For Quick Alerts
ALLOW NOTIFICATIONS  
For Daily Alerts

ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಪವರ್ ಫುಲ್ ನೈಸರ್ಗಿಕ 'ಎಣ್ಣೆ'!

ಬಿಳಿ ಕೂದಲನ್ನು ಕಪ್ಪು ಮಾಡಲು ರಾಸಾಯನಿಕಯುಕ್ತ ಹೇರ್ ಡೈಗಳನ್ನು ಬಳಸುತ್ತೇವೆ. ಇದರಿಂದ ಅಡ್ಡ ಪರಿಣಾಮಗಳು ಇದ್ದೇ ಇದೆ. ನೈಸರ್ಗಿಕವಾಗಿ ಸಿಗುವಂತಹ ಎಣ್ಣೆಯನ್ನು ಬಳಸಿಕೊಂಡು ಕೂದಲನ್ನು ಕಪ್ಪು ಮಾಡಬಹುದು....

By Jaya Subramanya
|

ಕೂದಲಿನ ಆರೈಕೆಯಲ್ಲಿ ನೈಸರ್ಗಿಕ ಉತ್ಪನ್ನಗಳನ್ನು ಬಳಕೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿದೆ. ನೈಸರ್ಗಿಕ ಉತ್ಪನ್ನಗಳು ಕೂದಲಿಗೆ ಬೇಕಾಗಿರುವ ಪೋಷಕಾಂಶಗಳನ್ನು ಪಡೆದುಕೊಂಡಿದ್ದು, ಕೂದಲು ಬೆಳ್ಳಗಾಗುವುದು, ಉದುರುವುದು, ತುಂಡಾಗುವಿಕೆ, ಕೂದಲು ಬೆಳೆಯದೇ ಇರುವುದು ಮೊದಲಾದ ಸಮಸ್ಯೆಗಳ ಹುಟ್ಟಡಗಿಸುತ್ತವೆ. ಕೂದಲು ಉದುರುವಿಕೆ ತಡೆಯಲು ಇಲ್ಲಿದೆ ಮನೆಮದ್ದು

ಸುಂದರವಾದ ಕೂದಲಿನಲ್ಲಿ ಬಿಳಿ ಕೂದಲು ಇಣುಕಿತೆಂದರೆ ಅದು ಕೂದಲ ಮೆರುಗಿಗೆ ಕಪ್ಪು ಚುಕ್ಕೆಯಾಗಿಬಿಡುತ್ತದೆ. ವಯಸ್ಸಾದಾಗ ಕಂಡುಬರುವ ಬಿಳಿಗೂದಲು ಮತ್ತು ಹರೆಯದಲ್ಲಿ ಕೂದಲಿನಲ್ಲಿ ಕಂಡುಬರುವ ಬಿಳಿಗೂದಲಿಗೆ ಹೆಚ್ಚಿನ ವ್ಯತ್ಯಾಸವಿದೆ. ಹರೆಯದಲ್ಲಿ ಬಿಳಿಗೂದಲು ಕಂಡುಬಂದಲ್ಲಿ ಅದಕ್ಕೆ ಒತ್ತಡ ಮತ್ತು ಹಾರ್ಮೋನಲ್ ಅನಿಯಂತ್ರಣ ಕಾರಣವಾಗಿರುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಮನೆ ಔಷಧಿ-'ಆಲೂಗಡ್ಡೆ ಸಿಪ್ಪೆ'

ನೀವು ಸೇವಿಸುತ್ತಿರುವ ಆಹಾರದಲ್ಲಿ ಪ್ರೊಟೀನ್ ಕೊರತೆಯಾದಲ್ಲಿ ನೆರೆಗೂದಲು ಕಾಣಿಸಿಕೊಂಡುಬಿಡುತ್ತದೆ. ಆದ್ದರಿಂದ ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರುವಂತೆ ನೋಡಿಕೊಳ್ಳಿ. ಇದರ ಜೊತೆಗೆ ಕೂದಲಿನ ಕಾಳಜಿಯನ್ನೂ ನೀವು ನೈಸರ್ಗಿಕ ಉತ್ಪನ್ನಗಳ ಮೂಲಕ ಮಾಡಬೇಕಾಗುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಬಿಳಿಗೂದಲನ್ನು ಹೋಗಲಾಡಿಸುವ ಅದ್ಭುತ ತೈಲವೊಂದನ್ನು ನೀಡುತ್ತಿದ್ದು ಇದನ್ನು ಖುದ್ದು ನೀವೇ ಮಾಡಿ ಫಲಿತಾಂಶವನ್ನು ಕಂಡುಕೊಳ್ಳಬಹುದಾಗಿದೆ...

ಹಂತ #1

ಹಂತ #1

ಅರ್ಧ ಕಪ್‌ನಷ್ಟು ತೆಂಗಿನೆಣ್ಣೆಗೆ ಒಂದು ಚಮಚದಷ್ಟು ಹರಳೆಣ್ಣೆಯನ್ನು ಸೇರಿಸಿಕೊಂಡು ಅದನ್ನು ಕಡಿಮೆ ಉರಿಯಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಬಿಸಿ ಮಾಡಿ. ತೆಂಗಿನೆಣ್ಣೆಯಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ತಲೆಬುರುಡೆಯ ಪೋಷಣೆಯನ್ನು ಮಾಡಲಿದೆ ಮತ್ತು ಹರಳೆಣ್ಣೆಯಲ್ಲಿರುವ ಒಮೇಗಾ - ಫ್ಯಾಟಿ ಆಸಿಡ್ಸ್ ಬೇರನ್ನು ಗಟ್ಟಿಗೊಳಿಸಿ ಬೆಳವಣಿಗೆಯನ್ನು ಮಾಡಲಿದೆ. ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಹಂತ #2

ಹಂತ #2

ಎರಡು ದಾಸವಾಳ ಹೂವುಗಳನ್ನು ತೆಗೆದುಕೊಂಡು ಅದನ್ನು ತುಂಡರಿಸಿ ಎಣ್ಣೆಗೆ ಹಾಕಿ. ಹೂವನ್ನು ಒಣಗಿಸಿ ನಂತರ ಅದನ್ನು ಪುಡಿ ಮಾಡಿ ಮತ್ತು ಒಂದು ಚಮಚದಷ್ಟು ಹುಡಿಯನ್ನು ಎಣ್ಣೆಗೆ ಸೇರಿಸಿ. ದಾಸವಾಳದಲ್ಲಿ ಕೂದಲಿನ ಪೋಷಣೆಗೆ ಬೇಕಾದ ಅಗತ್ಯ ಅಂಶಗಳಿದ್ದು ಇದು ಕೂದಲಿನ ಬೆಳವಣಿಗೆಯನ್ನು ಶೀಘ್ರದಲ್ಲಿ ಮಾಡಲಿದೆ.ಕೂದಲಿನ ಆರೈಕೆಗೆ, ಮನೆಯಂಗಳದ 'ದಾಸವಾಳ ಹೂವು'!

ಹಂತ #3

ಹಂತ #3

ಐದು ವಿಟಮಿನ್ ಇ ಜೆಲ್ ಕ್ಯಾಪ್ಸುಲ್‌ಗಳನ್ನು ತೆಗೆದುಕೊಳ್ಳಿ. ಪಿನ್‌ನಿಂದ ಈ ಮಾತ್ರೆಯಲ್ಲಿ ತೂತು ಮಾಡಿ. ಎಣ್ಣೆಗೆ ಮಾತ್ರೆಯಲ್ಲಿರುವ ದ್ರಾವಣವನ್ನು ಬಿಡಿ. ವಿಟಮಿನ್ ಇ ದ್ರಾವಣವನ್ನು ಸೇರಿಸುವ ಮುನ್ನ ಎಣ್ಣೆ ತಣ್ಣಗಿದೆ ಎಂಬುದನ್ನು ಖಾತ್ರಿಪಡಿಸಿ. ವಿಟಮಿನ್ ಇ ಮಾತ್ರೆಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿಮ್ಮ ಕೂದಲಿಗೆ ಹೊಳಪು ಮತ್ತು ಮೃದುತ್ವವನ್ನು ನೀಡುತ್ತದೆ.

ಹಂತ #4

ಹಂತ #4

ಮುಷ್ಟಿಯಷ್ಟು ಕರಿಬೇವನ್ನು ತೆಗೆದುಕೊಂಡು ಇದನ್ನು ಸೂರ್ಯನ ಬಿಸಿಲಿನಲ್ಲಿ 24 ಗಂಟೆಗಳ ಕಾಲ ಒಣಗಿಸಿ. ಎಲೆಗಳು ಗರಿಗರಿಯಾಗಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಇದನ್ನು ಹುಡಿ ಮಾಡಿ. ಒಂದು ಚಮಚದಷ್ಟು ಹುಡಿಯನ್ನು ಎಣ್ಣೆಗೆ ಸೇರಿಸಿ. ಕರಿಬೇವು ಬೀಟಾ ಕ್ಯಾರೊಟಿನ್ ಅನ್ನು ಒಳಗೊಂಡಿದೆ ಮತ್ತು ಪ್ರೊಟೀನ್ ಅನ್ನು ಪಡೆದುಕೊಂಡಿದೆ. ಇದು ಕೂದಲುದುರುವುದನ್ನು ತಡೆಗಟ್ಟಿ ಕೂದಲನ್ನು ಕಪ್ಪಗಾಗಿಸುತ್ತದೆ. ಚೆಲುವೆಯ ಅಂದದ ಜಡೆಗೆ ಕರಿಬೇವು+ಮೆಂತೆಯ ಕಮಾಲ್...

ಹಂತ #5

ಹಂತ #5

ಮೂರು ಹನಿಗಳಷ್ಟು ಟಿ ಟ್ರಿ ಆಯಿಲ್ ಅನ್ನು ಎಣ್ಣೆಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ಟಿ ಟ್ರಿ ಆಯಿಲ್‌ನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಹೊಟ್ಟಿನಿಂದ ತಲೆಬುರುಡೆಯನ್ನು ಕಾಪಾಡಲಿದೆ.

ಹಂತ #6

ಹಂತ #6

ಈ ಎಣ್ಣೆಯನ್ನು ಗಾಳಿಯಾಡದ ಬಾಟಲಿಗೆ ವರ್ಗಾಯಿಸಿ. 24 ಗಂಟೆ ಎಣ್ಣೆಯನ್ನು ಹಾಗೆಯೇ ಬಿಡಿ. ನಂತರ ಎಣ್ಣೆಯನ್ನು ಶೋಧಿಸಿ ಬಳಸಿ. ಎಣ್ಣೆ ಕೊಂಚ ಜಿಡ್ಡಿನ ಪರಿಮಳವನ್ನು ಹೊಂದಿದೆ ಎಂದಾದಲ್ಲಿ ಲಿಂಬೆರಸವನ್ನು ಇದಕ್ಕೆ ಸೇರಿಸಿ.

ಹಂತ #7

ಹಂತ #7

ಕೂದಲಿನ ಸಿಕ್ಕುಗಳನ್ನು ಚೆನ್ನಾಗಿ ಬಿಡಿಸಿ. ಇದಕ್ಕಾಗಿ ಅಗಲ ಹಲ್ಲಿನ ಬಾಚಣಿಗೆಯನ್ನು ಬಳಸಿ. ಇದರಿಂದ ಕೂದಲು ತುಂಡಾಗದೇ ಸಿಕ್ಕು ಬಿಡುತ್ತದೆ.

ಹಂತ #8

ಹಂತ #8

ಕೂದಲನ್ನು ಸಣ್ಣ ಭಾಗಗಳನ್ನಾಗಿ ಮಾಡಿ ಮತ್ತು ಕೂದಲಿಗೆ ಎಣ್ಣೆಯನ್ನು ಮಸಾಜ್ ಮಾಡಿ. ಎಣ್ಣೆಯಲ್ಲಿ ಕೂದಲಿನ ಬುಡು ಮತ್ತು ತುದಿ ಚೆನ್ನಾಗಿ ನೆನೆಯಬೇಕು. 5 ರಿಂದ 10 ನಿಮಿಷಗಳ ಕಾಲ ಕೂದಲನ್ನು ಮಸಾಜ್ ಮಾಡಿ ಇದರಿಂದ ರಕ್ತ ಪ್ರವಾಹ ಚೆನ್ನಾಗಿ ನಡೆಯುತ್ತದೆ ಮತ್ತು ಕೂದಲಿನಲ್ಲಿ ಎಣ್ಣೆ ಚೆನ್ನಾಗಿ ಹೀರಿಕೊಳ್ಳುತ್ತದೆ.

ಹಂತ #9

ಹಂತ #9

ಕೂದಲನ್ನು ಸಡಿಲವಾಗಿ ಹೆಣೆದುಕೊಳ್ಳಿ, ಮತ್ತು ರಾತ್ರಿಪೂರ್ತಿ ಹಾಗೆಯೇ ಬಿಡಿ. ಮರುದಿನ ಬೆಳಗ್ಗೆ ಕೂದಲನ್ನು ಮೃದುವಾದ ಶಾಂಪೂವಿನಿಂದ ತೊಳೆದುಕೊಳ್ಳಿ. ತದನಂತರ ಕಂಡೀಷನರ್ ಬಳಕೆಯನ್ನು ಮಾಡಿ.

ಈ ಅಂಶಗಳನ್ನು ನೆನಪಿನಲ್ಲಿರಿಸಿಕೊಳ್ಳಿ

ಈ ಅಂಶಗಳನ್ನು ನೆನಪಿನಲ್ಲಿರಿಸಿಕೊಳ್ಳಿ

*ನಿಮ್ಮ ಕೂದಲಿನ ದಪ್ಪ ಮತ್ತು ಗಾತ್ರಕ್ಕೆ ತಕ್ಕಂತೆ ಉತ್ಪನ್ನಗಳನ್ನು ಆರಿಸಿ

ನಿಮ್ಮದು ಜಿಡ್ಡುಳ್ಳ ತಲೆಬುರುಡೆಯಾದಲ್ಲಿ, ಎಣ್ಣೆಯನ್ನು ಸ್ವಲ್ಪವೇ ಹಚ್ಚಿಕೊಳ್ಳಿ.

*ರಾಸಾಯನಿಕ ರಹಿತ ಉತ್ಪನ್ನಗಳ ಬಳಕೆಯನ್ನು ಕೂದಲಿಗೆ ಮಾಡಿ, ಇದರಿಂದ *ಕೂದಲಿನ ಕೋಶಗಳಿಗೆ ಉಸಿರಾಟ ದೊರೆಯುತ್ತದೆ.

*ಕೂದಲನ್ನು ಬಿಸಿ ನೀರಿನಲ್ಲಿ ತೊಳೆಯದಿರಿ. ಉಗುರು ಬೆಚ್ಚಗಿನ ನೀರು ಒಳ್ಳೆಯ ಸಲಹೆಯಾಗಿದೆ.

*ಕೊನೆಗೆ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದು ಕ್ಯುಟಿಕಲ್‌ಗಳನ್ನು ಲಾಕ್ ಮಾಡಿ ಕೂದಲನ್ನು ಹೊಳೆಯಿಸುತ್ತದೆ.

ಫಲಿತಾಂಶಗಳು

ಫಲಿತಾಂಶಗಳು

ಈ ಎಣ್ಣೆಯು ನಿಮ್ಮ ಕೂದಲನ್ನು ಬಲಶಾಲಿಯಾಗಿಸಿ ಆರೋಗ್ಯವನ್ನು ನೀಡಲಿದೆ. ನೆರೆಗೂದಲನ್ನು ಹೋಗಲಾಡಿಸಿ ಕಡುಕಪ್ಪು ಬಣ್ಣದ ಮಿರುಗುವ ಕೂದಲನ್ನು ನೀವು ಪಡೆದುಕೊಳ್ಳುತ್ತೀರಿ. ಉತ್ತಮ ಫಲಿತಾಂಶಕ್ಕಾಗಿ ಈ ಎಣ್ಣೆಯನ್ನು ವಾರಕ್ಕೊಮ್ಮೆ ಬಳಸಿ.




English summary

Powerful Hair Oil Recipe To Make Your Hair Jet Black In 10 Days!

Is your scalp peppered with white hair? Is your hair density steadily tumulting? Are you afraid of washing your hair dreading the excess hair loss? Then, this hair oil for grey hair can be a Saviour for you. Here is the step-by-step method on how to make hair jet black naturally.
Story first published: Wednesday, April 26, 2017, 20:08 [IST]
X
Desktop Bottom Promotion