For Quick Alerts
ALLOW NOTIFICATIONS  
For Daily Alerts

ಬಿಳಿ ಕೂದಲಿನ ಸಮಸ್ಯೆಗೆ ಮನೆ ಔಷಧಿ-'ಆಲೂಗಡ್ಡೆ ಸಿಪ್ಪೆ'

ಬಿಳಿ ಕೂದಲಿನ ಸಮಸ್ಯೆಯನ್ನು ತಡೆಯಲು ಮಾಡದ ಪ್ರಯತ್ನವಿಲ್ಲ, ಅನುಸರಿಸದ ವಿಧಾನವಿಲ್ಲ. ಆದರೂ ಯಾವುದೇ ಪ್ರಯತ್ನ ಶೇಖಡಾ ನೂರರಷ್ಟು ಫಲ ನೀಡುತ್ತಿಲ್ಲ, ಎಂಬ ಚಿಂತೆಯೇ? ಹಾಗಾದರೆ ಈ ಟಿಪ್ಸ್ ಅನುಸರಿಸಿ...

By Manu
|

ಕೂದಲು ನೆರೆಯುವುದಕ್ಕೆ ಇಂತಿಷ್ಟೇ ಎಂಬ ವಯಸ್ಸಿನ ನಿರ್ಬಂಧವಿಲ್ಲ. ಕೆಲವರಿಗೆ ಇಪ್ಪತ್ತರಲ್ಲಿಯೇ ನೆರೆಯಲು ಪ್ರಾರಂಭಿಸಿದರೆ ಕೆಲವರಿಗೆ ಐವತ್ತರ ಬಳಿಕ ಪ್ರಾರಂಭವಾಗಬಹುದು. ಆದರೆ ಯಾವಾಗ ಪ್ರಾರಂಭವಾದರೂ ಇದು ಆತಂಕವನ್ನು ಮಾತ್ರ ತಪ್ಪದೇ ತರುತ್ತದೆ. ಏಕೆಂದರೆ ಕೂದಲು ನೆರೆಯುವುದು ವೃದ್ಧಾಪ್ಯದ ಲಕ್ಷಣ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ.

ಇದನ್ನು ತಡೆಯಲು ಮಾಡದ ಪ್ರಯತ್ನವಿಲ್ಲ, ಅನುಸರಿಸದ ವಿಧಾನವಿಲ್ಲ. ಆದರೂ ಯಾವುದೇ ಪ್ರಯತ್ನ ಶೇಖಡಾ ನೂರರಷ್ಟು ಫಲ ನೀಡುತ್ತಿಲ್ಲ. ಕೂದಲ ನೆರೆಯುವಿಕೆಗೆ ಸ್ಪಷ್ಟವಾದ ಕಾರಣ ಇದುವರೆಗೆ ಗೊತ್ತಾಗಿಲ್ಲ. ಸ್ಥೂಲವಾಗಿ ಹೇಳಬೇಕೆಂದರೆ ತಾಮ್ರದ ಕೊರತೆಯಿಂದ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯ ಉತ್ಪತ್ತಿಯಾಗದೇ ಬಣ್ಣ ನೆರೆಯತೊಡಗುತ್ತದೆ. ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!

ಕೆಲವು ಊಹಾಪೋಹಗಳ ಪ್ರಕಾರ ಕೇಸರಿ ಬಣ್ಣದ ಬೇಳೆ ತಿನ್ನುವ ಕಾರಣದಿಂದಲೂ ಕೂದಲು ಅಕಾಲಿಕವಾಗಿ ನೆರೆಯುತ್ತದೆ. ಕಾರಣವೇನೇ ಇರಲಿ, ಇದಕ್ಕೆ ಪರಿಹಾರವಾಗಿ ಸುಲಭವಾದ ವಿಧಾನವೊಂದಿದೆ. ಅದೇ ಆಲೂಗಡ್ಡೆಯ ಸಿಪ್ಪೆಯ ಬಳಕೆ. ಆಲೂಗಡ್ಡೆಯ ಸಿಪ್ಪೆಯ ಪವರ್‍‌ಗೆ ಶಭಾಷ್ ಎನ್ನಲೇಬೇಕು!

ಬನ್ನಿ, ಕೆಳಗೆ ನೀಡಿರುವ ಮಾಹಿತಿಯ ಮೂಲಕ ಆಲೂಗಡ್ಡೆಯ ಸಿಪ್ಪೆಯನ್ನು ಕೂದಲ ನೆರೆಯುವಿಕೆ ತಡೆಯಲು ಹೇಗೆ ಉಪಯೋಗಿಸಬಹುದೆಂಬುದನ್ನು ನೋಡೋಣ: ಶ್! ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಸೀಕ್ರೆಟ್ ಮನೆಮದ್ದು!

ಹಂತ 1:

ಹಂತ 1:

ಚೆನ್ನಾಗಿ ತೊಳೆದ ಸುಮಾರು ಆರು ಆಲೂಗಡ್ಡೆಗಳ ಸಿಪ್ಪೆಯನ್ನು ತೆಳುವಾಗಿ ಸುಲಿದು ಸಂಗ್ರಹಿಸಿ.

ಹಂತ 2:

ಹಂತ 2:

ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರನ್ನು ಕುದಿಸಿ. ಕುದಿಯಲು ಪ್ರಾರಂಭವಾದೊಡನೆ ಉರಿಯನ್ನು ತಗ್ಗಿಸಿ ಇದರಲ್ಲಿ ಸಿಪ್ಪೆಯನ್ನು ಸುರಿಯಿರಿ. ಚಿಕ್ಕ ಉರಿಯಲ್ಲಿ ಮುಂದಿನ ಅರ್ಧ ಗಂಟೆ ಕುದಿಸಿ. ಬಳಿಕ ಉರಿ ಆರಿಸಿ ಹದಿನೈದು ನಿಮಿಷ ತಣಿಯಲು ಬಿಡಿ.

ಹಂತ 3:

ಹಂತ 3:

ಬಳಿಕ ಈ ನೀರನ್ನು ಸ್ವಚ್ಛವಾದ ಬಟ್ಟೆ ಅಥವಾ ಸೋಸುಕ ಬಳಸಿ ಸೋಸಿ ನೀರನ್ನು ಸಂಗ್ರಹಿಸಿ. ಸಿಪ್ಪೆಗಳನ್ನು ಎಸೆಯಿರಿ. ಈ ನೀರನ್ನು ಮುಚ್ಚಳ ಮುಚ್ಚಿ ಇಡಿಯ ರಾತ್ರಿ ಹಾಗೇ ಇರಿಸಿ. ಈ ನೀರು ತುಂಬಾ ಗಾಢವಾಗಿದ್ದರೆ ಕೊಂಚ ನೀರು ಸೇರಿಸಬಹುದು. ಇದಕ್ಕೆ ನಿಮ್ಮ ಇಷ್ಟದ ಅವಶ್ಯಕ ತೈಲವನ್ನೂ ಸೇರಿಸಿ ಸುವಾಸನೆ ಮತ್ತು ಇದರ ಶಕ್ತಿಯನ್ನೂ ಕೊಂಚ ಹೆಚ್ಚಿಸಬಹುದು.

ಹಂತ 4:

ಹಂತ 4:

ಬೆಳಗ್ಗಿನ ಸ್ನಾನಕ್ಕೂ ಮುನ್ನ ಕೂದಲನ್ನು ಸೌಮ್ಯ ಶಾಂಪೂ ಬಳಸಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಬಳಿಕ ಕಂಡೀಶನರ್ ಬಳಸಿ ತೊಳೆದುಕೊಳ್ಳಿ. ಕೂದಲನ್ನು ಬೆರಳುಗಳಿಂದ ಬಿಡಿ ಬಿಡಿಯಾಗಿಸಿ. ಬಾಚಣಿಗೆ ಬಳಸಿದರೆ ಸುಲಭವಾಗಿ ತುಂಡಾಗುವ ಸಾಧ್ಯತೆ ಇರುವ ಕಾರಣ ಬಾಚಣಿಗೆ ಬಳಸದಿರಿ.

ಹಂತ 5:

ಹಂತ 5:

ನಿಮ್ಮ ಕೂದಲನ್ನು ಅನುಕೂಲಕ್ಕೆ ತಕ್ಕಂತೆ ಹಲವಾರು ಭಾಗಗಳಾಗಿಸಿ. ಒಂದು ಹತ್ತಿಯುಂಡೆಯನ್ನು ಈ ನೀರಿನಲ್ಲಿ ಮುಳುಗಿಸಿ ಹಿಚುಕಿ ಹೆಚ್ಚುವರಿ ನೀರನ್ನು ಹಿಂಡಿ. ಈ ಉಂಡೆಯಿಂದ ನಿಮ್ಮ ಕೂದಲುಗಳ ಬುಡಕ್ಕೆ ಒತ್ತಿ ದ್ರವ ಒಸರುವಂತೆ ಮಾಡಿ. ಹೀಗೇ ಕೊಂಚಕೊಂಚವಾಗಿ ಇಡಿಯ ತಲೆಯ ಚರ್ಮ ಈ ನೀರಿನಿಂದ ಆವರಿಸುವಂತೆ ಮಾಡಿ.

ಹಂತ 5:

ಹಂತ 5:

ವಿಶೇಷವಾಗಿ ಕೂದಲು ಬಿಳಿಯಾಗಿರುವಲ್ಲಿ ಹೆಚ್ಚು ದ್ರವದಿಂದ ತೋಯಿಸಿ. ಇದೇ ರೀತಿ ಕೂದಲ ಬುಡದಿಂದ ತುದಿಯವರೆಗೂ ಈ ನೀರನ್ನು ಹಚ್ಚಿ. ಈ ಕ್ರಿಯೆ ಕೊಂಚ ಸಮಯ ತೆಗೆದುಕೊಳ್ಳುವುದರಿಂದ ರಜಾದಿನದಂದೇ ಆಚರಿಸಿ.

ಹಂತ 6:

ಹಂತ 6:

ಬಳಿಕ ಬೆರಳುಗಳ ತುದಿಯಿಂದ ನಯವಾಗಿ ಐದು ನಿಮಿಷಗಳವರೆಗೆ ಮಸಾಜ್ ಮಾಡಿ. ನಂತರ ಕೂದಲನ್ನು ಸಡಿಲವಾಗಿ ಗಂಟುಕಟ್ಟಿ ಮೂವತ್ತು ನಿಮಿಷ ಹಾಗೇ ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬಿಸಿನೀರು ಬೇಡ, ಏಕೆಂದರೆ ಇದು ಇಷ್ಟು ಕಷ್ಟಪಟ್ಟು ಒದಗಿಸಿದ್ದ ಪೋಷಕಾಂಶಗಳನ್ನೆಲ್ಲಾ ನಿವಾರಿಸಿ ಬಿಡುತ್ತದೆ.

ಹಂತ 7

ಹಂತ 7

ಬಳಿಕ ದಪ್ಪ ಟವೆಲ್ ಅಥವಾ ಹಳೆಯ ಆದರೆ ಸ್ವಚ್ಛವಾದ ಹತ್ತಿಯ ಟೀಶರ್ಟ್ ಬಳಸಿ ಕೂದಲನ್ನು ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ. ಸರ್ವಥಾ ಉಜ್ಜಿ ಒರೆಸಲು ಹೋಗಬೇಡಿ. ಕೂದಲು ತಾನಾಗಿ ಗಾಳಿಯಲ್ಲಿ ಒಣಗಲಿ. ಹೇರ್ ಡ್ರೈಯರ್ ಬಳಕೆ ಸಲ್ಲದು.

ಹಂತ 7

ಹಂತ 7

ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿದರೆ ಕ್ರಮೇಣ ನೆರೆಗೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ವಿಧಾನಕ್ಕೂ ಹೊರತಾದ ವಿಧಾನ ನಿಮ್ಮಲ್ಲಿದ್ದರೆ ಖಂಡಿತಾ ನಮ್ಮೊಂದಿಗೆ ಹಂಚಿಕೊಳ್ಳಿ.

English summary

Could Potato Skins Get Rid Of Your Gray Hair?

Whether you are in your early 20's or late 50's, greying hair will always be that subtly veiled nightmare that reminds us of how fast we are ageing. While you may have tried and given up on countless so-called remedies for white hair by now, there is still one more solution we want you to try - potato skin for grey hair. Fear not, we will take you step-by-step on how to use potato skin on hair.
X
Desktop Bottom Promotion