For Quick Alerts
ALLOW NOTIFICATIONS  
For Daily Alerts

ತಲೆಕೂದಲಿನಿಂದ ಮೊಟ್ಟೆಯ ವಾಸನೆ ತೆಗೆಯಲು ಸುಲಭ ಮನೆಮದ್ದುಗಳು

|

ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ತಮ್ಮ ಕೂದಲಿನ ಮೇಲೆ ಅಪಾರವಾದ ಪ್ರೀತಿ ಇರುತ್ತದೆ. ಹೆಣ್ಣಿನ ಕೂದಲು ಅವರ ಸೌಂದರ್ಯದ ಒಂದು ಭಾಗ. ಮಹಿಳೆಯರು ಕೂದಲಿನ ಅಲಂಕಾರಕ್ಕಾಗಿ ಸಾಕಷ್ಟು ಸಮಯ, ಹಣ ಎಲ್ಲವನ್ನೂ ವ್ಯಯಿಸುತ್ತಾರೆ. ತಮ್ಮ ಜೀವನ ಶೈಲಿಯಲ್ಲಿ ಕೂದಲನ್ನು ಕತ್ತರಿಸಿಕೊಂಡು ಸ್ಟೈಲ್ ಮಾಡುವುದು, ಬಣ್ಣಗಳನ್ನು ಹಾಕಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳುವುದು ಸರ್ವೇ ಸಾಮಾನ್ಯ. ನೈಸರ್ಗಿಕ ವಿಧಾನದಲ್ಲಿ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಕೂದಲಿಗೆ ಮೊಟ್ಟೆಯನ್ನು ಹಾಕಿಕೊಳ್ಳುವ ರೂಢಿಯನ್ನು ಹೆಚ್ಚಿನವರು ಬೆಳೆಸಿಕೊಳ್ಳುತ್ತಾರೆ.

How To Remove Egg Smell From Hair

ಮೊಟ್ಟೆಯು ಕೂದಲಿನ ಹೊಳಪು ಹೆಚ್ಚಿಸುವುದಕ್ಕೆ ಸಹಕಾರಿ. ಮೊಟ್ಟೆಯು ಪ್ರೊಟೀನ್ ನಿಂದ ಸಮೃದ್ಧವಾಗಿದ್ದು ಕೂದಲಿನ ಫಾಲಿಕಲ್ ಗಳನ್ನು ಹೆಚ್ಚಿಸಿ ಬೆಳವಣಿಗೆಗೆ ಸಹಕರಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ಕೂದಲಿಗೆ ಎಗ್ ಪ್ಯಾಕ್ ಹಾಕಿಕೊಂಡರೆ ಕೂದಲು ಉದುರುವುದು, ಕೂದಲು ತುಂಡಾಗುವುದು ಮತ್ತು ತೆಳುವಾಗಿರುವ ಕೂದಲಿನ ಸಂರಕ್ಷಣೆಗೆ ಸಹಕಾರಿಯಾಗಿದೆ. ಆದರೆ ಬೇಸರದ ಸಂಗತಿಯೆಂದರೆ ಕೂದಲಿಗೆ ಮೊಟ್ಟೆಯ ಎಗ್ ಪ್ಯಾಕ್ ಹಾಕಿದ ನಂತರ ಸ್ವಲ್ಪ ವಾಸನೆ ಹಾಗೆಯೇ ಇರುತ್ತದೆ.

ಕೂದಲಿನ ಈ ವಾಸನೆಯು ಮುಜುಗರಕ್ಕೆ ಕಾರಣವಾಗಬಹುದು. ಇದು ನಿಮಗೆ ಸಾರ್ವಜನಿಕ ಸ್ಥಳಗಳಿಗೆ ಹೋಗುವುದಕ್ಕೆ, ಸ್ನೇಹಿತರನ್ನು ಭೇಟಿ ಮಾಡುವುದಕ್ಕೆ ಅಹಿತವೆನಿಸಬಹುದು. ಹೀಗೆ ನಿಮಗೆ ಕೂದಲಿಗೆ ಒಳ್ಳೆಯದನ್ನೇ ಮಾಡುವುದಾದರೂ ಕೂಡ ಈ ಮೊಟ್ಟೆಯ ಪ್ಯಾಕಿನ ವಾಸನೆಯಿಂದ ಮುಕ್ತಿ ಪಡೆಯುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ಕೆಲವು ಸರಳ ಉಪಾಯವನ್ನು ಹೇಳಿ ಕೊಡುತ್ತಿದ್ದೇವೆ.

ಕೂದಲಿಗೆ ಆಗುವ ಮೊಟ್ಟೆಯ ವಾಸನೆಯನ್ನು ತೆಗೆಯುವುದಕ್ಕೆ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಸರಳ ವಸ್ತುಗಳು ಪರಿಹಾರ ನೀಡಬಲ್ಲವು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನೀವು ಮನೆಮದ್ದುಗಳನ್ನು ತಿಳಿದುಕೊಳ್ಳುವ ಮೊದಲು ಈ ರೀತಿ ವಾಸನೆಯಾಗುವುದಕ್ಕೆ ಏನು ಕಾರಣ ಎಂಬುದನ್ನು ನೋಡೋಣ.

ಮೊಟ್ಟೆಯಂತೆ ನಿಮ್ಮ ಕೂದಲು ವಾಸನೆ ಬರಲು ಕಾರಣವೇನು?

ಮೊಟ್ಟೆಯಂತೆ ನಿಮ್ಮ ಕೂದಲು ವಾಸನೆ ಬರಲು ಕಾರಣವೇನು?

ಎಗ್ ಹೇರ್ ಪ್ಯಾಕ್ ಅಥವಾ ಮೊಟ್ಟೆಯ ಹೇರ್ ಪ್ಯಾಕ್ ಬಳಕೆ ಮಾಡಿದಾಗ ಕೂದಲು ತೊಳೆದ ನಂತರವೂ ಕೂಡ ಮೊಟ್ಟೆಯ ವಾಸನೆ ಬರುವುದು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಮೊಟ್ಟೆಯ ಹೇರ್ ಪ್ಯಾಕ್ ಬಳಕೆ ಮಾಡದೇ ಇದ್ದರೂ ಕೂಡ ಕೂದಲು ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಈ ವಾಸನೆ ಮೊಟ್ಟೆಯ ವಾಸನೆಯಂತೆಯೇ ಇರುತ್ತದೆ. ಖಂಡಿತ ಇದು ಗೊಂದಲಕ್ಕೆ ಕಾರಣವಾಗುತ್ತದೆ.

ಈ ವಾಸನೆಯ ನಿವಾರಣೆಗೆ ನೀವು ಬೇರೆಬೇರೆ ರೀತಿಯ ಮಾಸ್ಕ್ ನ್ನು ಪ್ರಯತ್ನಿಸಿರಬಹುದು ಅಥವಾ ಈ ವಾಸನೆಯನ್ನು ಕಡೆಗಣಿಸಿರುವ ಸಾಧ್ಯತೆಯೂ ಇದೆ. ಈ ಸಮಸ್ಯೆಯಿಂದ ಹೊರಬರುವುದಕ್ಕೆ ಈ ವಾಸನೆಯ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ನೀವು ಮೊಟ್ಟೆಯ ಹೇರ್ ಪ್ಯಾಕ್ ಬಳಸದೇ ಇದ್ದಾಗಲೂ ಕೂಡ ಯಾಕೆ ಇಂತಹ ವಾಸನೆ ನಿಮ್ಮ ಕೂದಲಿನಿಂದ ಬರುತ್ತಿದೆ. ಪರೀಕ್ಷಿಸೋಣ ಬನ್ನಿ!

ಕೂದಲಿನ ತೇವಾಂಶ

ಕೂದಲಿನ ತೇವಾಂಶ

ನಿಮ್ಮ ಕೂದಲಿನಲ್ಲಿ ಸಿಲುಕಿಕೊಳ್ಳುವ ತೇವಾಂಶವೂ ಕೂಡ ಒಂದು ಕಾರಣವಾಗಿರಬಹುದು. ತೇವಾಂಶವಿರುವ ವಾತಾವರಣವು ಬ್ಯಾಕ್ಟೀರಿಯಾಗಳ ಹೆಚ್ಚಳಕ್ಕೆ ಉತ್ತಮ ತಾಣವಾಗಿರುತ್ತದೆ ಮತ್ತು ಅದು ಕೆಟ್ಟ ವಾಸನೆಗೆ ಕಾರಣವಾಗುತ್ತದೆ. ಒದ್ದೆ ಕೂದಲನ್ನು ಕಟ್ಟಿಕೊಳ್ಳುವುದು ಅಥವಾ ಬಾಚಿಕೊಳ್ಳುವುದು ಮಾಡುವುದರಿಂದಾಗಿ ಕೂದಲು ಒಣಗದೆಯೇ ತೇವಾಂಶದಿಂದ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಅಲ್ಲೇ ಕೆಟ್ಟ ಮೊಟ್ಟೆಯಂತಹ ವಾಸನೆಯು ಉತ್ಪತ್ತಿಯಾಗುತ್ತದೆ.

ಶಾಂಪೂ

ಶಾಂಪೂ

ನೀವು ಬಳಸುವ ಶಾಂಪೂ ಕೂಡ ಒಂದು ಕಾರಣವಾಗಿರಬಹುದು. ಕೆಲವು ಶಾಂಪೂಗಳಲ್ಲಿ ಅದರಲ್ಲೂ ಪ್ರಮುಖವಾಗಿ ಆಂಟಿ-ಡ್ರ್ಯಾಂಡ್ರಫ್ ಶಾಂಪೂಗಳಲ್ಲಿ ಸೆಲೆನಿಯಂ ಸಲ್ಫೈಡ್ ಎಂಬ ಅಂಶವಿರುತ್ತದೆ. ಇದಕ್ಕೆ ಆಂಟಿ-ಫಂಗಲ್ ಗುಣವಿರುತ್ತದೆ. ಇದು ಸ್ಕ್ಯಾಲ್ಪ್ ನ್ನು ಸ್ವಚ್ಛಗೊಳಿಸುವ ಗುಣ ಹೊಂದಿರುತ್ತದೆ. ಆದರೆ ಸಲ್ಫರ್ ವಾಸನೆಯು ಮೊಟ್ಟೆಯ ವಾಸನೆಗಿಂತ ಭಿನ್ನವೇನೂ ಆಗಿರುವುದಿಲ್ಲ. ಹಾಗಾಗಿ ಶಾಂಪೂವಿನಲ್ಲಿರುವ ಈ ಅಂಶವು ನಿಮ್ಮ ಕೂದಲಿನಲ್ಲಿ ಕೆಟ್ಟ ವಾಸನೆಗೆ ಕಾರಣವಾಗಿರುವ ಸಾಧ್ಯತೆ ಇರುತ್ತದೆ.

ಸಲ್ಫರ್

ಸಲ್ಫರ್

ಸಲ್ಫರ್ ನೊಡನೆ ನೀರು ಸೇರಿ ಈ ರೀತಿ ವಾಸನೆ ಬರುತ್ತಿರಬಹುದು. ಸಲ್ಫರ್ ಕೂಡ ಮೊಟ್ಟೆಯಂತಹ ವಾಸನೆಯು ತಲೆಯಲ್ಲಿ ಬರುವುದಕ್ಕೆ ಕಾರಣವಾಗಿರುವ ಇನ್ನೊಂದು ಅಂಶವಾಗಿದೆ. ಕೂದಲನ್ನು ಸಲ್ಫರ್ ಯುಕ್ತ ಶಾಂಪೂ ಬಳಸಿ ತೊಳೆಯುವುದರಿಂದಾಗಿ ಅದು ಕೂದಲಿನ ಸ್ಕ್ಯಾಲ್ಪ್ ನಲ್ಲಿ ಉಳಿದು ಕೆಟ್ಟ ವಾಸನೆಯನ್ನು ತರುತ್ತದೆ.

ಕೆಲವು ವೈದ್ಯಕೀಯ ಕಾರಣಗಳಿಂದಲೂ ಕೂಡ ವಾಸನೆ ಬರುವ ಸಾಧ್ಯತೆ ಇರುತ್ತದೆ.

ನಿಮ್ಮ ಕೂದಲು ಅತಿಯಾಗಿ ಬೆವರಿದಾಗ ಅಂದರೆ ತಲೆಯಲ್ಲಿ ಅತಿಯಾಗಿ ಬೆವರು ಕಾಣಿಸಿಕೊಂಡಾಗ ಕೂದಲು ವಾಸನೆಯಾಗುತ್ತದೆ. ಅದಕ್ಕೆ ಕೆಲವು ವೈದ್ಯಕೀಯ ಕಾರಣವೂ ಇರುತ್ತದೆ.ಇಂತಹ ಸಂದರ್ಬದಲ್ಲಿ ಯಾವ ಕಾರಣದಿಂದ ನಿಮ್ಮ ಕೂದಲಿನಲ್ಲಿ ವಾಸನೆಯಾಗುತ್ತಿದೆ ಎಂಬುದನ್ನು ಉತ್ತಮ ವೈಧ್ಯರ ಬಳಿ ಸಲಹೆ ಪಡೆಯುವ ಮೂಲಕ ತಿಳಿದುಕೊಳ್ಳಬಹುದು.

ಕೂದಲಿನಿಂದ ಮೊಟ್ಟೆಯ ವಾಸನೆ ತೆಗೆಯುವುದು ಹೇಗೆ?

ಕೂದಲಿನಿಂದ ಮೊಟ್ಟೆಯ ವಾಸನೆ ತೆಗೆಯುವುದು ಹೇಗೆ?

1. ನಿಂಬೆಯ ರಸ

ನಿಂಬೆಯ ರಸವು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು ನಿಮ್ಮ ಕೂದಲನ್ನು ಸ್ವಚ್ಛಗೊಳಿಸುವುದಕ್ಕೆ ನೆರವಾಗುತ್ತದೆ ಮತ್ತು ಕೂದಲಿನ ವಾಸನೆಯನ್ನು ನಿವಾರಿಸುವುದಕ್ಕೆ ಸಹಕಾರಿಯಾಗಿದೆ. ತುರಿಕೆಯಿಂದ ಕೂಡಿರುವ ಮತ್ತು ಡ್ರ್ಯಾಂಡ್ರಫ್ ನಿಂದ ಇರುವ ತಲೆಯ ಸ್ವಚ್ಛತೆಗೂ ಕೂಡ ಇದು ನೆರವಾಗುತ್ತದೆ.

ಬೇಕಾಗಿರುವ ಪದಾರ್ಥಗಳು

2 ನಿಂಬೆ ಹಣ್ಣುಗಳು

1 ಕಪ್ ನಷ್ಟು ನೀರು

ಬಳಕೆ ಮಾಡುವ ವಿಧಾನ

ಒಂದು ಬೌಲ್ ನಲ್ಲಿ ನಿಂಬೆಯ ರಸವನ್ನು ಹಿಂಡಿಕೊಳ್ಳಿ.

ಅದಕ್ಕೆ ಒಂದು ಕಪ್ ನಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಕೂದಲನ್ನು ಶಾಂಪೂ ಮಾಡಿ ಮತ್ತು ಹೆಚ್ಚಾಗಿರುವ ನೀರನ್ನು ತೆಗೆಯಿರಿ.

ನಿಂಬೆಯ ರಸವನ್ನು ನಿಮ್ಮ ಸ್ಕ್ಯಾಲ್ಪ್ ಮತ್ತು ಕೂದಲಿಗೆ ಅಪ್ಲೈ ಮಾಡಿ .

15-20 ನಿಮಿಷ ಹಾಗೆಯೇ ಬಿಡಿ.

ನಂತರ ತೊಳೆಯಿರಿ .

ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ.

2. ಟೊಮೆಟೋ ಜ್ಯೂಸ್

2. ಟೊಮೆಟೋ ಜ್ಯೂಸ್

ಕೆಟ್ಟ ವಾಸನೆಯನ್ನು ತೆಗೆಯುವುದಕ್ಕಾಗಿ ಟೊಮೆಟೊ ಜ್ಯೂಸ್ ಕೂಡ ಒಂದು ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ. ಟೊಮೆಟೋ ಜ್ಯೂಸ್ ನಲ್ಲಿರುವ ಆಸಿಡಿಕ್ ಅಂಶವು ಕೂದಲಿನ ಸ್ವಚ್ಛತೆಗೆ ನೆರವಾಗಿ ವಾಸನೆ ಮುಕ್ತವಾಗಿಸುವುದಕ್ಕೆ ಸಹಕರಿಸುತ್ತದೆ.

ಬೇಕಾಗಿರುವ ಪದಾರ್ಥಗಳು

3-4 ಟೇಬಲ್ ಸ್ಪೂನ್ ಟೊಮೆಟೋ ಜ್ಯೂಸ್

ಬಳಕೆ ಮಾಡುವ ವಿಧಾನ

ನಿಮ್ಮ ಕೂದಲಿಗೆ ಟೊಮೆಟೋ ಜ್ಯೂಸ್ ನ್ನು ಅಪ್ಲೈ ಮಾಡಿ 15-20 ನಿಮಿಷ ಹಾಗೆಯೇ ಬಿಡಿ

ನಂತರ ಸ್ವಚ್ಛಗೊಳಿಸಿ

ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದಾಗಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

3. ಚಕ್ಕೆ ಮತ್ತು ಜೇನು

3. ಚಕ್ಕೆ ಮತ್ತು ಜೇನು

ಚಕ್ಕೆ ಮತ್ತು ಜೇನು ಎರಡೂ ಕೂಡ ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ನಿಮ್ಮ ಸ್ಕ್ಯಾಲ್ಪ್ ನ್ನು ಸ್ವಚ್ಛಗೊಳಿಸುವುದಕ್ಕೆ ನೆರವಾಗುತ್ತದೆ ಮತ್ತು ಕೆಟ್ಟ ವಾಸನೆಯನ್ನು ತೆಗೆಯುತ್ತದೆ. ಇದು ಕೂದಲಿನಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಕೊಳಕನ್ನು ತೆಗೆದು ಕೂದಲಿನ ಬೆಳವಣಿಗೆಗೂ ಕೂಡ ಸಹಕರಿಸುತ್ತದೆ.

ಬೇಕಾಗಿರುವ ಪದಾರ್ಥಗಳು

1 ಕಪ್ ಬಿಸಿ ನೀರು

½ ಟೇಬಲ್ ಸ್ಪೂನ್ ಚಕ್ಕೆಯ ಪುಡಿ

1 ಟೇಬಲ್ ಸ್ಪೂನ್ ಜೇನುತುಪ್ಪ

ಬಳಕೆ ಮಾಡುವ ವಿಧಾನ

ಒಂದು ಕಪ್ ನಷ್ಟು ಬಿಸಿನೀರಿನಲ್ಲಿ ಚಕ್ಕೆಯ ಪುಡಿಯನ್ನು ಸೇರಿಸಿ ಚೆನ್ನಾಗಿ ಕುಲುಕಾಡಿ.

ಮುಂದಿನ ಹಂತದಲ್ಲಿ ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣವನ್ನು ನಿಮ್ಮ ಸ್ಕ್ಯಾಲ್ಪ್ ಮತ್ತು ಕೂದಲಿಗೆ ಅಪ್ಲೈ ಮಾಡಿ.

45 ನಿಮಿಷ ಹಾಗೆಯೇ ಬಿಡಿ

ಶಾಂಪೂ ಹಾಕಿ ಕೂದಲನ್ನು ತೊಳೆಯುವ ಮುನ್ನ ಒಮ್ಮೆ ಕೇವಲ ನೀರಿನಿಂದ ಕೂದಲನ್ನು ತೊಳೆಯಿರಿ.

ಈ ವಿಧಾವನ್ನು ವಾರಕ್ಕೊಮ್ಮೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು.

4. ಆಪಲ್ ಸಿಡರ್ ವಿನೆಗರ್

4. ಆಪಲ್ ಸಿಡರ್ ವಿನೆಗರ್

ಆಪಲ್ ಸಿಡರ್ ವಿನೆಗರ್ ನಲ್ಲಿ ಶಕ್ತಿಯುತವಾಗಿರುವ ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು ಸ್ಕ್ಯಾಲ್ಪ್ ನ ಸ್ವಚ್ಛತೆಗೆ ಮತ್ತು ಕೂದಲಿನ ವಾಸನೆಯ ನಿವಾರಣೆಗೆ ನೆರವು ನೀಡುತ್ತದೆ.ಹೆಚ್ಚಿನ ಕೂದಲಿನ ಸಮಸ್ಯೆಗಳಿಗೆ ಡಲ್ಯೂಟ್ ಆಗಿರುವ ಆಪಲ್ ಸಿಡರ್ ವಿನೆಗರ್ ನಿಂದ ತೊಳೆಯುವುದು ಅತ್ಯುತ್ತಮ ವಿಧಾನವಾಗಿದೆ.

ಬೇಕಾಗಿರುವ ಪದಾರ್ಥಗಳು

2 ಟೇಬಲ್ ಸ್ಪೂನ್ ಆಪಲ್ ಸಿಡರ್ ವಿನೆಗರ್

4 ಟೇಬಲ್ ಸ್ಪೂನ್ ನೀರು

ಬಳಕೆ ಮಾಡುವ ವಿಧಾನ

ಆಪಲ್ ಸಿಡರ್ ವಿನೆಗರ್ ನ್ನು ನೀರಿನೊಂದಿಗೆ ಡಲ್ಯೂಟ್ ಮಾಡಿ. ಯಾವಾಗಲೂ ಮಾಡುವಂತೆ ಕೂದಲನ್ನು ಶಾಂಪೂ ಮಾಡಿ ನಂತರ ಆಪಲ್ ಸಿಡರ್ ವಿನೆಗರ್ ಸಲ್ಯೂಷನ್ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ.

ಒಂದು ನಿಮಿಷದ ಅವಧಿಗೆ ಹಾಗೆಯೇ ಬಿಡಿ.

ಸಹಜ ನೀರಿನಿಂದ ಅಂತಿಮವಾಗಿ ನಿಮ್ಮ ಕೂದಲನ್ನು ತೊಳೆಯಿರಿ.

ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 1-2 ಬಾರಿ ಈ ವಿಧಾನವನ್ನು ಅನುಸರಿಸಿ.

5. ಬೇಕಿಂಗ್ ಸೋಡಾ

5. ಬೇಕಿಂಗ್ ಸೋಡಾ

ಸ್ಕ್ಯಾಲ್ಪ್ ನ್ನು ಸ್ವಚ್ಛಗೊಳಿಸಿ, ಕೂದಲಿನ ಕೆಟ್ಟ ವಾಸನೆಯನ್ನು ಹೊಡೆದೋಡಿಸಿ ನಿಮ್ಮ ಕೂದಲಿಗೆ ಅತ್ಯುತ್ತಮ ತಾಜಾತನ ನೀಡುವುದಕ್ಕೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಆಂಟಿ ಬ್ಯಾಕ್ಟೀರಿಯಲ್ ಗುಣವಿರುವ ವಸ್ತುವೆಂದರೆ ಅದುವೇ ಬೇಕಿಂಗ್ ಸೋಡಾ.

ಬೇಕಾಗಿರುವ ಪದಾರ್ಥಗಳು

1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ

3 ಟೇಬಲ್ ಸ್ಪೂನ್ ನೀರು

ಬಳಕೆ ಮಾಡುವ ವಿಧಾನ

ಒಂದು ಬೌಲ್ ನಲ್ಲಿ ಬೇಕಿಂಗ್ ಸೋಡಾ ತೆಗೆದುಕೊಳ್ಳಿ.

ಅದಕ್ಕೆ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ನಿಮ್ಮ ಸ್ಕ್ಯಾಲ್ಪ್ ಮತ್ತು ಕೂದಲಿಗೆ ಅಪ್ಲೈ ಮಾಡಿ.

5 ನಿಮಿಷ ಹಾಗೆಯೇ ಬಿಡಿ.

ನಿಧಾನವಾಗಿ ತಾಜಾ ನೀರಿನಿಂದ ಕೂದಲನ್ನು ತೊಳೆಯಿರಿ.

ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಮಾಡಿ ನೋಡಿ.

6. ಕಿತ್ತಳೆ ರಸ

6. ಕಿತ್ತಳೆ ರಸ

ವಿಟಮಿನ್ ಸಿ ಅತ್ಯಧಿಕವಾಗಿರುವ ಕಿತ್ತಳೆ ರಸವು ಕೂಡ ಕೂದಲಿನ ಕೆಟ್ಟ ವಾಸನೆಯನ್ನು ನಿವಾರಿಸುವುದಕ್ಕೆ ನೆರವು ನೀಡ ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸುವುದಕ್ಕೆ ಮತ್ತು ಕೂದಲುದುರುವಿಕೆಯನ್ನು ತಡೆಯುವುದಕ್ಕೆ ನೆರವು ನೀಡುತ್ತದೆ.

ಬೇಕಾಗಿರುವ ಪದಾರ್ಥಗಳು

ಕಿತ್ತಳೆ ರಸ (ಅಗತ್ಯವಿರುವಷ್ಟು)

ಬಳಕೆ ಮಾಡುವ ವಿಧಾನ

ಸ್ಕ್ಯಾಲ್ಪ್ ಮತ್ತು ಕೂದಲಿಗೆ ಕಿತ್ತಳೆ ರಸವನ್ನು ಅಪ್ಲೈ ಮಾಡಿ.

5 ನಿಮಿಷ ಹಾಗೆಯೇ ಬಿಡಿ.

ನಂತರ ಸ್ವಚ್ಛ ನೀರಿನಿಂದ ಕೂದಲನ್ನು ತೊಳೆಯಿರಿ.

ವಾರಕ್ಕೆ 1-2 ಬಾರಿ ಈ ವಿಧಾನವನ್ನು ಅನುಸರಿಸುವುದರಿಂದಾಗಿ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು.

7. ಲಿವ್-ಇನ್ ಕಂಡೀಷನರ್

7. ಲಿವ್-ಇನ್ ಕಂಡೀಷನರ್

ಲಿವ್-ಇನ್ ಕಂಡೀಷನರ್ ನಲ್ಲಿ ಅತ್ಯುತ್ತಮವಾದ ಸುವಾಸನೆ ಇರುತ್ತದೆ ಮತ್ತು ಇದು ಕೂದಲಿನ ಕೆಟ್ಟ ವಾಸನೆಯನ್ನು ನಿವಾರಿಸಿ ಉತ್ತಮ ಪರಿಮಳವನ್ನು ಒದಗಿಸುತ್ತದೆ. ಇದು ನಿಮ್ಮ ಕೂದಲನ್ನು ಮೃದುವಾಗಿಸುವುದಕ್ಕೂ ಮತ್ತು ಬೌನ್ಸಿಯಾಗಿಸುವುದಕ್ಕೂ ಕೂಡ ಸಹಕಾರಿಯಾಗಿದೆ.

ಬೇಕಾಗಿರುವ ಪದಾರ್ಥಗಳು

ಶಾಂಪೂ

ಲಿವ್-ಇನ್- ಕಂಡೀಷನರ್

ಬಳಕೆ ಮಾಡುವ ವಿಧಾನ

ಸಾಮಾನ್ಯವಾಗಿ ಕೂದಲಿಗೆ ಶಾಂಪೂ ಮಾಡುವಂತೆಯೇ ಮಾಡಿ.

ಹೆಚ್ಚುವರಿ ನೀರನ್ನು ಕೂದಲಿನಿಂದ ತೆಗೆಯಿರಿ.

ಕೂದಲಿಗೆ ಲಿವ್-ಇನ್-ಕಂಡೀಷನರ್ ನ್ನು ಅಪ್ಲೈ ಮಾಡಿ.

ಕೆಲವು ನಿಮಿಷಗಳ ಅವಧಿಗೆ ಇದು ನಿಮ್ಮ ಕೂದಲಿನಲ್ಲಿ ಇರಲಿ. ನಂತರ ನಿಮ್ಮ ಕೂದಲನ್ನು ಬಾಚಿಕೊಳ್ಳಿ ಮತ್ತು ಹೇರ್ ಸ್ಟೈಲ್ ಮಾಡಿಕೊಳ್ಳಿ. ಕೆಲವು ಬಾರಿ ಕೂದಲನ್ನು ತೊಳೆಯುವಾಗ ಬಳಕೆ ಮಾಡಿ ಬದಲಾವಣೆಯನ್ನು ನೀವು ಗಮನಿಸಬಹುದು.

ಮೊಟ್ಟೆಯಂತಹ ವಾಸನೆಯು ನಿಮ್ಮ ಕೂದಲಿನಲ್ಲಿ ಬರದೆ ಇರುವಂತೆ ತಡೆಯುವುದು ಹೇಗೆ?

ಮೊಟ್ಟೆಯಂತಹ ವಾಸನೆಯು ನಿಮ್ಮ ಕೂದಲಿನಲ್ಲಿ ಬರದೆ ಇರುವಂತೆ ತಡೆಯುವುದು ಹೇಗೆ?

ಆರೋಗ್ಯಕಾರಿಯಾಗಿರುವ ಮತ್ತು ತಾಜಾ ಕೂದಲು, ಹೊಳೆಯುವ ಕೂದಲು ಪ್ರತಿಯೊಬ್ಬರಿಗೂ ಕೂಡ ಧೈರ್ಯವನ್ನು ಹೆಚ್ಚಿಸುತ್ತದೆ.ಮೊಟ್ಟೆಯಂತಹ ವಾಸನೆಯುಕ್ತ ಕೂದಲು ನಮ್ಮ ಮೂಡ್ ನ್ನು ಮತ್ತು ಕಾನ್ಫಿಡೆನ್ಸ್ ನ್ನು ಹಾಳು ಮಾಡುತ್ತದೆ. ಕೆಲವು ಮಾರ್ಗೋಪಾಯಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಹೊರಬರುವುದಕ್ಕೆ ಸಾಧ್ಯವಾಗುತ್ತದೆ. ಹಾಗಂದ ಮಾತ್ರಕ್ಕೆ ಸಮಸ್ಯೆಯೇ ಬರದಂತೆ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದಲ್ಲ.

ನಾವು ಮೇಲೆ ತಿಳಿಸಿರುವ ವಿಧಾನದಿಂದ ನೀವು ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು ಎಂಬುದೇನೋ ನಿಜ. ಅದೇ ರೀತಿ ಸಮಸ್ಯೆಯೇ ಬರದಂತೆ ತಡೆಯುವುದಕ್ಕೂ ಕೂಡ ಸಾಧ್ಯವಿದೆ.ಯಾವಾಗಲೂ ಕೂಡ ನಿಮ್ಮ ಕೂದಲು ಅತ್ಯುತ್ತಮವಾದ ಪರಿಮಳದಿಂದ ಕೂಡಿರುವಂತೆ ಮಾಡುವುದಕ್ಕೆ ಸಾಧ್ಯವಿದೆ. ಅದಕ್ಕಾಗಿ ನಿಮಗೆ ತಾಳ್ಮೆಯ ಅಗತ್ಯವಿದೆ.

ಕೆಲವು ವಿಧಾನಗಳು ಅದರ ಫಲಿತಾಂಶವನ್ನು ನೀಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ನೀವು ನಿಮ್ಮ ಸಮಯವನ್ನು ಮೀಸಲಿಡಲೇ ಬೇಕು. ಆಗ ಮಾತ್ರ ಉತ್ತಮ ಫಲಿತಾಂಶವನ್ನು ನಿಮ್ಮ ಕೂದಲಿನ ವಿಚಾರದಲ್ಲಿ ಪಡೆಯುವುದಕ್ಕೆ ಸಾಧ್ಯವಿದೆ ಎಂಬುದು ನಿಮ್ಮ ಮನಸ್ಸಿನಲ್ಲಿರುವುದು ಒಳ್ಳೆಯದು. ಹಾಗಾದ್ರೆ ಸಮಸ್ಯೆ ಬರದಂತೆ ತಡೆಯುವುದು ಹೇಗೆ? ನಿಮ್ಮ ಕೂದಲಿನಲ್ಲಿ ಮೊಟ್ಟೆಯಂತ ವಾಸನೆ ಬರದಂತೆ ತಡೆಯುವುದು ಹೇಗೆ ಎಂಬುದನ್ನು ನೋಡೋಣ.

ಮೊಟ್ಟೆಯ ಪ್ಯಾಕ್ ನ್ನು ಕೂದಲಿಗೆ ಬಳಸಿದ ನಂತರ ತಾಳ್ಮೆಯಿಂದ ಕೂದಲನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಕೂದಲಿನ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಕಣವಿದ್ದರೂ ಸಾಕು ಕೂದಲು ವಾಸನೆಯಾಗುವ ಸಾಧ್ಯತೆ ಇರುತ್ತದೆ.

ಕೂದಲಿಗೆ ಎಗ್ ಪ್ಯಾಕ್ ಬಳಸಿದ ನಂತರ ಯಾವತ್ತೂ ಕೂಡ ತಣ್ಣನೆಯ ನೀರಿನಲ್ಲಿ ಮಾಸ್ಕ್ ನ್ನು ಸ್ವಚ್ಛಗೊಳಿಸಿ. ಬಿಸಿ ನೀರಿನಲ್ಲಿ ತೊಳೆದರೆ ವಾಸನೆಯಾಗುವುದು 100 ಕ್ಕೆ 100 ಸತ್ಯ.

20 ನಿಮಿಷಕ್ಕಿಂತ ಹೆಚ್ಚು ಅವಧಿಗೆ ಮೊಟ್ಟೆಯ ಮಾಸ್ಕ್ ನ್ನು ತಲೆಯಲ್ಲಿಡಬೇಡಿ. ಹೆಚ್ಚು ಸಮಯ ಕೂದಲಿನಲ್ಲಿ ಮಾಸ್ಕ್ ಇದ್ದರೆ ವಾಸನೆಯಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಒದ್ದೆ ಕೂದಲನ್ನು ಎಂದೂ ಕೂಡ ಕಟ್ಟಿಕೊಳ್ಳಬೇಡಿ. ಒದ್ದೆಯುಕ್ತ ಸ್ಕಾಲ್ಪ್ ನಲ್ಲಿ ಬ್ಯಾಕ್ಟೀರಿಯಾಗಳು ಅಧಿಕಗೊಂಡು ಕೂದಲು ವಾಸನೆಯಾಗುತ್ತದೆ. ಸಂಪೂರ್ಣ ಒಣಗಿದ ಕೂದಲನ್ನು ಮಾತ್ರವೇ ಬಾಚಿಕೊಳ್ಳಿ.

ಕೂದಲಿಗೆ ಶಾಂಪೂ ಮಾಡುವಾಗ ನಿಧಾನವಾಗಿ ಮಾಡಿಕೊಳ್ಳಿ.

ನೀರು ಕೂದಲು ತೊಳೆಯುವುದಕ್ಕೆ ಬಳಸುವ ನೀರು ಸ್ವಚ್ಛವಾಗಿದೆ ಮತ್ತು ವಾಸನೆ ಮುಕ್ತವಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಒಂದು ವೇಳೆ ನೀವು ಕೆಲವು ಸಮಯದಿಂದ ಒಂದೇ ಶಾಂಪೂ ಬಳಸುತ್ತಿದ್ದು ಶಾಂಪೂನಿಂದಲೇ ವಾಸನೆಯಾಗುತ್ತಿದೆ ಎಂಬುದು ಗಮನಕ್ಕೆ ಬಂದರೆ ಕೂಡಲೇ ಶಾಂಪೂ ಬದಲಾವಣೆ ಮಾಡಿ. ನೈಸರ್ಗಿಕವಾಗಿರುವ ಶಾಂಪೂ ಬಳಕೆ ಮಾಡುವುದು ಬಹಳ ಒಳ್ಳೆಯದು.

ಇದಕ್ಕೂ ಮೀರಿ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ವೈದರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

English summary

How To Remove Egg Smell From Hair

Here we are discussing about How To Remove Egg Smell From Hair. In your search for natural ways to make your hair bouncy, shiny and voluminous, many of you might have come across egg hair packs. Read more.
Story first published: Monday, March 30, 2020, 14:53 [IST]
X
Desktop Bottom Promotion