For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿಯೇ ರೆಪ್ಪೆಕೂದಲು ಬೆಳೆಸಲು ಈ ಮನೆಮದ್ದುಗಳನ್ನು ಬಳಸಿ

|

ಹೆಣ್ಣಿನ ಮುಖದ ಸೌಂದರ್ಯಕ್ಕೆ ರೆಪ್ಪೆಗೂದಲು ಬಹಳ ಮುಖ್ಯ. ಉದ್ದನೆಯ ಹಾರಾಡುವ ರೆಪ್ಪೆಗೂದಲುಗಳನ್ನು ನೀವು ಪಡೆದಿದ್ದರೆ ನಿಮ್ಮ ಆಕರ್ಷಣೆ ಇನ್ನಷ್ಟು ಹೆಚ್ಚುತ್ತದೆ ಹಾಗೂ ನಿಮ್ಮ ಸೌಂದರ್ಯದ ಕೇಂದ್ರಬಿಂದುವೇ ಕಣ್ಣಿನ ರೆಪ್ಪೆ ಆಗಿರುತ್ತವೆ. ಆದರೆ, ಪ್ರತಿಯೊಬ್ಬರಿಗೂ ಅಂತಹ ಸುಂದರವಾದ ಉದ್ದನೆಯ ರೆಪ್ಪೆಗೂದಲುಗಳು ಇರುವುದಿಲ್ಲ.

Home Remedies To Grow Long Eyelashes in kannada

ಆದರೆ ಉದ್ದನೆಯ ಹಾರಾಡುವ ರೆಪ್ಪೆಗೂದಲುಗಳನ್ನು ನೀವುಸಹ ಪಡೆಯಬಹುದು, ಅದುವೆ ಯಾವುದೇ ರಾಸಾಯನಿಕ ಬಳಸದೇ ನೈಸರ್ಗಿಕ ವಿಧಾನದ ಮೂಲಕ. ಸುಂದರವಾದ, ಉದ್ದವಾದ, ಆಕರ್ಷಕ ಮತ್ತು ಆರೋಗ್ಯಕರ ರೆಪ್ಪೆಗೂದಲುಗಳನ್ನು ನೈಸರ್ಗಿಕವಾಗಿಯೇ ನಿಮ್ಮದಾಗಿಸಿಕೊಳ್ಳಲು ಈ ಕೆಳಗಿನ ಮನೆಮದ್ದುಗಳನ್ನು ನಿಯಮಿತವಾಗಿ ಬಳಸಿ.

ಹರಳೆಣ್ಣೆ

ಹರಳೆಣ್ಣೆ

ಕೂದಲ ಸಮೃದ್ಧ ಬೆಳವಣಿಗೆಗೆ ಹರಳೆಣ್ಣೆ ಅದ್ಭುತ ಮನೆಮದ್ದು. ಆದ್ದರಿಂದ, ಪ್ರತಿದಿನ ರಾತ್ರಿ ಮಲಗುವ ಮೊದಲು ನಿಮ್ಮ ಸ್ವಲ್ಪ ಹರಳೆಣ್ಣೆಯನ್ನು ನಿಮ್ಮ ರೆಪ್ಪೆಗೂದಲುಗಳಿಗೆ ಹಚ್ಚಿ. ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ನಿಧಾನವಾಗಿ ತೊಳೆಯಿರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಸಹ ಕೂದಲು ಬೆಳೆಯಲು ಪೂರಕವಾಗಿ ಸಹಾಯ ಮಾಡುವ ಎಣ್ಣೆಯಾಗಿದೆ. ಪ್ರತಿ ರಾತ್ರಿ ನಿಮ್ಮ ರೆಪ್ಪೆಗೂದಲುಗಳಿಗೆ ಆಲಿವ್ ಎಣ್ಣೆಯನ್ನು ನಯವಾಗಿ ಹಚ್ಚಿ ಮತ್ತು ಬೆಳಿಗ್ಗೆ ಕಾಟನ್‌ನಿಂದ ಒರೆಸಿ ಫೇಸ್ ವಾಶ್‌ನಿಂದ ತೊಳೆಯಿರಿ. ಕನಿಷ್ಟ ಒಂದು ತಿಂಗಳು ನಿತ್ಯ ಇದನ್ನೇ ಪುನರಾವರ್ತಿಸಿ.

ಅಲೋವೆರಾ ಲೋಳೆರಸ

ಅಲೋವೆರಾ ಲೋಳೆರಸ

ಅಲೋವೆರಾ ಲೋಳೆರಸ ಕೂದಲ ಪೋಷಣೆಯ ಮತ್ತೊಂದು ಮೂಲವಾಗಿದೆ. ಇದು ನಿಮ್ಮ ರೆಪ್ಪೆಗೂದಲುಗಳ ಬೆಳವಣಿಗೆಗೆ ಬಳಸಿದಾಗ, ಕೂದಲನ್ನು ಪೋಷಿಸುತ್ತದೆ, ತೇವಗೊಳಿಸುತ್ತದೆ ಮತ್ತು ಅವು ಬೆಳೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಇದು ಎಲ್ಲಾ ಕಲ್ಮಶಗಳು ಮತ್ತು ಧೂಳಿನ ವಿರುದ್ಧ ಹೋರಾಡುತ್ತದೆ ಮತ್ತು ಯಾವುದೇ ನಿಮ್ಮ ರೆಪ್ಪೆಗೂದಲುಗಳು ಉದ್ದವಾಗಲು ನೆರವಾಗುತ್ತದೆ.

ವಿಟಮಿನ್ ಇ

ವಿಟಮಿನ್ ಇ

ವಿಟಮಿನ್ ಇ ಕೂದಲ ಆರೈಕೆಗೆ ಅತ್ಯುತ್ತಮ ಔಷಧವಾಗಿದೆ. ಇದು ಯಾವುದೇ ರಾಸಾಯನಿಕ ಇರದ ಔಷಧವಾಗಿದೆ. ಎಲ್ಲಾ ಮೆಡಿಕಲ್‌ ಶಾಪ್‌ಗಳಲ್ಲಿ ಲಭ್ಯವಿರುವ ವಿಟಮಿನ್ ಇ ಕ್ಯಾಪ್ಸುಲ್ ತೆಗೆದುಕೊಂಡು ಅದನ್ನು ನಿಮ್ಮ ಕಣ್ಣಿಗೆ ಹಚ್ಚಿಕೊಳ್ಳಿ. ಅದರೆ, ನೆನಪಿಡಿ ಅತಿಯಾಗಿ ಅನ್ವಯಿಸದಿರಿ. ಇದು ಕೂದಲಿಗೆ ಉತ್ತಮವಾದ ಹೊಳಪನ್ನು ನೀಡುವುದರ ಜತೆಗೆ, ನಿಮ್ಮ ರೆಪ್ಪೆಗೂದಲುಗಳ ಬೆಳವಣಿಗೆ ಸಹ ವೇಗಗೊಳ್ಳುತ್ತದೆ.

ಮಸಾಜ್/ ತೈಲಗಳು

ಮಸಾಜ್/ ತೈಲಗಳು

ನಾವು ನಿತ್ಯ ಒಂದಿಲ್ಲೊಂದು ಕಾರಣಗಳಿಂದ ಹೊರಗೆ ಓಡಾಡುತ್ತಿರುತ್ತೇವೆ, ಈ ವೇಳೆ ರೆಪ್ಪೆಗಳ ಮೇಲೆ ಸೂಕ್ಷಾತಿ ಸೂಕ್ಷ್ಮ ಕಣಗಳು ಬೀಳಬಹುದು, ಇದನ್ನು ಮುಖ ತೊಳೆದರೂ ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ಐಸ್, ಶಿಯಾ ಬೆಣ್ಣೆ ಅಥವಾ ಅಲೋವೆರಾದೊಂದಿಗೆ ರೆಪ್ಪೆಗಳನ್ನು ನಯವಾಗಿ ಮಸಾಜ್ ಮಾಡಲು ಮರೆಯದಿರಿ. ಇದು ಕಣ್ಣುರೆಪ್ಪೆಗಳ ಕೊಳಕು ಮತ್ತು ಸೋಂಕುಗಳನ್ನು ತೆಗೆದುಹಾಕುತ್ತದೆ.

ಕಣ್ಣಿನ ರೆಪ್ಪೆಗಳ ಬೆಳವಣಿಗೆಗೆ ಅದ್ಭುತವಾದ ಅನೇಕ ಸಾರಭೂತ ತೈಲಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ರೋಸ್ಮರಿ, ಲ್ಯಾವೆಂಡರ್ ಮತ್ತು ಇತರ ಸಾರಭೂತ ತೈಲಗಳು ರೆಪ್ಪೆಗೂದಲುಗಳನ್ನು ಪೋಷಿಸಲು ಮತ್ತು ರಕ್ಷಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರ ಸೇವಿಸಿ

ರೆಪ್ಪೆ ಕೂದಲ ಬೆಳವಣಿಗೆಗೆ ಆರೋಗ್ಯಕರ ಆಹಾರ ಬಹಳ ಮುಖ್ಯ. ಇದು ಕೇವಲ ರೆಪ್ಪೆ ಮಾತ್ರವಲ್ಲದೆ, ನಿಮ್ಮ ಚರ್ಮ ಮತ್ತು ಕಣ್ಣುಗಳ ಮೇಲೆ ಸಹ ಪ್ರತಿಫಲಿಸುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳು ಇರುವಂತೆ ಕಾಳಜಿವಹಿಸಿ. ಇದು ಹೊಳೆಯುವ ಚರ್ಮ ಮತ್ತು ನಿಮ್ಮ ಕಣ್ರೆಪ್ಪೆಗಳು ಸಹ ಬೆಳೆಯುತ್ತವೆ.

ತಾತ್ಕಾಲಿಕ ಕಣ್ಣಿನ ರೆಪ್ಪೆಗಳನ್ನು ಬಳಸಬೇಡಿ

ತಾತ್ಕಾಲಿಕ ಕಣ್ಣಿನ ರೆಪ್ಪೆಗಳನ್ನು ಬಳಸಬೇಡಿ

ಹೆಚ್ಚುವರಿ ಕಣ್ಣಿನ ರೆಪ್ಪೆಗಳನ್ನು ಕೇವಲ ತಾತ್ಕಾಲಿಕ ಪರಿಹಾರವಾಗಿದೆ, ಆದರೆ ಇದು ಶಾಶ್ವತವಲ್ಲ. ಅಷ್ಟೇ ಅಲ್ಲದೆ, ಇವುಗಳು ನಿಮ್ಮ ರೆಪ್ಪೆಗೂದಲುಗಳ ಬೆಳವಣಿಗೆಗೆ ಅಡ್ಡಿಯಾಗುತ್ತವೆ ಮತ್ತು ಆದ್ದರಿಂದ ನಿಮ್ಮ ನೈಸರ್ಗಿಕ ರೆಪ್ಪೆಗಳು ತುಂಬಾ ಮೃದುವಾಗುತ್ತದೆ ಮತ್ತು ಸುಲಭವಾಗಿ ಉದುರುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳಲ್ಲಿ ಬಯೋಟಿನ್ ಮತ್ತು ವಿಟಮಿನ್ ಬಿ ಇದ್ದು, ಇದು ನಿಮ್ಮ ಕೂದಲು ಮತ್ತು ರೆಪ್ಪೆಗೂದಲುಗಳ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ರೆಪ್ಪೆಗೂದಲುಗಳನ್ನು ಉದ್ದವಾಗಿಸುವುದಲ್ಲದೆ ಅವುಗಳು ದಪ್ಪ ಮತ್ತು ಹೊಳಪನ್ನು ನೀಡುತ್ತದೆ.

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿಯ ಪ್ರಯೋಜನಗಳ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಇದು ನಿಮ್ಮ ರೆಪ್ಪೆಗೂದಲುಗಳನ್ನು ಸಹ ಪೋಷಿಸುತ್ತದೆ ಎಂದರೆ ಅಚ್ಚರಿಪಡಬೇಕಿಲ್ಲ. ಕಣ್ಣಿನ ರೆಪ್ಪೆ ಬಲಪಡಿಸುವಬ ಜತೆಗೆ ಅವುಗಳನ್ನು ಉದ್ದವಾಗಿಸುತ್ತದೆ ಮತ್ತು ಹೊಳೆಯುವಂತೆ ಸಹ ಮಾಡುತ್ತದೆ.

English summary

Home Remedies To Grow Long Eyelashes in kannada

Here we are discussing about Home Remedies To Grow Long Eyelashes in kannada. Eyelashes are very important for your beauty. If you have got those long fluttering eyelashes, then your eyes will be the center of attention. Read more.
Story first published: Thursday, September 24, 2020, 15:22 [IST]
X
Desktop Bottom Promotion