For Quick Alerts
ALLOW NOTIFICATIONS  
For Daily Alerts

ಎಷ್ಟೇ ಪ್ರಯತ್ನಿಸಿದರೂ, ಕೂದಲು ಉದ್ದ ಬೆಳೆಯುತ್ತಿಲ್ಲವೇ? ಹಾಗಾದ್ರೆ ಈ ಹೇರ್‌ ಮಾಸ್ಕ್‌ ಒಮ್ಮೆ ಟ್ರೈ ಮಾಡಿ

|

ಹವಾಮಾನದಲ್ಲಿನ ಬದಲಾವಣೆ, ಒತ್ತಡ ಮತ್ತು ಮಾಲಿನ್ಯದಿಂದಾಗಿ ಕೂದಲು ಒಣಗುವುದು ಮಾತ್ರವಲ್ಲದೇ ನಿರ್ಜೀವ ಮತ್ತು ಹಾನಿಗೊಳಗಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸಲು, ಕೂದಲಿನ ಪೋಷಣೆ ಬಹಳ ಮುಖ್ಯ. ಇದಕ್ಕೆ ಮಾರುಕಟ್ಟೆಯ ಪದಾರ್ಥಗಳಿಂದ ಮನೆಯಲ್ಲಿ ಸಿಗುವ ಪದಾರ್ಥಗಳೇ ಹೆಚ್ಚು ಪರಿಣಾಮಕಾರಿ. ಈ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಹೇರ್ ಮಾಸ್ಕ್‌ಗಳು ಕೂದಲನ್ನು ನೈಸರ್ಗಿಕವಾಗಿ ಬೆಳೆಯಲು ಸಹಾಯ ಮಾಡುತ್ತವೆ, ಜೊತೆಗೆ ಇತರ ಸಮಸ್ಯೆಗಳಿಂದ ರಕ್ಷಿಸುತ್ತದೆ. ಹಾಗಾದರೆ, ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಹೇರ್‌ ಮಾಸ್ಕ್‌ಗಳು ಯಾವುವು ನೋಡೋಣ.

ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಹೇರ್‌ ಮಾಸ್ಕ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಈರುಳ್ಳಿ ಹೇರ್ ಮಾಸ್ಕ್:

ಈರುಳ್ಳಿ ಹೇರ್ ಮಾಸ್ಕ್:

ಈರುಳ್ಳಿಯಲ್ಲಿರುವ ಸಲ್ಫರ್ ಕೂದಲಿನ ಬೇರುಗಳನ್ನು ಬಲಪಡಿಸುವುದು ಮಾತ್ರವಲ್ಲದೇ, ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ. ಉದ್ದ ಮತ್ತು ದಪ್ಪ ಕೂದಲಿಗೆ ಹಲವರು ಈರುಳ್ಳಿ ರಸವನ್ನು ಹಚ್ಚುತ್ತಾರೆ. ಇದರ ಜೊತೆಗೆ ನೀವು ಹೇರ್ ಪ್ಯಾಕ್ ಸಹ ತಯಾರಿಸಬಹುದು. ಇದಕ್ಕಾಗಿ 1 ಈರುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ಸುಲಿದು ತೊಳೆದು ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಈ ಪೇಸ್ಟ್‌ಗೆ 2 ಚಮಚ ಎಣ್ಣೆ ಮತ್ತು 2 ಚಮಚ ನೆಲ್ಲಿ ಪೌಡರ್ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 45 ನಿಮಿಷಗಳ ಕಾಲ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಬೇಕಿದ್ದಲ್ಲಿ, ನೆಲ್ಲಿ ಪೌಡರ್ ಬದಲಿಗೆ ಅಲೋವೆರಾ ಜೆಲ್ ಅನ್ನು ಕೂಡ ಸೇರಿಸಬಹುದು.

ಮೊಟ್ಟೆ ಹೇರ್ ಮಾಸ್ಕ್:

ಮೊಟ್ಟೆ ಹೇರ್ ಮಾಸ್ಕ್:

ಮೊಟ್ಟೆಯ ಹಳದಿ ಲೋಳೆಯು ಕೂದಲು ಮತ್ತು ಚರ್ಮ ಎರಡಕ್ಕೂ ಉತ್ತಮ ಅಂಶವೆಂದು ಪರಿಗಣಿಸಲಾಗಿದೆ. ಕೂದಲಿನ ಬೆಳವಣಿಗೆಗೆ ಹೇರ್ ಮಾಸ್ಕ್ ಮಾಡಲು ಮೊಟ್ಟೆಯ ಹಳದಿ ಲೋಳೆಗೆ, 2 ಚಮಚ ಜೊಜೊಬಾ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ವಯಿಸಿದ ನಂತರ, 1 ಗಂಟೆ ಬಿಟ್ಟು ನಂತರ ಕೂದಲನ್ನು ತೊಳೆಯಿರಿ. ಮನೆಯಲ್ಲಿ ತಯಾರಿಸಿದ ಈ ಹೇರ್ ಪ್ಯಾಕ್ ಅನ್ನು ವಾರಕ್ಕೆ 1 ಅಥವಾ 2 ಬಾರಿ ಹಚ್ಚಿಕೊಳ್ಳುವುದರಿಂದ ಕೂದಲು ಉತ್ತಮ ಬೆಳವಣಿಗೆಯಾಗುವುದು.

ಬಾಳೆಹಣ್ಣು ಮತ್ತು ಮೆಂತ್ಯೆ ಹೇರ್ ಮಾಸ್ಕ್:

ಬಾಳೆಹಣ್ಣು ಮತ್ತು ಮೆಂತ್ಯೆ ಹೇರ್ ಮಾಸ್ಕ್:

ಬಾಳೆಹಣ್ಣು ಮತ್ತು ಮೆಂತ್ಯದಿಂದ ಮಾಡಿದ ಹೇರ್ ಮಾಸ್ಕ್ ಕೂದಲನ್ನು ವರ್ಧಿಸುತ್ತದೆ ಮತ್ತು ಅದನ್ನು ಹೊಳೆಯುವ ಮತ್ತು ರೇಷ್ಮೆಯನ್ನಾಗಿ ಮಾಡುತ್ತದೆ. ಇದನ್ನು ಮಾಡಲು, 2 ಚಮಚ ಮೆಂತ್ಯೆ ಬೀಜಗಳನ್ನು ರಾತ್ರಿ ನೆನೆಯಲು ಬಿಟ್ಟು ಮರುದಿನ ಬಾಳೆಹಣ್ಣಿನೊಂದಿಗೆ ರುಬ್ಬಿಕೊಳ್ಳಿ. ಈಗ ಈ ಪೇಸ್ಟ್‌ಗೆ 2 ಚಮಚ ಎಳ್ಳೆಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ, 45 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಪ್ರಯತ್ನಿಸಿ.

ಅಗಸೆ ಬೀಜದ ಹೇರ್ ಮಾಸ್ಕ್‌:

ಅಗಸೆ ಬೀಜದ ಹೇರ್ ಮಾಸ್ಕ್‌:

ಅಗಸೆ ಬೀಜಗಳು ಕೂದಲಿಗೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಇದರ ಹೇರ್ ಮಾಸ್ಕ್ ಮಾಡಲು, ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಕೂದಲಿನ ಉದ್ದಕ್ಕೆ ಅನುಗುಣವಾಗಿ ಅಗಸೆ ಬೀಜಗಳನ್ನು ತೆಗೆದುಕೊಳ್ಳಿ. ನೆನೆಸಿದ ಅಗಸೆ ಬೀಜಗಳನ್ನು ನೀರಿನಿಂದ ಕುದಿಸಿ, ಅದರ ಜೆಲ್ ಸಿದ್ಧವಾಗುವುದು. ಈಗ ಜೆಲ್ ಅನ್ನು ಫಿಲ್ಟರ್ ಮಾಡಿ ಮತ್ತು ಅದರಲ್ಲಿ ನಿಂಬೆ ರಸ ಸೇರಿಸಿ, ಕೊನೆಯದಾಗಿ, ಈ ಮಿಶ್ರಣಕ್ಕೆ ರೋಸ್ಮರಿ ಸಾರಭೂತ ತೈಲವನ್ನು ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.

English summary

DIY Homemade Hair Masks for Hair Growth in Kannada

Here we talking about DIY homemade hair masks for hair growth in kannada
Story first published: Saturday, March 19, 2022, 12:59 [IST]
X
Desktop Bottom Promotion