ನೋಡಿ, ಇದೇ ಕಾರಣಕ್ಕೆ ಕೂದಲು ಉದುರುತ್ತಿರುವುದು!

By: Jaya subramnanya
Subscribe to Boldsky

ಇತ್ತೀಚಿನ ದಿನಗಳಲ್ಲಿ ನಿಮ್ಮ ಕೂದಲು ವಿಪರೀತವಾಗಿ ಉದುರುತ್ತಿದೆ ಎಂದಾದಲ್ಲಿ ಇದಕ್ಕೆ ಕಾರಣ ನೀವು ಅನುಸರಿಸುವ ಆಹಾರ ಪದ್ಧತಿ ಮತ್ತು ಕೂದಲಿನ ಕಾಳಜಿಯಲ್ಲಿ ನೀವು ತೋರುವ ಅಸಡ್ಡೆಯಾಗಿದೆ ಎಂದರೆ ನೀವು ನಂಬಲೇಬೇಕು. ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೂದಲು ಉದುರುತ್ತಿದೆ ಎಂದಾದಲ್ಲಿ ನೀವು ಇದರ ಬಗ್ಗೆ ಕಾಳಜಿಯನ್ನು ಅನುಸರಿಸಲೇಬೇಕು.

ತಿಂಗಳಿಗೆ 3-4 ಇಂಚುಗಳಷ್ಟು ಕೂದಲು ಬೆಳೆಯುತ್ತದೆ. ಅಂತೆಯೇ ಹಳೆಯ ಕೂದಲು ಉದುರಿ ಹೋದಾಗ ಈ ಜಾಗದಲ್ಲಿ ಹೊಸ ಕೂದಲು ಕುಡಿಯೊಡೆಯುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ 100 ಕೂದಲು ಉದುರಿದರೆ ಚಿಂತಿಸುವ ಅಗತ್ಯವಿಲ್ಲ. ಆದರೆ ಈ ಉದುರುವಿಕೆ ಅತಿಯಾಗುತ್ತಿದೆ ಎಂದಾದಲ್ಲಿ ಏನೋ ದೋಷವಿದೆ ಎಂದೇ ಅರ್ಥವಾಗಿದೆ. ಹಾಗಿದ್ದರೆ ನಿಮ್ಮ ಕೂದಲುದುರುತ್ತಿರುವ ಕಾರಣಕ್ಕೆ ಉಂಟಾಗುತ್ತಿರುವ ಸಮಸ್ಯೆಗಳೇನು ಎಂಬುದನ್ನು ಕಂಡುಕೊಂಡಲ್ಲಿ ಇದಕ್ಕೆ ನೀವು ಫುಲ್‌ಸ್ಟಾಪ್ ಹಾಕಬಹುದಾಗಿದೆ...

ಹೆಚ್ಚುವರಿ ವಿಟಮಿನ್ ಎ

ಹೆಚ್ಚುವರಿ ವಿಟಮಿನ್ ಎ

ಅತಿಯಾಗಿ ವಿಟಮಿನ್ ಎ ಅಂಶವನ್ನು ನೀವು ಸೇವಿಸಿದಲ್ಲಿ ಇದು ಪ್ರತೀಕೂಲ ಪರಿಣಾಮವನ್ನು ಬೀರುತ್ತದೆ. ಅದರಲ್ಲಿ ಕೂದಲುದುರುವಿಕೆ ಕೂಡ ಒಂದು.

ಪ್ರೋಟೀನ್ ಕೊರತೆ

ಪ್ರೋಟೀನ್ ಕೊರತೆ

ದೇಹದಲ್ಲಿ ಪ್ರೋಟೀನ್ ಕೊರೆತೆಯುಂಟಾದಲ್ಲಿ ಇದು ಕೂದಲಿನ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದರಿಂದ ಕೂದಲಿನ ಬೆಳವಣಿಗೆಯಲ್ಲಿ ಕುಂಠಿತವುಂಟಾಗುತ್ತದೆ.

ಹಾರ್ಮೋನಲ್ ಬದಲಾವಣೆಗಳು

ಹಾರ್ಮೋನಲ್ ಬದಲಾವಣೆಗಳು

ಗರ್ಭಾವಸ್ಥೆ ಮತ್ತು ಋತುಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ಹಾರ್ಮೋನು ಸಮಸ್ಯೆಗಳು ಉಂಟಾಗುತ್ತಿರುತ್ತದೆ. ಮಗುವಿನ ಜನನ ಸಮಯದಲ್ಲಿ ವಿಪರೀತ ಕೂದಲುದುರುವಿಕೆ ಉಂಟಾಗುತ್ತದೆ. ಮೇಲ್ ಹಾರ್ಮೋನುಗಳ ಕಾರಣದಿಂದ ಕೂಡ ಕೂದಲುದುರುವಿಕೆ ಉಂಟಾಗುತ್ತದೆ.

ಹೈಪೋಥೈರಾಯ್ಡ್

ಹೈಪೋಥೈರಾಯ್ಡ್

ಥೈರಾಯ್ಡ್‌ನ ಕಡಿಮೆ ಸಾಮರ್ಥ್ಯವು ಜೀವಕೋಶದ ಪುನರುತ್ಪಾದನೆ ಮಾಡಲು ಕುಂಠಿತವಾಗಬಹುದು. ಕೂದಲು ಆಗಾಗ್ಗೆ ಶುಷ್ಕಗೊಳ್ಳುತ್ತದೆ ಮತ್ತು ತುಂಡಾಗುತ್ತದೆ ಇದರಿಂದ ಕೂದಲು ಉದುರುತ್ತದೆ. ಈ ಪರಿಸ್ಥಿತಿ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ಪಿಸಿಓಗಳು

ಪಿಸಿಓಗಳು

ಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ದೇಹವನ್ನು ಹೆಚ್ಚಿನ ಆಂಡ್ರೊಜೆನ್ ಅಥವಾ ಪುರುಷ ಹಾರ್ಮೋನುಗಳನ್ನು ಉಂಟುಮಾಡುತ್ತದೆ. ನಿಮ್ಮ ಕಿರುಚೀಲಗಳು ಈ ಹಾರ್ಮೋನುಗಳಿಗೆ ಸೂಕ್ಷ್ಮವಾಗಿದ್ದರೆ, ಅದು ಕೂದಲು ನಷ್ಟಕ್ಕೆ ಕಾರಣವಾಗುತ್ತದೆ.

ವಯಸ್ಸಾಗುವಿಕೆ

ವಯಸ್ಸಾಗುವಿಕೆ

ನಿಮಗೆ ವಯಸ್ಸಾಗುತ್ತಿದ್ದಂತೆ ಕೂದಲುದುರುವ ಪ್ರಮಾಣ ಏರುತ್ತಲೇ ಇರುತ್ತದೆ. ಕೂದಲಿನ ಉದ್ದದಲ್ಲಿ ಕುಂಠಿತವುಂಟಾಗುತ್ತದೆ. ಋತುಬಂಧ ಹಂತದಲ್ಲಿ ಮಹಿಳೆಯರಲ್ಲಿ ಹಾರ್ಮೋನಿನಲ್ಲಿ ಬದಲಾವಣೆಗಳು ಉಂಟಾಗುತ್ತಿರುತ್ತದೆ. ಇದರಿಂದ ಕೂದಲಿನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ತೂಕ ಕಳೆದುಕೊಳ್ಳುವಿಕೆ

ತೂಕ ಕಳೆದುಕೊಳ್ಳುವಿಕೆ

ಒತ್ತಡದಿಂದಾಗಿ ನೀವು ತೂಕ ಕಳೆದುಕೊಂಡಲ್ಲಿ ಇದರಲ್ಲಿ ಕೂದಲಿನ ಕೋಶಗಳಲ್ಲಿ ಒತ್ತಡದ ಪರಿಣಾಮಗಳು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ. ದೇಹದಲ್ಲಿರುವ ಇತರ ಅಂಶಗಳಿಗೆ ದೇಹವು ನ್ಯೂಟ್ರೀನ್ ಅಂಶವನ್ನು ಬಳಸಿಕೊಳ್ಳುತ್ತವೆ ಮತ್ತು ಕೂದಲಿಗೆ ಇದು ಬಳಸಿಕೊಳ್ಳುವುದಿಲ್ಲ.

 ವಂಶಪಾರಂಪರ್ಯತೆ

ವಂಶಪಾರಂಪರ್ಯತೆ

ಇನ್ನು ವಂಶಪಾರಂಪರ್ಯತೆಯ ಕಾರಣದಿಂದಾಗಿ ಕೂಡ ಕೂದಲುದುರುವಿಕೆ ಉಂಟಾಗುತ್ತದೆ. ಇನ್ನು ಬಕ್ಕ ತಲೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಇದ್ದಲ್ಲಿ ಅದು ನಿಮಗೂ ಬರುವ ಸಾಧ್ಯತೆ ಇರುತ್ತದೆ, ಇದಕ್ಕಾಗಿ ಸೂಕ್ತ ಕಾಳಜಿಯನ್ನು ವಹಿಸಬೇಕು.

ಒತ್ತಡ

ಒತ್ತಡ

ಹೆಚ್ಚುವರಿ ಒತ್ತಡದಿಂದಾಗಿ ಕೂದಲಿನ ಬೇರುಗಳು ವಿಶ್ರಾಂತಿ ಸ್ಥಿತಿಗೆ ತಲುಪುತ್ತವೆ. ಇದರಿಂದ ಕೋಶಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಅಂತೆಯೇ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಕೆಲವರು ಕೂದಲನ್ನು ಕೀಳುತ್ತಾರೆ. ಇದರಿಂದ ಕೂಡ ಕೂದಲು ನಾಶಗೊಳ್ಳುತ್ತದೆ.

English summary

Your Hair Fall Could Be Due To These Underlying Conditions

The German fairy tale of Rapunzel letting her hair down the castle for the charming prince to climb up has captured our fantasies even as a child. Having the perfect hairstyle before we step out of our homes can go a long way in boosting our confidence. To lose it, is therefore, distressing. Each strand of hair is a filament made of a protein called keratin.It is attached to the body by a follicle. A normal head of hair contains around 1,20,000-1,50,000 strands of hair.
Story first published: Thursday, July 27, 2017, 23:40 [IST]
Subscribe Newsletter