For Quick Alerts
ALLOW NOTIFICATIONS  
For Daily Alerts

ಕೂದಲು ದಪ್ಪವಾಗಿ ಬೆಳೆಯಲು 'ಕರ್ಪೂರದ ಎಣ್ಣೆ' ಯ ಚಿಕಿತ್ಸೆ

|

ಕರ್ಪೂರವನ್ನು ಹೆಚ್ಚಾಗಿ ನಾವು ಪೂಜೆ ಹಾಗೂ ಇನ್ನಿತರ ಸಂದರ್ಭದಲ್ಲಿ ಬಳಸಿಕೊಳ್ಳುತ್ತೇವೆ. ಇದಕ್ಕೆ ಬೆಂಕಿ ಹಚ್ಚುವ ಮೂಲಕ ಅದರಿಂದ ಹೊಗೆಯು ಬರುವುದು. ಆದರೆ ಇದು ತುಂಬಾ ಶಮನಕಾರಿ ಗುಣ ಹೊಂದಿದೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ಹಿಂದಿನಿಂದಲೂ ಹಿಂದೂ ಧರ್ಮದಲ್ಲಿ ಪೂಜೆ ವೇಳೆ ಕರ್ಪೂರವನ್ನು ಹಚ್ಚಿಡುವಂತಹ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಕರ್ಪೂರವು ಶಮನಕಾರಿ ಗುಣ ಹೊಂದಿದೆ. ಇದರ ಸುವಾಸನೆಯಿಂದಾಗಿ ಅದು ಮನಸ್ಸು ಹಾಗೂ ದೇಹಕ್ಕೆ ಆರಾಮ ನೀಡುವುದು ಎಂದು ಹೇಳಲಾಗುತ್ತದೆ.

ಆದರೆ ಕರ್ಪೂರವನ್ನು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯಾ? ಇಲ್ಲ ತಾನೇ, ಹಾಗಾದರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಲೇಬೇಕು. ಯಾಕೆಂದರೆ ಈ ಲೇಖನದಲ್ಲಿ ಕರ್ಪೂರದ ಎಣ್ಣೆಯಲ್ಲಿರುವಂತಹ ಸೌಂದರ್ಯವರ್ಧಕ ಗುಣಗಳ ಬಗ್ಗೆ ಹೇಳಲಾಗಿದೆ. ನೀವು ಕರ್ಪುರವನ್ನು ನಿಮ್ಮ ದಿನನಿತ್ಯದ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಬಹುದು. ಇದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ತಾಳ್ಮೆ ಮತ್ತು ಪ್ರಯತ್ನ ಅತೀ ಅಗತ್ಯ. ಈ ಲೇಖನದಲ್ಲಿ ಕೂದಲಿಗೆ ಕರ್ಪೂರವನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯುವ. ಕರ್ಪೂರವನ್ನು ಎಣ್ಣೆಯ ರೂಪದಲ್ಲಿ ಹೇರ್ ಮಾಸ್ಕ್ ಆಗಿ ಬಳಸಿಕೊಳ್ಳಬಹುದು. ಕರ್ಪೂರದ ಎಣ್ಣೆಯ ಹೇರ್ ಮಾಸ್ಕ್ ಗಳು ಮತ್ತು ಅದನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯುವ....

 ಬಲಿಷ್ಠ ಕೂದಲಿಗೆ ಕರ್ಪೂರದ ಎಣ್ಣೆಯ ಹೇರ್ ಮಾಸ್ಕ್

ಬಲಿಷ್ಠ ಕೂದಲಿಗೆ ಕರ್ಪೂರದ ಎಣ್ಣೆಯ ಹೇರ್ ಮಾಸ್ಕ್

ಕಲುಷಿತ ವಾತಾವರಣ, ಒತ್ತಡ ಮತ್ತು ಪೋಷಕಾಂಶಗಳ ಕೊರತೆಯಿಂದಾಗಿ ಕೂದಲು ನಿಸ್ತೇಜ ಹಾಗೂ ದುರ್ಬಲವಾಗಬಹುದು. ಇದಕ್ಕಾಗಿ ನೀವು ಕರ್ಪೂರದ ಎಣ್ಣೆಯನ್ನು ಬಳಸಿಕೊಂಡು ಕೂದಲನ್ನು ಬಲಿಷ್ಠಗೊಳಿಸುವುದು ಹೇಗೆ ಎಂದು ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಕರ್ಪೂರದ ಎಣ್ಣೆ

*1 ಮೊಟ್ಟೆ

ತಯಾರಿಸುವ ವಿಧಾನ ಹೇಗೆ?

ತಯಾರಿಸುವ ವಿಧಾನ ಹೇಗೆ?

*ಮೊದಲಾಗಿ ನೀವು ಮಾಡಬೇಕಾದ ಕೆಲಸವೆಂದರೆ ಒಂದು ಸ್ವಚ್ಛವಾಗಿರುವ ಪಿಂಗಾಣಿ ತೆಗೆದುಕೊಳ್ಳಬೇಕು. ಇದಕ್ಕೆ ಒಂದು ಮೊಟ್ಟೆಯನ್ನು ಒಡೆದು ಹಾಕಿಕೊಳ್ಳಿ. ಇದರ ಬಳಿಕ ಕರ್ಪೂರದ ಎಣ್ಣೆ ಹಾಕಿಕೊಳ್ಳಿ. ಬಳಿಕ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸರಿಯಾಗಿ ಮಿಶ್ರಣವಾದ ಬಳಿಕ ಇದನ್ನು ಕೂದಲು ಹಾಗೂ ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಕೂದಲಿನ ತುದಿಯಿಂದ ಬುಡದ ತನಕ ಸಂಪೂರ್ಣವಾಗಿ ಇದನ್ನು ಹಚ್ಚಿಕೊಳ್ಳಿ.

*15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀವು ಸಲ್ಫೇಟ್ ರಹಿತವಾಗಿರುವ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ನಿಮಗೆ ಅದ್ಭುತವಾಗಿರುವಂತಹ ಫಲಿತಾಂಶವು ಸಿಗಬೇಕೆಂದರೆ ಆಗ ನೀವು ವಾರದಲ್ಲಿ ಒಂದು ಸಲ ಈ ಮಾಸ್ಕ್ ನ್ನು ಬಳಸಲು ಮರೆಯಬೇಡಿ.

Most Read:ಬ್ಲ್ಯಾಕ್ ಹೆಡ್ಸ್ ಹಾಗೂ ಮೊಡವೆಯ ಸಮಸ್ಯೆಗೆ ಆಲೂಗಡ್ಡೆ ಫೇಸ್ ಪ್ಯಾಕ್

ಕೂದಲಿನ ಬೆಳವಣಿಗೆಗೆ

ಕೂದಲಿನ ಬೆಳವಣಿಗೆಗೆ

ಕೆಲವರಲ್ಲಿ ಕೂದಲಿನ ಬೆಳವಣಿಗೆಯು ಸರಿಯಾಗಿ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕರ್ಪೂರವು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಇಲ್ಲಿ ನೀವು ಕರ್ಪೂರದ ಎಣ್ಣೆ ಬಳಸಿಕೊಳ್ಳಬೇಕು. ನೀವು ಕರ್ಪೂರದ ಎಣ್ಣೆಯನ್ನು ಬಳಸಿಕೊಂಡರೆ ಆಗ ಕೂದಲಿನ ಬೆಳವಣಿಗೆ ಖಂಡಿತವಾಗಿಯೂ ಆಗುವುದು.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಕರ್ಪೂರದ ಎಣ್ಣೆ

*ಮೊಸರು

*ಮೊಟ್ಟೆ

ಬಳಸುವಂತಹ ವಿಧಾನ ಈ ರೀತಿಯಾಗಿದೆ…

ಬಳಸುವಂತಹ ವಿಧಾನ ಈ ರೀತಿಯಾಗಿದೆ…

*ಕೂದಲು ವೇಗವಾಗಿ ಬೆಳವಣಿಗೆ ಆಗಲು ನೀವು ಈ ಸರಳವಾಗಿರುವ ಹೇರ್ ಮಾಸ್ಕ್ ನ್ನು ತಯಾರಿಸಿಕೊಳ್ಳಬಹುದು. ಒಂದು ಸ್ವಚ್ಛವಾಗಿರುವ ಪಿಂಗಾಣಿ ತೆಗೆದುಕೊಳ್ಳಿ. ಇದಕ್ಕೆ ನೀವು ಕರ್ಪೂರದ ಎಣ್ಣೆ ಮತ್ತು ಸುವಾಸನೆ ರಹಿತ ಮೊಸರು ಹಾಕಿಕೊಳ್ಳಿ. ಇದರ ಬಳಿಕ ಒಂದು ಮೊಟ್ಟೆ ಒಡೆದು ಹಾಕಿ. ಎಲ್ಲವನ್ನು ಹಾಕಿಕೊಂಡ ಬಳಿಕ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಕೂದಲು ತುಂಬಾ ಉದ್ದಗೆ ಇದ್ದರೆ ಆಗ ನೀವು ಮತ್ತೊಂದು ಮೊಟ್ಟೆಯನ್ನು ಮಾಸ್ಕ್ ಗೆ ಹಾಕಿಕೊಳ್ಳಬಹುದು.

*ಈಗ ನೀವು ಒಂದು ಬ್ರಷ್ ತೆಗೆದುಕೊಳ್ಳಿ ಮತ್ತು ಇದರ ಬಳಿಕ ಕೂದಲನ್ನು ವಿಭಾಗಗಳನ್ನಾಗಿ ಮಾಡಿಕೊಂಡು ಅದಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಕೂದಲಿಗೆ ನೀವು ಇದನ್ನು ಸಂಪೂರ್ಣವಾಗಿ ಹಚ್ಚಿಕೊಂಡ ಬಳಿಕ ಬನ್ ಆಕಾರದಲ್ಲಿ ಕೂದಲನ್ನು ಕಟ್ಟಿಕೊಳ್ಳಿ ಮತ್ತು ಇದಕ್ಕೆ ಶಾವರ್ ಕ್ಯಾಪ್ ಹಾಕಿಕೊಳ್ಳಿ. ಇದರ ಬಳಿಕ ನೀವು ಸುಮಾರು 30-45 ನಿಮಿಷ ಕಾಲ ಕೂದಲನ್ನು ಹಾಗೆ ಬಿಡಬೇಕು. ಇಷ್ಟು ಸಮಯ ಕಳೆದ ಬಳಿಕ ನೀವು ಲಘು ಶಾಂಪೂ ಬಳಸಿಕೊಂಡು ಸಾಮಾನ್ಯ ನೀರಿನಿಂದ ಕೂದಲು ತೊಳೆಯಿರಿ.

ನಯವಾದ ಕೂದಲಿಗೆ

ನಯವಾದ ಕೂದಲಿಗೆ

ಒಣ, ಗಂಟುಕಟ್ಟಿದ ಮತ್ತು ನಿರ್ವಹಣೆಗೆ ಅಸಾಧ್ಯವಾಗಿರುವಂತಹ ಕೂದಲಿನ ಆರೈಕೆಯು ತುಂಬಾ ಕಠಿಣವಾಗಿರುವುದು. ಇದು ಹೆಚ್ಚಿನ ಕಿರಿಕಿರಿ ಉಂಟು ಮಾಡುವುದು. ಇದರಿಂದ ಪ್ರತಿನಿತ್ಯ ಕೂದಲಿನ ಆರೈಕೆ ಮಾಡಲು ಕಷ್ಟವಾಗುವುದು. ಇಂತಹ ಸಮಸ್ಯೆ ನಿವಾರಣೆ ಮಾಡಲು ಕರ್ಪೂರದ ಎಣ್ಣೆ ಬಳಸಿಕೊಳ್ಳಬೇಕು.

Most Read:ಕೂದಲು ಸೊಂಪಾಗಿ ಬೆಳೆಯಲು 'ಕಪ್ಪು ಬೀಜದ ಎಣ್ಣೆ' ಬಳಸಿ

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಕರ್ಪೂರದ ಎಣ್ಣೆ

*ತೆಂಗಿನೆಣ್ಣೆ/ಆಲಿವ್ ತೈಲ

ಹೇರ್ ಮಾಸ್ಕ್ ತಯಾರಿಸುವ ವಿಧಾನ

ಹೇರ್ ಮಾಸ್ಕ್ ತಯಾರಿಸುವ ವಿಧಾನ

ಒಂದು ಶುದ್ಧವಾಗಿರುವ ಪಿಂಗಾಣಿ ತೆಗೆದುಕೊಳ್ಳಿ. ಅದಕ್ಕೆ ಕರ್ಪೂರದ ಎಣ್ಣೆ ಮತ್ತು ತೆಂಗಿನೆಣ್ಣೆ/ ಆಲಿವ್ ತೈಲ ಹಾಕಿ. ಕೂದಲನ್ನು ನೀವು ವಿಭಾಗವನ್ನಾಗಿ ಮಾಡಿಕೊಳ್ಳಿ ಮತ್ತು ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಇದು ಸುಮಾರು 30 ನಿಮಿಷ ಕಾಲ ಹಾಗೆ ಇರಲಿ. ಬಳಿಕ ಸಾಮಾನ್ಯ ನೀರು ಬಳಸಿಕೊಂಡು ಕೂದಲನ್ನು ತೊಳೆಯಿರಿ. ನಿಮಗೆ ನಯವಾದ ರೇಷ್ಮೆಯಂತಹ ಕೂದಲು ಸಿಗುವುದು.

English summary

camphor oil remedies for Hair Growth

Keeping your hair healthy is not an easy task, it takes a lot of patience and effort. Camphor is known for its soothing properties and it is known to have a calming effect on our mind. Camphor can be also used in the form of oil to make hair masks. It can be used for stronger hair, faster hair growth, etc.
X
Desktop Bottom Promotion