For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಮತ್ತು ತ್ವಚೆಗೆ ಬಿಯರ್! ಕೇಳಿ ಅಚ್ಚರಿಯಾಯಿತೇ?

ಬಿಯರ್ ನಿಂದ ಚರ್ಮ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಬಿಯರ್ ನಿಂದ ಕೂದಲು ಹಾಗೂ ಚರ್ಮಕ್ಕೆ ಯಾವ ರೀತಿಯ ಉಪಯೋಗಗಳು ಆಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

By Hemanth
|

ಮದ್ಯಪಾನಿಗಳಿಗೆ ಅದರಿಂದ ಆಗುವಂತಹ ಅಪಾಯಗಳು ತಿಳಿದಿದ್ದರೂ ಅದರ ಚಟವನ್ನು ಬಿಡಲು ಅವರು ತಯಾರಿರುವುದಿಲ್ಲ. ಇಂದಿನ ದಿನಗಳಲ್ಲಿ ಮದ್ಯಪಾನ ಎನ್ನುವುದು ಫ್ಯಾಷನ್ ಆಗಿಹೋಗಿದೆ. ಪ್ರತಿಯೊಬ್ಬರು ತಮ್ಮ ಗೆಳೆಯರೊಂದಿಗೆ ಅಥವಾ ಕಚೇರಿಯ ಕಾರ್ಯಕ್ರಮದಲ್ಲಿ ಸ್ವಲ್ಪ ನಶೆ ಏರಿಸಿಕೊಳ್ಳುವುದು ಸಹಜವಾಗಿದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಮಾತ್ರ ವಿಶ್ವದಲ್ಲಿ ಅತೀ ಹೆಚ್ಚು ಎನ್ನಲಾಗುತ್ತಿದೆ. ಬಿಯರ್ ಎನ್ನುವುದು ಯುವಜನರ ಪ್ರಿಯ ಪೇಯವಾಗಿದೆ. ಹೊಳೆಯುವ ಕೂದಲಿಗೂ, ತಂಪಾದ ಬಿಯರ್‌ಗೂ ಎತ್ತಿಂದೆತ್ತ ಸಂಬಂಧ?

ಬಿಯರ್ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಇದರ ಬಗ್ಗೆ ವಾದ ಪ್ರತಿವಾದ ನಡೆಯುತ್ತಲೇ ಇದೆ. ಆದರೆ ಬಿಯರ್ ನಿಂದ ಚರ್ಮ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಬಿಯರ್ ನಿಂದ ಕೂದಲು ಹಾಗೂ ಚರ್ಮಕ್ಕೆ ಯಾವ ರೀತಿಯ ಉಪಯೋಗಗಳು ಆಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ನೀವು ಬಳಸಿ ನೋಡಬಹುದು...

ನಯ ಹಾಗೂ ಕಾಂತಿಯುತ ಚರ್ಮ

ನಯ ಹಾಗೂ ಕಾಂತಿಯುತ ಚರ್ಮ

ಬಿಯರ್‌ನಲ್ಲಿ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ ಇರುವ ಕಾರಣದಿಂದಾಗಿ ಅದನ್ನು ಚರ್ಮಕ್ಕೆ ಹಚ್ಚಿಕೊಂಡಾಗ ಚರ್ಮವು ಪುನರ್ಚೇತನಗೊಳ್ಳುವುದು. ಬಿಯರ್‌ನಲ್ಲಿ ಇರುವಂತಹ ವಿಟಮಿನ್ ಬಿ ಮತ್ತು ಪ್ರೋಟೀನ್ ಅಂಶವು ನಿಸ್ತೇಜ, ಒಣ ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಒಂದು ಮೊಟ್ಟೆಯ ಬಿಳಿ ಲೋಳೆ, ಅದಕ್ಕೆ 2-5 ಚಮಚ ಬಿಯರ್ ಮತ್ತು ಕೆಲವು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖದ ಮೇಲೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಚರ್ಮವನ್ನು ಆಳವಾಗಿ ಸುಳಿಯುವುದು

ಚರ್ಮವನ್ನು ಆಳವಾಗಿ ಸುಳಿಯುವುದು

ಬಿಯರ್ ಚರ್ಮವನ್ನು ಆಳವಾಗಿ ಸುಳಿಯುವುದರಿಂದ ಕಪ್ಪು ಕಲೆಗಳು ಮತ್ತು ಕಲ್ಮಷ ತುಂಬಿಕೊಂಡಿರುವ ಚರ್ಮದ ರಂಧ್ರಗಳು ಬಿಚ್ಚಿಕೊಳ್ಳುವುದು. ಇದು ತಲೆಬುರುಡೆಯಲ್ಲಿ ಕಲ್ಮಶವನ್ನು ತೆಗೆದುಹಾಕಿ ಕೋಶಗಳ ಬೆಳವಣಿಗೆಗೆ ನೆರವಾಗುವುದು. ಕೆಲವು ಸ್ಟ್ರಾಬೆರಿ ತೆಗೆದುಕೊಂಡು ಅದನ್ನು ಕಿವುಚಿಕೊಂಡು ಅದರ ತಿರುಳು ತೆಗೆಯಿರಿ. ಇದಕ್ಕೆ ಕೆಲವು ಚಮಚ ಬಿಯರ್ ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿ ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಚರ್ಮದ ಆರೈಕೆಗೆ

ಚರ್ಮದ ಆರೈಕೆಗೆ

ಬೇಸಿಗೆಯ ಸಮಯದಲ್ಲಿ ಸೂರ್ಯನ ಯುವಿ ಕಿರಣಗಳಿಂದಾಗಿ ಮುಖದ ಮೇಲೆ ಕಲೆಗಳು ಮೂಡುವುದು ಮತ್ತು ಮುಖವು ಕಪ್ಪಾಗುವುದು ಸಾಮಾನ್ಯವಾಗಿದೆ. ಸ್ವಲ್ಪ ಬಿಯರ್ ತೆಗೆದುಕೊಂಡು (ಅರ್ಧ ಕಪ್) ಅದನ್ನು ನಿಂಬೆರಸ ಮತ್ತು ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟ ಬಳಿಕ ನೀರಿನಿಂದ ಮುಖ ತೊಳೆಯಿರಿ. ಇದು ಸೂರ್ಯನ ಕಿರಣಗಳಿಂದ ಆದ ಕಲೆ ಮತ್ತು ಸುಟ್ಟ ಚರ್ಮವನ್ನು ನಿವಾರಣೆ ಮಾಡಿ ಆರೋಗ್ಯಕರ ಚರ್ಮವನ್ನು ನೀಡುವುದು.

ರೇಷ್ಮೆಯಂತಹ ಕೂದಲು

ರೇಷ್ಮೆಯಂತಹ ಕೂದಲು

ವಾರದಲ್ಲಿ ಒಂದು ಅಥವಾ ಎರಡು ಸಲ ಬಿಯರ್ ನಿಂದ ಕೂದಲು ತೊಳೆದರೆ ಕಾಂತಿಯುತ ಹಾಗೂ ರೇಷ್ಮೆಯಂತಹ ಕೂದಲು ನಿಮ್ಮದಾಗುವುದು. ಬಿಯರ್ ನ್ನು ಕೂದಲಿಗೆ ಹಚ್ಚಿಕೊಳ್ಳಿ. ಆದರೆ ಇದು ನಿಮ್ಮ ತಲೆಬರುಡೆಗೂ ಮುಟ್ಟಲಿ. 15 ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಕೂದಲಿನ ಬುಡ ಹಾಗೂ ತುದಿಗೆ ಬಿಯರ್ ನ್ನು ಸರಿಯಾಗಿ ಹಚ್ಚಿಕೊಳ್ಳಿ. ತಣ್ಣೀರಿನಿಂದ ಕೂದಲು ತೊಳೆದ ಬಳಿಕ ಒಣಗಲು ಬಿಡಿ. ವಾರದಲ್ಲಿ ಎರಡರಿಂದ ಮೂರು ಸಲ ಹೀಗೆ ಮಾಡಿದರೆ ಸುಂದರ ಕೂದಲು ನಿಮ್ಮದಾಗುವುದು.

ಕೂದಲು ನೇರವಾಗಿಸಲು

ಕೂದಲು ನೇರವಾಗಿಸಲು

ಕೂದಲನ್ನು ಸ್ಟ್ರೈಟನಿಂಗ್ ಮಾಡುವುದು ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಒಂದು ಫ್ಯಾಶನ್. ಆದರೆ ನೈಸರ್ಗಿಕವಾಗಿ ಬಿಯರ್ ನಿಂದ ಕೂದಲನ್ನು ನೇರವಾಗಿಸಿದರೆ ಅದು ಹೆಚ್ಚು ವೆಚ್ಚ ಕೂಡ ಆಗದು. ಬಿಯರ್ ನಲ್ಲಿ ಇರುವಂತಹ ಕಿಣ್ವಗಳು ಹಾಗೂ ವಿಟಮಿನ್ ಗಳು ಕೂದಲಿನ ಕೋಶಗಳು ಪುನರ್ಚೇತನಗೊಳ್ಳಲು ನೆರವಾಗುವುದು ಮಾತ್ರವಲ್ಲದೆ ಕೂದಲು ನೇರ ಹಾಗೂ ಬಲಿಷ್ಠವಾಗಿಸುವುದು. ಬಿಯರ್ ಹಾಗೂ ನೀರನ್ನು ಸಮ ಪ್ರಮಾಣದಲ್ಲಿ ಹಾಕಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನ ಬುಡಕ್ಕೂ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ.

ಎಣ್ಣೆಯಂಶವಿರುವ ಕೂದಲಿಗಾಗಿ

ಎಣ್ಣೆಯಂಶವಿರುವ ಕೂದಲಿಗಾಗಿ

ನಿಮ್ಮ ಕೂದಲು ಯಾವಾಗಲೂ ಜಿಡ್ಡು ಹಾಗೂ ಎಣ್ಣೆಯಂಶದಿಂದ ಕೂಡಿದ್ದರೆ ಆಗ ಬಿಯರ್ ಬಳಕೆ ಮಾಡಿ. ಬಿಯರ್ ತಲೆಬುರುಡೆಯಲ್ಲಿ ಪಿಎಚ್ ಮಟ್ಟವನ್ನು ಕಾಪಾಡಿಕೊಂಡು ಎಣ್ಣೆಯ ಹೆಚ್ಚಿನ ಉತ್ಪಾದನೆಯನ್ನು ತಡೆಯುವುದು. ಎಣ್ಣೆಯ ಅತಿಯಾದ ಉತ್ಪಾದನೆಯಿಂದಾಗಿ ತುಂಬಿಕೊಂಡಿರುವ ರಂಧ್ರಗಳು ಬಿಚ್ಚಿಕೊಳ್ಳುವುದು. ಎರಡು ಚಮಚ ಹಾಲಿಗೆ ಎರಡು ಚಮಚ ಬಿಯರ್ ಹಾಕಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಶಾವರ್ ಕ್ಯಾಪ್ ಹಾಕಿಕೊಂಡು 15 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಹಾಲು ಹಾಗೂ ಬಿಯರ್ ನಲ್ಲಿ ಆ್ಯಸಿಡಿಕ್ ಅಂಶವಿರುವ ಕಾರಣದಿಂದ ಸಮಸ್ಯೆ ಬೇಗೆ ನಿವಾರಣೆಯಾಗುವುದು.

ಹೊಂಬಣ್ಣದ ಕೂದಲು

ಹೊಂಬಣ್ಣದ ಕೂದಲು

ನೈಸರ್ಗಿಕವಾಗಿ ಹೊಂಬಣ್ಣದ ಕೂದಲು ಪಡೆಯಬೇಕಿದ್ದರೆ ಬಿಯರ ಬಳಸುವುದು ಸೂಕ್ತ. ಬಿಯರ್ ನಲ್ಲಿ ಇರುವಂತಹ ಕಿಣ್ವಗಳು ಕೂದಲನ್ನು ನೈಸರ್ಗಿಕವಾಗಿ ಹೊಂಬಣ್ಣಕ್ಕೆ ತಿರುಗಿಸುವುದು. ಬಿಯರ್ ಹಾಗೂ ಆ್ಯಪಲ್ ಸೀಡರ್ ವಿನೇಗರ್ ನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಇದಕ್ಕೆ 2-3 ಚಮಚ ಲಿಂಬೆಯ ಸಾರಭೂತ ತೈಲವನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಆಯಾಸಗೊಂಡ ಪಾದಗಳಿಗೆ

ಆಯಾಸಗೊಂಡ ಪಾದಗಳಿಗೆ

ಅತಿಯಾಗಿ ನಡೆಯುವುದರಿಂದ ಪಾದಗಳಿಗೆ ತುಂಬಾ ಆಯಾಸವಾಗುವುದು ಸಹಜ. ಇದರಿಂದ ಪಾದಗಳು ಒಣಗಿ ಒಡೆದುಹೋಗುತ್ತದೆ. ಬಿಯರ್ ಪಾದಗಳ ಚರ್ಮವನ್ನು ಪುನರ್ಚೇತನಗೊಳಿಸಿ ಒಡೆಯದಂತೆ ನೋಡಿಕೊಳ್ಳುವುದು. ಸ್ವಲ್ಪ ಬಿಯರ್ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಬಿಸಿ ನೀರನ್ನು ಹಾಕಿ ಅದರಲ್ಲಿ ಪಾದಗಳನ್ನು ಇಟ್ಟರೆ ಒಡೆದ ಪಾದದ ಸಮಸ್ಯೆ ನಿವಾರಣೆಯಾಗುವುದು. ಈ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಸಮಯ ಕಾಲ ಹಾಗೆ ಬಿಡಿ. ಇದರಿಂದ ಪಾದಗಳು ಒಡೆದು ಹೋಗುವುದು ತಪ್ಪುವುದು. ಕ್ಯಾನ್ಸರ್-ಸಂಧಿವಾತ ನಿಯಂತ್ರಿಸುವ 'ಶುಂಠಿ ಬಿಯರ್'!

English summary

how beer benefits your skin and hair

Beer is not only good for your health, but it proves to be highly beneficial for your skin and hair as well. We have listed below the ways in which you could use beer on your skin and hair. So, check out these different ways to use beer on skin and hair and know what are the benefits of beer on skin and hair.
Story first published: Tuesday, March 21, 2017, 18:44 [IST]
X
Desktop Bottom Promotion