For Quick Alerts
ALLOW NOTIFICATIONS  
For Daily Alerts

ತಲೆ ತುರಿಕೆಯೇ? ಇಲ್ಲಿದೆ ಅದಕ್ಕೆ ಕಾರಣ ಮತ್ತು ಪರಿಹಾರ

|

ತಲೆ ತುಂಬಾ ತುರಿಸುತ್ತಿದೆಯೇ? ಈ ರೀತಿಯ ಸಮಸ್ಯೆ ಶೇ.13ರಿಂದ 45ರಷ್ಟು ಜನರಲ್ಲಿ ಕಂಡು ಬರುತ್ತದೆ. ತಲೆ ನಿರಂತರ ತುರಿಸುತ್ತಿದ್ದರೆ ಇದರಿಂದ ತಲೆಯಲ್ಲಿ ಗಾಯವಾಗಿ ಕಜ್ಜಿಯಾಗುವುದು.

Itchy Scalp:Causes, Symptoms Treatment And Prevention

ಸಾಮಾನ್ಯವಾಗಿ ಹೇನು ಇದ್ದರೆ ತಲೆ ತುರಿಕೆ ಕಂಡು ಬರುವುದು ಸಹಜ, ಆದರೆ ಹೇನು ಸಮಸ್ಯೆ ಇಲ್ಲದಿದ್ದರೂ, ತಲೆ ಹೊಟ್ಟು ಕಂಡು ಬರದಿದ್ದರೂ ಕೆಲವರಲ್ಲಿ ತಲೆ ತುರಿಕೆ ಕಂಡು ಬರುತ್ತದೆ. ಈ ರೀತಿಯ ತಲೆ ತುರಿಕೆ ಕೆಲವರಿಗೆ 6 ವಾರಗಳಿಗೂ ಹೆಚ್ಚು ಕಾಲ ಇರುತ್ತದೆ.

ಇಲ್ಲಿ ನಾವು ತಲೆ ತುರಿಕೆಗೆ ಕಾರಣಗಳೇನು? ಇದಕ್ಕೆ ಚಿಕಿತ್ಸೆಯೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ತಲೆ ತುರಿಕೆಗೆ ಪ್ರಮುಖ ಕಾರಣಗಳೇನು?

ಇಲ್ಲಿ ನೀಡಿರುವ ಕೆಲವೊಂದು ಕಾರಣಗಳಿಂದ ತಲೆಯಲ್ಲಿ ತುರಿಕೆ ಕಂಡು ಬರುತ್ತದೆ.

1. ಸೆಬೊರ್ಹೆಕ್ ಡರ್ಮಟೈಟಿಸ್

1. ಸೆಬೊರ್ಹೆಕ್ ಡರ್ಮಟೈಟಿಸ್

ಸೆಬೊರ್ಹೆಕ್ ಡರ್ಮಟೈಟಿಸ್ ತಲೆ ತುರಿಕೆಗೆ ಒಂದು ಪ್ರಮುಖ ಕಾರಣವಾಗಿದೆ. ಈ ರೀತಿಯ ಸಮಸ್ಯೆ ಉಂಟಾದಾಗ ತಲೆಬುಡದ ತ್ವಚೆಯಲ್ಲಿ ಬಿಳಿಯಾದ ಪ್ಯಾಚ್ ಕಂಡು ಬರುವುದು ಹಾಗೂ ತಲೆಹೊಟ್ಟಿನ ಸಮಸ್ಯೆ ಕೂಡ ಕಂಡು ಬರುವುದು. ಇದು ತಲೆಬುಡದಲ್ಲಿ ಶಿಳೀಂಧ್ರಗಳು ಉಂಟಾದರೆ ಕಂಡು ಬರುವುದು.

2. ತಲೆಬುಡದಲ್ಲಿ ಸೋರೋಸಿಸ್

ಸೋರೋಸಿನ್ ಸಮಸ್ಯೆ ಇರುವವರಲ್ಲಿ ದೇಹದಲ್ಲಿ ಮಾತ್ರವಲ್ಲ ತಲೆಯಲ್ಲೂ ಈ ರೀತಿಯ ತುರಿಕೆ ಕಂಡು ಬರುತ್ತದೆ. ಒಮದು ಅಧ್ಯಯನದಲ್ಲಿ 195 ಸೋರೋಸಿಸ್ ರೋಗಿಗಳನ್ನು ಒಳಪಡಿಸಿದ್ದರು. ಅದರಲ್ಲಿ ಶೇ.58ರಷ್ಟು ರೋಗಿಗಳು ತಮಗೆ ತಲೆ ತುರಿಕೆ ಉಂಟಾಗುತ್ತದೆ ಎಂದು ಹೇಳಿದ್ದರು.

3. ಅಲೋಪೆಸಿಯಾ

ಇದು ತ್ವಚೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಅಲರ್ಜಿ, ಒಣ ಚರ್ಮ, ಸೆಕೆ, ವಿಪರೀತ ಬೆವರು ಈ ಕಾರಣಗಳಿಂದ ಉಂಟಾಗುತ್ತದೆ.

4. ಹುಳುಕಡ್ಡಿ

4. ಹುಳುಕಡ್ಡಿ

ಹುಳುಕಡ್ಡಿಸಮಸ್ಯೆಯಿಂದಲೂ ತಲೆ ತುರಿಕೆ ಉಂಟಾಗುವುದು. ತಲೆ ಬುಡದಲ್ಲಿ ಚಿಕ್ಕ-ಚಿಕ್ಕ ಬಿಳಿ ಪ್ಯಾಚ್‌ ಇದ್ದು ಅದು ಕೆಂಪು-ಕೆಂಪಾಗಿ ಕಂಡು ಬಂದರೆ ಅದು ಹುಳುಕಡ್ಡಿ ಸಮಸ್ಯೆಯಾಗಿದೆ.

5. ಹೇನು

ಇನ್ನು ಹೇನು ಸಮಸ್ಯೆ ಇರುವವರಲ್ಲಿ ತಲೆ ತುರಿಕೆ ಕಂಡು ಬರುವುದು. ಹೇನು ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ತಲೆತುರಿಕೆಗೆ ಇತರ ಕಾರಣಗಳು

  • ತಲೆಬುಡ ತುಂಬಾ ಸೆನ್ಸಿಟಿವ್ ಆಗಿರುವುದು
  • ಮಧುಮೇಹ
  • ಕಿಡ್ನಿ, ಕೊಲೆಸ್ಟ್ರಾಲ್, ಲಿವರ್‌ ಸಂಬಂಧಿಸಿದ ಸಮಸ್ಯೆ ಇರುವವರೆಗೆ
  • ಔಷಧಿಯಿಂದ ಅಲರ್ಜಿ
  • ಖಿನ್ನತೆ
  • ತಲೆ ತುರಿಕೆ ಉಂಟಾದಾಗ ಕಂಡು ಬರುವ ಲಕ್ಷಣಗಳು

    ತಲೆ ತುರಿಕೆ ಉಂಟಾದಾಗ ಕಂಡು ಬರುವ ಲಕ್ಷಣಗಳು

    • ತುಂಬಾ ತುರಿಕೆ
    • ಕೂದಲು ಉದುರುವುದು
    • ಒಣ ತ್ವಚೆ
    • ತಲೆ ಬುಡದಲ್ಲಿ ವೈಟ್ ಪ್ಯಾಚ್
    • ತಲೆ ಬುಡದಲ್ಲಿ ಊತ
    • ಸಣ್ಣ ಪ್ರಮಾಣದಲ್ಲಿ ಜ್ವರ
    • ಯಾವಾಗ ವೈದ್ಯರನ್ನು ಕಾಣಬೇಕು?

      ಯಾವಾಗ ವೈದ್ಯರನ್ನು ಕಾಣಬೇಕು?

      ತಲೆ ತುರಿಕೆ ಒಂದು ವಾರಕ್ಕಿಂತ ಹೆಚ್ಚು ಇದ್ದರೆ ಚರ್ಮ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ತಲೆ ಬುಡ ಹಾಳಾಗಿ ಕೂದಲು ಹಾಳಾಗುವುದು. ಅಗ್ಯತ ಬಿದ್ದರೆ ವೈದ್ಯರು dermoscopy, wood's lamp examination ಮತ್ತು microscopic examination ಕೂಡ ಮಾಡಿಸಬಹುದು.

      ತಲೆ ತುರಿಕೆಗೆ ಚಿಕಿತ್ಸೆ

      ತಲೆ ತುರಿಕೆಗೆ ಚಿಕಿತ್ಸೆ

      • ತಲೆ ಬುಡವನ್ನು ಮಾಯಿಶ್ಚರೈಸರ್ ಮಾಡಿಕೊಳ್ಳುವುದು (ಎಣ್ಣೆ ಬಿಸಿ ಮಾಡಿ ಮಸಾಜ್ ಮಾಡಿದರೆ ಒಳ್ಳೆಯದು)
      • ಶ್ಯಾಂಪೂವಿನಲ್ಲಿ pH(4.5-6.0) ಇದ್ದರೆ ಅಂಥ ಶ್ಯಾಂಪೂ ತಲೆ ತುರಿಕೆ ಕಡಿಮೆ ಮಾಡುವುದು
      • Zinc pyrithione ಅಂಶವಿರುವ ಶ್ಯಾಂಪೂ ಬಳಸುವುದರಿಂದ ಕೂಡ ತಲೆ ತುರಿಕೆ ಕಡಿಮೆಯಾಗುವುಉದ
      • ಟಾಪಿಕಲ್ ಕಾರ್ಟಿಸ್ಟಿರಾಯ್ಡ್ ಕೂಡ ತಲೆ ತುರಿಕೆ ಕಡಿಮೆ ಮಾಡುತ್ತದೆ
      • Ketoconazole, ಸೆಲೆನಿಯಮ್, ಸಲ್ಪೈಡ್ ಇರುವ ಶ್ಯಾಂಪೂ ಬಳಸಿದರೆ ತಲೆ ತುರಿಕೆ ಕಡಿಮೆಯಾಗುವುದು.
      • ತಲೆ ತುರಿಕೆ ತಡೆಗಟ್ಟುವುದು ಹೇಗೆ

        ತಲೆ ತುರಿಕೆ ತಡೆಗಟ್ಟುವುದು ಹೇಗೆ

        • ಕೂದಲಿನ ಆರೈಕೆಗೆ ಅಧಿಕ ರಾಸಾಯನಿಕಗಳಿರುವ ಹಾಗೂ ಸುವಾಸನೆ ಇರುವ ವಸ್ತುಗಳನ್ನು ಬಳಸಬೇಡಿ.
        • ಕೂದಲು ಒಣಗಿಸಲು ಹಾಟ್‌ ಬ್ಲೋ ಮಾಡಬೇಡಿ
        • ಇತರರು ಬಳಸಿಬಾಚಣಿಕೆ, ಟವಲ್, ತಲೆ ದಿಂಬು, ಹೆಲ್ಮೆಟ್ ಬಳಸಬೇಡಿ.
        • ಇನ್ನು ತಲೆ ತೊಳೆಯುವಾಗ ಶ್ಯಾಂಪೂ ಚೆನ್ನಾಗಿ ತೊಳೆದು ತೆಗೆಯಿರಿ, ಇಲ್ಲದಿದ್ದರೆ ತಲೆ ತುರಿಕೆ ಕಂಡು ಬರುವುದು.
        •  ತಲೆ ತುರಿಕೆಗೆ ಮನೆಮದ್ದು

          ತಲೆ ತುರಿಕೆಗೆ ಮನೆಮದ್ದು

          • ಲೋಳೆಸರ, ಆಲೀವ್ ಎಣ್ಣೆ, ತೆಂಗಿನೆಣ್ಣೆ ಹಾಗೂ ಟೀ ಟ್ರೀ ಎಣ್ಣೆ ತಲೆ ತುರಿಕೆ ತಡೆಗಟ್ಟುವಲ್ಲಿ ಸಹಕಾರಿ. ತೆಂಗಿನೆಣ್ಣೆ ಸ್ವಲ್ಪ ಬಿಸಿ ಮಾಡಿ ಮಸಾಜ್ ಮಾಡುವುದರಿಂದ ತಲೆ ತುರಿಕೆ ಕಡಿಮೆಯಾಗುವುದು, ಇನ್ನು ಇದರ ಜೊತೆಗೆ ಸ್ವಲ್ಪ ಟೀ ಟ್ರೀ ಎಣ್ಣೆ ಬಳಸಿದರೆ ಕೂದಲು ನುಣಪಾಗಿ ಇರುವಂತೆ ಮಾಡುತ್ತದೆ.
          • ತಲೆಗೆ ಮೊಸರು ಹಚ್ಚುವುದರಿಂದ ಕೂಡ ಕೂದಲು ಉದುರುವುದನ್ನು ತಡೆಗಟ್ಟಬಹುದು.
English summary

Itchy Scalp: Causes, Symptoms Treatment And Prevention

Itchy scalp may be acute or chronic (more than six weeks). In this article, we will talk about what causes itchy scalp, its symptoms, diagnosis and treatment.
X
Desktop Bottom Promotion