For Quick Alerts
ALLOW NOTIFICATIONS  
For Daily Alerts

ದಪ್ಪ ರೆಪ್ಪೆಗೂದಲುಗಳನ್ನು ಪಡೆಯಲು ನಿಂಬೆ ಸಿಪ್ಪೆ ಬಳಸಿ! ಹೇಗೆ ಇಲ್ಲಿ ನೋಡಿ

|

ದಪ್ಪವಾದ ಉದ್ದನೆಯ ರೆಪ್ಪೆಗೂದಲುಗಳು ನಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಹೆಚ್ಚಿನ ಮಹಿಳೆಯರು ಈ ರೆಪ್ಪೆಗೂದಲುಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಹಾಗಿದ್ದಾಗ ಆ ಕಣ್ಣಿನ ರೆಪ್ಪೆಯ ಕೂದಲುಗಳು ತೆಳುವಾಗಿ ಉದುರಲು ಪ್ರಾರಂಭವಾಗುತ್ತವೆ.

ಇದಕ್ಕೆ ಪರ್ಯಾಯವಾಗಿ ಇಂದು ಮಾರುಕಟ್ಟೆಯಲ್ಲಿ ಕೃತಕ ರೆಪ್ಪೆಕೂದಲುಗಳು, ಅನೇಕ ಉತ್ಪನ್ನಗಳು ಲಭ್ಯವಿದ್ದರೂ, ನೈಸರ್ಗಿಕ ರೆಪ್ಪೆಗಳಿಗೆ ಇರುವಷ್ಟು ಮಹತ್ವ ಈ ಕೃತಕ ರೆಪ್ಪೆಗಳಿಗಿಲ್ಲ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಆದ್ದರಿಂದ ಮನೆಯಲ್ಲಿ ಕಣ್ಣಿನ ರೆಪ್ಪೆಯ ಕೂದಲುಗಳನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಲಿಂಬೆ ಆರೋಗ್ಯ ಮಾತ್ರವಲ್ಲದೇ, ಸೌಂದರ್ಯ ಸ್ನೇಹಿಯೂ ಕೂಡ. ಆದರೆ ಇದೇ ಲಿಂಬೆ ಕಣ್ಣಿನ ರೆಪ್ಪೆಕೂದಲ ಬೆಳವಣಿಗೆಗೆ ಸಹಾಯ ಮಾಡುವುದು ಎಂಬುದನ್ನು ನೀವು ನಂಬಲೇಬೇಕು. ನಿಂಬೆ ಸಿಪ್ಪೆಯಲ್ಲಿ ಕಬ್ಬಿಣದ ಅಂಶ ಇರುವುದು. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಪೋಷಕಾಂಶವಾಗಿದೆ. ಹಾಗಂತ ಅದರ ರಸ ಇಲ್ಲಿ ಬಳಕೆಯಾಗುವುದಿಲ್ಲ, ಕಣ್ರೆಪ್ಪೆಗಳನ್ನು ದಪ್ಪವಾಗಿಸಲು, ರಸದ ಬದಲಿಗೆ ನಿಂಬೆ ಸಿಪ್ಪೆಗಳನ್ನು ಬಳಸಬೇಕಾಗುತ್ತದೆ. ನಿಂಬೆ ಸಿಪ್ಪೆ ಇರಲಿ ಅಥವಾ ಅದರ ರಸ ಇರಲಿ, ಅದನ್ನು ನೇರವಾಗಿ ಬಳಸಬೇಡಿ, ಅದನ್ನು ಯಾವುದೇ ಎಣ್ಣೆಯಲ್ಲಿ ಬೆರೆಸಿ ಅಥವಾ ಯಾವುದನ್ನಾದರೂ ದುರ್ಬಲಗೊಳಿಸುವ ಮೂಲಕ ಬಳಸುವುದು ಉತ್ತಮ.

ವಿಧಾನ -1 :

ವಿಧಾನ -1 :

ಒಂದು ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು 1 ಬೌಲ್ ಆಲಿವ್ ಎಣ್ಣೆಯಲ್ಲಿ ಚೆನ್ನಾಗಿ ಅದ್ದಿ 3-4 ದಿನಗಳವರೆಗೆ ಇಡಿ. ನಂತರ ಎಣ್ಣೆಯನ್ನು ಫಿಲ್ಟರ್ ಮಾಡಿ ಸಂಗ್ರಹಿಸಿ. ಪ್ರತಿ ರಾತ್ರಿ ಮಲಗುವ ಮೊದಲು, ಈ ಎಣ್ಣೆಯ ಹನಿಯನ್ನು ತೆಗೆದುಕೊಂಡು ನಿಮ್ಮ ಕಣ್ಣಿನ ರೆಪ್ಪೆಕೂದಲುಗಳನ್ನು ಮಸಾಜ್ ಮಾಡಿ. ನೀವು ಇದನ್ನು ನಿಯಮಿತವಾಗಿ ಮಾಡಿದಾಗ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೆನಪಿಡಿ, ಕಣ್ಣಿನೊಳಗೆ ಎಣ್ಣೆ ಹೋಗದಂತೆ ನೋಡಿಕೊಳ್ಳಿ.

ವಿಧಾನ -2:

ವಿಧಾನ -2:

ಅಲೋವೆರಾ ಜೆಲ್ ಅನ್ನು ನಿಂಬೆ ಸಿಪ್ಪೆಯ ಎಣ್ಣೆ ( ಲೆಮನ್ ಪೀಲ್ ಆಯಿಲ್ )ಯೊಂದಿಗೆ ಬೆರೆಸಿ ಗಾಳಿಯಾಡದ ಬಿಗಿಯಾದ ಬಾಟಲಿಯಲ್ಲಿ ಸಂಗ್ರಹಿಸಿ. ಈ ಜೆಲ್ ಅನ್ನು ನಿಮ್ಮ ರೆಪ್ಪೆಕೂದಲುಗಳಿಗೆ ನಿಯಮಿತವಾಗಿ ಬಳಸಿ. ನಿಂಬೆ ಸಿಪ್ಪೆ ಎಣ್ಣೆಯನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ನಿಮಗೆ ಲಭ್ಯವಿದೆ. ಇದನ್ನು ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುವುದರಿಂದ ರೆಪ್ಪೆಗೂದಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಅಲೋವರಾ ಜೆಲ್ ನಿಮ್ಮ ಕಣ್ಣುಗಳಿಗೆ ತಂಪಾದ ಭಾವ ನೀಡುವುದು.

ವಿಧಾನ- 3:

ವಿಧಾನ- 3:

ಒಂದು ಪಾತ್ರೆಯಲ್ಲಿ ವಿಟಮಿನ್ ಇ ಕ್ಯಾಪ್ಸುಲ್, ತೆಂಗಿನ ಎಣ್ಣೆ ಮತ್ತು ನಿಂಬೆ ಸಿಪ್ಪೆ ಎಣ್ಣೆಯನ್ನು ಬೆರೆಸಿ ಬಾಟಲಿಯಲ್ಲಿ ತುಂಬಿಸಿ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಪ್ರತಿದಿನ ರೆಪ್ಪೆಕೂದಲುಗಳಿಗೆ ಹಚ್ಚಿ. ವಿಟಮಿನ್ ಇ ನಿಮ್ಮ ಕೂದಲಿನ ಕೆರಾಟಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಒಂದು ರೀತಿಯ ಪ್ರೋಟೀನ್ ಆಗಿದೆ. ಜೊತೆಗೆ ತೆಂಗಿನೆಣ್ಣೆಯೂ ಕೂಡ ಕೂದಲಿಗೆ ತುಂಬಾ ಉತ್ತಮವಾಗಿದೆ.

ಇವುಗಳನ್ನು ಗಮನಿಸಿ:

ಇವುಗಳನ್ನು ಗಮನಿಸಿ:

ನಿಮ್ಮ ಕಣ್ಣುಗಳಿಗೆ ಮಸ್ಕರಾ ಅಥವಾ ಕಾಡಿಗೆ ಹಚ್ಚಿದ್ದರೆ, ರಾತ್ರಿ ಮಲಗುವ ಮುನ್ನ ಸ್ವಚ್ಛಗೊಳಿಸಲು ಮರೆಯದಿರಿ. ನೀವು ಹಾಗೆಯೇ ಮಲಗಿದರೆ ಇದು ರೆಪ್ಪೆಕೂದಲು ಉದುರಲು ಕಾರಣವಾಗಬಹುದು.

ಕೂದಲು ಸೀಳಾಗುವ ಅಪಾಯವಿರುವುದರಿಂದ ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಿ.

English summary

How to Grow Longer and Thicker Eyelashes with Lemon Peels in Kannada

Here we talking about How to grow longer and thicker eyelashes with lemon peels in kannada, read on
Story first published: Wednesday, July 14, 2021, 10:52 [IST]
X
Desktop Bottom Promotion