For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲಿನ ಸಮಸ್ಯೆಗೆ ತುಪ್ಪ ಮಾಡಲಿದೆ ಮ್ಯಾಜಿಕ್!

|

ಭಾರತೀಯ ಪಾಕವಿಧಾನಗಳಲ್ಲಿ ತುಪ್ಪವೂ ಪ್ರಧಾನ ಸ್ಥಾನ ಪಡೆದಿದೆ. ಅಷ್ಟೇ ಅಲ್ಲ, ಇದು ಆಯುರ್ವೇದದ ಅತ್ಯಂತ ಅಮೂಲ್ಯವಾದ ಆಹಾರಗಳಲ್ಲಿ ಒಂದಾಗಿದೆ. ತುಪ್ಪವೂ ನಿಮ್ಮ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುವುದಲ್ಲದೆ ಇತರ ಆರೋಗ್ಯ, ಚರ್ಮ ಮತ್ತು ಕೂದಲಿನ ಪ್ರಯೋಜನಗಳನ್ನು ನೀಡುತ್ತದೆ.

ಈ ದಿನಗಳಲ್ಲಿ ನಿಮ್ಮ ಕೂದಲಿಗೆ ಹಾನಿಕಾರಕವಾದ ಅಂಶಗಳು ಸಾಕಷ್ಟಿವೆ. ಅದು ಮಾಲಿನ್ಯವಾಗಿರಲಿ ಅಥವಾ ಕೂದಲ ರಕ್ಷಣೆಗೆ ಬಳಸುವ ರಾಸಾಯನಿಕಯುಕ್ತ ಉತ್ಪನ್ನಗಳಾಗಿರಲಿ ಒಂದಲ್ಲ ಒಂದು ರೀತಿಯಲ್ಲಿ ಕೂದಲ ಆರೋಗ್ಯವನ್ನು ಕೆಡಿಸುತ್ತವೆ. ಇಂತಹ ಸಂಮಯದಲ್ಲಿ ನೀವು ನಿಮ್ಮ ಉತ್ಪನ್ನವನ್ನು ಸಾವಯವಕ್ಕೆ ಬದಲಾಯಿಸಲು ಬಯಸಿದರೆ, ನೀವು ಆರಿಸಬೇಕಾದ ಸಾಮಾಗ್ರಿ ತುಪ್ಪ. ಹಾಗಾದರೆ ಬನ್ನಿ, ಈ ನೆಚ್ಚಿನ ಭಾರತೀಯ ಆಹಾರದ ಕೂದಲಿನ ಪ್ರಯೋಜನಗಳನ್ನು ನೋಡೋಣ.

ಕೂದಲು ಬೆಳವಣಿಗೆಗೆ ತುಪ್ಪದ ಮಸಾಜ್:

ಕೂದಲು ಬೆಳವಣಿಗೆಗೆ ತುಪ್ಪದ ಮಸಾಜ್:

ನಿಮ್ಮ ಕೂದಲು ನೈಸರ್ಗಿಕವಾಗಿ ಬೆಳೆಯಲು ಸಹಾಯ ಮಾಡುವ ಮಾರ್ಗಗಳನ್ನು ಹುಡುಕುತ್ತಿರುವಿರಾ? ಹಾಗಾದರೆ ತುಪ್ಪ ನಿಮ್ಮ ಆಯ್ಕೆಯಾಗಲಿ. ನಿಮ್ಮ ಕೂದಲಿಗೆ ಬಿಸಿ ತುಪ್ಪವನ್ನು ಮಸಾಜ್ ಮಾಡುವುದರಿಂದ ನಿಮ್ಮ ನೆತ್ತಿಯಲ್ಲಿ ನಯವಾದ ರಕ್ತ ಪರಿಚಲನೆ ಸಾಧ್ಯವಾಗುತ್ತದೆ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಆರೋಗ್ಯಕರ ಕೊಬ್ಬುಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ನೆತ್ತಿಯನ್ನು ಪೋಷಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.

ತುಪ್ಪ ನೈಸರ್ಗಿಕ ಹೇರ್ ಕಂಡಿಷನರ್:

ತುಪ್ಪ ನೈಸರ್ಗಿಕ ಹೇರ್ ಕಂಡಿಷನರ್:

ತುಪ್ಪವು ಉತ್ಕರ್ಷಣ ನಿರೋಧಕಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇವೆರಡೂ ನೆತ್ತಿಗೆ ಸುಲಭವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಇದು ಆಳವಾದ ಕಂಡೀಷನಿಂಗ್ ಮತ್ತು ಒಣ ಮತ್ತು ಹಾನಿಗೊಳಗಾದ ಕೂದಲನ್ನು ಸರಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ಕೂದಲಿಗೆ ತುಪ್ಪ ಹಚ್ಚಿ ಶವರ್ ಕ್ಯಾಪ್ ನಿಂದ ಮುಚ್ಚಿ. ರಾತ್ರಿಯಿಡೀ ಬಿಟ್ಟು ಬೆಳಿಗ್ಗೆ ಸಾಮಾನ್ಯ ನೀರಿನಿಂದ ತೊಳೆಯಿರಿ.

ತುಪ್ಪದೊಂದಿಗೆ ಕೂದಲು ವಿನ್ಯಾಸವನ್ನು ಮರುಸ್ಥಾಪಿಸಿ:

ತುಪ್ಪದೊಂದಿಗೆ ಕೂದಲು ವಿನ್ಯಾಸವನ್ನು ಮರುಸ್ಥಾಪಿಸಿ:

ಕೂದಲಿನ ಬಣ್ಣಗಳಿಂದ ಹಿಡಿದು ಸ್ಟೈಲಿಂಗ್‌ವರೆಗೆ, ಜನರು ಇಂದು ನಿಮ್ಮ ಕೂದಲಿಗೆ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿ ಉಂಟುಮಾಡುವ ಸಾಕಷ್ಟು ಪ್ರಯೋಗಗಳಲ್ಲಿ ತೊಡಗುತ್ತಾರೆ. ಈ ಪ್ರಕ್ರಿಯೆಯಲ್ಲಿ, ಕೂದಲು ತನ್ನ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತದೆ, ಅದನ್ನು ಪುನಃಸ್ಥಾಪಿಸಲು ಕಷ್ಟವಾಗುತ್ತದೆ ಆದರೆ ತುಪ್ಪ ನಿಮಗೆ ಸಹಾಯ ಮಾಡುತ್ತದೆ. ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ, ನಿಮ್ಮ ನೆತ್ತಿ ಮತ್ತು ಕೂದಲಿಗೆ ಉಜ್ಜಿಕೊಳ್ಳಿ. ಅದನ್ನು ಕೆಲವು ಗಂಟೆಗಳ ಕಾಲ ಬಿಟ್ಟು ಶಾಂಪೂ ಬಳಸಿ ತೊಳೆಯಿರಿ. ಪರಿಣಾಮಕಾರಿ ಫಲಿತಾಂಶಗಳನ್ನು ನೋಡಲು ವಾರಕ್ಕೆ ಎರಡು ಬಾರಿ ಇದನ್ನು ಮಾಡಿ.

ಸ್ಪ್ಲಿಟ್ ಕೂದಲನ್ನು ಕಡಿತಗೊಳಿಸಲು ತುಪ್ಪ:

ಸ್ಪ್ಲಿಟ್ ಕೂದಲನ್ನು ಕಡಿತಗೊಳಿಸಲು ತುಪ್ಪ:

ಸ್ಪ್ಲಿಟ್ ಹೇರ್ ಗೆ ಕಾರಣವಾಗುವ ಒಂದು ಪ್ರಾಥಮಿಕ ಕಾರಣವೆಂದರೆ ಅತಿಯಾದ ಸ್ಟೈಲಿಂಗ್. ಆದರೆ ತುಪ್ಪವು ನೈಸರ್ಗಿಕವಾಗಿ ಅಪೌಷ್ಟಿಕತೆಯಿಂದ ಕೂಡಿರುವ ಸ್ಪ್ಲಿಟ್ ಕೂದಲನ್ನು ಪೋಷಿಸುತ್ತದೆ. ವಿಟಮಿನ್ ಎ, ಡಿ, ಕೆ 2 ಮತ್ತು ಇ, ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿರುವ ತುಪ್ಪ ನಿಮ್ಮ ಕೂದಲಿಗೆ ಪ್ರಯೋಜನಕಾರಿ. ನೀವು ಮಾಡಬೇಕಾಗಿರುವುದು ಇಷ್ಟೇ, ಸ್ವಲ್ಪ ತುಪ್ಪವನ್ನು ಬೆಚ್ಚಗಾಗಿಸಿ ಮತ್ತು ಅದನ್ನು ನಿಮ್ಮ ಸ್ಪ್ಲಿಟ್ ತುದಿಗಳಿಗೆ ನೇರವಾಗಿ ಅನ್ವಯಿಸಿ. ಒಂದು ಗಂಟೆಯ ನಂತರ ಸೌಮ್ಯವಾದ ಶಾಂಪೂ ಮತ್ತು ತಣ್ಣೀರಿನಿಂದ ತೊಳೆಯಿರಿ.

ಫ್ರಿಜಿ ಹೇರ್ ತಡೆಯಲು ತುಪ್ಪ ಬಳಸಿ:

ಫ್ರಿಜಿ ಹೇರ್ ತಡೆಯಲು ತುಪ್ಪ ಬಳಸಿ:

ಫ್ರಿಜಿ ಕೂದಲಾಗುವುದು ನಾವೆಲ್ಲರೂ ತಪ್ಪಿಸಲು ಬಯಸುವ ಕಾರ್ಯವಾಗಿದೆ. ಫ್ರಿಜಿ ಕೂದಲು ಒಡೆಯುವಿಕೆ ಮತ್ತು ತೆಳುವಾಗುವುದಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಅವುಗಳಿಗೆ ನೈಸರ್ಗಿಕ ವಿಧಾನದಿಂದ ಚಿಕಿತ್ಸೆ ನೀಡುವುದು ಉತ್ತಮ. ತುಪ್ಪ ನಿಮಗೆ ಫ್ರಿಜ್ ಮತ್ತು ಒರಟುತನವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆರ್ಧ್ರಕ ಗುಣಗಳನ್ನು ಹೊಂದಿರುವ ತುಪ್ಪ ನಿಮ್ಮ ಕೂದಲಿನ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅದನ್ನು ನಯವಾದ, ಹೊಳೆಯುವಂತೆ ಮಾಡುತ್ತದೆ.

English summary

Ghee For Hair Care: How To Use Ghee For Hair Problems

Here we told about Ghee for hair care: How to use ghee for hair problems, read on
X
Desktop Bottom Promotion