು ಮುಖ್ಯವಾಗಿ ಪ್ರೋಟೀನ್ ನಿಂದ ಉತ್ಪತ್ತಿಯಾಗಿದ್ದು, ಇದನ್ನು ಕೆರಾಟಿನ್ ಎಂದು ಕರೆಯಲಾಗುತ್ತದೆ. ಕೆರಾಟಿನ್ ನಿಮ್ಮ ಕೂದಲಿಗೆ ರಚನೆಯನ್ನು ನೀಡುವ ಪ್ರೋಟೀನ್. ಆಲ್ಕೋಹಾಲ್ ಸೇವನೆಯು ಪ್ರೋಟೀನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಕೂದಲು ದುರ್ಬಲವಾಗಲು, ಹೊಳಪು ಕಳೆದುಕೊಳ್ಳಲು ಕಾರಣವಾಗಬಹುದು. ಅಲ್ಲದೆ, ಅತಿಯಾದ ಆಲ್ಕೊಹಾಲ್ ಸೇವನೆಯು ಪೌಷ್ಠಿಕಾಂಶದ ಅಸಮತೋಲನವನ್ನು ಸೃಷ್ಟಿಸುತ್ತದೆ. ಆದ್ದರಿಂದ ಕೂದಲು ಉದುರುವ ಸಮಸ್ಯೆ ಇರುವವರು ಮದ್ಯಪಾನವನ್ನು ತಪ್ಪಿಸಬೇಕು.

4. ಡಯಟ್ ಸೋಡಾ:

4. ಡಯಟ್ ಸೋಡಾ:

ಡಯಟ್ ಸೋಡಾಗಳು ಅಸ್ಪಾರ್ಟೇಮ್ ಎಂಬ ಕೃತಕ ಸಿಹಿಕಾರಕವನ್ನು ಹೊಂದಿರುತ್ತವೆ. ಸಂಶೋಧನೆಯ ಪ್ರಕಾರ, ಇದು ಕೂದಲು ಕಿರುಚೀಲಗಳಿಗೆ ಹಾನಿ ಮಾಡುತ್ತದೆ. ಆದ್ದರಿಂದ ನೀವೇನಾದರೂ ಕೂದಲು ಉದುರುವುದನ್ನು ಅನುಭವಿಸುತ್ತಿದ್ದರೆ ಡಯಟ್ ಸೋಡಾಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.

5. ಜಂಕ್ ಫುಡ್:

5. ಜಂಕ್ ಫುಡ್:

ಜಂಕ್ ಫುಡ್‌ಗಳು ಸಾಮಾನ್ಯವಾಗಿ ಸ್ಯಾಚುರೇಟೆಡ್ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳಿಂದ ತುಂಬಿರುತ್ತವೆ,

ಇದು ನಿಮ್ಮ ದೇಹದಲ್ಲಿ ಬೊಜ್ಜು ಉಂಟುಮಾಡುವುದಲ್ಲದೇ, ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುವುದು. ಅಷ್ಟೇ ಅಲ್ಲ, ಕೂದಲು ಉದುರುವಂತೆ ಮಾಡುವುದು. ಅಲ್ಲದೆ, ಎಣ್ಣೆಯುಕ್ತ ಆಹಾರಗಳು ನಿಮ್ಮ ನೆತ್ತಿಯನ್ನು ಜಿಡ್ಡನ್ನಾಗಿಸಬಹುದು ಮತ್ತು ರಂಧ್ರಗಳು ಮುಚ್ಚಿಹೋಗಲು ಕಾರಣವಾಗುತ್ತದೆ.

6. ಹಸಿ ಮೊಟ್ಟೆಯ ಬಿಳಿಭಾಗ:

6. ಹಸಿ ಮೊಟ್ಟೆಯ ಬಿಳಿಭಾಗ:

ಮೊಟ್ಟೆಗಳು ಕೂದಲಿಗೆ ಒಳ್ಳೆಯದು ಆದರೆ ಅವುಗಳನ್ನು ಹಸಿ ಸೇವಿಸಬಾರದು. ಹಸಿ ಮೊಟ್ಟೆಯ ಬಿಳಿಭಾಗವು ಕೆರಟಿನ್ ಉತ್ಪಾದನೆಗೆ ನೆರವಾಗುವ ವಿಟಮಿನ್ ಆದ ಬಯೋಟಿನ್ ಕೊರತೆಯನ್ನು ಉಂಟುಮಾಡಬಹುದು. ಆದ್ದರಿಂದ ಹಸಿ ಮೊಟ್ಟೆಯ ಬಿಳಿಭಾಗವನ್ನು ಸೇವಿಸಲು ಹೋಗಬೇಡಿ.ಇದು ಸದ್ದಿಲ್ಲದೇ, ಕೂದುಲುದರಲು ಕಾರಣವಾಗುವುದು.

7. ಮೀನು:

7. ಮೀನು:

ಹೆಚ್ಚಿನ ಪ್ರಮಾಣದ ಪಾದರಸವು ಹಠಾತ್ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಪಾದರಸದ ಸಾಮಾನ್ಯ ಮೂಲವೆಂದರೆ ಮೀನು. ಸಮುದ್ರ ನೀರಿನ ಮೀನುಗಳಾದ ಕತ್ತಿಮೀನು, ಮ್ಯಾಕೆರೆಲ್, ಶಾರ್ಕ್ ಮತ್ತು ಕೆಲವು ವಿಧದ ಟ್ಯೂನ ಮೀನುಗಳು ಪಾದರಸದಲ್ಲಿ ಸಮೃದ್ಧವಾಗಿವೆ. ಇವು ಕೂದಲುದುರಲು ಕೊಡುಗೆ ನೀಡುತ್ತವೆ.

English summary

List of Foods You Must Avoid For Hair Growth in Kannada

Here we talking about List of Foods You Must Avoid For Hair Growth in Kannada, read on
Story first published: Wednesday, August 4, 2021, 16:38 [IST]
X
Desktop Bottom Promotion