For Quick Alerts
ALLOW NOTIFICATIONS  
For Daily Alerts

ಕೂದಲು ಸ್ಟ್ರೈಟ್ ಮಾಡಿಕೊಳ್ಳುವ ಆಸೆಯೇ? ಇಂತಹ ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಿ

|

ನೈಸರ್ಗಿಕವಾಗಿ ಇರುವಂತಹದ್ದು ಯಾವಾಗಲೂ ಹೆಚ್ಚು ಬಾಳಿಕೆ ಬರುವುದು. ಅದೇ ನೀವು ಕೃತಕವಾಗಿ ತಯಾರಿಸಿದರೆ ಅದು ತಾತ್ಕಾಲಿಕ. ಹೀಗಾಗಿ ನಮ್ಮ ದೇಹದ ಅಂಗಗಳು ಕೂಡ ನೈಸರ್ಗಿಕವಾಗಿ ಸುಂದರವಾಗಿದ್ದರೆ ಅದು ಒಳ್ಳೆಯದು. ಕೂದಲು ಹೆಚ್ಚಾಗಿ ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುವುದು. ನೈಸರ್ಗಿಕವಾಗಿ ಬಂದಿರುವಂತಹ ನೇರವಾದ ಕೂದಲು ದೊಡ್ಡ ವರದಾನ ಎಂದು ಹೇಳಬಹುದು ಮತ್ತು ಪ್ರತಿಯೊಬ್ಬ ಮಹಿಳೆಯು ಇದನ್ನು ಬಯಸುವರು. ಆದರೆ ಇಂತಹ ನೇರ, ಕಾಂತಿ ಹಾಗೂ ರೇಷ್ಮೆಯಂತಹ ಕೂದಲು ಕೆಲವು ಜನರಿಗೆ ಮಾತ್ರ ಸಿಕ್ಕಿರುವುದು. ಕೂದಲು ನೇರವಾಗಿಸಲು ನೀವು ಹಲವಾರು ರೀತಿಯಿಂದ ಪ್ರಯತ್ನಿಸುತ್ತಿದ್ದೀರಾ?

Want Straight Hair Naturally

ನೀವು ತುಂಬಾ ಕಾಂತಿಯುತ, ನಯ, ನೇರ ಕೂದಲು ಪಡೆಯಲು ಸಲೂನ್ ಗೆ ಹೋಗುವ ಬದಲು ಮನೆಯಲ್ಲೇ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಅದರ ಮೂಲಕ ಕೂದಲನ್ನು ನೇರವಾಗಿಸಿಕೊಳ್ಳಬಹುದು. ಇದಕ್ಕಾಗಿ ನೀವು ತುಂಬಾ ದುಬಾರಿ ಹಣ ಖರ್ಚು ಮಾಡಿಕೊಂಡು ಸಲೂನ್ ಗೆ ಹೋಗಬೇಕಾಗಿಲ್ಲ ಮತ್ತು ಮನೆಯಲ್ಲೇ ಕುಳಿತು ಕೂದಲಿನ ಆರೈಕೆ ಮಾಡಿದರೆ ಆಗ ಯಾವುದೇ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ನೀವು ಈ ಮನೆಮದ್ದುಗಳನ್ನು ಬಳಸಿಕೊಂಡು ನೋಡಿ.

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿ

ನಯ, ಕಾಂತಿಯುತ ಮತ್ತು ಬಲವಾದ ಕೂದಲಿಗೆ ಮುಲ್ತಾನಿ ಮಿಟ್ಟಿ ತುಂಬಾ ಪರಿಣಾಮಕಾರಿಯಾದ ಮನೆಮದ್ದು ಆಗಿರುವುದು. ಇದನ್ನು ಹಿಂದಿನ ಕಾಲದಿಂದಲೂ ಬಿಡಿಯಾದ ಕೂದಲು ಮತ್ತು ಕೂದಲನ್ನು ನೇರವಾಗಿಸಲು ಬಳಸಿಕೊಳ್ಳಲಾಗುತ್ತಿತ್ತು. ಇದು ಬೇರೆಲ್ಲಾ ರೀತಿಯ ರಾಸಾಯನಿಕಗಳಂತೆ ನಿಮ್ಮ ಕೂದಲಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡದು. ಇದರಲ್ಲಿ ಲಘುವಾದ ಶುಚಿಗೊಳಿಸುವ ಗುಣವಿದೆ.

ಬಳಸುವುದು ಹೇಗೆ

ಒಂದು ಕಪ್ ಮುಲ್ತಾನಿ ಮಿಟ್ಟಿ ತೆಗೆದುಕೊಳ್ಳಿ, ಒಂದು ಮೊಟ್ಟೆಯ ಬಿಳಿ ಲೋಳೆ ಮತ್ತು 2 ಚಮಚ ಅಕ್ಕಿ ಹಿಟ್ಟು.

ಎಲ್ಲವನ್ನು ಸ್ವಲ್ಪ ನೀರು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದು ಸ್ವಲ್ಪ ದಪ್ಪದ ಪೇಸ್ಟ್ ಆಗಿರಲಿ.

ಈ ಮಿಶ್ರಣವನ್ನು ಈಗ ನೀವು ಕೂದಲಿಗೆ ಹಚ್ಚಿಕೊಳ್ಳಿ.

ಅಗಲ ಹಲ್ಲಿನ ಬಾಚಣಿಗೆ ತೆಗೆದುಕೊಂಡು ಅದರಿಂದ ಕೂದಲು ಬಾಚಿಕೊಳ್ಳಿ.

ಒಂದು ಗಂಟೆ ಬಳಿಕ ಸಾಮಾನ್ಯ ನೀರಿನಿಂದ ಕೂದಲು ತೊಳೆಯಿರಿ.

ಇದರ ಬಳಿಕ ಹಾಲನ್ನು ಸ್ಪ್ರೇ ಮಾಡಿ.

ಇದರ ಬಳಿಕ ಕೂದಲಿಗೆ ಶಾಂಪೂ ಹಾಕಿ ತೊಳೆಯಿರಿ.

Most Read: ಕೂದಲನ್ನು ಸ್ಟ್ರೈಟನ್ ಮಾಡುತ್ತೆ ಈ ಹೇರ್ ಪ್ಯಾಕ್!

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್ ನ್ನು ನಿಯಮಿತವಾಗಿ ಬಳಸಿಕೊಳ್ಳುವುದರಿಂದ ಹಲವಾರು ರೀತಿಯ ಲಾಭಗಳು ಇವೆ ಮತ್ತು ಇದರಲ್ಲಿ ಒಂದು ಕೂದಲನ್ನು ನೇರವಾಗಿಸುವುದು. ಇದು ಕೂದಲಿನ ಪಿಎಚ್ ಮಟ್ಟವನ್ನು ಸ್ಥಾಪಿಸುವುದು, ಸೋಂಕನ್ನು ದೂರ ಮಾಡುವುದು ಮತ್ತು ಕೂದಲು ಆರೋಗ್ಯಕರವಾಗಿ ಬೆಳೆಯಲು ನೆರವಾಗುವುದು.

ಬಳಸುವುದು ಹೇಗೆ

ಒಂದು ಕಪ್ ನೀರಿಗೆ 1-2 ಚಮಚ ಆಪಲ್ ಸೀಡರ್ ವಿನೇಗರ್ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.

ಕೂದಲಿಗೆ ಶಾಂಪೂ ಹಾಕಿಕೊಂಡ ಬಳಿಕ ಅಂತಿಮವಾಗಿ ಕೂದಲು ತೊಳೆಯಲು ಈ ಮಿಶ್ರಣ ಬಳಸಿಕೊಳ್ಳಿ.

ಕೂದಲಿನಲ್ಲಿ ಇದು ಹಾಗೆ ಇರಲಿ ಮತ್ತು ಕೂದಲು ಗಾಳಿಗೆ ಒಣಗಲು ಬಿಡಿ.

ಬಿಸಿ ಎಣ್ಣೆ ಚಿಕಿತ್ಸೆ

ಬಿಸಿ ಎಣ್ಣೆ ಚಿಕಿತ್ಸೆ

ಎಣ್ಣೆ ಮಸಾಜ್ ಬಳಿಕ ಕೂದಲು ಜಿಡ್ಡು ಕಟ್ಟುವುದುನ್ನು ಪ್ರತಿಯೊಬ್ಬರು ದ್ವೇಷಿಸುವರು. ಆದರೆ ಬಿಸಿ ಎಣ್ಣೆಯಿಂದ ಬರುವಂತಹ ಉಷ್ಣತೆ ಮತ್ತು ಆರ್ದ್ರೀಕರಣದಿಂದಾಗಿ ಕೂದಲಿಗೆ ತುಂಬಾ ಆರಾಮ ನೀಡುವುದು ಮತ್ತು ಗುಂಗುರು ಕೂದಲಿನ್ನು ಹೋಗಲಾಡಿಸುವುದು. ನೀವು ಯಾವಾಗಲೂ ಬಿಸಿ ಎಣ್ಣೆ ಹಾಕಿ ಕೂದಲಿಗೆ ಮಸಾಜ್ ಮಾಡಿಕೊಂಡರೆ ಆಗ ನೀವು ನಯವಾದ ಮತ್ತು ತೇವಾಂಶವಿರುವ ಕೂದಲನ್ನು ಪಡೆಯಬಹುದು. ತೆಂಗಿನ ಎಣ್ಣೆ, ಆಲಿವ್ ತೈಲ, ಬಾದಾಮಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯು ಬಿಸಿ ಎಣ್ಣೆಯ ಮಸಾಜ್ ಗೆ ಒಳ್ಳೆಯ ಆಯ್ಕೆಯಾಗಿದೆ.

ಬಳಸುವ ವಿಧಾನ

ಸಣ್ಣ ಬೆಂಕಿಯಲ್ಲಿ ಎಣ್ಣೆ ಬಿಸಿ ಮಾಡಿ.

ಇದನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಮಸಾಜ್ ಮಾಡಿ.

ಕೂದಲನ್ನು ಬಾಚಿಕೊಳ್ಳಿ. ಇದರಿಂದ ಎಣ್ಣೆಯು ಎಲ್ಲಾ ಕಡೆಗೆ ಹರಡುವುದು.

30-40 ನಿಮಿಷ ಕಾಲ ಕೂದಲನ್ನು ಹಾಗೆ ಮುಚ್ಚಿಕೊಳ್ಳಿ.

ಲಘು ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

ಅಗಲವಾಗಿರುವ ಹಲ್ಲುಗಳಿರುವಂತಹ ಬಾಚಣಿಗೆಯಿಂದ ಬಾಚಿಕೊಳ್ಳಿ.

Most Read: ಸುಂದರಿಯರ ಕೇಶಕ್ಕೆ ಬಿಸಿ ಎಣ್ಣೆಯ ಚಿಕಿತ್ಸೆ

ಮೊಟ್ಟೆ ಮತ್ತು ಆಲಿವ್ ತೈಲ

ಮೊಟ್ಟೆ ಮತ್ತು ಆಲಿವ್ ತೈಲ

ಮೊಟ್ಟೆಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ ಮತ್ತು ಬಲವಾದ ಹಾಗೂ ಕಾಂತಿಯುತ ಕೂದಲು ಪಡೆಯಲು ಪ್ರೋಟೀನ್ ಅತೀ ಅಗತ್ಯವಾಗಿರುವುದು ಮತ್ತು ಇನ್ನೊಂದು ಕಡೆಯಲ್ಲಿ ಆಲಿವ್ ತೈಲವು ಕೂದಲಿಗೆ ಮೊಶ್ಚಿರೈಸ್ ಮಾಡಲು ನೆರವಾಗುವುದು. ಇದೆರಡನ್ನು ಜತೆಯಾಗಿ ಸೇರಿಸಿಕೊಂಡರೆ ಕೂದಲು ತುಂಬಾ ನೈಸರ್ಗಿಕವಾಗಿ ನೇರವಾಗುವುದು.

ಬಳಸುವ ವಿಧಾನ

4 ಚಮಚ ಆಲಿವ್ ತೈಲ ಮತ್ತು 2 ಮೊಟ್ಟೆಯ ಬಿಳಿ ಲೋಳೆ

ಈ ಮಿಶ್ರಣವನ್ನು ನೀವು ಕೂದಲಿಗೆ ಬುಡದಿಂದ ತುದಿ ತನಕ ಹಚ್ಚಿಕೊಳ್ಳಿ.

ಅಗಲ ಹಲ್ಲು ಇರುವ ಬಾಚಣಿಗೆಯಿಂದ ಕೂದಲು ಬಾಚಿಕೊಲ್ಳಿ.

30-45 ನಿಮಿಷ ಕಾಲ ಕೂದಲನ್ನು ಮುಚ್ಚಿಕೊಳ್ಳಿ.

ಲಘು ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

English summary

Want Straight Hair Naturally? Try these 5 home remedies

Naturally straight hair is a great blessing and every girl wishes to have them. But a very few are blessed with glossy, smooth and straight hair. Are you done with trying those expensive hair care products and still struggling for straight hair? In order to get silky, smooth, straight hair you choose salon treatment as an option but do you know it can damage your hair? So, what is the solution? Here are 5 mind-shattering home remedies for straight hair.
X
Desktop Bottom Promotion