ಸೋಪು-ಶಾಂಪೂ ಪಕ್ಕಕ್ಕಿಡಿ, ಇಂತಹ 'ಹೇರ್ ಪ್ಯಾಕ್' ಪ್ರಯತ್ನಿಸಿ

By: Hemanth
Subscribe to Boldsky

ಇಂದಿನ ದಿನಗಳಲ್ಲಿ ಕೂದಲು ಉದುರುವುದು, ಕೂದಲು ತೆಳ್ಳಗೆ ಆಗುವುದು ಮತ್ತು ತಲೆ ಬುರುಡೆಯಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳು ನಮ್ಮ ಸಂಪೂರ್ಣ ತಲೆಯನ್ನೇ ಹಾಳುಗೆಡವುತ್ತದೆ. ಒತ್ತಡ, ಸರಿಯಾಗಿಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರ, ನೀರು ಮತ್ತು ಕೂದಲಿನ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಕೂದಲಿನ ಸಮಸ್ಯೆಗಳಿಗೆ ಕಾರಣವಾಗಿದೆ.

ಸಂಪೂರ್ಣವಾಗಿ ನೀವು ಬೋಳು ತಲೆಯವರು ಆಗುವ ಮೊದಲು ಇದಕ್ಕೆ ನೈಸರ್ಗಿಕವಾದ ಕೆಲವೊಂದು ಔಷಧಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು.... ಚಿಂತಿಸದಿರಿ ಇವೆಲ್ಲಾ ಸಮಸ್ಯೆಗೆ ಮನೆಯಲ್ಲೇ ತಯಾರಿಸಿದ ಕೂದಲಿನ ಪ್ಯಾಕ್‌ನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ. ಈ ಕೂದಲಿನ ಪ್ಯಾಕ್‌ಗೆ ಬಳಸುವ ಕೆಲವೊಂದು ಸಾಮಗ್ರಿಗಳು ತುಂಬಾ ಪ್ರಯೋಜನಕಾರಿ. ಇದು ಕೂದಲಿನ ಆರೈಕೆ ಮಾಡುವುದರೊಂದಿಗೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ನೆರವಾಗುವುದು....   

ಮೊಟ್ಟೆ ಲೋಳೆಯ ಪ್ಯಾಕ್

ಮೊಟ್ಟೆ ಲೋಳೆಯ ಪ್ಯಾಕ್

ಒಂದು ಮೊಟ್ಟೆಯ ಲೋಳೆ ತೆಗೆದು ಅದಕ್ಕೆ ತೆಂಗಿನ ಹಾಲು ಮಿಶ್ರಣ ಮಾಡಿಕೊಳ್ಳಿ. ವಿಟಮಿನ್ ಇ ಕ್ಯಾಪ್ಸೂಲ್ ನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಮೊಟ್ಟೆಯ ಬಿಳಿ ಭಾಗವನ್ನು ಹಾಕಿಕೊಳ್ಳಬೇಡಿ. ಇದರಿಂದ ತಲೆಬುರುಡೆ ಒಣಗುವುದು ಮತ್ತು ತಲೆಹೊಟ್ಟು ನಿರ್ಮಾಣವಾಗಬಹುದು. ಒಂದು ಬ್ರಷ್ ಅಥವಾ ಹತ್ತಿ ಉಂಡೆ ಬಳಸಿಕೊಂಡು ಈ ಮಾಸ್ಕ್ ಅನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿ. 45 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಪಿಎಚ್ ಮಟ್ಟ ನಿಯಂತ್ರಣದಲ್ಲಿರುವ ಶಾಂಪೂ ಹಾಕಿ ತೊಳೆಯಿರಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಪ್ಯಾಕ್

ಈರುಳ್ಳಿ ಮತ್ತು ಬೆಳ್ಳುಳ್ಳಿ ಪ್ಯಾಕ್

ಕೂದಲಿನ ಮರುನಿರ್ಮಾಣವಾಗಲು ಸಲ್ಫರ್ ಒಳ್ಳೆಯ ಕೆಲಸ ಮಾಡುವುದು. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನಲ್ಲಿ ಸಲ್ಫರ್ ಇದೆ. ಬೆಳ್ಳುಳ್ಳಿ ಮತ್ತು ಈರುಳ್ಳಿ ಪೇಸ್ಟ್ ಮಾಡಿ ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಕೂದಲು ಒಣಗಿದ್ದರೆ ಪೇಸ್ಟ್ ಗೆ ಸ್ವಲ್ಪ ಹರಳೆಣ್ಣೆ ಹಾಕಿ ಮಿಶ್ರಣ ಮಾಡಿ. ಕೂದಲಿಗೆ ಈ ಪ್ಯಾಕ್ ಹಾಕಿಕೊಳ್ಳುವ ಮೊದಲು ಹರಳೆಣ್ಣೆ ಮತ್ತು ತೆಂಗಿನೆಣ್ಣೆಯ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಬಹುದು. ಈರುಳ್ಳಿ ಮತ್ತು ಬೆಳ್ಳುಳ್ಳಿಯ ರಸವು ಅತಿಯಾಗಿದ್ದರೆ ಅದನ್ನು ತಲೆಬುರುಡೆಗೆ ಸರಿಯಾಗಿ ಉಜ್ಜಿಕೊಳ್ಳಿ. ಈ ಪ್ಯಾಕ್ ನ್ನು ಎಷ್ಟು ತಲೆಯಲ್ಲಿ ಇಡಲು ಸಾಧ್ಯವೋ ಅಷ್ಟು ಹೊತ್ತು ಇಡಿ. ಕಡಿಮೆಯೆಂದರೆ 45 ನಿಮಿಷ ಕಾಲ ತಲೆಯಲ್ಲಿರಲಿ.

ಕಡಲೆಹಿಟ್ಟು ಮತ್ತು ಜೇನುತುಪ್ಪದ ಪ್ಯಾಕ್

ಕಡಲೆಹಿಟ್ಟು ಮತ್ತು ಜೇನುತುಪ್ಪದ ಪ್ಯಾಕ್

ಸಾವಯವವಾಗಿರುವ ತಾಜಾ ಜೇನುತುಪ್ಪವನ್ನು ಎರಡು ಚಮಚ ಕಡಲೆಹಿಟ್ಟಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಹೆಚ್ಚು ದಪ್ಪ ಅಥವಾ ತೆಳು ಮಾಡಿಕೊಳ್ಳಬೇಡಿ. ಸರಿಯಾದ ಪ್ರಮಾಣದಲ್ಲಿ ಇದನ್ನು ಮಿಶ್ರಣ ಮಾಡಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಂಡು 45 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ನಿಯಮಿತವಾಗಿ ಮಾಡುತ್ತಾ ಇದ್ದರೆ ಕಾಂತಿಯುತ ಕೂದಲು ನಿಮ್ಮದಾಗುವುದು. ಕೂದಲು ಮರುಬೆಳವಣಿಗೆಗೆ ಇದು ನೆರವಾಗುವುದು.

ಪಪ್ಪಾಯಿ ಪ್ಯಾಕ್

ಪಪ್ಪಾಯಿ ಪ್ಯಾಕ್

ಸರಿಯಾಗಿ ಹಣ್ಣಾಗಿರುವ ಪಪ್ಪಾಯಿಯನ್ನು ತೆಗೆದುಕೊಂಡು ತುಂಡು ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಕ್ರೀಮ್ ಹಾಕಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. 45 ನಿಮಿಷ ಕಾಲ ಈ ಮಿಶ್ರಣವನ್ನು ಹಾಗೆ ಬಿಡಿ. ನೀವು ಬಯಸಿದರೆ ಇದಕ್ಕೆ ಸ್ವಲ್ಪ ಹರಳೆಣ್ಣೆ ಅಥವಾ ತೆಂಗಿನಹಾಲನ್ನು ಮಿಶ್ರಣ ಮಾಡಿಕೊಳ್ಳಬಹುದು. ನಿಯಮಿತವಾಗಿ ಹೀಗೆ ಮಾಡಿದರೆ ಖಂಡಿತವಾಗಿಯೂ ಒಳ್ಳೆಯ ಫಲಿತಾಂಶ ನಿಮಗೆ ಸಿಗಲಿದೆ.

ಹಣ್ಣಾಗಿರುವ ಬಾಳೆಹಣ್ಣು ಮತ್ತು ಮಯೋನಿಸ್ ಪ್ಯಾಕ್

ಹಣ್ಣಾಗಿರುವ ಬಾಳೆಹಣ್ಣು ಮತ್ತು ಮಯೋನಿಸ್ ಪ್ಯಾಕ್

ತುಂಬಾ ಹಣ್ಣಾಗಿರುವ ಬಾಳೆಹಣ್ಣು ಮತ್ತು ಮಯೋನಿಸ್ ಸೇರಿಸಿಕೊಂಡು ಅದನ್ನು ಒಂದು ಹದಕ್ಕೆ ಬರುವ ತನಕ ರುಬ್ಬಿಕೊಳ್ಳಿ. ಈ ಪೇಸ್ಟ್ ಗೆ ಕೆಲವು ಹನಿ ತೆಂಗಿನೆಣ್ಣೆ ಅಥವಾ ಹರಳೆಣ್ಣೆ ಅಥವಾ ಆಲಿವ್ ತೈಲ ಹಾಕಿಕೊಳ್ಳಿ. ಇದಕ್ಕೆ ವಿಟಮಿನ್ ಇ ಎಣ್ಣೆಯನ್ನು ಹಾಕಿಕೊಳ್ಳಬಹುದು. ಕೂದಲು ಹಾಗೂ ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಸುಮಾರು 45 ನಿಮಿಷ ಕಾಲ ಹಾಗೆ ಬಿಡಿ. ಒಣ ಹಾಗೂ ಹಾನಿಗೊಂಡಿರುವ ಕೂದಲಿಗೆ ಇದು ತುಂಬಾ ಒಳ್ಳೆಯದು. ನಿಯಮಿತವಾಗಿ ಇದನ್ನು ಬಳಸಿದರೆ ಕೂದಲು ಬೇಗನೆ ಬೆಳೆಯುವುದು. ಮೇಲೆ ತಿಳಿಸಿರುವಂತಹ ಹೇರ್ ಪ್ಯಾಕ್ ಗಳನ್ನು ಬಳಸಿಕೊಂಡು ಸುಂದರ ಹಾಗೂ ಕಾಂತಿಯುತ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

English summary

Quick Hair Packs For Hair Growth

Long, shining, lustrous hair is on everybody's wish list and everyone would like to have hair that literally bounces with health. Hair has often been seen as a symbol of beauty across cultures and many societies place great importance upon healthy, lustrous hair. Beautiful hair is also seen as a sign of good health, so biologically human beings are conditioned to view beautiful hair as being attractive
Subscribe Newsletter