For Quick Alerts
ALLOW NOTIFICATIONS  
For Daily Alerts

ಬಿಯರ್ ಶಾಂಪೂ ಬಗ್ಗೆ ಕೇಳಿದ್ದೀರಾ? ಇದರಿಂದ ಕೂದಲಿಗೆ ಸಾಕಷ್ಟು ಪ್ರಯೋಜನಗಳಿವೆ

|

ಬಿಯರ್ ಎಂಬ ಮಾದಕ ಪಾನೀಯಕ್ಕೆ ಕೂದಲ ಆರೈಕೆಯಲ್ಲಿ ಏನು ಕೆಲಸ ಎಂದು ನೀವು ಅಚ್ಚರಿ ಪಡುತ್ತಿರಬಹುದು. ಇದೊಂದು ವಿಶ್ವದ ನೆಚ್ಚಿನ ಮಾದಕ ಪಾನೀಯ ಎಂದೇ ನಾವೆಲ್ಲರೂ ಇದುವರೆಗೆ ತಿಳಿದುಕೊಂಡಿದ್ದೆವು, ಆದರೆ ತಡವಾಗಿಯಾದರೂ ಸರಿ, ಇದು ಕೂದಲ ಆರೈಕೆಯನ್ನೂ ಶಾಂಪೂ ರೂಪದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುತ್ತದೆ ಎಂಬುದು ಈಗ ಗೊತ್ತಾಗಿದೆ. ಕೂದಲಿಗೆ ಆರೈಕೆ ನೀಡುವುದು ಮಾತ್ರವಲ್ಲ, ಕೂದಲನ್ನು ನುಣುಪುಗೊಳಿಸಿ ರೇಶ್ಮೆಯಂತಾಗಿಸಲೂ ಬಿಯರ್ ಬಳಕೆಯಾಗುತ್ತಿದೆ, ಒಂದರ್ಥದಲ್ಲಿ ಇದು ಕೂದಲನ್ನು ಅದ್ಭುತವಾಗಿಸುವ ಮಾಯಾದ್ರವವೇ ಆಗಿದೆ.

ಯಾವಾಗ ಬಿಯರ್ ಶಾಂಪೂ ಕೂದಲಿಗೆ ಕೂದಲಿಗೆ ಇಷ್ಟೆಲ್ಲಾ ಪ್ರಯೋಜನಗಳನ್ನು ನೀಡುತ್ತಿದೆ ಎಂದು ನಿಮಗೆ ಅರಿವಾಯ್ತೋ, ಆಗ ಬೇರೆಲ್ಲಾ ಶಾಂಪೂಗಳನ್ನು ಬದಿಗಿರಿಸುವುದು ನಿಮಗೆ ಅನಿವಾರ್ಯವಾಗುತ್ತದೆ. ಏಕೆಂದರೆ ಬಿಯರ್ ಕೂದಲನ್ನು ಸ್ವಚ್ಛಗೊಳಿಸುವ, ಕಾಂತಿಕಾರಕ ಹಾಗೂ ಕಳೆಗುಂದಿದ ಕೂದಲಿಗೆ ಮರುಚೈತನ್ಯ ನೀಡುವ ಗುಣಗಳನ್ನು ಹೊಂದಿದೆ. ಈ ಆರೈಕೆ ಪಡೆದ ಕೂದಲು ಸೊಂಪಾಗಿ, ಮೃದುವಾಗಿ ಹಾಗೂ ಸುಲಭವಾಗಿ ನಿರ್ವಹಿಸುವಂತಹ ಹಾಗೂ ನೀಳವಾಗಿ ಬೆಳವಣಿಗೆ ಪಡೆಯುವಂತಹದ್ದಾಗಿ ಮಾರ್ಪಾಡು ಹೊಂದುತ್ತದೆ.

ಬಿಯರ್ ಶಾಂಪೂವಿನ ಪ್ರಯೋಜನಗಳು

ಬಿಯರ್ ಶಾಂಪೂವಿನ ಪ್ರಯೋಜನಗಳು

ಒಂದು ವೇಳೆ ಮೇಲಿನ ವಾಕ್ಯದಲ್ಲಿ ಓದಿದ ಪ್ರಯೋಜನನಗಳನ್ನು ಬಗ್ಗೆ ಇನ್ನೂ ನಂಬಿಕೆ ಬರದೇ ಇದ್ದರೆ, ಈ ಕೆಳಗಿನ ಮಾಹಿತಿಗಳು ನಿಮ್ಮ ನಂಬಿಕೆಯನ್ನು ಬದಲಿಸಬಹುದು:

* ಬಿಯರ್ ನಲ್ಲಿ ವಿಟಮಿನ್ನುಗಳು, ಖನಿಜಗಳು ಹಾಗೂ ಇತರ ಅವಶ್ಯಕ ಪೋಷಕಾಂಶಗಳು ಸಮೃದ್ದವಾಗಿದ್ದು ಕೂದಲ ಬೆಳವಣಿಗೆಗೆ ನೆರವಾಗುತ್ತವೆ. ವಿಶೇಷವಾಗಿ ಇದರಲ್ಲಿ ಸಿಲಿಕಾ ಎಂಬ ಖನಿಜ ಉತ್ತಮ ಪ್ರಮಾಣದಲ್ಲಿದೆ. ಇದರೊಂದಿಗೆ ತಾಮ್ರ, ಗಂಧಕ, ಕಬ್ಬಿಣ, ಮೆಗ್ನೇಶಿಯಂ ಹಾಗೂ ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿದ್ದು ಇವೆಲ್ಲವೂ ಕೂದಲ ಬೆಳವಣಿಗೆಗೆ ನೆರವಾಗುತ್ತವೆ.ತಲೆ ಕೂದಲಿಗೆ ಬಿಯರ್‌‌ನಿಂದ ಆರೈಕೆ ಮಾಡಿದರೆ, ಕೂದಲು ಬೆಳೆಯುತ್ತದೆ!

ತಲೆ ಕೂದಲಿಗೆ ಬಿಯರ್‌‌ನಿಂದ ಆರೈಕೆ ಮಾಡಿದರೆ, ಕೂದಲು ಬೆಳೆಯುತ್ತದೆ!

ತುರಿಕೆ ಹಾಗೂ ತಲೆಹೊಟ್ಟನ್ನು ನಿವಾರಿಸಲೂ ನೆರವಾಗುತ್ತದೆ

ತುರಿಕೆ ಹಾಗೂ ತಲೆಹೊಟ್ಟನ್ನು ನಿವಾರಿಸಲೂ ನೆರವಾಗುತ್ತದೆ

* ಬಿಯರ್ ಕೂದಲಿಗೆ ಅತ್ಯುತ್ತಮವಾದ ಕಂಡೀಶನರ್ ಆಗಿದ್ದು ಕೂದಲನ್ನು ರೇಶ್ಮೆಯಂತೆ ನುಣುಪಾಗಿಸಲು ಹಾಗೂ ಇನ್ನಷ್ಟು ಸೊಂಪಗಾಗಿಸಲು ನೆರವಾಗುತ್ತದೆ. ಬಿಯರ್ ನಲ್ಲಿರುವ ಸಿಲಿಕಾ ಎಂಬ ಧಾತು ಈ ಗುಣಕ್ಕೆ ನೇರವಾದ ಪಾತ್ರ ವಹಿಸುತ್ತದೆ. ತನ್ಮೂಲಕ ಕೇವಲ ಕಾಂತಿ ಮಾತ್ರವಲ್ಲ, ಕೂದಲ ಗುಣಮಟ್ಟವನ್ನೂ ಹೆಚ್ಚಿಸುತ್ತದೆ.

* ಬಿಯರ್ ಹೆಚ್ಚುವರಿ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಏಕೆಂದರೆ ಇದು ಕೊಂಚವೇ ಆಮ್ಲೀಯವಾಗಿದ್ದು ತ್ವಚೆಯಲ್ಲಿರುವ ಹೆಚ್ಚುವರಿ ಎಣ್ಣೆಯಂಹ, ಕೂದಲಿಗೆ ಅಂಟಿಕೊಂಡಿದ್ದ ಜಿಡ್ಡಿನ ಅಂಶಗಳನ್ನು ಸಡಿಲಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚನ ಮಹಿಳೆಯರು ಬಯಸುವ ಹಗುರ ಮತ್ತು ಗಾಳಿಗೆ ಹಾರಾಡುವ ಕೂದಲು ಪಡೆಯಲು ಈ ಗುಣ ನೆರವಾಗುತ್ತದೆ.

* ಬಿಯರ್ ಮದ್ಯ ಎಂಬ ಅಂಶವನ್ನು ಮರೆತು ಇದರ ಕೇವಲ ಔಷಧೀಯ ಗುಣಗಳನ್ನು ಪರಿಗಣಿಸಿದರೆ ಇದರಷ್ಟು ಒಳ್ಳೆಯ ಸ್ವಚ್ಛಕಾರಕ ದ್ರವ ಇನ್ನೊಂದಿಲ್ಲ. ತ್ವಚೆಯ ಚರ್ಮದ ಆಳದಲ್ಲಿ ಹುದುಗಿದ್ದ ಕಲ್ಮಶಗಳನ್ನು ನಿವಾರಿಸುವ ಜೊತೆಗೇ ತಲೆಯಲ್ಲಿ ಎದುರಾಗುವ ತುರಿಕೆ ಹಾಗೂ ತಲೆಹೊಟ್ಟನ್ನು ನಿವಾರಿಸಲೂ ನೆರವಾಗುತ್ತದೆ.

ಬಿಯರ್ ನೈಸರ್ಗಿಕವಾದ ಕೂದಲ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ.

ಬಿಯರ್ ನೈಸರ್ಗಿಕವಾದ ಕೂದಲ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ.

* ಬಿಯರ್ ನಲ್ಲಿರುವ ಪ್ರೋಟೀನುಗಳು ಮತ್ತು ವಿಟಮಿನ್ನುಗಳು ಕೂದಲಿಗೆ ದೃಢತೆ ನೀಡುತ್ತದೆ. ಕೂದಲನ್ನು ಬಿಯರ್ ನೊಂದಿಗೆ ತೋಯಿಸುವ ಅಥವಾ ಕೇವಲ ಸಿಂಪಡಿಸಿಕೊಳ್ಳುವ ಮೂಲಕವೂ ಕೂದಲನ್ನು ಸೊಂಪಾಗಿಸಬಹುದು. ಇದರಲ್ಲಿರುವ ವಿಟಮಿನ್ ಬಿ ಹಾಗೂ ಇತರ ಖನಿಜಗಳು ಘಾಸಿಗೊಂಡಿದ್ದ ಕೂದಲನ್ನು ರಿಪೇರಿಗೊಳಿಸಿ ಒಟ್ಟಾರೆ ಕೂದಲ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಿಯರ್ ನಲ್ಲಿರುವ ಮಾಲ್ಟೋಸ್ ಮತ್ತು ಸುಕ್ರೋಸ್ ಎಂಬ ಸಕ್ಕರೆಗಳು ಕೂದಲ ಬುಡಗಳನ್ನು ದೃಢಗೊಳಿಸಿ ಸುಲಭವಾಗಿ ಉದುರದಂತೆ ಮಾಡುತ್ತವೆ ಹಾಗೂ ಕೂದಲಿಗೆ ಕಾಂತಿಯನ್ನೂ ನೀಡುತ್ತವೆ.

* ಬಿಯರ್ ಕೂದಲಿಗೆ ಅತ್ಯುತ್ತಮವಾದ ರೋಗ ನಿರೋಧಕ ಗುಣವನ್ನು ಒದಗಿಸುತ್ತದೆ ಹಾಗೂ ಈ ಮೂಲಕ ಸೂರ್ಯನ ಅತಿನೇರಳೆ ಕಿರಣಗಳು ಮತ್ತು ಪ್ರದೂಷಣೆಯಿಂದ ರಕ್ಷಿಸುತ್ತದೆ.

* ಬಿಯರ್ ನೈಸರ್ಗಿಕವಾದ ಕೂದಲ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ. ಹಾಗಾಗಿ ಕೂದಲ ಕಾಂತಿ ಹೆಚ್ಚಿಸಿಕೊಳ್ಳಲು ಬಿಯರ್ ನೆರವಾಗಲಿದೆ.

ಕೂದಲ ಆರೈಕೆಗಾಗಿ ಬಿಯರ್ ನ ಬಳಕೆಯ ವಿಧಾನಗಳು

ಕೂದಲ ಆರೈಕೆಗಾಗಿ ಬಿಯರ್ ನ ಬಳಕೆಯ ವಿಧಾನಗಳು

ಬಿಯರ್ ನಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಇದನ್ನು ಸರಿಯಾದ ವಿಧಾನದಲ್ಲಿ ಬಳಸಿದಾಗಲೇ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ

ಕೂದಲಿಗೆ ಮತ್ತು ತ್ವಚೆಗೆ ಬಿಯರ್! ಕೇಳಿ ಅಚ್ಚರಿಯಾಯಿತೇ?
ಕೂದಲನ್ನು ನೆನೆಸಿಕೊಳ್ಳಲು

ಕೂದಲನ್ನು ನೆನೆಸಿಕೊಳ್ಳಲು

ಇದಕ್ಕಾಗಿ ಮೊದಲು ಕೂದಲಿಗೆ ನಿಮ್ಮ ನಿತ್ಯದ ಎಣ್ಣೆಯ ಮಸಾಜ್ ಮುಗಿದ ಬಳಿಕ ನಿಮ್ಮ ನಿತ್ಯದ ಶಾಂಪೂ ಬಳಸಿ ತೊಳೆದುಕೊಳ್ಳಿ. ಅಂತಿಮವಾಗಿ ಬಿಯರ್ ಅನ್ನು ಕಂಡೀಶನರ್ ರೀತಿಯಲ್ಲಿ ಬಳಸಿ. ಕೂದಲ ತುದಿಯ ಜೊತೆಗೇ ತಲೆಯ ಚರ್ಮಕ್ಕೂ ಬಿಯರ್ ಹಚ್ಚಿಕೊಂಡು ಸುಮಾರು ಮೂರರಿಂದ ನಾಲ್ಕು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಿಯರ್ ನ ವಾಸನೆ ಹೋಗಿಲ್ಲದೇ ಇದ್ದರೆ

ಬಿಯರ್ ನ ವಾಸನೆ ಹೋಗಿಲ್ಲದೇ ಇದ್ದರೆ

ಒಂದು ವೇಳೆ ಬಿಯರ್ ನ ವಾಸನೆ ಸುಲಭವಾಗಿ ಹೋಗಿಲ್ಲದೇ ಇದ್ದರೆ ಇದರ ಬಳಿಕ ನಿಮ್ಮ ಆಯ್ಕೆಯ ಕೊಂಚ ಕಂಡೀಶನರ್ ಬಳಸಿ ಮತ್ತೊಮ್ಮೆ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಂದು ಬಾರಿ ಪುನರಾವರ್ತಿಸಿ. ಬಿಯರ್ ಬಳಕೆಯಿಂದ ಕೂದಲು ಸ್ವಚ್ಛಗೊಳ್ಳುವುದು ಮಾತ್ರವಲ್ಲ ತಲೆಯ ಚರ್ಮದಲ್ಲಿ ಪಿ ಎಚ್ ಮಟ್ಟವನ್ನು, ಸಮತೋಲನದಲ್ಲಿರಿಸಲು, ಕೂದಲ ಸಾಂದ್ರತೆ ಹೆಚ್ಚಿಸಲು ಹಾಗೂ ಕಾಂತಿ ಹೆಚ್ಚಿಸಲು ಮತ್ತು ಮುಖ್ಯವಾಗಿ ಸಿಕ್ಕುಗಳಿಲ್ಲದಂತೆ ಕೂದಲನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಶಾಂಪೂ ರೂಪದಲ್ಲಿ

ಶಾಂಪೂ ರೂಪದಲ್ಲಿ

ಶಾಂಪೂ ರೂಪದಲ್ಲಿ ಬಳಸಲು ಕೊಂಚ ಬಿಯರ್ ಅನ್ನು ಒಂದು ಪಾತ್ರೆಯಲ್ಲಿ ಸುಮಾರು ಹದಿನೈದು ನಿಮಿಷ ಕುದಿಸಿ. ಈ ಅವಧಿಯಲ್ಲಿ ಬಿಯರ್ ಪ್ರಮಾಣ ಸುಮಾರು ಅರ್ಧದಷ್ಟಾಗುತ್ತದೆ. ಈ ಮೂಲಕ ಬಿಯರ್ ನಲ್ಲಿರುವ ಆಲ್ಕೋಹಾಲ್ ಪ್ರಮಾಣ ಕಡಿಮೆಯಾಗುತ್ತದೆ. ಬಳಿಕ ಉರಿ ಆರಿಸಿ ತಣ್ಣಗಾಗಲು ಬಿಡಿ. ಪೂರ್ಣವಾಗಿ ತಣಿದ ಬಳಿಕ ಇದಕ್ಕೆ ಸುಮಾರು ಒಂದರಿಂದ ಒಂದೂವರೆ ಕಪ್ ನಷ್ಟು ನಿಮ್ಮ ಆಯ್ಕೆಯ ಶಾಂಪೂ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ನಾನದ ಸಮಯದಲ್ಲಿ ತಲೆಗೂದಲನ್ನು ನೆನೆಸಿಕೊಂಡು ಈ ಶಾಂಪೂ ಹಚ್ಚಿ ಚೆನ್ನಾಗಿ ನೊರೆಬರಿಸಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ವಾರಕ್ಕೆರಡು ಬಾರಿ ಪುನರಾವರ್ತಿಸಿ

ವಾರಕ್ಕೆರಡು ಬಾರಿ ಪುನರಾವರ್ತಿಸಿ

ಈ ವಿಧಾನವನ್ನು ವಾರಕ್ಕೆರಡು ಬಾರಿ ಪುನರಾವರ್ತಿಸಿ. ಶಾಂಪೂ ರೂಪದ ಬಳಕೆಯಿಂದ ತ್ವಚೆಯಲ್ಲಿನ ಕಲ್ಮಶಗಳು ನಿವಾರಣೆಯಾಗುತ್ತದೆ ಹಾಗೂ ಕೂದಲಿಗೆ ಕಂಡೀಶನರ್ ನಂತಹ ಆರೈಕೆ ದೊರಕುತ್ತದೆ. ಶಾಂಪೂ ಬಳಕೆಯಿಂದ ತಲೆಯ ಚರ್ಮವೂ ಕಲ್ಮಶರಹಿತ, ಹೊಸ ಕೂದಲು ಹುಟ್ಟಲು ಸೂಕ್ತವಾದ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ.

ತಲೆಗೂದಲ ಮಾಸ್ಕ್

ತಲೆಗೂದಲ ಮಾಸ್ಕ್

ಅರ್ಧ ಕಪ್ ಕಪ್ಪು ಬಿಯರ್, ಒಂದು ದೊಡ್ಡಚಮಚ ಜೇನು, ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಮತ್ತು ಒಂದು ಮೊಟ್ಟೆಯ ಹಳದಿ ಭಾಗ, ಇಷ್ಟನ್ನೂ ಚೆನ್ನಾಗಿ ಬೆರೆಸಿ ಈ ಲೇಪವನ್ನು ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೆ ತಲುಪುವಂತೆ ದಪ್ಪನಾಗಿ ಹಚ್ಚಿಕೊಳ್ಳಿ. ಈಗ ಶವರ್ ಕ್ಯಾಪ್ ಒಂದನ್ನು ಧರಿಸಿ ಸುಮಾರು ಒಂದರಿಂದ ಎರಡು ಘಂಟೆಗಳ ವರೆಗೆ ಹಾಗೇ ಬಿಡಿ. ಬಳಿಕ ಎಂದಿನ ಶಾಂಪೂ ಬಳಸಿ ತೊಳೆದುಕೊಳ್ಳಿ, ಬಳಿಕ ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

ಇದನ್ನು ವಾರಕ್ಕೊಮ್ಮೆ ಅನುಸರಿಸಿ

ಇದನ್ನು ವಾರಕ್ಕೊಮ್ಮೆ ಅನುಸರಿಸಿ

ಈ ವಿಧಾನವನ್ನು, ವಾರಕ್ಕೊಮ್ಮೆ ಅನುಸರಿಸಿ. ಈ ವಿಧಾನ ಒಣ ಮತ್ತು ಸಾಮಾನ್ಯ ಕೂದಲಿಗೆ ಹೆಚ್ಚು ಸೂಕ್ತವಾಗಿದೆ. ಈ ವಿಧಾನದಿಂದ ಕೂದಲಿಗೆ ಹೆಚ್ಚಿನ ಆರೈಕೆ ದೊರಕುತ್ತದೆ ಹಾಗೂ ಕೂದಲಿನ ಆರ್ದತೆ ನಷ್ಟವಾಗುವುದರಿಂದ ತಡೆಯಲ್ಪಡುತ್ತದೆ. ಅಲ್ಲದೇ ತಲೆಯ ತ್ವಚೆಯ ಆರೋಗ್ಯವೂ ಉತ್ತಮಗೊಂಡು ಹೊಸ ಕೂದಲು ಹುಟ್ಟಲು ನೆರವಾಗುತ್ತದೆ.

ಬಿಯರ್ ಅನ್ನು ಶಾಂಪೂ ರೂಪದಲ್ಲಿ ಬಳಸಬೇಕಾದರೆ ವಹಿಸಬೇಕಾದ ಎಚ್ಚರಿಕೆಗಳು

ಬಿಯರ್ ಅನ್ನು ಶಾಂಪೂ ರೂಪದಲ್ಲಿ ಬಳಸಬೇಕಾದರೆ ವಹಿಸಬೇಕಾದ ಎಚ್ಚರಿಕೆಗಳು

* ನಿಮ್ಮ ನಿತ್ಯದ ಶಾಂಪೂ ಸ್ಥಾನವನ್ನು ಬಿಯರ್ ಎಂದಿಗೂ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಆಗಾಗ, ಕೂದಲಿಗೆ ಹೆಚ್ಚಿನ ಆರೈಕೆ ಅಗತ್ಯವೆನಿಸಿದಾಗ ಮಾತ್ರವೇ ಬಳಸಬೇಕು.

* ಒಂದು ವೇಳೆ ನಿಮ್ಮ ಕೂದಲು ತೀರಾ ಒಣಗಿದ್ದರೆ ಬಿಯರ್ ಶಾಂಪೂವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಮತ್ತು ಹೆಚ್ಚಿನ ಅಂತರವಿರುವ ಅವಧಿಯಲ್ಲಿ ಬಳಸಬೇಕು. ಏಕೆಂದರೆ ಬೇಗಬೇನನೇ ಬಳಸುವುದರಿಂದ ಕೂದಲು ಸುಲಭವಾಗಿ ತುಂಡಾಗುತ್ತದೆ. ಹಾಗಾಗಿ ಒಣಗೂದಲಿನವರು ಇತರ ಎಣ್ಣೆಯ ಮಸಾಜ್ ನೊಂದಿಗೆ ಕೊಂಚವೇ ಬಿಯರ್ ಬಳಸಬಹುದು.

* ಒಂದು ವೇಳೆ ನಿಮ್ಮ ಕೂದಲು ಎಣ್ಣೆಜಿಡ್ಡಿನಿಂದ ಕೂಡಿದ್ದರೆ, ಬಿಯರ್ ಶಾಂಪೂ ಬಳಕೆ ಪ್ರಮುಖವಾದ ಬದಲಾವಣೆಯನ್ನೇ ತಂದೊಡ್ಡಬಹುದು. ಏಕೆಂದರೆ ಬಿಯರ್ ಕೂದಲಿಗೆ ಅಂಟಿಕೊಂಡಿದ್ದ ಎಣ್ಣೆಯ ಪಸೆಯನ್ನೇ ನಿವಾರಿಸಿಬಿಡುತ್ತದೆ ಹಾಗೂ ತಲೆಹೊಟ್ಟು ಇಲ್ಲದಂತೆ ಮತ್ತು ತುರಿಕೆಯಿಲ್ಲದಂತೆ ಮಾಡುತ್ತದೆ. ಆದರೂ ಈ ಶಾಂಪೂವಿನ ಬಳಕೆ ನಿತ್ಯವೂ ಸಲ್ಲದು, ಏಕೆಂದರೆ ಈ ಮೂಲಕ ಕೂದಲಿಗೆ ಅಗತ್ಯವಿರುವ ನೈಸರ್ಗಿಕ ತೈಲಗಳನ್ನೂ ಇದು ನಿವಾರಿಸಿಬಿಡಬಹುದು. ಆದ್ದರಿಂದ ವಾರಕ್ಕೊಮ್ಮೆ ಬಳಕೆ ಉತ್ತಮ. ಅನಿವಾರ್ಯವೆನಿಸಿದರೆ ಮಾತ್ರ ಪ್ರತಿ ಮೂರು ದಿನಗಳಿಗೊಮ್ಮೆ ಬಳಸಬಹುದು.

* ಇತ್ತೀಚೆಗೆ ನೀವು ಕೂದಲಿಗೆ ಬಣ್ಣ ಹಚ್ಚಿಸಿಕೊಂಡಿದ್ದರೆ, ಕನಿಷ್ಟ ಆರು ತಿಂಗಳವರೆಗಾದರೂ ಬಿಯರ್ ಶಾಂಪೂ ಬಳಕೆಯನ್ನೇ ಮಾಡದಿರುವುದು ಉತ್ತಮ.ಏಕೆಂದರೆ ಈ ಬಣ್ಣಗಳೊಂದಿಗೆ ಬಿಯರ್ ರಾಸಾಯನಿಕ ಪ್ರಕ್ರಿಯೆಗೊಳಗಾಗುತ್ತದೆ ಹಾಗೂ ಬಣ್ಣಗಳನ್ನು ಬದಲಿಸುವುದು ಹಾಗೂ ತೀರಾ ಒಣದಾಗಿಸುವುದು ಮೊದಲಾದ ಪರಿಣಾಮಗಳು ಎದುರಾಗುತ್ತವೆ.

* ಒಂದು ವೇಳೆ ಬಿಯರ್ ಶಾಂಪೂವನ್ನು ನೀವು ಮನೆಯಲ್ಲಿಯೇ ತಯಾರಿಸುವುದಾದರೆ ಇದರಿಂದ ಹೊರಹೊಮ್ಮುವ ವಾಸನೆಯ ಬಗ್ಗೆ ಗಮನವಿರಲಿ. ಸಾಂದ್ರೀಕೃತ ಬಿಯರ್ ಹೆಚ್ಚು ಘಾಟು ಹೊಂದಿರುತ್ತದೆ ಹಾಗೂ ಈ ಘಾಟು ದ್ವಂದ್ವಾರ್ಥಕ್ಕೆ ಕಾರಣವಾಗಬಹುದು. ಈಗ ಬಿಯರ್ ಶಾಂಪೂ ಬಳಕೆ ಮತ್ತು ಪ್ರಯೋಜನಗಳ ಬಗ್ಗೆ ಅರಿತಿದ್ದೀರಿ. ಹಾಗಾದರೆ ಇದನ್ನು ಏಕೆ ಒಮ್ಮೆ ಪ್ರಯತ್ನಿಸಬಾರದು?

English summary

Did You Know These Benefits Of Using Beer Shampoo?

Are you wondering what beer has got to do with your hair? We only know of beer as an alcoholic beverage, prepared all over the world, isn’t it? But lately, beer has made its arrival in the form of shampoos for soft hair! And, whatever is your stand on consuming beer, we have to tell you that knowing the benefits of beer for hair, it seems like a wonder potion for your hair. Once you learn about the benefits of beer shampoo, you will realize that it works far better than any ordinary shampoo. This is because, beer acts as a cleanser and shining agent, rescuing your hair from dullness and adding lustre. It makes your hair less frizzy, soft, manageable and promotes hair growth.
X
Desktop Bottom Promotion