For Quick Alerts
ALLOW NOTIFICATIONS  
For Daily Alerts

ಈ ಆಯುರ್ವೇದ ಪರಿಹಾರಗಳಿಂದ ತಲೆಹೊಟ್ಟು ಸಮಸ್ಯೆಯನ್ನು ತಕ್ಷಣವೇ ಹೋಗಲಾಡಿಸಬಹುದು!

|

ತಲೆಹೊಟ್ಟು ಸಮಸ್ಯೆಯಿಂದ ಹಲವಾರು ಜನರು ಸಮಸ್ಯೆ ಎದುರಿಸುತ್ತಿರುತ್ತಾರೆ. ಎಂತಹ ಉತ್ಪನ್ನಗಳನ್ನು ಪ್ರಯತ್ನಿಸಿದರೂ, ಸರಿಯಾದ ಫಲಿತಾಂಶ ಸಿಗಲಾರದು. ಅದರಲ್ಲೂ ಚಳಿಗಾಲದ ಗಾಳಿಯಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದು. ಇದನ್ನು ಹೋಗಲಾಡಿಸಲು ಆಯುರ್ವೇದ ಕೆಲವೊಂದು ಸಲಹೆಗಳನ್ನು ನೀಡುತ್ತದೆ. ಈ ಪರಿಹಾರಗಳು ತುರಿಕೆ ಮತ್ತು ತಲೆಹೊಟ್ಟು ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅವುಗಳಾವುವು ಇಲ್ಲಿ ನೋಡೋಣ.

ತಲೆಹೊಟ್ಟು ಸಮಸ್ಯೆಗೆ ಆಯುರ್ವೇದಲ್ಲಿರುವ ಪರಿಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಮೆಂತ್ಯೆಬೀಜ ಪುಡಿ ಮತ್ತು ಮೊಸರು:

ಮೆಂತ್ಯೆಬೀಜ ಪುಡಿ ಮತ್ತು ಮೊಸರು:

1 ಚಮಚ ಮೆಂತ್ಯೆ ಬೀಜದ ಪುಡಿ ಮತ್ತು 1 ಚಮಚ ತ್ರಿಫಲ ಚೂರ್ಣವನ್ನು 1 ಬೌಲ್ ಮೊಸರಿನಲ್ಲಿ ಸೇರಿಸಿ, ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಒಂದು ಗಂಟೆಯ ಕಾಲ ಅದನ್ನು ಮಾಸ್ಕ್‌ ನಂತೆ ಕೂದಲಿಗೆ ಹಚ್ಚಿ, ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿ.

ತೆಂಗಿನೆಣ್ಣೆ ಮತ್ತು ನಿಂಬೆ:

ತೆಂಗಿನೆಣ್ಣೆ ಮತ್ತು ನಿಂಬೆ:

ಒಂದು ಬೌಲ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು 2 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಅದಕ್ಕೆ 1 ಚಮಚ ನಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ ರಾತ್ರಿಯಿಡೀ ಬಿಡಬಹುದು ಅಥವಾ ಹೇರ್ ವಾಶ್ ಮಾಡುವ ಮೊದಲು 2 ಗಂಟೆಗಳ ಕಾಲ ಹಚ್ಚಿಕೊಳ್ಳಿ. ಇದನ್ನು ವಾರಕ್ಕೊಮ್ಮೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುವುದು.

ನಿಂಬೆ ಮತ್ತು ಟಂಕನ್‌ ಭಸ್ಮ:

ನಿಂಬೆ ಮತ್ತು ಟಂಕನ್‌ ಭಸ್ಮ:

ತೆಂಗಿನ ಎಣ್ಣೆಯಲ್ಲಿ 1 ಟೀಸ್ಪೂನ್ ನಿಂಬೆಯೊಂದಿಗೆ 5 ಗ್ರಾಂ ಟಂಕನ್‌ ಭಸ್ಮ ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ, ರಾತ್ರಿಯಿಡೀ ಬಿಡಿ. ಮರುದಿನ ಬೆಳಿಗ್ಗೆ ನಿಮ್ಮ ಕೂದಲನ್ನು ಗಿಡಮೂಲಿಕೆ ಶಾಂಪೂ ಬಳಸಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಡ್ಯಾಂಡ್ರಫ್‌ ಸಮಸ್ಯೆಗೆ ಮುಕ್ತಿ ಹಾಡಬಹುದು.

ಅಲೊವೆರಾ ಮತ್ತು ಹರಳೆಣ್ಣೆ:

ಅಲೊವೆರಾ ಮತ್ತು ಹರಳೆಣ್ಣೆ:

1 ಕಪ್ ಅಲೋವೆರಾ ಜೆಲ್ ಅನ್ನು ಎರಡು ಟೇಬಲ್ಸ್ಪೂನ್ ಹರಳೆಣ್ಣೆಯೊಂದಿಗೆ ಸೇರಿಸಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ, ರಾತ್ರಿಯಿಡೀ ಬಿಡಿ, ಮರುದಿನ ಬೆಳಿಗ್ಗೆ ತೊಳೆಯಿರಿ. ಫಲಿತಾಂಶಗಳಿಗಾಗಿ ವಾರಕ್ಕೊಮ್ಮೆ ಮಾಡಿ.

ಮೆಂತ್ಯೆ ಮತ್ತು ಅಲೊವೆರಾ:

ಮೆಂತ್ಯೆ ಮತ್ತು ಅಲೊವೆರಾ:

ಒಂದು ಕಪ್ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ಪೇಸ್ಟ್ ಆಗಿ ರುಬ್ಬಿಕೊಂಡು, ಅದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ನೆತ್ತಿಗೆ ಹಚ್ಚಿ, 1 ಗಂಟೆ ಕಾಲ ಹಾಗೆ ಬಿಡಿ. ಸೌಮ್ಯವಾದ ಶಾಂಪೂ ಬಳಸಿ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಫಲಿತಾಂಶ ಸಿಗುವುದು.

ತ್ರಿಫಲ ಚೂರ್ಣ ಮತ್ತು ಮಜ್ಜಿಗೆ:

ತ್ರಿಫಲ ಚೂರ್ಣ ಮತ್ತು ಮಜ್ಜಿಗೆ:

2 ಲೋಟ ಮಜ್ಜಿಗೆಯನ್ನು ತೆಗೆದುಕೊಂಡು, ಅದಕಕೆ 1 ಚಮಚ ತ್ರಿಫಲ ಚೂರ್ಣವನ್ನು ಬೆರೆಸಿ ರಾತ್ರಿಯಿಡೀ ಇಡಿ. ಮರುದಿನ ಬೆಳಿಗ್ಗೆ, ಈ ಔಷಧೀಯ ಮಜ್ಜಿಗೆಯಿಂದ ನಿಮ್ಮ ಕೂದಲನ್ನು ತೊಳೆಯಿರಿ ಮತ್ತು ನಂತರ ಸೌಮ್ಯವಾದ ಶಾಂಪೂ ಬಳಸಿ. ವಾರದಲ್ಲಿ ಎರಡು ಬಾರಿ ಮಾಡಿ ಇದನ್ನು ಮಾಡಿ.

ಬೇವಿನೆಲೆ:

ಬೇವಿನೆಲೆ:

ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ಇದರಿಂದ ತಲೆಹೊಟ್ಟು ಸಮಸ್ಯೆಗೆ ವಿದಾಯ ಹೇಳಬಹುದು.

English summary

Ayurveda Remedies to Get Rid of Dandruff Instantly in Kannada

Here we talking about Ayurveda Remedies to Get Rid of Dandruff Instantly in Kannada, read on
Story first published: Tuesday, December 14, 2021, 13:33 [IST]
X
Desktop Bottom Promotion