For Quick Alerts
ALLOW NOTIFICATIONS  
For Daily Alerts

ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಒಂದು ಶುಂಠಿ ತುಂಡು ಸಾಕು!

By Hemanth
|

ಕೂದಲು ಉದುರುವಿಕೆಯೊಂದಿಗೆ ತಲೆಹೊಟ್ಟಿನ ಸಮಸ್ಯೆಯು ಪ್ರತಿಯೊಬ್ಬರಲ್ಲೂ ಕಂಡಬರುವುದು. ಇದಕ್ಕೆ ಪುರುಷರು ಹಾಗೂ ಮಹಿಳೆಯರೆಂಬ ಭೇದಭಾವವಿಲ್ಲ. ತಲೆಹೊಟ್ಟು ಪ್ರತಿಯೊಬ್ಬರಲ್ಲೂ ಬರಬಹುದು. ತಲೆಹೊಟ್ಟಿಗೆ ತಲೆ ಒಣಗುವುದು ಮತ್ತು ಚರ್ಮದ ತೊಗಟೆ ಎದ್ದು ಬರುವುದು ಪ್ರಮುಖ ಕಾರಣವಾಗಿದೆ. ತಲೆಹೊಟ್ಟಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದರಿಂದ ತುರಿಕೆ, ಉರಿಯೂತ ಮತ್ತು ಕೂದಲು ಉದುರುವಿಕೆ ಸಮಸ್ಯೆಯು ಕಂಡುಬರಬಹುದು.

Can Ginger Help In Treating Dandruff?

ತಲೆಹೊಟ್ಟಿಗೆ ಇಂದಿನ ದಿನಗಳಲ್ಲಿ ಹಲವಾರು ರೀತಿಯ ಶಾಂಪೂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದು ತಾತ್ಕಾಲಿಕ ಪರಿಹಾರ ನೀಡಬಹುದು ಮತ್ತು ಬೇರೆ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಇದರಿಂದ ನೈಸರ್ಗಿಕವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ತಲೆಹೊಟ್ಟಿನ ನಿವಾರಣೆ ಮಾಡಿದರೆ ಅದು ದೀರ್ಘಕಾಲ ತನಕ ಪರಿಣಾಮಕಾರಿ. ಈ ಲೇಖನದಲ್ಲಿ ಶುಂಠಿ ಬಳಸಿಕೊಂಡು ತಲೆಹೊಟ್ಟಿನ ನಿವಾರಣೆ ಮಾಡುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಓದುತ್ತಾ ಸಾಗಿ....

 ತಲೆಹೊಟ್ಟಿಗೆ ಶುಂಠಿ ಹೇಗೆ ಪರಿಣಾಮಕಾರಿ?

ತಲೆಹೊಟ್ಟಿಗೆ ಶುಂಠಿ ಹೇಗೆ ಪರಿಣಾಮಕಾರಿ?

ಶುಂಠಿಯಲ್ಲಿ ಇರುವಂತಹ ನಂಜುನಿರೋಧಕ ಗುಣವು ತಲೆಹೊಟ್ಟನ್ನು ಪರಿಣಾಮಕಾರಿಯಾಗಿ ನಿವಾರಿಸಲು ನೆರವಾಗುವುದು. ತಲೆಹೊಟ್ಟಿಗೆ ಕಾರಣವಾಗುವ ಸೋಂಕು ಮತ್ತು ಶಿಲೀಂಧ್ರವನ್ನು ನಿವಾರಣೆ ಮಾಡಿ ತಲೆಬುರುಡೆಯಲ್ಲಿ ರಕ್ತಸಂಚಾರ ಸುಗಮವಾಗುವಂತೆ ಮಾಡುವುದು. ಪಿಎಚ್ ಅಸಮತೋಲನವು ತಲೆಹೊಟ್ಟಿಗೆ ಪ್ರಮುಖ ಕಾರಣವಾಗಿದೆ. ಶುಂಠಿಯು ಪಿಎಚ್ ಮಟ್ಟ ಕಾಪಾಡಲು ನೆರವಾಗಿ ತಲೆಹೊಟ್ಟು ದೂರ ಮಾಡಿ ಕೂದಲಿನ ಬೆಳವಣಿಗೆಗೆ ನೆರವಾಗುವುದು.

ತಲೆ ಕೂದಲಿನಲ್ಲಿ ಡ್ಯಾಂಡ್ರಫ್ ಇದೆಯೇ? ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

ಶುಂಠಿ ಮತ್ತು ತೆಂಗಿನೆಣ್ಣೆ

ಶುಂಠಿ ಮತ್ತು ತೆಂಗಿನೆಣ್ಣೆ

ಬೇಕಾಗುವ ಸಾಮಗ್ರಿಗಳು

1 ಚಮಚ ಶುಂಠಿರಸ

1 ಚಮಚ ತೆಂಗಿನೆಣ್ಣೆ

ವಿಧಾನ

ತಾಜಾ ಶುಂಠಿಯ ತುಂಡು ತೆಗೆದುಕೊಂಡು ಜಜ್ಜಿ ರಸ ತೆಗೆಯಿರಿ. ತೆಂಗಿನೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಶುಂಠಿರಸ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಬುರುಡೆಗೆ ಹಚ್ಚಿಕೊಂಡು ಸುಮಾರು 40 ನಿಮಿಷ ಹಾಗೆ ಬಿಟ್ಟು ಶಾಂಪೂ ಹಾಕಿ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ವಾರ ಇದನ್ನು ಬಳಸಿ.

ಶುಂಠಿ ಮತ್ತು ಆಲಿವ್ ತೈಲ

ಶುಂಠಿ ಮತ್ತು ಆಲಿವ್ ತೈಲ

ಬೇಕಾಗುವ ಸಾಮಗ್ರಿಗಳು

1 ಚಮಚ ತುರಿದ ಶುಂಠಿ

1 ಚಮಚ ಆಲಿವ್ ತೈಲ

ವಿಧಾನ

ಒಂದು ತುಂಡು ಶುಂಠಿ ತುರಿದುಕೊಳ್ಳಿ ಮತ್ತು ಇದನ್ನು ಆಲಿವ್ ತೈಲದೊಂದಿಗೆ ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ವೃತ್ತಾಕಾರದಲ್ಲಿ ಸುಮಾರು 5 ನಿಮಿಷ ಕಾಲ ಮಸಾಜ್ ಮಾಡಿ. 30 ನಿಮಿಷ ಕಾಲ ಇದನ್ನು ಹಾಗೆ ಬಿಡಿ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದರ ಬಳಿಕ ಶಾಂಪೂ ಹಾಕಿ ತೊಳೆಯಿರಿ. ವಾರದಲ್ಲಿ ಮೂರು ಸಲ ಇದನ್ನು ಬಳಸಿ.

ಶುಂಠಿ ಮತ್ತು ಲಿಂಬೆರಸ

ಶುಂಠಿ ಮತ್ತು ಲಿಂಬೆರಸ

ಬೇಕಾಗುವ ಸಾಮಗ್ರಿಗಳು

1 ಚಮಚ ಶುಂಠಿ ರಸ

1 ಚಮಚ ಲಿಂಬೆ

ವಿಧಾನ

ಒಂದು ಪಾತ್ರೆಯಲ್ಲಿ ಶುಂಠಿ ರಸ ಮತ್ತು ಕೆಲವು ಹನಿ ಲಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮಗೆ ಫಲಿತಾಂಶ ಬರುವ ತನಕ ಇದನ್ನು ಮುಂದುವರಿಸಿ.

ಶುಂಠಿ ಮತ್ತು ರೋಸ್ ವಾಟರ್

ಶುಂಠಿ ಮತ್ತು ರೋಸ್ ವಾಟರ್

ಬೇಕಾಗುವ ಸಾಮಗ್ರಿಗಳು

ಶುಂಠಿ ರಸ

ರೋಸ್ ವಾಟರ್

ವಿಧಾನ

ಶುಂಠಿ ರಸ ಮತ್ತು ರೋಸ್ ವಾಟರ್ ನ್ನು ಸಮಪ್ರಮಾಣದಲ್ಲಿ ಬೆರೆಸಿಕೊಳ್ಳಿ. ಇದನ್ನು ನೀರಿಗೆ ಹಾಕಿ. ಈ ನೀರಿನಿಂದ ಕೂದಲು ತೊಳೆಯಿರಿ. ವಾರದಲ್ಲಿ 2-3 ಸಲ ಇದನ್ನು ಬಳಸಬಹುದು.

ಶುಂಠಿ ಮತ್ತು ಈರುಳ್ಳಿ

ಶುಂಠಿ ಮತ್ತು ಈರುಳ್ಳಿ

ಬೇಕಾಗುವ ಸಾಮಗ್ರಿಗಳು

ಶುಂಠಿ

ಈರುಳ್ಳಿ

ವಿಧಾನ

ತಾಜಾ ಶುಂಠಿ ತುಂಡು ತೆಗೆಯಿರಿ ಮತ್ತು ಇದನ್ನು ಮಿಕ್ಸಿಗೆ ಹಾಕಿ. ಒಂದು ಮಧ್ಯಮ ಗಾತ್ರದ ಈರುಳ್ಳಿ ತೆಗೆದುಕೊಂಡು ಸಣ್ಣ ತುಂಡುಗಳನ್ನಾಗಿ ಮಾಡಿ ಅದನ್ನು ಮಿಕ್ಸಿಗೆ ಹಾಕಿ. ಎರಡು ಜತೆಯಾಗಿ ರುಬ್ಬಿ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿ. 30-40 ನಿಮಿಷ ಹಾಗೆ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ. ಈರುಳ್ಳಿ ಬದಲಿಗೆ ನೀವು ಬೆಳ್ಳುಳ್ಳಿ ಬಳಸಬಹುದು.

ಶುಂಠಿ ಮತ್ತು ಆ್ಯಪಲ್ ಸೀಡರ್ ವಿನೇಗರ್

ಶುಂಠಿ ಮತ್ತು ಆ್ಯಪಲ್ ಸೀಡರ್ ವಿನೇಗರ್

ಬೇಕಾಗುವ ಸಾಮಗ್ರಿಗಳು

ಶುಂಠಿ ಹುಡಿ

ಆ್ಯಪಲ್ ಸೀಡರ್ ವಿನೇಗರ್

ವಿಧಾನ

ಒಂದು ಭಾಗ ಶುಂಠಿ ಹುಡಿಯನ್ನು ಮೂರು ಭಾಗ ರೋಸ್ ವಾಟರ್ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಇದು ಸರಿಯಾಗಿ ಮಿಶ್ರಣವಾದ ಬಳಿಕ ತಲೆಬುರುಡೆಗೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಶಾಂಪೂ ಹಾಕಿ ತೊಳೆಯಿರಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ತಲೆಹೊಟ್ಟು ಪರಿಣಾಮಕಾರಿಯಾಗಿ ನಿವಾರಣೆಯಾಗುವುದು.

ಶುಂಠಿ ಮತ್ತು ಬೀಟ್ ರೂಟ್

ಶುಂಠಿ ಮತ್ತು ಬೀಟ್ ರೂಟ್

ಬೇಕಾಗುವ ಸಾಮಗ್ರಿಗಳು

1 ಚಮಚ ಶುಂಠಿ ರಸ

1 ಚಮಚ ಬೀಟ್ ರೂಟ್ ರಸ

ಕೆಲವು ಹನಿ ಲಿಂಬೆರಸ

ವಿಧಾನ

ಸ್ವಚ್ಛವಾಗಿರುವ ಪಿಂಗಾಣಿಯಲ್ಲಿ ಬೀಟ್ ರೂಟ್ ರಸ, ಶುಂಠಿ ರಸ ಮತ್ತು ಕೆಲವು ಹನಿ ಲಿಂಬೆರಸ ಹಾಕಿ ಮಿಶ್ರಣ ಮಾಡಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು 40 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರು ಮತ್ತು ಸಲ್ಫರ್ ಮುಕ್ತ ಶಾಂಪೂವಿನಿಂದ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

English summary

How To Remove Dandruff Quickly With Ginger?

Dandruff is one of the most common hair-related issues and causes dry and flaky skin on the scalp. Not taking proper care of the condition can even lead to worse conditions like itching, scalp inflammation and hair fall. Ginger balances the pH of the scalp that ultimately helps in hair growth. Lemon, beetroot and rosewater are some ingredients you can use with ginger.
X
Desktop Bottom Promotion