For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಇಲ್ಲಿದೆ 9 ಅತ್ಯುತ್ತಮ ಟಿಪ್ಸ್

|

ಮಳೆಗಾಲ ಈಗಾಗಲೇ ಪ್ರಾರಂಭವಾಗಿದ್ದು ಮಾನ್ಸೂನ್ ಮಾರುತದ ಪರಿಣಾಮವಾಗಿ ಗಾಳಿಯಲ್ಲಿ ತೇವಾಂಶ ಹೆಚ್ಚುತ್ತದೆ. ಜೊತೆಗೇ ಕೂದಲ ಆರೈಕೆಗೆ ಹೆಚ್ಚಿನ ಕಾಳಜಿಯನ್ನೂ ಬೇಡುತ್ತದೆ. ಗಾಳಿಯಲ್ಲಿ ತೇವಾಂಶ ಸತತವಾಗಿ ಹೆಚ್ಚೇ ಇರುವುದು ಕೂದಲ ಬುಡವನ್ನು ಸೂಕ್ಷ್ಮಸಂವೇದಿಯಾಗಿಸಲು ಕಾರಣವಾಗುತ್ತದೆ ಹಾಗೂ ಕೂದಲು ಘಾಸಿಗೊಳ್ಳಲು ಕಾರಣವಾಗುತ್ತದೆ. ಹಾಗಾಗಿ, ಈ ಸಮಯದಲ್ಲಿ ಕೂದಲಿಗೆ ಇತರ ಸಮಯಕ್ಕಿಂತಲೂ ಹೆಚ್ಚಿನ ಆರೈಕೆ ಹಾಗೂ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಒಂದು ವೇಳೆ ಕೂದಲ ಆರೈಕೆಯಲ್ಲಿ ಕೊರತೆಯುಂಟಾದರೆ ಈ ಮಳೆಗಾಲ ನಿಮ್ಮ ಕೂದಲ ಆರೋಗ್ಯವನ್ನು ಭಾರೀ ಮಟ್ಟಿನಲ್ಲಿ ಹಾಳುಗೆಡವುದರಲ್ಲಿ ಆಶ್ಚರ್ಯವಿಲ್ಲ. ಕೂದಲ ಆರೈಕೆ ಎಷ್ಟು ಅಗತ್ಯ ಎಂದು ಮನಗಂಡ ಬಳಿಕ ಇದನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಕೂದಲು ಮಳೆಗಾಲದ ಅವಧಿಯಲ್ಲಿಯೂ ಉತ್ತಮ ಆರೋಗ್ಯವನ್ನು ಪಡೆದು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಬನ್ನಿ ನೋಡೋಣ:

Haircare

ನಿಮ್ಮ ಕೂದಲನ್ನು ಆದಷ್ಟೂ ಒಣದಾಗಿಯೇ ಇರಿಸಿ

ಈ ಋತುಮಾನದಲ್ಲಿ ಗಾಳಿಯಲ್ಲಿ ಆರ್ದ್ರತೆ ಹೆಚ್ಚಿರುವ ಕಾರಣ ಕೂದಲು ಆದಷ್ಟೂ ಒಣಗಿರುವುದು ಅವಶ್ಯ. ಸ್ನಾನದ ಬಳಿಕವೇ ಆಗಲಿ, ಮಳೆಯಲ್ಲಿ ನೆನೆದು ಬಂದ ಬಳಿಕವೇ ಆಗಲಿ, ಮೊದಲಾಗಿ ಕೂದಲನ್ನು ಒರೆಸಿಕೊಂಡು ಒಣಗಿಸಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ಒಂದು ವೇಳೆ ತಲೆಗೂದಲು ಹೆಚ್ಚು ಕಾಲ ಒದ್ದೆಯಾಗಿದ್ದರೆ ಕೂದಲ ಬುಡ ಹಾಗೂ ನೆತ್ತಿಯ ಚರ್ಮದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ, ಈ ಋತುಮಾನದಲ್ಲಿ ಕೂದಲನ್ನು ಗರಿಷ್ಟ ಮಟ್ಟಿಗೆ ಒಣಗಿಯೇ ಇರುವಂತೆ ನೋಡಿಕೊಳ್ಳಿ.

ತಲೆಯಲ್ಲಿ ತುರಿಕೆ ಇದ್ದರೆ ತಲೆಗೆ ಎಣ್ಣೆಯ ಮಸಾಜ್ ಮಾಡಿ

ಮಳೆಗಾಲದಲ್ಲಿ ತಲೆತುರಿಕೆ ಹೆಚ್ಚುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸದಾ ತುರಿಸುತ್ತಾ ಇರುವುದು ಅಸಹನೀಯವಾದ ಅನುಭವವಾಗಿದೆ. ಈ ತುರಿಕೆಯನ್ನು ಇಲ್ಲವಾಗಿಸಲು ಸುಲಭ ಮತ್ತು ಉತ್ತಮ ಮಾರ್ಗವೆಂದರೆ ತಲೆಗೆ ಬೆಚ್ಚನೆಯ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡುವುದು. ಕೊಂಚ ಬಿಸಿಯಾಗಿಸಿದ ಕೊಬ್ಬರಿ ಎಣ್ಣೆ ಈ ಕಾರ್ಯಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ರಾತ್ರಿ ಮಲಗುವ ಮುನ್ನ ಕೂದಲಿಗೆ ಬಿಸಿ ಎಣ್ಣೆಯಿಂದ ಮಸಾಜ್ ಮಾಡಿ ಮರುದಿನ ಬೆಳಿಗ್ಗೆ ಕೂದಲನ್ನು ತೊಳೆದುಕೊಳ್ಳಬೇಕು. ಇಡಿಯ ರಾತ್ರಿ ಬಿಡಲು ಸಾಧ್ಯವಾಗದಿದ್ದರೆ ಕನಿಷ್ಟ ಒಂದು ಘಂಟೆಯಾದರೂ ಎಣ್ಣೆ ಹಚ್ಚಿ ಬಿಡಬೇಕು. ಬಿಸಿ ಕೊಬ್ಬರಿ ಎಣ್ಣೆ ತಲೆಯ ತುರಿಕೆಯನ್ನು ಇಲ್ಲವಾಗಿಸುವ ಜೊತೆಗೇ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಘಾಸಿಗೊಳ್ಳುವುದರಿಂದ ರಕ್ಷಿಸುತ್ತದೆ.

Most Read: ಹೇರ್ ಕೇರ್ ಟಿಪ್ಸ್: ಕೂದಲಿನ ಪ್ರತಿಯೊಂದು ಸಮಸ್ಯೆಗೆ ಶುಂಠಿ ಪರಿಹಾರ!

ನಿಮ್ಮ ನಿತ್ಯದ ಶಾಂಪೂ ಬಳಕೆಯನ್ನು ಮುಂದುವರೆಸಿ

ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳುವ ನಿಮ್ಮ ದಿನಚರಿಯನ್ನು ಮಳೆಗಾಲವೆಂದು ತೀರಾ ಇಲ್ಲವಾಗಿಸಬಾರದು. ಮಳೆಗಾಲದಲ್ಲಿ ವಾರಕ್ಕೆರಡು ಬಾರಿ ಅಥವಾ ಎರಡರಿಂದ ಮೂರು ದಿನಗಳ ಬಳಿಕ ಶಾಂಪೂ ಸ್ನಾನ ಮಾಡುವುದು ಉತ್ತಮ. ಈ ಮೂಲಕ ಕೂದಲು ಸ್ವಚ್ಛವಾಗುವುದರ ಜೊತೆಗೇ ಕೂದಲು ಅಷ್ಟು ಬೇಗಬೇಗನೇ ಒದ್ದೆಯಾಗುವ ಸಂದರ್ಭ ಇಲ್ಲವಾಗುತ್ತದೆ. ಈ ಮೂಲಕ ಕೂದಲ ಆರೋಗ್ಯವನ್ನು ಇತರ ದಿನಗಳಂತೆಯೇ ಕಾಪಾಡಿಕೊಳ್ಳಬಹುದು. ಒಂದು ವೇಳೆ ಮಳೆಯಲ್ಲಿ ನೆನೆಯಬೇಕಾದ ಸಂದರ್ಭ ಎದುರಾದರೆ ಶಾಂಪೂ ಉಪಯೋಗಿಸಿ ತಲೆಗೂದಲದನ್ನು ತೊಳೆದುಕೊಂಡು ಬಳಿಕ ಚೆನ್ನಾಗಿ ಒಣಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ತಲೆಗೂದಲು ಹೆಚ್ಚಿನ ಅವಧಿಯಲ್ಲಿ ಒದ್ದೆಯಾಗಿಯೇ ಇರದಂತೆ ಎಚ್ಚರ ವಹಿಸಿ.

ಕಂಡೀಶನರ್ ಬಳಕೆಯನ್ನು ತಪ್ಪಿಸದಿರಿ

ಶಾಂಪೂ ಬಳಸಿದ ಬಳಿಕ ಕಂಡೀಶನರ್ ಬಳಸದೇ ಇರುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ಈ ಮಳೆಗಾದಲ್ಲಿ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಹೆಸರೇ ಸೂಚಿಸುವಂತೆ ಇದು ಕೂದಲನ್ನು ಕಂಡೀಶನ್ ಅಥವಾ ಒಣಗಿದ ಸ್ಥಿತಿಗೆ ತಯಾರಾಗುತ್ತದೆ. ಈ ಹಂತದಲ್ಲಿ ಕೂದಲ ಮೇಲೆ ತೆಳುವಾದ ಪದರವನ್ನು ಮೂಡಿಸಿ ಮೃದು ಮತ್ತು ಸೌಮ್ಯವಾಗಿಸುತ್ತದೆ. ಅಷ್ಟೇ ಅಲ್ಲ, ಕಂಡೀಶನರ್ ಹಚ್ಚಿದ ಬಳಿಕ ಕೂದಲಿಗೆ ಅಂಟಿಕೊಂಡಿದ್ದ ನೀರನ್ನು ಒರೆಸಿಕೊಳ್ಳುವ ಅಗತ್ಯವಿಲ್ಲದೇ ಹಾಗೇ ಒಣಗಲು ಬಿಡಬಹುದು. ಮಳೆಗಾಲದಲ್ಲಿ ಈ ಆರೈಕೆ ಕೂದಲಿಗೆ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತದೆ.

ಅಗಲವಾದ ಬಾಚಣಿಗೆ ಬಳಸಿ

ಇದೊಂದು ವಿಚಿತ್ರ ಸೂಚನೆಯಾಗಿ ಕಂಡುಬರಬಹುದು. ಆದರೆ ಚಿಕ್ಕ ಹಲ್ಲುಗಳಿರುವ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಳ್ಳುವ ಮೂಲಕ ಕೂದಲಿಗೆ ಹೆಚ್ಚಿನ ಹಾನಿಯುಂಟಾಗಬಹುದು. ಏಕೆಂದರೆ ಮಳೆಗಾಲದಲ್ಲಿ ಗಾಳಿಯಲ್ಲಿರುವ ಸತತ ಆರ್ದತೆ ಕೂದಲನ್ನು ಮತ್ತು ಕೂದಲ ಬುಡವನ್ನು ಶಿಥಿಲಗೊಳಿಸಿ ಸುಲಭವಾಗಿ ತುಂಡಾಗುವಂತೆ ಅಥವಾ ಕಿತ್ತುಬರುವಂತಾಗಿಸಿರುತ್ತದೆ. ಆದ್ದರಿಂದ ಮಳೆಗಾದಲ್ಲಿ ಅಗಲವಾದ ಮತ್ತು ಕೊಂಚ ದೂರ ದೂರ ಹಲ್ಲುಗಳಿರುವ ಬಾಚಣಿಗೆಯಿಂದ ತಲೆ ಬಾಚಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಬಾಚಣಿಗೆ ಕೂದಲ ಮೇಲೆ ಹೆಚ್ಚಿನ ಒತ್ತಡವನ್ನು ಹೇರದೇ ಬಾಚಿಕೊಳ್ಳಲು ನೆರವಾಗುತ್ತದೆ. ಹಾಗಾಗಿ ಒಂದು ವೇಳೆ ಈ ಬಾಚಣಿಗೆ ನಿಮ್ಮಲ್ಲಿಲ್ಲದಿದ್ದರೆ ಕೂಡಲೇ ಉತ್ತಮ ಗುಣಮಟ್ಟದ್ದೊಂದನ್ನು ಕೊಳ್ಳಿ. ಹಾಗೂ ಎಂದಿಗೂ ಒದ್ದೆಯಾಗಿರುವ ಕೂದಲನ್ನು ಬಾಚಿಕೊಳ್ಳಲು ಯತ್ನಿಸದಿರಿ. ಚೆನ್ನಾಗಿ ಒಣಗಿದ ಬಳಿಕವೇ ಕೂದಲನ್ನು ಬಾಚಿಕೊಳ್ಳಿ..

Most Read: ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು

ಒದ್ದೆ ಕೂದಲನ್ನು ಗಂಟು ಕಟ್ಟದಿರಿ

ನಮಗೆ ಗೊತ್ತಿಲ್ಲದೇ ಮಾಡುವ ತಪ್ಪುಗಳಲ್ಲಿ ಇದೂ ಒಂದು. ಕೂದಲನ್ನು ಗಂಟು ಕಟ್ಟಿಕೊಳ್ಳುವ ಮೂಲಕ ಹೆಚ್ಚಿನ ಘಾಸಿಯುಂಟಾಗುತ್ತದೆ ಹಾಗೂ ಕೂದಲಿಗೆ ಎದುರಾಗುವ ಇತರ ತೊಂದರೆಗಳಾದ ಕೂದಲುದುರುವಿಕೆ, ತಲೆಹೊಟ್ಟು ಮೊದಲಾದವು ಉಲ್ಭಣಿಸುತ್ತವೆ. ಹಾಗಾಗಿ ಕೂದಲನ್ನು ಗಂಟುಕಟ್ಟಿಕೊಳ್ಳಬೇಕಾದ ಸಂದರ್ಭ ಎದುರಾದರೆ ಕೂದಲು ಒಣಗಿರಬೇಕಾಗಿರುವುದು ಅವಶ್ಯವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಕೂದಲು ಅರೆಬರೆ ಒಣಗಿದ್ದಾಗ ಕೂದಲನ್ನು ಗಂಟುಕಟ್ಟಿಕೊಳ್ಳಬೇಕಾಗಿ ಬಂದರೆ ಸಡಿಲವಾಗಿ ಗಂಟುಹಾಕಿ ಹಾಗೂ ಎಂದಿಗೂ ಹೆಚ್ಚಿನ ಒತ್ತಡದಿಂದ ಎಳೆಯದಿರಿ.

ನೈಸರ್ಗಿಕ ಉತ್ಪನ್ನಗಳನ್ನೇ ಬಳಸಿ

ಕೂದಲಿಗೆ ಉತ್ತಮ ಆರೈಕೆ ನೀಡಲು ಮತ್ತು ಆರೋಗ್ಯವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ನೈಸರ್ಗಿಕ ಉತ್ಪನ್ನಗಳೇ ಉತ್ತಮವಾಗಿದೆ. ಇದಕ್ಕಾಗಿ ಸಾವಯವ ವಿಧಾನದಲ್ಲಿ ತಯಾರಿಸಲಾದ ಉತ್ಪನ್ನಗಳನ್ನು ಕೊಳ್ಳಬಹುದು. ಇವುಗಳಲ್ಲಿ ಕನಿಷ್ಟ ರಾಸಾಯನಿಕಗಳಿರುತ್ತವೆ. ಅಥವಾ ಮನೆಯಲ್ಲಿಯೇ ತಯಾರಿಸಬಹುದಾದ ಪ್ರಸಾದನಗಳನ್ನು ಬಳಸಬಹುದು. ಇವುಗಳು ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ನೈಸರ್ಗಿಕ ಪ್ರಸಾದನಗಳಾದ ಲೋಳೆಸರ, ಲಿಂಬೆ, ಅಂಟುವಾಳ, ಸೀಗೇಕಾಯಿ ಮೊದಲಾದವು ಕೂದಲ ಆರೈಕೆಗೆ ಹಾಗೂ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾಗಿದೆ.

ಆರೋಗ್ಯಕರ ಆಹಾರಕ್ರಮ ಅನುಸರಿಸಿ

ಅತ್ಯಂತ ಅಗತ್ಯವಾದ ಹಾಗೂ ಹೆಚ್ಚಿನವರು ನಿರ್ಲಕ್ಷ್ಯ ತೋರುವ ಅಂಶವೆಂದರೆ ಆರೋಗ್ಯವಾದ ಆಹಾರಕ್ರಮವನ್ನು ಅನುಸರಿಸುವುದು. ಆರೋಗ್ಯಕರ ಆಹಾರಕ್ರಮ ಕೂದಲ ಮೇಲೂ ತನ್ನ ಪ್ರಭಾವವನ್ನು ಬೀರುತ್ತದೆ. ಸೂಕ್ತ ಆಹಾರದ ಮೂಲಕ ಉತ್ತಮ ಪೋಷಕಾಂಶಗಳು ದೇಹಕ್ಕೆ ಲಭಿಸಿದಾಗ ಕೂದಲ ಆರೋಗ್ಯವೂ ಉತ್ತಮಗೊಳ್ಳುತ್ತದೆ ಹಾಗೂ ಘಾಸಿಗೊಳ್ಳುವ ಸಂಭವ ಕಡಿಮೆಯಾಗುತ್ತದೆ. ಹಾಗಾಗಿ ನೀವು ಯಾವ ಆಹಾರವನ್ನು ಸೇವಿಸುತ್ತೀರಿ ಎಂಬುದರ ಬಗ್ಗೆ ಹೆಚ್ಚು ಗಮನ ನೀಡಿ ಮತ್ತು ಈ ಮೂಲಕ ನಿಮ್ಮ ಕೂದಲಿಗೆ ಎದುರಾಗುವ ಬದಲಾವಣೆಗಳನ್ನು ಪರಿಶೀಲಿಸಿ. ಹೆಚ್ಚು ಹೆಚ್ಚಾಗಿ ಹಸಿರು ಎಲೆಗಳು, ಹಣ್ಣುಗಳು, ಮತ್ತು ಪ್ರೋಟೀನ್ ಸಹಿತ ಆಹಾರಗಳನ್ನು ಸೇವಿಸಿ. ಎಣ್ಣೆಯಂಶವಿರುವ ಮತ್ತು ಸಕ್ಕರೆ ಹೆಚ್ಚಿರುವ ಅಹಾರಗಳನ್ನು ವರ್ಜಿಸಿ.

ಮಳೆಯಿಂದ ಕೂದಲನ್ನು ರಕ್ಷಿಸಿ

ಮಳೆ ಬೀಳುತ್ತಿರುವಾಗ ಇದರಲ್ಲಿ ನೆನೆಯುವ ಸಂತೋಷವನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ. ಆದರೆ ಮಳೆಯಲ್ಲಿ ನೆನೆಯುವುದು ಕೂದಲ ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಧ್ಯವಾದಷ್ಟೂ ಕೂದಲನ್ನು ಮಳೆಯ ನೀರಿನಿಂದ ನೆನೆಯದಂತೆ ರಕ್ಷಿಸಿ. ಇದಕ್ಕಾಗಿ ಮಳೆಯ ಟೊಪ್ಪಿಯೊಂದನ್ನು ಖರೀದಿಸಿ. ಮಳೆಗಾಲದಲ್ಲಿ ಮಳೆಬೀಳುವ ಸಮಯವನ್ನು ಹೇಳಲು ಸಾಧ್ಯವಿಲ್ಲವಾದ ಕಾರಣ ಸದಾ ಇದಕ್ಕೆ ತಯಾರಿರಿ ಹಾಗೂ ಕನಿಷ್ಟ ಪಕ್ಷ ಒಂದು ಕೊಡೆಯನ್ನಾದರೂ ನಿಮ್ಮೊಂದಿಗೆ ಸದಾ ಇರಿಸಿಕೊಂಡಿರಿ. ಆದರೂ ನಿಮ್ಮ ಕೈಮೀರಿ ಮಳೆಯಲ್ಲಿ ನೆನೆಯಬೇಕಾದ ಅನಿವಾರ್ಯತೆ ಎದುರಾದರೆ ಆದಷ್ಟೂ ಬೇಗನೇ ಶಾಂಪೂ ಉಪಯೋಗಿಸಿ ಸ್ನಾನ ಮಾಡಿಕೊಳ್ಳಿ ಹಾಗೂ ಕೂದಲನ್ನು ಸರಿಯಾಗಿ ಒಣಗಿಸಿಕೊಳ್ಳಿ.

Most Read: ಉದ್ದನೆಯ ಕೂದಲಿಗೆ ಕರಿಬೇವಿನ ಹೇರ್ ಪ್ಯಾಕ್

ಇಂದಿನ ಲೇಖನದಲ್ಲಿ ವಿವರಿಸಿರುವ ಎಲ್ಲಾ ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಮಳೆಗಾಲದಲ್ಲಿಯೂ ಕೂದಲ ಆರೈಕೆಯನ್ನು ಅತ್ಯುತ್ತಮವಾಗಿ ನಿರ್ವಹಿಸಲು ಹಾಗೂ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಮಳೆಗಾಲದಲ್ಲಿ ಕೂದಲು ಘಾಸಿಗೊಳ್ಳುವ ಚಿಂತೆಯಿಂದ ಮುಕ್ತಿ ದೊರಕುತ್ತದೆ. ಎಲ್ಲರಿಗೂ ಮಳೆಗಾಲದ ಶುಭಾಶಯಗಳು.

English summary

Best 9 Haircare Tips To Protect Your Hair This Monsoon

The season of rain and moisture bring with it a lot of hair issues. The moisture in the air makes your hair roots sensitive and thus your hair is more prone to damage. The rainy season, therefore, is the season in which your hair needs more attention and care. Here are some effective haircare tips to take good care of your hair this monsoon season.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X