For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ 'ಗ್ರೀನ್ ಟೀ' ಹೇರ್ ಪ್ಯಾಕ್ ಪ್ರಯತ್ನಿಸಿ

|

ನೀಳವಾದ ದಪ್ಪನೆಯ ಕಪ್ಪಗಿನ ಕೂದಲು ಎಲ್ಲಾ ಹೆಂಗಳೆಯರ ಕನಸಾಗಿರುತ್ತದೆ. ಆದರೆ ಇಂದಿನ ಕಲುಷಿತ ವಾತಾವರಣದಲ್ಲಿ ಈ ರೀತಿಯ ಕೇಶ ಸೌಂದರ್ಯವನ್ನು ಪಡೆದುಕೊಳ್ಳುವುದು ತುಸು ಕಷ್ಟದ ಕೆಲಸವಾಗಿದೆ ಎಂಬುದು ಹೆಂಗಳೆಯರ ಅಳಲಾಗಿದೆ. ಒತ್ತಡ, ಹೊರಗಿನ ಮತ್ತು ಮನೆಯೊಳಗಿನ ದುಡಿತ, ಕೂದಲಿಗೆ ಸರಿಯಾದ ಕಾಳಜಿಯನ್ನು ಮಾಡಲು ಸಮಯದ ಅಭಾವ ಹೀಗೆ ಮಹಿಳೆಯರು ತಮ್ಮ ಕೂದಲುದುರುವಿಕೆಯ ಕಷ್ಟವನ್ನು ವಿಧ ವಿಧವಾಗಿ ತಿಳಿಸುತ್ತಿದ್ದಾರೆ. ಇನ್ನು ದುಬಾರಿ ಬೆಲೆ ತೆತ್ತು ಬ್ಯೂಟಿಪಾರ್ಲರ್‌ಗೆ ಹೋದರೆ ಅಲ್ಲಿ ಸಮಯ ಕೂಡ ಹಾಳು ಜೊತೆಗೆ ರಾಸಾಯನಿಕ ವಸ್ತುಗಳಿಂದ ಕೂದಲಿನ ಸೌಂದರ್ಯ ಕೂಡ ನಷ್ಟವಾಗುತ್ತದೆ ಎಂಬುದು ಸ್ತ್ರೀಯರ ಅಳಲಾಗಿದೆ.

ಹಿಂದಿನ ಕಾಲದಲ್ಲಿ ಯಾವುದೇ ಶ್ಯಾಂಪೂಗಳ ಬಳಕೆಯಿಲ್ಲದೆ ದೃಢವಾದ ಸುಂದರ ಕೂದಲನ್ನು ಹೆಂಗಳೆಯರು ಪಡೆದುಕೊಂಡಿದ್ದರು. ತಲೆಹೊಟ್ಟು, ಕೂದಲುದುರುವುದು ಯಾವುದೇ ಸಮಸ್ಯೆಗಳನ್ನು ಅವರು ಅನುಭವಿಸುತ್ತಿರಲಿಲ್ಲ. ಬರಿಯ ಎಣ್ಣೆ ಹಚ್ಚಿ ನೈಸರ್ಗಿಕ ವಸ್ತುಗಳಿಂದ ಕೂದಲನ್ನು ತೊಳೆದು ತಮ್ಮ ಕೇಶರಾಶಿಯ ಸೌಂದರ್ಯವನ್ನು ಅವರು ಕಾಪಾಡುತ್ತಿದ್ದರು. ಆದರೆ ಇಂದು ಈ ಸೌಂದರ್ಯ ಪರಿಕರಗಳು ದೊರೆಯುತ್ತಿಲ್ಲ ಮತ್ತು ದೊರೆತರೂ ಅದನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಮಯ ಸಾಕಾಗುತ್ತಿಲ್ಲ.

Most Read: ಮೊಡವೆ ಕಲೆಗಳನ್ನು ನಿವಾರಿಸಲು 'ಗ್ರೀನ್ ಟೀ' ಬಳಸಿ ನೋಡಿ!

ಇಂದಿನ ಲೇಖನದಲ್ಲಿ ಗ್ರೀನ್ ಟೀ ಯಂತಹ ನೈಸರ್ಗಿಕ ಉತ್ಪನ್ನವನ್ನು ಬಳಸಿಕೊಂಡು ನಿಮ್ಮ ಕೂದಲಿನ ಕಾಳಜಿಯನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ನಿಮ್ಮ ಕೂದಲನ್ನು ಶ್ಯಾಂಪೂ ಹಚ್ಚಿ ತೊಳೆದುಕೊಂಡ ನಂತರ ಗ್ರೀನ್ ಟಿ ಸಲ್ಯೂಷನ್‌ನಿಂದ ಕೂದಲನ್ನು ತೊಳೆಯಿರಿ. ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ತಿಂಗಳಿಗೆ ಎರಡರಿಂದ ಮೂರು ಬಾರಿ ಗ್ರೀನ್ ಟೀ ಸಲ್ಯೂಷನ್ ಅನ್ನು ಕೂದಲಿಗೆ ನೀಡಿ. ಇದರಿಂದ ತಲೆಹೊಟ್ಟು ಮತ್ತು ಕೂದಲುದುರುವುದು ಕಡಿಮೆಯಾಗುತ್ತದೆ.

ಬೇಕಾಗಿರುವ ವಸ್ತುಗಳು

ಬೇಕಾಗಿರುವ ವಸ್ತುಗಳು

*3-4 ಗ್ರೀನ್ ಟೀ ಬ್ಯಾಗ್‌ಗಳು

* 1/2 ಲೀಟರ್ ನೀರು

ಮಾಡುವುದು ಹೇಗೆ?

ಮಾಡುವುದು ಹೇಗೆ?

ಗ್ರೀನ್ ಟೀ ಬ್ಯಾಗ್ ಅನ್ನು ನೀರಿನಲ್ಲಿ 10-15 ನಿಮಿಷ ಮುಳುಗಿಸಿ. ನಿಮ್ಮ ಕೂದಲನ್ನು ಶ್ಯಾಂಪೂವಿನಿಂದ ತೊಳೆದುಕೊಂಡ ನಂತರ, ಕೊನೆಯ ಬಾರಿಗೆ ತೊಳೆಯಲು ಗ್ರೀನ್ ಟಿ ಸಲ್ಯೂಷನ್ ಅನ್ನು ಬಳಸಿ. ನಂತರ ನೀರಿನಿಂದ ಕೂದಲನ್ನು ತೊಳೆಯಿರಿ. ಇನ್ನಷ್ಟು ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಲು ತಿಂಗಳಿಗೆ ಎರಡರಿಂದ ಮೂರು ಬಾರಿ ಇದನ್ನು ಅನುಸರಿಸಿ. ಇದರಿಂದ ತಲೆಹೊಟ್ಟು ದೂರಾಗುತ್ತದೆ.

ಮೊಟ್ಟೆ ಮತ್ತು ಗ್ರೀನ್ ಟೀ ಹೇರ್ ಮಾಸ್ಕ್

ಮೊಟ್ಟೆ ಮತ್ತು ಗ್ರೀನ್ ಟೀ ಹೇರ್ ಮಾಸ್ಕ್

ತಲೆ ತೊಳೆದುಕೊಂಡ ನಂತರ ನಿಮ್ಮ ಕೂದಲಿಗೆ ಹೆಚ್ಚಿನ ಪೋಷಣೆಯನ್ನು ಒದಗಿಸಲು ಕೂದಲಿಗೆ ಆಳ ಕಂಡೀಷನಿಂಗ್ ಅನ್ನು ಮಾಡಿ. ಇದರಿಂದ ಕೂದಲು ಉದುರುವುದಿಲ್ಲ.

Most Read:ನೀವೇ ಮನೆಯಲ್ಲಿ ಮಾಡಿ ನೋಡಿ: ಕಾಂತಿಯುತ ತ್ವಚೆಗಾಗಿ ಸರಳ ಫೇಸ್ ಮಾಸ್ಕ್‌ಗಳು

ಬೇಕಾಗಿರುವ ಸಾಮಾಗ್ರಿ

ಬೇಕಾಗಿರುವ ಸಾಮಾಗ್ರಿ

* 1 ಮೊಟ್ಟೆ

* 2-3 ಗ್ರೀನ್ ಟೀ

ಮಾಡುವುದು ಹೇಗೆ?

ಮಾಡುವುದು ಹೇಗೆ?

ಮೊದಲಿಗೆ ಗ್ರೀನ್ ಟೀ ಚಹಾವನ್ನು ಕುದಿಸಿಕೊಳ್ಳಿ. ನಂತರ ಪೂರ್ತಿ ಮೊಟ್ಟೆಯನ್ನು ಹಿಸುಕೊಳ್ಳಿ ಮತ್ತು ಗ್ರೀನ್ ಟೀಯನ್ನು ಅದಕ್ಕೆ ಹಾಕಿ. ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿ. ನಿಮ್ಮ ಕೂದಲಿಗೆ ಮತ್ತು ತಲೆಬುರುಡೆಗೆ ಇದನ್ನು ಹಚ್ಚಿಕೊಳ್ಳಿ. ಶವರ್ ಕ್ಯಾಪ್ ಬಳಸಿ ಕೂದಲನ್ನು ಕವರ್ ಮಾಡಿ. ಕೆಲವು ನಿಮಿಷ ಹಾಗೆಯೇ ಬಿಡಿ. ನಿಮ್ಮ ಕೂದಲನ್ನು ಮೃದುವಾದ ಶ್ಯಾಂಪೂ ಬಳಸಿ ತೊಳೆದುಕೊಳ್ಳಿ.

ಗ್ರೀನ್ ಟೀ ಮತ್ತು ತೆಂಗಿನೆಣ್ಣೆ ಮಾಸ್ಕ್

ಗ್ರೀನ್ ಟೀ ಮತ್ತು ತೆಂಗಿನೆಣ್ಣೆ ಮಾಸ್ಕ್

ನಿಮ್ಮ ಕೂದಲುದುರುವುದನ್ನು ತಡೆಯಲು ಇದು ಪರಿಣಾಮಕಾರಿಯಾದ ಮಾಸ್ಕ್ ಆಗಿದೆ

* 2 ಚಮಚ ಗ್ರೀನ್ ಟೀ

* 1 ಚಮಚ ತೆಂಗಿನೆಣ್ಣೆ

* 1/2 ಲಿಂಬೆ

ಮಾಡುವುದು ಹೇಗೆ?

ಮಾಡುವುದು ಹೇಗೆ?

ಗ್ರೀನ್ ಚಹಾವನ್ನು ಕುದಿಸಿಕೊಳ್ಳಿ. ಅರ್ಧ ಲಿಂಬೆಯನ್ನು ಹಿಂಡಿಕೊಳ್ಳಿ ಮತ್ತು ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಕೂದಲಿನ ಬುಡಕ್ಕೆ ಮತ್ತು ತುದಿಗೆ ಇದನ್ನು ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ ವೃತ್ತಾಕಾರವಾಗಿ 3-5 ನಿಮಿಷಗಳ ಕಾಲ ಮಸಾಜ್ ಮಾಡಿ. 30 ನಿಮಿಷ ಹಾಗೆಯೇ ಬಿಡಿ ನಂತರ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ನಿಯಮಿತವಾಗಿ ಬಳಸಿದರೆ ವ್ಯತ್ಯಾಸ ನಿಮಗೆ ಗೊತ್ತಾಗುತ್ತದೆ.

English summary

green-tea hairpack for hair fall

Are you among those who keep experimenting with various hair care products to control your hair fall? Hair fall can be a nightmare among most of us out there. Green tea is a rich source of antioxidants and it helps in boosting hair growth. When green tea is applied on the scalp, it helps in promoting blood circulation, thus helping the hair to grow.
X
Desktop Bottom Promotion