For Quick Alerts
ALLOW NOTIFICATIONS  
For Daily Alerts

ಕೂದಲುದುರುವಿಕೆ ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಹೇರ್ ಮಾಸ್ಕ್ ಗಳು

|

ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಅನೇಕ ಮಹಿಳೆಯರನ್ನು ಕಾಡುವ ಸಮಸ್ಯೆಗಳಲ್ಲಿ ಒಂದಾಗಿದೆ. ಒತ್ತಡ, ಹಾರ್ಮೋನುಗಳ ಬದಲಾವಣೆ, ಕೂದಲಿಗೆ ಬಣ್ಣ ಮಾಡುವುದು, ಅತಿಯಾದ ಸ್ಟೈಲಿಂಗ್, ಖಿನ್ನತೆ ಮತ್ತು ಅನಾರೋಗ್ಯಕರ ಆಹಾರಕ್ರಮವು ಈ ಸಮಸ್ಯೆಗೆ ಕಾರಣಗಳಾಗಿವೆ. ಕಾರಣ ಏನೇ ಇರಲಿ, ಅನೇಕ ಮಹಿಳೆಯರು ಅದರಿಂದ ಹೆಣಗಾಡುತ್ತಿರುವುದಂತೂ ಸತ್ಯ. ಅವರಿಗಾಗಿ ನಾವಿಂದು ಸಹಾಯ ಮಾಡಲಿದ್ದೇವೆ.
ಸ್ನಾನಗೃಹದ ಚರಂಡಿಯಲ್ಲಿ ಸಿಲುಕಿರುವ ಕೂದಲಿನ ರಾಶಿಯನ್ನು ನೋಡುವ ಭೀತಿಯನ್ನು ತೊಡೆದುಹಾಕಲು, ನೀವು ಪ್ರಯತ್ನಿಸಬಹುದಾದ ಕೆಲವು ಹೇರ್ ಮಾಸ್ಕ್‌ಗಳು ಇಲ್ಲಿವೆ.

ಮೊಟ್ಟೆ ಮತ್ತು ಹಾಲಿನ ಹೇರ್ ಮಾಸ್ಕ್:

ಮೊಟ್ಟೆ ಮತ್ತು ಹಾಲಿನ ಹೇರ್ ಮಾಸ್ಕ್:

ಮೊಟ್ಟೆಯಲ್ಲಿ ಪ್ರೋಟೀನ್ ಹೇರಳವಾಗಿದ್ದು, ಕೂದಲು ಪೋಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲಿನ ಪ್ರಮಾಣವನ್ನು ಹೆಚ್ಚಿಸಲು ಹಾಲು ಹೆಸರುವಾಸಿಯಾಗಿದೆ.

ಹೇಗೆ ಬಳಸುವುದು: ಮಾಸ್ಕ್ ತಯಾರಿಸಲು, 1 ಮೊಟ್ಟೆ, 1 ಕಪ್ ಹಾಲು, ಎರಡು ಚಮಚ ನಿಂಬೆ ರಸ ಮತ್ತು ಕೆಲವು ಹನಿ ಸಾರಭೂತ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಸಮವಾಗಿ ಹಚ್ಚಿ. ನಿಮ್ಮ ನೆತ್ತಿಯನ್ನು ಮುಚ್ಚಿ, ೨೦ ನಿಮಿಷಗಳ ಕಾಲ ಬಿಡಿ, ನಂತರ ತಣ್ಣಿರಿನಿಂದ ತೊಳೆಯಿರಿ.

ಮೊಸರು ಮತ್ತು ಆಲಿವ್ ಆಯಿಲ್ ಹೇರ್ ಮಾಸ್ಕ್:

ಮೊಸರು ಮತ್ತು ಆಲಿವ್ ಆಯಿಲ್ ಹೇರ್ ಮಾಸ್ಕ್:

ಮೊಸರು ಕೂದಲಿನ ಹಾನಿ ಮತ್ತು ಬೋಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ . ಇದು ಕೂದಲನ್ನು ತೇವಗೊಳಿಸಿ, ಕೂದಲನ್ನು ಸದೃಡಗೊಳಿಸುತ್ತದೆ.

ಹೇಗೆ ಬಳಸುವುದು: ಒಂದು ಬಟ್ಟಲಿನಲ್ಲಿ 1 ಕಪ್ ಮೊಸರು ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಕೂಡ ಸೇರಿಸಬಹುದು. ಇವುಗಳನ್ನು ಚೆನ್ನಾಗಿ ಬೆರೆಸಿ, ನಿಮ್ಮ ಕೂದಲಿನ ಬೇರುಗಳಿಗೆ ಹಚ್ಚಿ. ಇದನ್ನು 15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಅವಕಾಡೊ ಮತ್ತು ನುಗ್ಗೆಕಾಯಿ ಸೊಪ್ಪಿನ ಹೇರ್ ಮಾಸ್ಕ್:

ಅವಕಾಡೊ ಮತ್ತು ನುಗ್ಗೆಕಾಯಿ ಸೊಪ್ಪಿನ ಹೇರ್ ಮಾಸ್ಕ್:

ಕೂದಲು ಉದುರುವಿಕೆಗೆ ಒಂದು ಪ್ರಮುಖ ಕಾರಣವೆಂದರೆ ಹಾರ್ಮೋನುಗಳ ಅಸಮತೋಲನ. ನುಗ್ಗೆಕಾಯಿಯ ಎಲೆಗಳು ಹಾರ್ಮೋನ್ ಸಮತೋಲನ ಮತ್ತು ವಿಟಮಿನ್ ಕೊರತೆ ನಿವಾರಿಸಲು ಸಹಾಯ ಮಾಡುತ್ತದೆ. ಆವಕಾಡೊದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಬಿ, ನಿಯಾಸಿನ್, ಕಬ್ಬಿಣ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಹೇಗೆ ಬಳಸುವುದು: 1 ಚಮಚ ನುಗ್ಗೆಸೊಪ್ಪಿನ ಪುಡಿ, ¼ ಆವಕಾಡೊ, ಒಂದು ಚಮಚ ಆಲಿವ್ ಎಣ್ಣೆ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ. ನಿಮ್ಮ ನೆತ್ತಿಯ ಮೇಲೆ ಮಿಶ್ರಣವನ್ನು ಹಚ್ಚಿ. ತೊಳೆಯುವ ಮೊದಲು 10 ನಿಮಿಷಗಳ ಕಾಲ ಕುಳಿತುಕುಳ್ಳಿ.

ಈರುಳ್ಳಿ ಮತ್ತು ತೆಂಗಿನೆಣ್ಣೆ ಹೇರ್ ಮಾಸ್ಕ್:

ಈರುಳ್ಳಿ ಮತ್ತು ತೆಂಗಿನೆಣ್ಣೆ ಹೇರ್ ಮಾಸ್ಕ್:

ತೆಂಗಿನ ಎಣ್ಣೆಯಲ್ಲಿ ಉರಿಯೂತದ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಈರುಳ್ಳಿ ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದ್ದು ಅದು ಕೂದಲು ಉದುರುವುದನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೇಗೆ ಬಳಸುವುದು: ಒಂದು ಕಪ್ ನಲ್ಲಿ ಸ್ವಲ್ಪ ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. ಮಿಶ್ರಣದಲ್ಲಿ ಚಹಾ ಮರದ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಬೆರಳುಗಳನ್ನು ಬಳಸಿ ಕೂದಲನ್ನು ಮಸಾಜ್ ಮಾಡಿ. ಅದನ್ನು ತೊಳೆಯುವ ಮೊದಲು ಸುಮಾರು 30 ನಿಮಿಷಗಳ ಕಾಲ ಬಿಡಿ.

ಮೆಂತ್ಯ ಮತ್ತು ಮೊಸರು ಹೇರ್ ಮಾಸ್ಕ್:

ಮೆಂತ್ಯ ಮತ್ತು ಮೊಸರು ಹೇರ್ ಮಾಸ್ಕ್:

ಮೆಂತ್ಯವು ಜನಪ್ರಿಯ ಅಡಿಗೆ ಪದಾರ್ಥವಾಗಿದ್ದು ಅದು ನಿಮ್ಮ ಕೂದಲಿಗೆ ಅದ್ಭುತವನ್ನು ಮಾಡುತ್ತದೆ. ಇದು ಕಬ್ಬಿಣ ಮತ್ತು ಪ್ರೋಟೀನ್‌ನ ಸಮೃದ್ಧ ಮೂಲವಾಗಿದ್ದು, ಇವೆರಡೂ ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಅವಶ್ಯಕವಾಗಿದೆ.

ಹೇಗೆ ಬಳಸುವುದು: 1 ಚಮಚ ಮೆಂತ್ಯ ಬೀಜದ ಪುಡಿಯನ್ನು 4-5 ಚಮಚ ಮೊಸರಿನೊಂದಿಗೆ ಬೆರೆಸಿ. ಈಗ, ಮಿಶ್ರಣಕ್ಕೆ ಕೆಲವು ಹನಿ ಆಲಿವ್ ಎಣ್ಣೆಯನ್ನು ಸೇರಿಸಿ. ಇದನ್ನು ಬೆರಳಿನ ಸಹಾಯದಿಂದ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ನೀರಿನಿಂದ ತೊಳೆಯಿರಿ.

English summary

Effective Hair Masks For Thinning Hair In Kannada

Looking for natural ways for thinning hair? Here are 5 hair masks that might help women suffering from the problem. Have a look
Story first published: Saturday, January 30, 2021, 16:10 [IST]
X
Desktop Bottom Promotion