ತಲೆ ಕೂದಲಿನ ಆರೈಕೆಗೆ ಸರಳ ಮನೆಮದ್ದುಗಳು

By Deepu
Subscribe to Boldsky

ಹಿಂದಿನ ಕಾಲದವರ ಕೂದಲು ಎಷ್ಟು ಗಟ್ಟುಮುಟ್ಟಾಗಿ, ಎಷ್ಟು ದಟ್ಟವಾಗಿ, ಕಪ್ಪಾಗಿ ಇರುತ್ತಾ ಇತ್ತು ಅಲ್ಲವಾ.. ಈಗಿನ ಯುವಕ ಯುವತಿಯರ ಕೂದಲಿನಲ್ಲಿ ಯಾಕೆ ಇಷ್ಟೊಂದು ಸಮಸ್ಯೆ ಅನ್ನೋದಕ್ಕೆ ಪ್ರಮುಖ ಕಾರಣವೇ ಅವರು ಬಳಸುವ ಕೆಮಿಕಲ್‌ಗಳು. ಯಾರು ಕೆಮಿಕಲ್‌ಗಳಿಂದ ದೂರವಿರುತ್ತಾರೋ ಅಂತವರಿಗೆ ಖಂಡಿತ ಕೂದಲಿನ ಸಮಸ್ಯೆ ಇರೋದಿಲ್ಲ. ಆದರೆ ಏನು ಮಾಡೋದು ನಾವೀಗ ಬದುಕುತ್ತಿರುವ ವಾತಾವರಣವೇ ಕಲುಷಿತಗೊಂಡಿದೆ. ಹೀಗಿರುವಾಗ ಪ್ರತಿಯೊಬ್ಬರೂ ಕೂಡ ತಮ್ಮ ಕೂದಲಿನ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲೇಬೇಕು.

ಕೂದಲು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲಿ ಒಂದು. ಇತ್ತೀಚೆಗೆ ಕೂದಲು ಉದುರುವಿಕೆ, ತಲೆಹೊಟ್ಟು, ಮತ್ತು ಕೂದಲಿನ ಇತರೆ ಸಮಸ್ಯೆಗಳು ಅಧಿಕವಾಗುತ್ತಲೇ ಸಾಗುತ್ತಿದೆ. ಅದಕ್ಕೆ ಕಾರಣಗಳು ಹತ್ತು ಹಲವು. ಕೂದಲಿನ ಸಮಸ್ಯೆಗಳನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳುತ್ತಾ ಇರೋ ಅದೆಷ್ಟೊ ಕಂಪೆನಿಗಳು, ಬೇರೆಬೇರೆ ರೀತಿಯ ಪ್ರೊಡಕ್ಟ್‌ಗಳನ್ನು ಮಾರುಕಟ್ಟೆಗೆ ಬಿಟ್ಟು ಮಕ್ಮಲ್ ಟೋಪಿ ಹಾಕುತ್ತಿವೆ.

ಸಮಸ್ಯೆಯಿಂದ ತತ್ತರಿಸಿರುವ ಜನ ಅದಕ್ಕೆ ಮಾರು ಹೋಗಿ, ಇರೋ ಚೂರುಪಾರು ಕೂದಲನ್ನೂ ಹಾಳು ಮಾಡಿಕೊಳುತ್ತಾ ಇರೋದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇಂದು ಪ್ರತಿಯೊಬ್ಬರೂ ನೆನಪಿನಲ್ಲಿ ಇಡಲೇಬೇಕಾಗಿರುವ ಅಂಶವೇನೆಂದರೆ ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲೇ ಇರುತ್ತೆ. ಅದು ನಿಮಗೆ ತಿಳಿದರಬೇಕು ಅಷ್ಟೇ. ಒಮ್ಮೆ ನೀವೇ ಯೋಚಿಸಿ.. ಹಿಂದಿನ ಕಾಲದವರ ಕೂದಲು ಎಷ್ಟು ಗಟ್ಟುಮುಟ್ಟಾಗಿ, ಎಷ್ಟು ದಟ್ಟವಾಗಿ, ಕಪ್ಪಾಗಿ ಇರುತ್ತಾ ಇತ್ತು ಅಲ್ಲವಾ..

ಈಗಿನ ಯುವಕ ಯುವತಿಯರ ಕೂದಲಿನಲ್ಲಿ ಯಾಕೆ ಇಷ್ಟೊಂದು ಸಮಸ್ಯೆ ಅನ್ನೋದಕ್ಕೆ ಪ್ರಮುಖ ಕಾರಣವೇ ಅವರು ಬಳಸುವ ಕೆಮಿಕಲ್‌ಗಳು. ಯಾರು ಕೆಮಿಕಲ್‌ಗಳಿಂದ ದೂರವಿರುತ್ತಾರೋ ಅಂತವರಿಗೆ ಖಂಡಿತ ಕೂದಲಿನ ಸಮಸ್ಯೆ ಇರೋದಿಲ್ಲ. ಆದರೆ ಏನು ಮಾಡೋದು ನಾವೀಗ ಬದುಕುತ್ತಿರುವ ವಾತಾವರಣವೇ ಕಲುಷಿತಗೊಂಡಿದೆ. ಹೀಗಿರುವಾಗ ಪ್ರತಿಯೊಬ್ಬರೂ ಕೂಡ ತಮ್ಮ ಕೂದಲಿನ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲೇಬೇಕು. ಅದಕ್ಕಾಗಿಯೇ ಇಂದು ಬೋಲ್ಡ್ ಸ್ಕೈ ಕೆಲವೊಂದು ಮನೆಮದ್ದನ್ನು ಪರಿಚಯಿಸುತ್ತಿದ್ದು , ನೀವೂ ಒಮ್ಮೆ ಪ್ರಯತ್ನಿಸಿ....

hair grow

ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

ಮೆಂತೆಯ ಒಂದಷ್ಟು ಕಾಳುಗಳನ್ನು ಪುಡಿಮಾಡಿ ಅದನ್ನು ಮಜ್ಜಿಗೆಯಲ್ಲಿ ನೆನಸಿಡಿ. ಒಂದು ರಾತ್ರಿ ನೆನಸಿಟ್ಟರೂ ಪರವಾಗಿಲ್ಲ. ಹೀಗೆ ನೆನಸಿದ ನಂತ್ರ ಅದನ್ನು ತಲೆಯ ಸ್ಕಾಲ್ಪ್ ಸೇರಿದಂತೆ ಕೂದಲಿಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆಯ ನಂತ್ರ ತೊಳೆದುಕೊಳ್ಳೋದ್ರಿಂದ ಕೂದಲಿನ ಆರೋಗ್ಯ ಉತ್ತಮಗೊಳ್ಳಲಿದೆ. ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗೋದು ಅಲ್ಲದೆ ಕೂದಲು ಗಟ್ಟುಮುಟ್ಟಾಗಿ ಶೈನಿಯಾಗಿ ಮತ್ತು ಆರೋಗ್ಯದಾಯಕವಾಗಿ ಬೆಳೆಯಲು ಇದು ನೆರವಾಗಲಿದೆ.

ಮೆಹಂದಿ ಪುಡಿ ಮತ್ತು ಹುಳಿ ಮಜ್ಜಿಗೆ

ಎಲ್ಲರಿಗೂ ತಿಳಿದಿರುವಂತೆ ಮೆಹಂದಿ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾದ ಮನೆಮದ್ದು. ಕೂದಲು ಬಿಳಿಯಾಗಿರುವವರು ಕಲ್ಲರಿಂಗ್ ಗಾಗಿ ಕೂಡ ಮೆಹಂದಿಯನ್ನು ಬಳಸ್ತಾರೆ. ಮೆಹಂದಿ ಪುಡಿಯೊಡನೆ ಹುಳಿಮಜ್ಜಿಗೆ ಸೇರಿಸಿ ತಲೆಗೆ ಅಪ್ಲೈ ಮಾಡಿಕೊಳ್ಳೋದ್ರಿಂದ ಕೂದಲು ಮತ್ತಷ್ಟು ಅತ್ಯುತ್ತಮಗೊಳ್ಳಲು ಸಹಕಾರಿಯಾಗಿರುತ್ತೆ. ಯಾರಿಗೆ ಕೂದಲು ಉದುರುವ ಸಮಸ್ಯೆ ಇದಿಯೋ ಅಂತವರು ಮತ್ತು ಕೂದಲಿನ ಬಣ್ಣ ಗಾಢವಾಗಿ ಬರುವಂತೆ ಮಾಡಲು ಅಷ್ಟೇ ಯಾಕೆ ಈ ಪ್ಯಾಕ್ ಕೂಡ ತಲೆಹೊಟ್ಟನ್ನು ನಿವಾರಿಸಿ ಕೂದಲಿನ ಆರೋಗ್ಯ ವೃದ್ಧಿಗೆ ನೆರವಾಗುತ್ತೆ.

hair grow

ಹಾಗಲಕಾಯಿಯ ರಸ!

ಹಾಗಲಕಾಯಿಯನ್ನು ಚೆನ್ನಾಗಿ ಜಜ್ಜಿ, ಅದರಿ೦ದ ದಪ್ಪ ರಸವನ್ನು ಪಡೆದುಕೊ೦ಡು, ಆ ರಸವನ್ನು ಬೂದುಬಣ್ಣದ ಕೂದಲುಗಳಿಗೆ ಹಚ್ಚಿರಿ ಹಾಗೂ ಅದನ್ನು ಒ೦ದೆರಡು ತಾಸುಗಳ ಕಾಲ ಕೂದಲಲ್ಲಿ ಹಾಗೆಯೇ ಒಣಗಗೊಡಿರಿ. ಬಳಿಕ ಕೇಶರಾಶಿಯನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಕೂದಲು ಸಹಜವಾಗಿಯೇ ಒಣಗಲಿ. ಕೇಶರಾಶಿಯ ಬೂದುಬಣ್ಣವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ಹತ್ತು ದಿನಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿರಿ.

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ಕೇರಳದಲ್ಲಿ ಮಹಿಳೆಯರು ಉದ್ದ ಹಾಗೂ ನೈಸರ್ಗಿಕ ತಲೆಗೂದಲು ಹೊಂದಿರಲು ಅವರು ಹೆಚ್ಚಾಗಿ ಉಪಯೋಸುವ ದಾಸವಾಳ ಮತ್ತು ಕೊಬ್ಬರಿ ಎಣ್ಣೆಯ ಬಳಕೆ ಎಂದು ಅರ್ಥೈಸಿಕೊಳ್ಳಬಹುದು. ದಾಸವಾಳದ ನಿಯಮಿತ ಉಪಯೋಗದಿಂದ ಕೂದಲು ಬೇಗನೇ ಬಿಳಿಯಾಗುವುದನ್ನು, ತಲೆಹೊಟ್ಟು ಬರುವುದನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟಬಹುದು. ವಿಧಾನ: ದಾಸವಾಳ ಹೂವಿನ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಕುದಿಸಿ ತಣಿಸಿಟ್ಟುಕೊಳ್ಳಬೇಕು. ತಣಿದ ಈ ಎಣ್ಣೆಯ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಬೇಕು.

hair grow

ಪಪ್ಪಾಯಿ ಪ್ಯಾಕ್

ಸರಿಯಾಗಿ ಹಣ್ಣಾಗಿರುವ ಪಪ್ಪಾಯಿಯನ್ನು ತೆಗೆದುಕೊಂಡು ತುಂಡು ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಕ್ರೀಮ್ ಹಾಕಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. 45 ನಿಮಿಷ ಕಾಲ ಈ ಮಿಶ್ರಣವನ್ನು ಹಾಗೆ ಬಿಡಿ. ನೀವು ಬಯಸಿದರೆ ಇದಕ್ಕೆ ಸ್ವಲ್ಪ ಹರಳೆಣ್ಣೆ ಅಥವಾ ತೆಂಗಿನಹಾಲನ್ನು ಮಿಶ್ರಣ ಮಾಡಿಕೊಳ್ಳಬಹುದು. ನಿಯಮಿತವಾಗಿ ಹೀಗೆ ಮಾಡಿದರೆ ಖಂಡಿತವಾಗಿಯೂ ಒಳ್ಳೆಯ ಫಲಿತಾಂಶ ನಿಮಗೆ ಸಿಗಲಿದೆ.

ಹಣ್ಣಾಗಿರುವ ಬಾಳೆಹಣ್ಣು

ಮತ್ತು ಮಯೋನಿಸ್ ಪ್ಯಾಕ್ ತುಂಬಾ ಹಣ್ಣಾಗಿರುವ ಬಾಳೆಹಣ್ಣು ಮತ್ತು ಮಯೋನಿಸ್ ಸೇರಿಸಿಕೊಂಡು ಅದನ್ನು ಒಂದು ಹದಕ್ಕೆ ಬರುವ ತನಕ ರುಬ್ಬಿಕೊಳ್ಳಿ. ಈ ಪೇಸ್ಟ್ ಗೆ ಕೆಲವು ಹನಿ ತೆಂಗಿನೆಣ್ಣೆ ಅಥವಾ ಹರಳೆಣ್ಣೆ ಅಥವಾ ಆಲಿವ್ ತೈಲ ಹಾಕಿಕೊಳ್ಳಿ. ಇದಕ್ಕೆ ವಿಟಮಿನ್ ಇ ಎಣ್ಣೆಯನ್ನು ಹಾಕಿಕೊಳ್ಳಬಹುದು. ಕೂದಲು ಹಾಗೂ ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಸುಮಾರು 45 ನಿಮಿಷ ಕಾಲ ಹಾಗೆ ಬಿಡಿ. ಒಣ ಹಾಗೂ ಹಾನಿಗೊಂಡಿರುವ ಕೂದಲಿಗೆ ಇದು ತುಂಬಾ ಒಳ್ಳೆಯದು. ನಿಯಮಿತವಾಗಿ ಇದನ್ನು ಬಳಸಿದರೆ ಕೂದಲು ಬೇಗನೆ ಬೆಳೆಯುವುದು. ಮೇಲೆ ತಿಳಿಸಿರುವಂತಹ ಹೇರ್ ಪ್ಯಾಕ್ ಗಳನ್ನು ಬಳಸಿಕೊಂಡು ಸುಂದರ ಹಾಗೂ ಕಾಂತಿಯುತ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

ಜಿಡ್ಡಿನಿಂದ ಕೂಡಿದ ಕೂದಲಿಗೆ

ಈ ಬಗೆಯ ಕೂದಲಿಗೆ ಬಾದಾಮಿ ಎಣ್ಣೆ ಅತ್ಯುತ್ತಮ ಆರೈಕೆ ಮಾಡುತ್ತದೆ. ಇದರಲ್ಲಿ ಒಮೆಗಾ -3 ಕೊಬ್ಬಿನ ಆಮ್ಲ ಹೇರಳವಾಗಿರುವುದರಿಂದ ಕೇಶರಾಶಿಯ ಸಂರಕ್ಷಣೆಯನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಬಳಕೆಯ ವಿಧಾನ: ಮೊಟ್ಟೆಯ ಬಿಳಿ ಭಾಗಕ್ಕೆ ಎಣ್ಣೆಯನ್ನು ಬೆರೆಸಿ ಮಿಶ್ರಗೊಳಿಸಿ. ನೆತ್ತಿ ಹಾಗೂ ಕೇಶರಾಶಿಗೆ ಸೂಕ್ತ ರೀತಿಯಲ್ಲಿ ಅನ್ವಯಸಿ. ಸ್ವಲ್ಪ ಸಮಯದ ಬಳಿಕ ಶಾಂಪೂ ಮತ್ತು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರಕ್ಕೆ 2 ಬಾರಿ ಈ ಕ್ರಮ ಅನ್ವಯಿಸುವುದರಿಂದ ಕೇಶರಾಶಿಯನ್ನು ಎಣ್ಣೆ ಮುಕ್ತಗೊಳಿಸಬಹುದು.

For Quick Alerts
ALLOW NOTIFICATIONS
For Daily Alerts

    English summary

    Simple home remedies to make your hair grow faster

    Are you worried seeing all those additional strands of hair in your comb every day? Well, it is natural to lose up to 100 strands of hair in a day, but excessive hair loss is definitely something that you need to worry about. Your lustrous locks need as much care as your face.So, here are some simple ways to increase your hair volume naturally.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more