Just In
Don't Miss
- Automobiles
ಸಿಎನ್ಜಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಮಾರುತಿ ಸುಜುಕಿ
- News
ಉನ್ನಾವೋ ವೈದ್ಯಕೀಯ ಕಾಲೇಜಿಗೆ 5 ಕೋಟಿ ರೂ ದಂಡ ವಿಧಿಸಿದ ಸುಪ್ರೀಂಕೋರ್ಟ್
- Sports
ಐಎಸ್ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ
- Education
University Of Mysore Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Movies
ಬಿಗ್ಬಾಸ್ ಗೆ ಇನ್ನು ನಾಲ್ಕೇ ದಿನ: ಮನೆ ಹೇಗಿದೆ ಗೊತ್ತಾ?
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಳ್ಳಗಾದ ಕೂದಲನ್ನು ಮತ್ತೆ ಮಂದವಾಗಿಸಲು ಹರಳೆಣ್ಣೆ ಹೇಗೆ ಬಳಸಬೇಕು?
ಕೂದಲು ಮಂದವಾಗಿದ್ದರೆ ನೋಡಲು ತುಂಬಾ ಆಕರ್ಷಕ, ಆದರೆ ಅದೇ ಮಂದವಾದ ಕೂದಲು ಉದುರುಲಾರಂಭಿಸಿ ತುಂಬಾ ತೆಳ್ಳಗಾಗುತ್ತಿದೆಯೇ? ಪುನಃ ಆ ಮಂದ ಕೂದಲಿನ ಸೌಂದರ್ಯ ಮರಳಿ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ಷದೀರಾ? ಏಕೆ ಹರಳೆಣ್ಣೆ ಟ್ರೈ ಮಾಡಬಾರದು.
ಹೌದು ನಾವು ಕೂದಲು ಮಂದವಾಗಿ ಬೆಳೆಯಲು ದುಬಾರಿ ಬೆಲೆಕೊಟ್ಟು ಎಣ್ಣೆ ಕೊಂಡು ಬಳಸುತ್ತೇವೆ, ಆದರೆ ಹೆಚ್ಚೇನು ದುಬಾರಿ ಅಲ್ಲದ ಹರಳೆಣ್ಣೆ ಬಗ್ಗೆ ಯೋಚಿಸುವುದೇ ಇಲ್ಲ. ಆದರೆ ಹರಳೆಣ್ಣೆ ಕೂದಲು ಉದುರುವುದನ್ನು ತಡೆಗಟ್ಟುವುದು ಮಾತ್ರವಲ್ಲ ಕೂದಲು ಮಂದವಾಗಿ ಬೆಳೆಯುವಂತೆ ಮಾಡುತ್ತದೆ.

ಕೂದಲು ಮರಳಿ ಹುಟ್ಟಲು ಹರಳೆಣ್ಣೆ ತುಂಬಾ ಸಹಕಾರಿ
ಕೂದಲು ಉದುರುತ್ತಿದ್ದರೆ ಅದರಲ್ಲೂ ತಲೆಯ ಮೇಲ್ಬಾಗದಲ್ಲಿ ತುಂಬಾ ಕೂದಲು ಉದುರುತ್ತಿದ್ದರೆ ಬಕ್ಕ ತಲೆ ಉಂಟಾಗಬಹುದು. ಕೂದಲು ಉದುರುತ್ತಿದ್ದಾಗಲೇ ತಲೆ ಬುಡಕ್ಕೆ ಹರಳೆಣ್ಣೆ ಹಚ್ಚಿ ಆರೈಕೆ ಮಾಡಿದರೆ ಆ ಭಾಗದಲ್ಲಿ ಕೂದಲು ಹುಟ್ಟಲು ಸಹಕಾರಿಯಾಗುತ್ತದೆ.
ಅಲ್ಲದೆ ಕೂದಲು ತುಂಬಾ ತೆಳುವಾಗಿದ್ದವರೂ ಕೂಡ ಹರಳೆಣ್ಣೆ ಹಚ್ಚುತ್ತಿದ್ದರೆ ಕೆಲವು ತಿಂಗಳಿನಲ್ಲಿ ಕೂದಲು ಮಂದಾಗಿ ಬೆಳೆಯುವುದು.

ಬೇರೆ ಎಣ್ಣೆ ಹಚ್ಚುತ್ತಿದ್ದಂತೆ ಹರಳೆಣ್ಣೆ ಹಚ್ಚಲು ಸಾಧ್ಯವಿಲ್ಲ
ಶುದ್ಧವಾದ ಹರಲೆಣ್ಣೆ ತುಂಬಾ ಅಂಟು-ಅಂಟಾಗಿರುತ್ತದೆ, ಆದ್ದರಿಂದ ಈ ಎಣ್ಣೆ ತಲೆಗೆ ಹಾಕಿ ತೆಂಗಿನೆಣ್ಣೆ ಹಾಕಿ ಮಸಾಜ್ ಮಾಡುವಂತೆ ಮಾಡಲು ಸಾಧ್ಯವಿಲ್ಲ.
ಇದನ್ನು ಕೂದಲು ಉದುರುತ್ತಿರವ ಭಾಗಕ್ಕೆ ಸರಿಯಾಗಿ ಹಾಕಬೇಕು. ಹೀಗೆ ಹಾಕಲು ಸ್ಪೂನ್ ಅಥವಾ ಡ್ರಾಪರ್ ಬಳಸಬಹುದು. ಅಲ್ಲದೆ ತಲೆಗೆ ಹಚ್ಚಿ ಮಸಾಜ್ ಮಾಡುವುದಾದರೆ ತೆಂಗಿನೆಣ್ಣೆ ಜೊತೆ ಮಿಶ್ರ ಮಾಡಿ. ಇನ್ನು ಭೃಂಗರಾಜ ಎಣ್ಣೆ ಜೊತೆ ಬೆರೆಸಿ ಹಾಕಿದರೆ ಮತ್ತಷ್ಟು ಒಳ್ಳೆಯದು.

ಎಷ್ಟು ಪ್ರಮಾಣದಲ್ಲಿ ಬಳಸಬೇಕು?
ಸಾಮಾನ್ಯವಾಗಿ ಹರಳೆಣ್ಣೆಯನ್ನು 1:2 ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು. ಒಂದು ಕಪ್ ಹರಳೆಣ್ಣೆ ಇದ್ದರೆ 2 ಕಪ್ ತೆಂಗಿನೆಣ್ಣೆ ಅಥವಾ ಭೃಂಗರಾಜ ಎಣ್ಣೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ.
ಅದರಲ್ಲೂ ತೆಂಗಿನೆಣ್ಣೆಗೆ ಮೆಂತೆ ಬೀಜ, ಕತ್ತರಿಸಿದ ಈರುಳ್ಳಿ, ಕರಿ ಬೇವಿನ ಎಲೆ ಹಾಕಿ ಕುದಿಸಿ ಒಂದು ಗಂಟೆ ಬಿಡಿ. ನಂತರ ಹರಳೆಣ್ಣೆ ಜೊತೆ ಮಿಶ್ರ ಮಾಡಿ, ತಲೆಗೆ ಹಚ್ಚಿ. ಎಣ್ಣೆ ಸ್ವಲ್ಪ ಬಿಸಿಯಿರಲಿ, ನಂತರ ತಲೆಗೆ ಹಚ್ಚಿ ಟವಲ್ ಅನ್ನು ಬಿಸಿ ನೀರಿನಲ್ಲಿ ಒದ್ದೆ ಮಾಡಿ ಹಿಂಡಿ ತಲೆಗೆ ಹಚ್ಚಿ ಒಂದು ಗಂಟೆ ಬಿಡಿ, ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.

ವಾರದಲ್ಲಿ ಎಷ್ಟು ಬಾರಿ ಹಚ್ಚಬೇಕು?
3 ದಿನಕ್ಕೊಮ್ಮೆ ಈ ರೀತಿ ಮಾಡುತ್ತಿದ್ದರೆ ತುಂಬಾನೇ ಒಳ್ಳೆಯದು. ಸಮಯ ಇಲ್ಲದವರೂ ವಾರಕ್ಕೆ ಒಂದು ಬಾರಿಯಾದರೂ ಮಾಡಿದರೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ಇನ್ನು ಹರಳೆಣ್ಣೆ ತುಂಬಾ ಅಂಟು-ಅಂಟಾಗಿರುವುದರಿಂದ ಈ ಜಿಡ್ಡು ಹೋಗಲಾಡಿಸಲು ಶ್ಯಾಂಪೂ ಬೇಕೆ-ಬೇಕು, ಬಳಸುವ ಶ್ಯಾಂಪೂ ಮೈಲ್ಡ್ ಆಗಿರಲಿ, ಸೀಗೇಪುಡಿ ಬಳಸಿದರೆ ಮತ್ತಷ್ಟು ಒಳ್ಳೆಯದು.