Latest Updates
-
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ!
ಚೆನ್ನಾಗಿ ಸ್ನಾನ ಮಾಡುವುದರಿಂದ ಕೂದಲು-ತ್ವಚೆಯ ಸೌಂದರ್ಯ ಹೆಚ್ಚುತ್ತದೆಯಂತೆ!
ಕೂದಲು ಹಾಗೂ ಚರ್ಮದ ಆರೈಕೆಯು ಸೌಂದರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಕೂದಲು ಮತ್ತು ಚರ್ಮವು ಕಾಂತಿಯುತ ಹಾಗೂ ಆರೋಗ್ಯವಾಗಿದ್ದರೆ ದೇಹದ ಸೌಂದರ್ಯ ಕೂಡ ಎದ್ದು ಕಾಣುವುದು. ಕೂದಲು ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತೇವೆ. ಸೌಂದರ್ಯವರ್ಧಕ, ಪ್ಯಾಕ್ ಗಳು, ಸ್ಕ್ರಬ್, ಶಾಂಪೂ ಮತ್ತು ಕಂಡೀಷನರ್ ನ್ನು ಬಳಸಿಕೊಂಡು ಕೂದಲು ಹಾಗೂ ಚರ್ಮದ ಸೌಂದರ್ಯ ಹೆಚ್ಚಿಸಬೇಕೆಂದು ಬಯಸುತ್ತೇವೆ. ಇಂತಹ ಉತ್ಪನ್ನಗಳನ್ನು ಬಳಸುವುದರೊಂದಿಗೆ ಸ್ನಾನ ಮತ್ತು ಆಹಾರಕ್ರಮವು ಚರ್ಮ ಹಾಗೂ ಕೂದಲಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು.
ಈ ಲೇಖನದಲ್ಲಿ ಬೋಲ್ಡ್ ಸ್ಕೈ ಸ್ನಾನದ ಬಗ್ಗೆ ಹೇಳಿಕೊಡಲಿದೆ. ದಿನನಿತ್ಯ ಸ್ನಾನ ಮಾಡುವ ಬಗ್ಗೆ ಅಥವಾ ಗಂಟೆಗಟ್ಟಲೆ ಸ್ನಾನ ಮಾಡುವ ಬಗ್ಗೆ ಹೇಳಲು ಈ ಲೇಖನವಲ್ಲ. ಸರಿಯಾದ ಕ್ರಮದಲ್ಲಿ ಸ್ನಾನ ಮಾಡುವುದರಿಂದ ಅದು ನಿಮ್ಮ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಹೆಚ್ಚಿಸುವುದು. ಇನ್ನು ಮುಂದೆ ಸ್ನಾನ ಮಾಡುವಾಗ ಈ ಕೆಳಗೆ ಹೇಳಿರುವ ಸಲಹೆಗಳನ್ನು ಪಾಲಿಸಿಕೊಂಡು ಹೋಗಿ. ಇದರಿಂದ ಕೂದಲು ಮತ್ತು ಚರ್ಮದ ಆರೋಗ್ಯವು ವೃದ್ಧಿಯಾಗುವುದು. ಈ ಕ್ರಮವನ್ನು ಪ್ರತಿನಿತ್ಯ ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ಫಲಿತಾಂಶ ಸಿಗುವುದು....

ಚರ್ಮಕ್ಕೆ ಸ್ನಾನದ ಕ್ರಮಗಳು
ಒಣ ಬ್ರಷ್ ನಿಂದ ಆರಂಭ ಮಾಡಿ. ಇದು ಸ್ನಾನ ಮಾಡುವ ಸರಿಯಾದ ವಿಧಾನ. ಸ್ನಾನದ ಕೊಠಡಿಗೆ ಹೋದ ಬಳಿಕ ದೇಹದ ಮೇಲೆ ನೀರು ಹಾಕಿಕೊಳ್ಳುವ ಮೊದಲು ಬ್ರಷ್ ಗೆ ಸ್ವಲ್ಪ ನೀರು ಹಾಕಿಕೊಂಡು ಅದರಿಂದ ಸಂಪೂರ್ಣ ದೇಹವನ್ನು ಉಜ್ಜಿಕೊಳ್ಳಿ. ಇದರಿಂದ ದೇಹದಲ್ಲಿರುವ ಮೊದಲ ಪದರದ ಕೊಳೆ ಹಾಗೂ ಕಲ್ಮಶಗಳು ದೂರವಾಗುವುದು ಮತ್ತು ಮುಂದಿನ ಸ್ನಾನಕ್ಕೆ ಚರ್ಮವನ್ನು ತಯಾರುಗೊಳಿಸುವುದು. ಹೀಗೆ ಮಾಡುವಾಗ ಚರ್ಮವನ್ನು ಅತಿಯಾಗಿ ಉಜ್ಜಬೇಡಿ ಮತ್ತು ದೀರ್ಘ ಕಾಲ ಹೀಗೆ ಮಾಡಬೇಡಿ.

ಚರ್ಮಕ್ಕೆ ಸ್ನಾನದ ಕ್ರಮಗಳು
ವಿವಿಧ ರೀತಿಯ ಚರ್ಮಗಳಿಗೆ ಬೇರೆ ಬೇರೆ ರೀತಿಯ ಉತ್ಪನ್ನಗಳು ಬೇಕಾಗುವುದು. ಫೇಸ್ ವಾಶ್ ನ್ನು ಕೇವಲ ಮುಖಕ್ಕೆ ಮಾತ್ರ ಬಳಸಿಕೊಳ್ಳಬೇಕು. ಅದೇ ರೀತಿ ಬಾಡಿ ವಾಶ್ ನ್ನು ತಲೆಯಿಂದ ಕಾಲಿನವರೆಗೆ ಬಳಸಬಹುದು. ಸಮಯ ಉಳಿಸಿಕೊಳ್ಳಲು ವೇಗವಾಗಿ ಸ್ನಾನ ಮಾಡಲು ಹೋದರೆ ಆಗ ಗಡಿಬಿಡಿಯಲ್ಲಿ ಯಾವುದೋ ಉತ್ಪನ್ನವನ್ನು ಇನ್ನೆಲ್ಲಿಗೋ ಬಳಸುತ್ತೀರಿ. ಇದರಿಂದ ಫಲಿತಾಂಶ ಕೆಡುವುದು.

ಅಂಗೈ ಮತ್ತು ಪಾದಕ್ಕೆ ಸಮಯ ಕೊಡಿ
ಸ್ನಾನ ಮಾಡಲು ನಾವು ಹೆಚ್ಚಿನ ಸಮಯ ಕಳೆದರೂ ಅಂಗೈ ಮತ್ತು ಪಾದಗಳಿಗೆ ಸಮಯ ನೀಡುವುದೇ ಇಲ್ಲ. ಪಾದಗಳು ಮತ್ತು ಅಂಗೈಗಳಿಗೆ ಎರಡು ನಿಮಿಷ ನೀಡುವುದು ಸರಿಯಾದ ಸ್ನಾನದ ಕ್ರಮವಾಗಿದೆ. ಈ ಸಮಯದಲ್ಲಿ ಮೊದಲು ಪಾದ ಹಾಗೂ ಅಂಗೈಗಳನ್ನು ಸ್ಕ್ರಬ್ ಮಾಡಿ ಬಳಿಕ ತೊಳೆಯಿರಿ. ದೇಹದ ಇತರ ಭಾಗಗಳಿಗೂ ಇದೇ ರೀತಿ ಮಾಡಿಕೊಳ್ಳಿ.

ಪೂರ್ತಿ ತಲೆಗೆ ಕೂದಲಿನ ಉತ್ಪನ್ನ ಹಾಕಿ
ಶಾಂಪೂ ಅಥವಾ ಕಂಡೀಷನರ್ ಬಳಸಿಕೊಳ್ಳುವಾಗ ಅದನ್ನು ಅಂಗೈಗೆ ಹಾಕಿಕೊಂಡು ತಲೆಗೆ ತಿಕ್ಕಿಕೊಳ್ಳುತ್ತೇವೆ. ಆದರೆ ಇದು ಸರಿಯಾದ ವಿಧಾನವಲ್ಲ. ಶಾಂಪೂ ಅಥವಾ ಕಂಡೀಷನರ್ ನ್ನು ಕೂದಲು ಅಥವಾ ತಲೆಗೆ ಸಂಪೂರ್ಣವಾಗಿ ಹಾಕಿಕೊಂಡು ಅದನ್ನು ಬುಡದ ತನಕ ಮಸಾಜ್ ಮಾಡಬೇಕು. ಕೂದಲಿನ ಬುಡದಿಂದ ತುದಿಯ ತನಕ ಇದನ್ನು ಹಚ್ಚಿಕೊಳ್ಳಬೇಕು. ಕೂದಲನ್ನು ತೊಳೆಯುವ ವೇಳೆ ತಲೆಯ ಎಲ್ಲಾ ಭಾಗದ ಕೂದಲಿನ ಕಡೆ ಗಮನಹರಿಸಿ.



Click it and Unblock the Notifications