ಕೂದಲಿನ ಎಲ್ಲಾ ಸಮಸ್ಯೆಗಳಿಗೆ-ನೈಸರ್ಗಿಕವಾದ ಸ್ಪೆಷಲ್ ಹೇರ್ ಪ್ಯಾಕ್

By: su.ra
Subscribe to Boldsky

ಅಬ್ಬಬ್ಬಾ ಮಹಿಳೆಯರಿಗೆ ತಲೆಕೂದಲಿಂದ ಆಗುವ ಸಮಸ್ಯೆಗಳು ಒಂದಾ ಎರಡಾ. . ಅದರಲ್ಲೂ ಕೂದಲಿಗೆ ರಕ್ಷಣೆಗೆ ಮಹಿಳೆಯರು ಮಾಡೋ ಕಸರತ್ತುಗಳು ಒಂದಾ ಎರಡಾ.. ಎಷ್ಟೇ,ಏನೇ ಮಾಡಿದ್ರೂ ಅವ್ರ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ಬಗೆ ಹರಿಯುವುದೇ ಇಲ್ಲ! ಸಮಸ್ಯೆಯಿಂದ ಬಳಲಿ ಬೆಂಡಾಗಿ ಹೋಗೋ ಅದೆಷ್ಟೋ ಮಹಿಳೆಯರು ನನ್ನ ಕೂದಲು ಚೆನ್ನಾಗಿ ಇರೋಕೆ ಏನು ಮಾಡ್ಬೇಕು ಅಂತ ನೂರೆಂಟು ಬಾರಿ ಯೋಚಿಸ್ತಲೇ ಇರ್ತಾರೆ. ಸೊಂಪಾದ ಕೂದಲಿಗಾಗಿ ಕಲರ್ ಕಲರ್ ಹೇರ್‌ ಪ್ಯಾಕ್‍!

ಥತ್ತೆರಿಕೆ, ಕೂದಲು ಚೆನ್ನಾಗಿ ಇದ್ದಿದ್ರೆ ಎಷ್ಟು ಸ್ಟೈಲ್ ಮಾಡ್ಬಹುದಿತ್ತು. ಎಷ್ಟು ವೆರೈಟಿಯಾಗಿ, ಟ್ರೆಂಡಿ ಆಗಿ ಹೇರ್ ಸ್ಟೈಲ್ ಮಾಡ್ಕೊಬಹುದಿತ್ತು ಅಂತ ಚಿಂತಿಸೇ ಚಿಂತಿಸಿರ್ತಾರೆ. ಹಾಗಾದ್ರೆ ದಿನದಿಂದ ದಿನಕ್ಕೆ ಹಾಳಾಗ್ತಾ ಇರೋ ಕೂದಲು ಚೆನ್ನಾಗಿ ಕಾಣ್ಬೇಕು ಅಂದ್ರೆ ಏನು ಮಾಡ್ಬೇಕು? ನಿಮ್ಮ ತಲೆಕೂದಲು ಉದುರದೆ, ಡ್ಯಾಂಡ್ರಫ್ ಸಮಸ್ಯೆಯಿಂದ ಮುಕ್ತಿ ಪಡೆದು, ಸ್ಪ್ಲಿಟ್ ಎಂಡ್ಸ್ ಸಮಸ್ಯೆ ದೂರ ಆಗ್ಬೇಕು ಅಂದ್ರೆ ನೀವು ಯಾವುದೇ ಪಾರ್ಲರ್ರೋ, ಇಲ್ಲ ಇನ್ಯಾವುದೋ ಚಿಕಿತ್ಸೆಯ ಮೊರೆ ಹೋಗುವ ಅಗತ್ಯ ಇಲ್ಲ. ಮನೆಯಲ್ಲೇ, ನಿಮ್ಮ ಕೈಯಾರೆ ನೀವು ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೀಬಹುದು. ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ಇಟ್ಸ್ ವೆರಿ ಸಿಂಪಲ್.  ಕೂದಲಿನ ಸರ್ವರೋಗಕ್ಕೂ, ಮೆಹೆಂದಿಯ ಅದ್ಭುತ ಹೇರ್ ಪ್ಯಾಕ್  

ಇವೆಲ್ಲಾ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದಾದ ಸ್ಪೆಷಲ್ ಹೇರ್ ಪ್ಯಾಕ್ ಒಂದನ್ನು ನಾವು ತೋರಿಸ್ತೀವಿ. ಈ ಹೇರ್ ಪ್ಯಾಕ್‌ ಕೊಂಡುಕೊಳ್ಳೋಕೆ ನೀವು ಎಲ್ಲೆಲ್ಲೂ ಅಲೆಯೂ ಅಗತ್ಯವೂ ಇಲ್ಲ. ಮನೆಯಲ್ಲೇ ಮಾಡ್ಕೋಬಹುದು. ಹೇಗೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಮುಂದೆ ಇದೆ.. 

ಪಡವಲಕಾಯಿ ಹಾಗೂ ಮೆಂತೆಯನ್ನು ನೆನೆಸಿಡಿ

ಪಡವಲಕಾಯಿ ಹಾಗೂ ಮೆಂತೆಯನ್ನು ನೆನೆಸಿಡಿ

ಸೀಳುಮಾಡಿದ ಪಡವಲಕಾಯಿಗೆ ಮೆಂತ್ಯೆ ಹಾಕಿದ ನಂತ್ರ ಒಂದು ರಾತ್ರಿ ಮೆಂತ್ಯೆಕಾಳುಗಳು ಪಡವಲಕಾಯಿಯೊಳಗೆ ನೆನೆಯುವಂತೆ ಇಟ್ಟುಬಿಡಿ, ಆಲ್ ಮೋಸ್ಟ್ 12 ಗಂಟೆಗಳ ಕಾಲ ನೆನೆದ್ರೆ,. ಮೆಂತ್ಯೆಕಾಳುಗಳು ಪಡವಲಕಾಯಿಯೊಳಗೆ ನೆನೆದಿರುವುದನ್ನು ನೀವೇ ಗಮನಿಸಬಹುದುಹೀಗೆ 12 ಗಂಟೆ ಪಡವಲಕಾಯಿಯಲ್ಲಿ ಮೆಂತೆ ಕಾಳುಗಳನ್ನು ನೆನೆಸಿದ ನಂತ್ರ. ಅದನ್ನು ಮಿಕ್ಸಿ ಮಾಡ್ಬೇಕು. ಸೋ ಅದನ್ನು ಸಣ್ಣಸಣ್ಣ ಪೀಸ್ಗ ಳನ್ನಾಗಿ ಕತ್ತರಿಸಿ. ಸ್ವಲ್ಪ ನೀರು ಹಾಕಿ, ರುಬ್ಬಿಕೊಳ್ಳಿ. ತರಿತರಿಯಾಗುವಂತೆ ರುಬ್ಬಬೇಡಿ. ಚೆನ್ನಾಗಿ ಗ್ರೈಂಡ್ ಮಾಡಿ..

ಪಡವಲಕಾಯಿ ಹಾಗೂ ಮೆಂತೆಯನ್ನು ನೆನೆಸಿಡಿ

ಪಡವಲಕಾಯಿ ಹಾಗೂ ಮೆಂತೆಯನ್ನು ನೆನೆಸಿಡಿ

ಹೀಗೆ ತಯಾರಿಸಿಕೊಂಡ ಮಿಶ್ರಣವನ್ನು ತಲೆಗೆ ಅಪ್ಲೈ ಮಾಡ್ಬೇಕು. ಮಿಕ್ಸಿ ಮಾಡಿದ ನಂತ್ರ ತುಂಬಾ ಹೊತ್ತು ಬಿಡಬೇಡಿ. ಕೂಡಲೇ ತಲೆಗೆ ಹಚ್ಚಿಕೊಂಡ್ರೆ ಒಳ್ಳೆದು. ಆದ್ರೆ ತಲೆಗೆ ಅಪ್ಲೈ ಮಾಡೋದಕ್ಕೂ ಕ್ರಮ ಇದೆ.. ಹೆೇಗೇಗೋ ಹಚ್ಚಿಕೊಳ್ಳುವ ಬದಲು ಕ್ರಮಬದ್ಧವಾಗಿ, ನೀಟ್ ಆಗಿ ತಲೆಗೆ ಅಪ್ಲೈ ಮಾಡಿದ್ರೆ ಪಡವಲಕಾಯಿ ಹೇರ್ ಪ್ಯಾಕ್ ಸರಿಯಾದ ಎಫೆಕ್ಟ್ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು.

ನೀರಿನಲ್ಲಿ ನೆನೆಸಿಟ್ಟ ಹೆಸರುಕಾಳುಗಳು

ನೀರಿನಲ್ಲಿ ನೆನೆಸಿಟ್ಟ ಹೆಸರುಕಾಳುಗಳು

ಮುಕ್ಕಾಲು ಕಪ್ ನಷ್ಟು ಹೆಸರುಕಾಳನ್ನು ನೀರಿನಲ್ಲಿ ಒಂದು ರಾತ್ರಿ ನೆನಸಿಟ್ಟು ಬೆಳಿಗ್ಗೆ ಪ್ರೆಷರ್ ಕುಕ್ಕರ್ ಬಳಸಿ ಬೇಯಿಸಿ. ಬೆಂದ ಮಿಶ್ರಣವನ್ನು ತಣ್ಣಗಾದ ನಂತ್ರ ಪೇಸ್ಟ್ ತಯಾರಿಸಿಕೊಳ್ಳಿ. ಕೂದಲು ಉದ್ದು ಇರುವವರು ಇನ್ನೂ ಹೆಚ್ಚು ಹೆಸರುಕಾಳನ್ನು ತೆಗೆದುಕೊಳ್ಳಬಹುದು. ತಯಾರಿಸಿಕೊಂಡ ಪೇಸ್ಟಿಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮತ್ತು ಒಂದು ಟೇಬಲ್ ಸ್ಪೂನ್ ಆಗುವಷ್ಟು ಲಿಂಬೆಯ ರಸವನ್ನು ಮಿಶ್ರಣ ಮಾಡಿ.. ನಂತ್ರ ಅರ್ದ ಬಟ್ಟಲಿನಷ್ಟು ಮೊಸರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ.

ನೀರಿನಲ್ಲಿ ನೆನೆಸಿಟ್ಟ ಹೆಸರುಕಾಳುಗಳು

ನೀರಿನಲ್ಲಿ ನೆನೆಸಿಟ್ಟ ಹೆಸರುಕಾಳುಗಳು

ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ. ಎರಡು ಗಂಟೆ ಕೂದಲಿನಲ್ಲಿ ಈ ಮಿಶ್ರಣವಿರಲಿ. ಆ ಕಡೆ ಈ ಕಡೆ ಓಡಾಡುವಾಗ ಮಿಶ್ರಣ ತೊಂದರೆ ನೀಡಬಾರದು ಅಂದ್ರೆ ಹೇರ್ ಕ್ಯಾಪ್ ತೊಟ್ಟುಕೊಳ್ಳಿ. ಎರಡುಗಂಟೆಯ ನಂತ್ರ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಒಂದು ವಾರಕ್ಕೆ ಒಮ್ಮೆ ಈ ಹೇರ್ ಪ್ಯಾಕ್ ಬಳಸಿಕೊಳ್ಳಬಹುದು. ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವುದನ್ನು ನೀವೇ ಗಮಿಸಿಕೊಳ್ಳಬಹುದು.

ಡ್ಯಾಂಡ್ರಫ್ ಸಮಸ್ಯೆಗಳಿದ್ದರೆ- ಹುಳಿ ಮಜ್ಜಿಗೆಯ ಮಸಾಜ್ ಪ್ರಯತ್ನಿಸಿ!

ಡ್ಯಾಂಡ್ರಫ್ ಸಮಸ್ಯೆಗಳಿದ್ದರೆ- ಹುಳಿ ಮಜ್ಜಿಗೆಯ ಮಸಾಜ್ ಪ್ರಯತ್ನಿಸಿ!

ಕೇವಲ ಹುಳಿ ಮಜ್ಜಿಗೆಯನ್ನೇ ನೀವು ವಾರಕ್ಕೆ ಮೂರು ನಾಲ್ಕು ಬಾರಿ ತಲೆಯ ನೆತ್ತಿಗೆ ಹಚ್ಚಿ ಮಸಾಜ್ ಮಾಡಿಕೊಂಡ್ರೆ ಡ್ಯಾಂಡ್ರಫ್ ಸಮಸ್ಯೆ ಪರಿಹಾರವಾಗಲಿದೆ. ಅದರ ಜೊತೆಗೆ ಇನ್ನಿತರೆ ಕೆಲವು ವಸ್ತುಗಳನ್ನು ಬಳಕೆ ಮಾಡೋದ್ರಿಂದ ಇನ್ನೂ ಉತ್ತಮವಾದ ಫಲಿತಾಂಶ ಪಡೆದುಕೊಳ್ಳಬಹುದು.

ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ ಮೆಂತೆಯ ಒಂದಷ್ಟು ಕಾಳುಗಳನ್ನು ಪುಡಿಮಾಡಿ ಅದನ್ನು ಮಜ್ಜಿಗೆಯಲ್ಲಿ ನೆನಸಿಡಿ. ಒಂದು ರಾತ್ರಿ ನೆನಸಿಟ್ಟರೂ ಪರವಾಗಿಲ್ಲ. ಹೀಗೆ ನೆನಸಿದ ನಂತ್ರ ಅದನ್ನು ತಲೆಯ ಸ್ಕಾಲ್ಪ್ ಸೇರಿದಂತೆ ಕೂದಲಿಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆಯ ನಂತ್ರ ತೊಳೆದುಕೊಳ್ಳೋದ್ರಿಂದ ಕೂದಲಿನ ಆರೋಗ್ಯ ಉತ್ತಮಗೊಳ್ಳಲಿದೆ. ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗೋದು ಅಲ್ಲದೆ ಕೂದಲು ಗಟ್ಟುಮುಟ್ಟಾಗಿ ಶೈನಿಯಾಗಿ ಮತ್ತು ಆರೋಗ್ಯದಾಯಕವಾಗಿ ಬೆಳೆಯಲು ಇದು ನೆರವಾಗಲಿದೆ. ಅಮೃತದಂತಹ ಮಜ್ಜಿಗೆಯ ಕರಾಮತ್ತಿಗೆ ತಲೆಬಾಗಲೇಬೇಕು!

ತಲೆಯ ಹೊಟ್ಟಿನ ಸಮಸ್ಯೆಗಳಿದ್ದರೆ

ತಲೆಯ ಹೊಟ್ಟಿನ ಸಮಸ್ಯೆಗಳಿದ್ದರೆ

ತಲೆಯ ಹೊಟ್ಟಿನ ಜೊತೆಗೆ ನಿಮ್ಮ ತಲೆಯಲ್ಲಿ ಅಥವಾ ನಿಮ್ಮ ಮಕ್ಕಳ ತಲೆಯಲ್ಲಿ ಹೇನುಗಳಾಗಿದ್ದಲ್ಲಿ ಹುಳಿಮಜ್ಜಿಗೆಗೆ ಒಂದಷ್ಟು ಕಹಿ ಬೇವಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳಿ. ಬೇವಿನಲ್ಲಿರುವ ಕಹಿಯ ಅಂಶವೂ ಹೇನುಗಳ ನಿವಾರಣೆಗೆ ಸಹಾಯ ಮಾಡಿದ್ರೆ ಹುಳಿ ಮಜ್ಜಿಗೆ ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಿ ಕೂದಲು ಬಲಗೊಳ್ಳುವಂತೆ ಮಾಡುತ್ತೆ.

ಪುದೀನಾ ಎಲೆಗಳು

ಪುದೀನಾ ಎಲೆಗಳು

ಕೆಲವು ಪುದೀನಾ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ಪ್ರತಿದಿನ ನಿಮ್ಮ ಕೂದಲಿಗೆ ಬಳಸಿದ್ರೆ, ಇದಕ್ಕಿಂತ ಬೆಸ್ಟ್ ಕಂಡೀಷನರ್ ನಿಮ್ಮ ಕೂದಲಿಗೆ ಮತ್ತೊಂದಿರಲಿಕ್ಕಿಲ್ಲ. ಟ್ರೈ ಮಾಡಿ ನೋಡಿ. ಡ್ರೈ ಆಗಿ, ಕಡ್ಡಿಕಡ್ಡಿಯಂತೆ ಕಾಣುವ ನಿಮ್ಮ ಕೂದಲು ಫಳಫಳ ಹೊಳೆಯಲು ಈ ಮಿಂಟ್ ಜ್ಯೂಸ್ ನೆರವಾಗಲಿದೆ. ಬಿಸಿಲಿನ ದಾಹಕ್ಕೆ-ತಂಪು ತಂಪು ಪುದೀನಾ ಮಸಾಲ ಮಜ್ಜಿಗೆ

 

English summary

Natural Ingredients For Healthy Hair

Beautiful hair is every woman's dream, be it short or long. Healthy, shiny and bouncy hair makes you feel more graceful. This is true for men as well. Simple and natural beauty tips at home can help you achieve healthy hair rather than going in for expensive shampoos or conditioners, which are chemical bound.
Subscribe Newsletter