For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗೆ- ಅಡುಗೆ ಸೋಡಾದಿಂದ ಮಾಡಿದ ಹೇರ್ ಕಂಡೀಷನರ್

|

ಪ್ರತಿ ಕೆಲವು ದಿನಗಳಿಗೊಮ್ಮೆ ಮಾರುಕಟ್ಟೆಯಲ್ಲಿ ಹೊಸ ಹೊಸ ಕೂದಲ ರಕ್ಷಣೆಯ ಉತ್ಪನ್ನಗಳು ಬಿಡುಗಡೆಯಾಗುತ್ತವೆ.ಅವುಗಳು ಕೂದಲ ಮೇಲೆ ಅದ್ಭುತವಾದ ಕೆಲಸವನ್ನು ಮಾಡಿ ಕೂದಲಿನ ಸಮಸ್ಯೆಗಳನ್ನು ದೂರ ಮಾಡುತ್ತವೆ ಎಂದು ಅವನ್ನು ಪ್ರತಿಸಿಬಿಂಬಿಸುತ್ತಾರೆ.ಆದರೆ ನೀವು ಹೊರಗೆ ಅಂಗಡಿಗಳಿಂದ ಖರೀದಿಸಿದ ಉತ್ಪನ್ನಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಪದಾರ್ಥಗಳು ನಿಮ್ಮ ಅಡುಗೆಮನೆಗಳಲ್ಲಿ ಈಗಾಗಲೇ ಲಭ್ಯವಿದೆ ಎಂಬ ವಿಷಯ ನಿಮಗೆ ತಿಳಿದಿದೆಯೇ?

ಹೌದು,ಹಿಂದಿನಕಾಲದಿಂದ ವಿಶ್ವಾದ್ಯಂತ ಮಹಿಳೆಯರು ಸುಂದರವಾದ ಕೂದಲನ್ನು ಪಡೆಯಲು ಮನೆಯ ಪರಿಹಾರಗಳನ್ನೇ ಬಳಸಿದ್ದಾರೆ. ಆ ಸೌಂದರ್ಯದ ರಹಸ್ಯಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತಿಳಿಸುತ್ತಾ ಬಂದಿದ್ದಾರೆ.ಜನಪ್ರಿಯವಾಗಿ 'ಅಜ್ಜಿಯ ಗುಟ್ಟುಗಳು ' ಎಂದೇ ಕರೆಯಲ್ಪಡುವ ಸೌಂದರ್ಯದ ಗುಟ್ಟುಗಳು ಮಹಿಳೆಯರು ನೈಸರ್ಗಿಕವಾಗಿ ಸುಂದರವಾದ ಕೂದಲನ್ನು ಪಡೆದುಕೊಳ್ಳಲು ಸಹಾಯಕಾರಿಯಾಗಿವೆ. ಈ ಗುಟ್ಟುಗಳಲ್ಲಿ ಒಂದು ಅಡುಗೆ ಸೋಡಾ.ನೀವು ಈಗಾಗಲೇ ಇದರ ಬಗ್ಗೆ ತಿಳಿದಿರುತ್ತೀರಿ ಅಲ್ಲವೇ?

DIY Baking Soda Conditioner For Hair

ಅಡುಗೆ ಸೋಡಾ ನಿಮ್ಮ ಕೂದಲಿನ ಮೌಲ್ಯವನ್ನು ಹೆಚ್ಚಿಸುವ ಒಳ್ಳೆಯ ಕೂದಲು ರಕ್ಷಕ ಉತ್ಪನ್ನವಾಗಿದೆ.ಇದು ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಬಲವಾಗುವಂತೆ ಮಾಡಿ ನಿಮಗೆ ಅದ್ಭುತವಾಗಿ ಕಾಣುವ ಕೂದಲನ್ನು ನೀಡಲು ಸಹಾಯ ಮಾಡುತ್ತದೆ. ನಿಮ್ಮ ಕೂದಲಿಗೆ ಇದು ಹಲವು ರೀತಿಗಳಿಂದ ಲಾಭದಾಯಕವಾಗಿದ್ದರೂ,ವಿಶೇಷವಾಗಿ ಕೂದಲನ್ನು ನಯಗೊಳಿಸುವ ಇದರ ಸಾಮರ್ಥ್ಯವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.ಪ್ರಮುಖವಾಗಿ ಇದನ್ನು ಹೇರ್ ಕಂಡಿಷನರ್ ಆಗಿ ಬಳಸಿದಾಗ, ಅದು ತುಂಬಾ ಚೆನ್ನಾಗಿ ಕೂದಲನ್ನು ಕಂಡೀಷನಿಂಗ್ ಮಾಡಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ .

ಇದು ಕೇವಲ ನಿಮ್ಮ ಕೂದಲನ್ನು ಸುಸ್ಥಿತಿಯಲ್ಲಿಟ್ಟು ಅದರ ತೇವಾಂಶವನ್ನು ಕಾಪಾಡುವುದಷ್ಟೇ ಅಲ್ಲದೆ ಕೂದಲಿನ ವಿನ್ಯಾಸವನ್ನು ಮೃದುಗೊಳಿಸುತ್ತದೆ ಮತ್ತು ಕೂದಲು ಒಣಗುವುದನ್ನು ತಡೆಗಟ್ಟುತ್ತದೆ .ಇಂದು ಬೋಲ್ಡ್ ಸ್ಕೈ ಅಲ್ಲಿ ,ಅಡುಗೆ ಸೋಡಾದ ಹೇರ್ ಕಂಡಿಷನರ್ ಅನ್ನು ನೀವೇ ಹೇಗೆ ತಯಾರಿಸಿಕೊಳ್ಳಬಹುದೆಂದು ತಿಳಿಸುತ್ತೇವೆ .ಇದು ನಿಮ್ಮ ಕೂದಲಲ್ಲಿ ತೇವಾಂಶವನ್ನು ಹಾಗೆಯೇ ಉಳಿಸುತ್ತದೆ ಮತ್ತು ಅದರ ಆರೋಗ್ಯ ಮತ್ತು ನೋಟವನ್ನು ಹೆಚ್ಚಾಗುವಂತೆ ಮಾಡುತ್ತದೆ. ನಾವು ಕೂದಲಿನ ತೇವಾಂಶವನ್ನು ಉಳಿಸಲು ಅಡುಗೆ ಸೋಡಾ ಏಕೆ ಬಳಸಬೇಕು?

ಸದೃಢ ಕೂದಲಿಗಾಗಿ, ಅಡುಗೆ ಸೋಡಾದ ಶಾಂಪೂ!

ಅಡುಗೆ ಸೋಡಾವು ನೆತ್ತಿಯ ಬುಡದಲ್ಲಿರುವ ವಿಷಕಾರಿ ಅಂಶಗಳನ್ನು,ಕಲ್ಮಶಗಳನ್ನು,ಸತ್ತ ಚರ್ಮದಕೋಶಗಳನ್ನು,ನೀವು ತಲೆಗೆ ಉಪಯೋಗಿಸುವ ಹಲವು ರೀತಿಯ ಉತ್ಪನ್ನಗಳಿಂದ ಉಂಟಾದ ಶೇಖರಣೆಯನ್ನು ತೆಗೆದುಹಾಕುವ ಸಂಯುಕ್ತಗಳನ್ನು ಒಳಗೊಂಡಿದೆ. ಇದು ನಿಮ್ಮ ಕೂದಲಿಗೆ ಕಳೆದುಹೋದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ವಾಣಿಜ್ಯ ಕೂದಲು-ಆರ್ಧ್ರಕ ಉತ್ಪನ್ನಗಳಾದ ಮೌಸ್ಸ್, ಸೀರಮ್, ಕ್ರೀಮ್ ಮುಂತಾದವುಗಳಿಗೆ ಹೋಲಿಸಿದಾಗ,ಅಡುಗೆ ಸೋಡಾ ಸುರಕ್ಷಿತವಾಗಿದೆ ಮತ್ತು ಇದರಲ್ಲಿ ಯಾವುದೇ ರೀತಿಯ ಹಾನಿಕಾರಕ ರಾಸಾಯನಿಕ ವಸ್ತುಗಳು ಇಲ್ಲದೇ ಇರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.ಅದಕ್ಕಾಗಿಯೇ ಕೂದಲನ್ನು ಶುಷ್ಕತೆಯಿಂದ ಮತ್ತು ತಲೆಹೊಟ್ಟಿನಿಂದ ಕಾಪಾಡಿ ಒಳ್ಳೆಯ ತೇವಾಂಶವನ್ನು ಕಾಪಾಡಿಕೊಳ್ಳುವಂತೆ ಮಾಡಲು ತಲೆಗೂದಲಿಗೆ ಅಡಿಗೆ ಸೋಡಾವನ್ನು ಬಳಸಲು ಶಿಫಾರಸು ಮಾಡಲಾಗಿದೆ.

ಬೇಕಿಂಗ್ ಸೋಡಾ ಹೇರ್ ಕಂಡೀಷನರ್ ಹೇಗೆ ತಯಾರಿಸುವುದು?

ಈ ಪ್ರಯತ್ನಿಸಿ-ಪರೀಕ್ಷಿಸಿದ ಅಡಿಗೆ ಸೋಡಾದ ಹೇರ್ ಕಂಡಿಷನರ್ ಅನ್ನು ಬಹಳ ಸುಲಭವಾಗಿ ತಯಾರಿಸಬಹುದು
ಉತ್ತಮ ಫಲಿತಾಂಶಗಳಿಗಾಗಿ ನೀವು ಈ ಕೆಳಗಿನ ವಿಧಾನವನ್ನು ಅನುಕರಿಸಿ .

ಬೇಕಾಗಿರುವ ಪದಾರ್ಥಗಳು:

1/4 ನೇ ಕಪ್ನಷ್ಟು ಬೇಕಿಂಗ್ ಸೋಡ
1/4 ಕಪ್ ಉತ್ತಮ ಹೇರ್ ಕಂಡಿಷನರ್
1 ಶವರ್ ಕ್ಯಾಪ್
1 ಬಿಸಿಯಾದ ಟವೆಲ್

ಹೇಗೆ ಮಾಡುವುದು

• ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಮೇಲೆ ತಿಳಿಸಿದಷ್ಟು ಪ್ರಮಾಣದ ಅಡುಗೆ ಸೋಡಾ ಮತ್ತು ಹೇರ್ ಕಂಡೀಷನರ್ ಅನ್ನು ಹಾಕಿ.
• ಒಂದು ಚಮಚವನ್ನು ಉಪಯೋಗಿಸಿ ಈ ಮೇಲಿನ ಮಿಶ್ರಣವನ್ನು ಚೆನ್ನಾಗಿ ಪೇಸ್ಟ್ ಆಗುವಂತೆ ಮಾಡಿ.
• ಇದನ್ನು ಮಾಡಿದ ನಂತರ ನಿಮ್ಮ ಕೂದಲನ್ನು ಶಾಂಪೂ ಮಾಡುವ ತನಕ ಒಂದು ಮುಚ್ಚಳವನ್ನು ಇದರ ಮೇಲೆ ಮುಚ್ಚಿ.

ಹೇಗೆ ಬಳಸಬೇಕು ?

• ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ, ಕಂಡಿಷನರ್ ಅನ್ನು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ನಿಮ್ಮ ಕೂದಲಿಗೆ ಹಚ್ಚಿ.
• ನಿಮ್ಮ ಬೆರಳುಗಳಿಂದ ಕೆಲವು ಸೆಕೆಂಡುಗಳ ಕಾಲ ಮೃದುವಾಗಿ ಮಸಾಜ್ ಮಾಡಿ.
• ನಿಮ್ಮ ನೆತ್ತಿಯಲ್ಲಿ ಧೂಳಿನ ಕಣಗಳು ಬರುವುದನ್ನು ತಡೆಗಟ್ಟಲು ಶವರ್ ಕ್ಯಾಪ್ನೊಂದಿಗೆ ನಿಮ್ಮ ಕೂದಲನ್ನು ಮುಚ್ಚಿ
• ನಂತರ ತಲೆಯ ಮೇಲೆ ಬಿಸಿ ಟವಲ್ ಅನ್ನು ಸುತ್ತಿರಿ.
• ನೀವು ಮಾಡಿದ ಈ ಕೂದಲಿನ ಕಂಡಿಷನರ್ ಅನ್ನು ಕನಿಷ್ಠ ಒಂದು ಗಂಟೆಯ ಕಾಲ ಹಾಗೆ ಬಿಡಿ.
• ಟವೆಲ್ ಮತ್ತು ಕ್ಯಾಪ್ ತೆಗೆದು ಮತ್ತು ನಿಮ್ಮ ಕೂದಲನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

ಈ ಮಾಸ್ಕ್ ಅನ್ನು ಎಷ್ಟು ಬಾರಿ ಬಳಸಬೇಕು

*ಯಾವುದೇ ಸೀರಮ್ ಅಥವಾ ಸ್ಟೈಲಿಂಗ್ ಇಲ್ಲದೆ ನಿಮ್ಮ ಕೂದಲಿಗೆ ಒಳ್ಳೆಯ ತೇವಾಂಶವನ್ನು ನೀಡಿ ಅದ್ಭುತವಾಗಿ ಕಾಣುವ ಕೂದಲನ್ನು ಪಡೆಯುವಂತೆ ಮಾಡುವ ಈ ನೈಸರ್ಗಿಕ ಹೇರ್ ಕಂಡಿಷನರ್ ಅನ್ನು ತಿಂಗಳಿಗೊಮ್ಮೆ ಬಳಸಿ.

ಅಡುಗೆ ಸೋಡಾದಿಂದ ನಿಮ್ಮ ಕೂದಲಿಗೆ ಇರುವ ಇತರೆ ಪ್ರಯೋಜನಗಳು

*ಅಡುಗೆ ಸೋಡಾ ನೆತ್ತಿಯ ಮೇಲಿರುವ ಹೆಚ್ಚಾದ ಎಣ್ಣೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ಇದು ಎಣ್ಣೆಕೂದಲಿನ ಪ್ರಕಾರಕ್ಕೆ ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ ನಿಮ್ಮ ಜಿಡ್ಡಾದ ಕೂದಲಿನ ಸಮಸ್ಯೆಯಿಂದ ಹೊರಬರಬಹುದು.
*ಇದರಲ್ಲಿರುವ ಕೂದಲು ಮತ್ತು ತಲೆಬುರುಡೆ ಸ್ವಚ್ಛಗೊಳಿಸುವ ಸಾಮರ್ಥ್ಯದ ಕಾರಣ ಶಾಂಪೂಗಳಲ್ಲಿ ಇದನ್ನು ಪ್ರಮುಖ ಅಂಶವಾಗಿ ಬಳಸಲಾಗುತ್ತದೆ. ನೆತ್ತಿಯಲ್ಲಿ ನೀವು ಬಳಸಿರುವ ವಿವಿಧ ಉತ್ಪನ್ನಗಳಿಂದಾದ ಶೇಖರಣೆ ಮತ್ತು ಕೊಳೆಯನ್ನು ಇದು ತೆಗೆದುಹಾಕುತ್ತದೆ.
*ಅಡುಗೆ ಸೋಡಾದ ಒಳ್ಳೆಯಗುಣವು ಕೂದಲಿನ ದಟ್ಟತೆಯನ್ನು ಹೆಚ್ಚಿಸುತ್ತದೆ ಹಾಗೂ ನಿರ್ಜೀವ ಮತ್ತು ಮಂದವಾಗಿ ಕಾಣುವ ಕೂದಲಿಗೆ ಒಳ್ಳೆಯ ಹೊಳಪನ್ನು ನೀಡುತ್ತದೆ.
*ಶಿಲೀಂದ್ರ ನಿರೋಧಕ ಶಕ್ತಿಯಿರುವ ಅಡುಗೆ ಸೋಡಾ ಸಿಟ್ಟು ತರಿಸುವಂತಹ ತಲೆಯ ಹೊಟ್ಟಿಗೆ ಪರಿಣಾಮಕಾರಿಯಾಗಿದೆ.ಇದನ್ನು ಬಳಸುವುದರಿಂದ ನಿಮ್ಮ ತಲೆಯ ಹೊಟ್ಟು ನಿವಾರಣೆಯಾಗುವುದಲ್ಲದೇ ಅದರಿಂದಾದ ತಲೆಯಲ್ಲಿ ಉಂಟಾಗಬಹುದಾದ ಇತರ ಸಮಸ್ಯೆಗಳಾದ ನವೆ ಮತ್ತು ಹೊಟ್ಟನ್ನು ತಡೆಯುತ್ತದೆ.
*ತಲೆಯಲ್ಲಿ ಹೊಸ ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದಕ್ಕೆ ಇದನ್ನು ಉತ್ತಮವಾದ ಪರಿಹಾರವೆಂದು ಪರಿಗಣಿಸಲಾಗಿದೆ.
*ನಿಮ್ಮ ಕೂದಲಿಗೆ ಅಡಿಗೆ ಸೋಡಾದಿಂದ ಪ್ರಯೋಜನಕಾರಿಯಾಗಬಲ್ಲ ಅನೇಕ ಮಾರ್ಗಗಳ ಬಗ್ಗೆ ನೀವೀಗ ತಿಳಿದುಕೊಂಡಿದ್ದೀರಾ,ನೀವು ಈಗ ಮಾಡಬೇಕಾದದ್ದು ಏನೆಂದರೆ ಇದನ್ನು ನಿಮ್ಮ ಕೂದಲ ರಕ್ಷಣೆಯಲ್ಲಿ ಒಂದು ಭಾಗವನ್ನಾಗಿ ಉಪಯೋಗಿಸಿ.ಇದನ್ನು ಉಪಯೋಗಿಸಲು ಹಲವು ಮಾರ್ಗಗಳಿವೆ,ಆದರೆ ಸುಲಭವಾದದ್ದು ಎಂದರೆ ಅಡಿಗೆ ಸೋಡಾದ ಹೇರ್ ಕಂಡಿಷನರ್ .ಇದು ತಯಾರಿಸಲು ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ ನಯವಾದ ಮತ್ತು ಒಳ್ಳೆಯ ತೇವಾಂಶವುಳ್ಳ ಕೂದಲನ್ನು ಪಡೆಯಲು ಇದನ್ನು ಪ್ರಯತ್ನಿಸಿ ನೋಡಿ.

English summary

DIY Baking Soda Conditioner For Hair

Every now and then, new hair care products get launched in the market that claim to work wonders on the state of the hair and fight off unsightly problems. But did you know that the ingredients that work far more effectively than those store-bought products are already available in your kitchen cabinet? That's correct. For ages, women worldwide have used home remedies for attaining gorgeous hair. Such beauty secrets have been passed down from one generation to another. Popularly termed as grandma's secret, such beauty secrets have helped women achieve naturally beautiful hair.
Story first published: Thursday, August 30, 2018, 18:14 [IST]
X
Desktop Bottom Promotion