For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕಾಡುವ ತಲೆಹೊಟ್ಟಿನ ಮುಕ್ತಿಗೆ ಇಲ್ಲಿದೆ ಸರಳ ಪರಿಹಾರ

|

ಚಳಿಗಾಲ ಎಂದರೆ ಸಾಮಾನ್ಯವಾಗಿ ವಾತಾವರಣವು ತಂಪಾಗಿರುತ್ತದೆ. ಆದರೆ ಶುಷ್ಕತೆಯು ಹೆಚ್ಚಾಗುವುದರಿಂದ ಚರ್ಮ ಹಾಗೂ ಕೇಶರಾಶಿಯ ಸಮಸ್ಯೆಗಳು ಹೆಚ್ಚಾಗುತ್ತವೆ. ಪ್ರಕೃತಿಯಲ್ಲಿ ಉಂಟಾಗುವ ಈ ಬದಲಾವಣೆಯು ಪರಿಸರದಲ್ಲೂ ಸಾಕಷ್ಟು ಅನಾರೋಗ್ಯಕರ ಬ್ಯಾಕ್ಟೀರಿಯಾಗಳ ಹುಟ್ಟಿಗೆ ಕಾರಣವಾಗುತ್ತವೆ. ಅವು ಧೂಳಿನೊಂದಿಗೆ ಬೆರೆತು ಆರೋಗ್ಯದ ಮೇಲೆ ದಾಳಿಮಾಡುತ್ತವೆ. ಈ ಕಾರಣಗಳು ಚರ್ಮದಲ್ಲಿ ಒಡಕು, ಉರಿಯೂತ, ಸೋಂಕು, ತುರಿಕೆ ಸೇರಿದಂತೆ ಅನೇಕ ಬಗೆಯ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತವೆ. ಹಾಗಾಗಿ ಚಳಿಗಾಲ ಎಂದರೆ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿರುತ್ತದೆ.

hair care in winter

ಉದ್ಯೋಗ ನಿಮಿತ್ತ ಹೊರಗೆ ಹೋಗುವವರು ಧೂಳು, ಸೂರ್ಯನ ಕಿರಣ, ಅನುಚಿತ ಆರೈಕೆಯ ಕಾರಣಗಳಿಂದಾಗಿ ಕೇಶರಾಶಿಯ ಸಮಸ್ಯೆಗಳನ್ನು ಅನುಭವಿಸುವುದು ಸಹಜ. ದೀರ್ಘ ಸಮಯಗಳ ಕಾಲ ಹೆಲ್ಮೆಟ್ ಧರಿಸುವುದು, ಧೂಳಿನಲ್ಲಿ ಇರುವುದು, ಸೂರ್ಯನ ತಾಪ, ಒಡೆದ ಚರ್ಮಗಳ ಕಾರಣದಿಂದ ನೆತ್ತಿಯಲ್ಲಿ ಸೋಂಕು, ಹೊಟ್ಟು, ಕೂದಲುದುರುವುದು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ನೆತ್ತಿಯ ಭಾಗದಲ್ಲಿ ಸತ್ತ ಜೀವಕೋಶಗಳು ಸಣ್ಣ ಪದರಗಳನ್ನು ರೂಪಿಸಲು ಪ್ರಾರಂಭಿಸುತ್ತವೆ. ಅವು ನಿಧಾನವಾಗಿ ತಲೆಯ ಇತರ ಭಾಗಗಳಲ್ಲೂ ಹರಡಿಕೊಳ್ಳುತ್ತವೆ. ಹೊಟ್ಟಿನ ಕಾರಣದಿಂದಾಗಿ ಕೂದಲು ಅಧಿಕವಾಗಿ ಉದುರುವುದು, ತುರಿಕೆ ಹಾಗೂ ಉರಿಯೂತ ಕಾಣಿಸಿಕೊಳ್ಳುತ್ತವೆ.

ತಲೆ ಹೊಟ್ಟಿನ ಸಮಸ್ಯೆಯು ಚಳಿಗಾಲದಲ್ಲಿ ಅಧಿಕವಾಗುವುದರಿಂದ ಕೂದಲು, ಚರ್ಮ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಆರೈಕೆಯ ಕ್ರಮವನ್ನು ಅನುಸರಿಸಬೇಕು. ಇಲ್ಲವಾದರೆ ಸಮಸ್ಯೆಯು ದೀರ್ಘಾವಧಿಗಳ ಕಾಲ ಕಾಡುತ್ತದೆ. ಒಮ್ಮೆ ಚರ್ಮ ಹಾಗೂ ಹೊಟ್ಟಿನಂತಹ ಸಮಸ್ಯೆ ಕೇಶರಾಶಿಯ ನಡುವೆ ಕಾಣಿಸಿಕೊಂಡರೆ ಅವುಗಳನ್ನು ನಿವಾರಿಸುವುದು ಕಷ್ಟ. ದೀರ್ಘ ಸಮಯ ಹಾಗೂ ಸೂಕ್ತ ಆರೈಕೆ ದೊರೆತರೆ ಸಮಸ್ಯೆಯು ಗುಣಮುಖವಾಗುವುದು.

ನೀವೂ ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಿಂದ ದೂರ ಇರಬೇಕು, ಹೊಟ್ಟಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕು ಎನ್ನುವ ಹವಣಿಕೆ ಅಥವಾ ಆಸೆಯನ್ನು ಹೊಂದಿದ್ದರೆ ಈ ಮುಂದೆ ವಿವರಿಸಲಾದ ಕೆಲವು ಚಿಕಿತ್ಸಾ ಕ್ರಮವನ್ನು ಅನುಸರಿಸಿ. ಅವು ನಿಮಗೆ ಉತ್ತಮ ಆರೈಕೆಯನ್ನು ಮಾಡುತ್ತವೆ.

1. ಆರ್ಧ್ರಕ/ಮಾಯ್ಚುರೈಸ್ ಕಂಡೀಷನರ್ ಬಳಸಿ

1. ಆರ್ಧ್ರಕ/ಮಾಯ್ಚುರೈಸ್ ಕಂಡೀಷನರ್ ಬಳಸಿ

ಚಳಿಗಾಲ ಪ್ರಾರಂಭವಾದ ಸಮಯದಿಂದಲೇ ಮಾಯ್ಚುರೈಸ್ ಕಂಡೀಷನರ್ ಗಳನ್ನು ಬಳಸಿ. ಅದು ನಿಮ್ಮ ನೆತ್ತಿಯ ಮೇಲೆ ಸಾಕಷ್ಟು ತೇವಾಂಶ ಇರುವಂತೆ ಮಾಡುವುದು. ಚರ್ಮವು ತೇವಾಂಶದಿಂದ ಇರುತ್ತವೆ. ಆಗ ತುರಿಕೆ, ಚರ್ಮ ಒಣಗದಂತೆ ನೋಡಿಕೊಳ್ಳುವುದು. ಗಿಡಮೂಲಿಕೆಯ ಆರೈಕೆಗೆ ಹೋಗಲು ಬಯಸಿದರೆ ಮೊದಲು ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಕೆಲವು ಗಿಡಮೂಲಿಕೆಗಳು ಕೆಲವರಿಗೆ ಅಲರ್ಜಿಯನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಗಿಡಮೂಲಿಕೆಯ ಅಲರ್ಜಿಯಿಂದ ನೆತ್ತಿಯಲ್ಲಿ ತುರಿಕೆ ಮತ್ತು ಚರ್ಮ ಕೆಂಪಾದ ಬೊಬ್ಬೆಯಿಂದ ನೋವನ್ನು ಉಂಟುಮಾಡಬಹುದು.

2. ಟೀ ಟ್ರೀ ಎಣ್ಣೆಯನ್ನು ಬಳಸಿ

2. ಟೀ ಟ್ರೀ ಎಣ್ಣೆಯನ್ನು ಬಳಸಿ

ಟೀ ಟ್ರೀ ಎಣ್ಣೆ ಸೋಂಕು ನಿವಾರಿಸಲು ಹಾಗೂ ಚರ್ಮದ ಆರೈಕೆ ಮಾಡಲು ಅತ್ಯುತ್ತಮವಾದ ಘಟಕ. ಹಾಗಾಗಿ ಕೇಶ ರಾಶಿಯ ಆರೈಕೆ ಹಾಗೂ ಹೊಟ್ಟಿನ ನಿವಾರಣೆಗೆ ಅಥವಾ ಹೊಟ್ಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಟೀ ಟ್ರೀ ಎಣ್ಣೆ, ಮೃದುವಾದ ಶ್ಯಾಂಪೂ, ಕಂಡೀಷನರ್‍ಗಳ ಮೊರೆ ಹೋಗಬಹುದು. ಅವು ನೆತ್ತಿ ಹಾಗೂ ಕೇಶಗಳ ಬುಡದಲ್ಲಿ ತೇವಾಂಶ ಇರುವಂತೆ ಮಾಡುತ್ತವೆ. ಟೀ ಟ್ರೀ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ನೆತ್ತಿ ಹಾಗೂ ಇತರ ಭಾಗದಲ್ಲಿ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ. ಆಗ ನೀವು ಗಮನಾರ್ಹ ಸುಧಾರಣೆಯನ್ನು ಕಾಣಬಹುದು.

3. ವಿಟಮಿನ್ ಬಿ ಮತ್ತು ಸತುವಿನ ಆಹಾರ ಸೇವಿಸಿ

3. ವಿಟಮಿನ್ ಬಿ ಮತ್ತು ಸತುವಿನ ಆಹಾರ ಸೇವಿಸಿ

ನಾವು ಸೇವಿಸುವ ಆಹಾರದಲ್ಲಿ ಇರುವ ಪೋಷಕಾಂಶಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತವೆ. ವಿಟಮಿನ್ ಬಿ ಮತ್ತು ಸತುಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿದರೆ ನೆತ್ತಿಯ ಆರೋಗ್ಯವನ್ನು ಕಾಪಾಡಬಹುದು. ವಾಲ್‍ನಟ್, ಮೊಟ್ಟೆ, ಸೊಪ್ಪು ಮತ್ತು ಇತರ ತರಕಾರಿಗಳಲ್ಲಿ ಒಮೆಗಾ3 ಕೊಬ್ಬಿನ ಆಮ್ಲಗಳಿರುತ್ತವೆ. ಸೊಪ್ಪನ್ನು ತಿನ್ನಲು ಇಷ್ಟ ಪಡದೆ ಇರುವವರು ಸಲಾಡ್‍ಗಳನ್ನು ಸ್ವಲ್ಪ ಮೇಯನೇಸ್ ಗಳೊಂದಿಗೆ ಸವಿಯಿರಿ. ಆಗ ಅದು ಹೆಚ್ಚು ರುಚಿಯನ್ನು ನೀಡುವುದು. ಜೊತೆಗೆ ಆರೋಗ್ಯದ ಪೋಷಣೆಯನ್ನು ಮಾಡುವುದು.

4. ಸ್ವಚ್ಛತೆಗೆ ಆದ್ಯತೆ ನೀಡಿ

4. ಸ್ವಚ್ಛತೆಗೆ ಆದ್ಯತೆ ನೀಡಿ

ಚಳಿಗಾಲದಲ್ಲಿ ಚರ್ಮ ಹಾಗೂ ಕೇಶವು ಶುಷ್ಕತೆಗೆ ಒಳಗಾಗುವುದು ಸಾಮಾನ್ಯ. ಜೊತೆಗೆ ಅತಿಯಾದ ಬೆವರು, ಧೂಳುಗಳು ಚರ್ಮದ ಮೇಲೆ ಸೋಂಕು ಹಾಗೂ ತುರಿಕೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಆದಷ್ಟು ಸ್ವಚ್ಛತೆಯ ಕಡೆಗೆ ಗಮನವನ್ನು ನೀಡಬೇಕು. ಹಾಗಾಗಿ ಪ್ರತಿ 2-3 ದಿನಗಳಿಗೊಮ್ಮೆ ತಲೆ ಸ್ನಾನ ಮಾಡುವುದರ ಮೂಲಕ ಸ್ವಚ್ಛಗೊಳಿಸಿ. ತಲೆಯಲ್ಲಿ ಜಿಡ್ಡಿನಂಶ ಹಾಗೂ ಧೂಳು ಕುಳಿತಿದ್ದರೆ ವಾಸನೆ ಹಾಗೂ ಹೊಟ್ಟಿನ ಸಮಸ್ಯೆ ಉದ್ಭವ ಆಗುವುದು. ಕೆಲವೊಮ್ಮೆ ಅಲರ್ಜಿ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರುತ್ತವೆ.

5. ಅತಿಯಾಗಿ ಕೇಶವಿನ್ಯಾಸವನ್ನು ಮಾಡದಿರಿ

5. ಅತಿಯಾಗಿ ಕೇಶವಿನ್ಯಾಸವನ್ನು ಮಾಡದಿರಿ

ಚಳಿಗಾಲದಲ್ಲಿ ಕೇಶ ರಾಶಿಯು ಸಾಕಷ್ಟು ಶುಷ್ಕತೆ ಹಾಗೂ ಹಾನಿಗೆ ಒಳಗಾಗಿರುತ್ತದೆ. ಅಂತಹ ಸಮಯದಲ್ಲಿ ರಾಸಾಯನಿಕ ವಸ್ತುಗಳಿಂದ ಕೂಡಿರುವ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಕೇಶರಾಶಿಗೆ ಅನ್ವಯಿಸುವುದು, ಕೇಶ ವಿನ್ಯಾಸ ಮಾಡುವುದು ಮಾಡಿದರೆ ಅದು ಕೂದಲ ಆರೋಗ್ಯ ಹಾಗೂ ನೆತ್ತಿಯ ಭಾಗದಲ್ಲಿ ಹೊಟ್ಟನ್ನು ಉಂಟುಮಾಡುತ್ತವೆ. ತುರಿಕೆಯಿಂದ ಉಂಟಾಗುವ ಸಮಸ್ಯೆ ಗಂಭೀರ ಚಿಂತನೆಗೆ ಒಳಗಾಗುವಂತೆ ಮಾಡುವ ಸಾಧ್ಯತೆಯೂ ಇರುತ್ತದೆ.

6. ಅತಿಯಾಗಿ ಕೂದಲನ್ನು ತೊಳೆಯದಿರಿ

6. ಅತಿಯಾಗಿ ಕೂದಲನ್ನು ತೊಳೆಯದಿರಿ

ಕೇಶ ರಾಶಿಯು ಮತ್ತು ಚರ್ಮವು ಶುಷ್ಕತೆಗೆ ಒಳಗಾದಾಗ ಬಹುಬೇಗ ಆರೋಗ್ಯವನ್ನು ಕಳೆದುಕೊಳ್ಳುತ್ತವೆ. ಜೊತೆಗೆ ತುರಿಕೆ ಸೋಂಕುಗಳಂತಹ ಸಮಸ್ಯೆಗಳಿಗೆ ತೆರೆದುಕೊಳ್ಳುತ್ತವೆ. ಅವು ಹೊಟ್ಟಿನಂತಹ ಸಮಸ್ಯೆಗೆ ಪ್ರಚೋದನೆ ನೀಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಅತಿಯಾಗಿ ಕೂದಲನ್ನು ತೊಳೆಯಬಾರದು. ಅದು ಕೇಶರಾಶಿಯಲ್ಲಿ ಹಾಗೂ ಚರ್ಮದಲ್ಲಿ ತೇವಾಂಶ ಕಳೆದುಕೊಳ್ಳುವಂತೆ ಮಾಡುತ್ತದೆ. ಅತಿಯಾದ ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದು ಮಾಡಬಾರದು. ಆದಷ್ಟು ಮೃದು ಹಾಗೂ ತಂಪಾದ ನೀರಿನಲ್ಲಿ ತ್ವಚೆ ಹಾಗೂ ಕೇಶವನ್ನು ಸ್ವಚ್ಛಗೊಳಿಸಿ.

7. ಶಾಂಪೂ ಬಳಸಿ ಹೆಚ್ಚು ಕಾಲ ಬಿಡಬೇಡಿ

7. ಶಾಂಪೂ ಬಳಸಿ ಹೆಚ್ಚು ಕಾಲ ಬಿಡಬೇಡಿ

ತಲೆ ಸ್ನಾನ ಮಾಡುವಾಗ ಅತಿಯಾಗಿ ಶಾಂಪೂವನ್ನು ಅನ್ವಯಿಸುವುದು, ಅಧಿಕ ಸಮಯಗಳ ಕಾಲ ಹಾಗೇ ಬಿಡುವುದು ಮಾಡಬಾರದು. ಹಾಗೆ ಮಾಡುವುದರಿಂದ ತ್ವಚೆಯಲ್ಲಿ ಇರುವ ತೇವಾಂಶ ಹಾಳಾಗುವುದು. ಶುಷ್ಕತೆ ಹೆಚ್ಚಾಗಿ ಹೊಟ್ಟು, ತುರಿಕೆ, ಕೂದಲುದುರುವ ಸಮಸ್ಯೆ ಹೆಚ್ಚಾಗುವುದು. ಹಾಗಾಗಿ ಶಾಂಪೂ ಬಳಸಿದರೆ ಬಹುಬೇಗ ತೊಳೆಯಬೇಕು. ಅಲ್ಲದೆ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವವರು ಚಳಿಗಾಲದಲ್ಲಿ ಬಳಸದೆ ಇರುವುದು ಉತ್ತಮ. ಕೂದಲ ಬಣ್ಣಗಳು ನೆತ್ತಿಯ ಮೇಲೆ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ತೇವಾಂಶವನ್ನು ಕಾಪಾಡುವಂತಹ ಬಣ್ಣಗಳ ಆಯ್ಕೆ ಮಾಡಿಕೊಳ್ಳಿ.

8. ಬೆಚ್ಚಗಿನ ಎಣ್ಣೆಯ ಮಸಾಜ್ ಮಾಡಿ

8. ಬೆಚ್ಚಗಿನ ಎಣ್ಣೆಯ ಮಸಾಜ್ ಮಾಡಿ

ಆಲಿವ್ ಎಣ್ಣೆ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆಗಳು ಅತ್ಯುತ್ತಮ ಪೋಷಣೆಯನ್ನು ನೀಡುತ್ತವೆ. ಅವುಗಳನ್ನು ಸ್ವಲ್ಪ ಬೆಚ್ಚಗಾಗಿಸಿ. ನಂತರ ನೆತ್ತಿಯ ಭಾಗದಲ್ಲಿ ಹಾಗೂ ಕೂದಲುಗಳ ಬುಡಕ್ಕೆ ಅನ್ವಯಿಸಿ, ಮಸಾಜ್ ಮಾಡಿ. ಎಣ್ಣೆಗಳನ್ನು ಅನ್ವಯಿಸಿ, ಸ್ವಲ್ಪ ಸಮಯ ಕಳೆದ ನಂತರ ಮೃದುವಾದ ಶಾಂಪೂ ಮತ್ತು ಕಂಡಿಷನರ್ ಬಳಸಿ ತೊಳೆಯಿರಿ. ಈ ಕ್ರಮಗಳಿಂದ ತ್ವಚೆ ಹಾಗೂ ಕೇಶ ರಾಶಿಯಲ್ಲಿ ತೇವಾಂಶವು ಆರೋಗ್ಯಕರಾಗಿ ಇರುತ್ತದೆ. ಪೋಷಣೆಯನ್ನು ಅಧಿಕ ಗೊಳಿಸಲು ಲ್ಯಾವೆಂಡರ್, ಆರೋಮ್ಯಾಟಿಕ್ ಎಣ್ಣೆಗಳ ಕೆಲವು ಹನಿಗಳನ್ನು ಎಣ್ಣೆಯಲ್ಲಿ ಸೇರಿಸಿ. ಅವು ಉತ್ತಮ ಸುವಾಸನೆಯೊಂದಿಗೆ ಅಧಿಕ ಪೋಷಣೆಯನ್ನು ನೀಡುತ್ತವೆ.

9. ಹೊಟ್ಟು ನಿವಾರಕ ಶಾಂಪೂಗಳು

9. ಹೊಟ್ಟು ನಿವಾರಕ ಶಾಂಪೂಗಳು

ಹೊಟ್ಟು ನಿವಾರಕ ಶಾಂಪೂಗಳನ್ನು ಬಳಸುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅಂತಹ ಶಾಂಪೂಗಳಲ್ಲಿ ನೆತ್ತಿ ಹಾಗೂ ಕೇಶಗಳ ಬುಡಕ್ಕೆ ಅನ್ವಯಿಸಿ, 2-5 ನಿಮಿಷಗಳ ಕಾಲ ಇರಿಸಬೇಕು ಎಂದು ನಿರ್ದೇಶಿಸಲಾಗುವುದು. ಹಾಗಾಗಿ ಸೂಕ್ತ ರೀತಿಯ ಅನ್ವಯ ಕ್ರಮಗಳು ಹಾಗೂ ಪ್ರತಿ ಫಲಗಳ ಸೂಚನೆಯನ್ನು ಸರಿಯಾಗಿ ಗಮನಿಸಿ. ನಂತರ ಅದರ ಬಳಕೆಯನ್ನು ಮಾಡಿ. ಇಲ್ಲವಾದರೆ ಸಮಸ್ಯೆ ಹುಟ್ಟಿಕೊಳ್ಳಲು ಕಾರಣವಾಗುವ ಸಾಧ್ಯತೆಗಳಿರುತ್ತವೆ.

10. ಒತ್ತಡದಿಂದಲೂ ಹೊಟ್ಟು ಉಂಟಾಗುತ್ತದೆ

10. ಒತ್ತಡದಿಂದಲೂ ಹೊಟ್ಟು ಉಂಟಾಗುತ್ತದೆ

ತಲೆಹೊಟ್ಟಿನ ಸಮಸ್ಯೆಯು ತೀವ್ರವಾದ ಹೊಟ್ಟಿನ ಸಮಸ್ಯೆಯಿಂದ ಉಂಟಾಗುತ್ತದೆ ಎಂದು ಸಹ ಹೇಳಲಾಗುವುದು. ಜೊತೆಗೆ ಸೂಕ್ತ ಆರೈಕೆಯ ಕೊರತೆ, ಸ್ವಚ್ಛತೆ ಇಲ್ಲದೆ ಇರುವುದು ಮತ್ತು ಪೋಷಕಾಂಶಗಳ ಕೊರತೆಯಿಂದಲೂ ಉಂಟಾಗುತ್ತದೆ. ಹಾಗಾಗಿ ನಿರಾಳ ಮನಸ್ಸನ್ನು ಹೊಂದುವುದು, ನಿಮಿತವಾಗಿ ಕೇಶರಾಶಿಗಳನ್ನು ತೊಳೆದರ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದು. ನೆತ್ತಿಯ ಭಾಗಕ್ಕೆ ನಿಂಬೆ ರಸವನ್ನು ಅನ್ವಯಿಸಿ, ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ಆಗ ಸಮಸ್ಯೆಯು ನಿವಾರಣೆಯಾಗುತ್ತದೆ.

ಈ ಎಲ್ಲಾ ಸಲಹೆ ಹಾಗೂ ಎಚ್ಚರಿಕೆಯ ಕ್ರಮವನ್ನು ಅನುಸರಿಸಿ. ಚಳಿಗಾಲದಲ್ಲಿ ಉಂಟಾಗುವ ಹೊಟ್ಟಿನ ಸಮಸ್ಯೆಯಿಂದ ದೂರ ಇರಿ. ಆಗ ಕೇಶರಾಶಿಯು ಸೊಂಪಾಗಿ ಕಾಂತಿ ಹಾಗೂ ಆರೋಗ್ಯದಿಂದ ಕೂಡಿರುತ್ತದೆ.

English summary

How To Prevent Hair From Dandruff In Winter

Winter is that time of the year, when the fall in the temperature takes a serious toll on your health. Your skin for one becomes dry and dead skin cells start surfacing. This drying is not limited to the skin, it is also a common problem with the scalp. The dead cells from the scalp start forming tiny flakes and start falling off. So the white flakes on your shoulder in winter may not necessarily be snowflakes, they could be dandruff too!!
Story first published: Monday, December 23, 2019, 15:24 [IST]
X
Desktop Bottom Promotion