For Quick Alerts
ALLOW NOTIFICATIONS  
For Daily Alerts

ಕೂದಲಿನ ಸರ್ವರೋಗಕ್ಕೂ, ಮೆಹೆಂದಿಯ ಅದ್ಭುತ ಹೇರ್ ಪ್ಯಾಕ್

By Manu
|

ಭಾರತೀಯರು ಶತಮಾನಗಳಿಂದಲೂ ಬಳಸಿಕೊಂಡು ಬಂದಿರುವಂತಹ ಮದರಂಗಿಯು ಇಂದು ಕೂದಲಿಗೆ ಬಣ್ಣ ಹಾಕುವಂತಹ ಪ್ರತಿಯೊಂದು ಉತ್ಪನ್ನಗಳಲ್ಲೂ ಬಳಸಲ್ಪಡುತ್ತದೆ. ಹಿಂದಿನಿಂದಲೂ ಕೂದಲಿಗೆ ಬಣ್ಣ ಹಾಕಲು ಭಾರತೀಯ ಮಹಿಳೆಯರು ಮದರಂಗಿ ಬಳಸುತ್ತಿದ್ದರು. ಮದರಂಗಿ ಎಲೆಗಳನ್ನು ತೆಗೆದು, ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿಕೊಳ್ಳುತ್ತಿದ್ದರು. ಇದರಿಂದ ಕೂದಲು ಆರೋಗ್ಯ ಹಾಗೂ ಕಪ್ಪಾಗುತ್ತಿತ್ತು. ತಲೆಬುರುಡೆಗೂ ಇದು ತಂಪನ್ನು ನೀಡುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಮದರಂಗಿಯ ಎಲೆಗಳನ್ನು ಪೇಸ್ಟ್ ಮಾಡಿಕೊಳ್ಳಬೇಕಾಗಿಲ್ಲ. ಬದಲಿಗೆ ಮಾರುಕಟ್ಟೆಯಲ್ಲಿ ಮದರಂಗಿಯ ಹುಡಿ ಸಿಗುವುದು. ಇದನ್ನೇ ಬಳಸಲಾಗುತ್ತದೆ. ಹಿಂದಿನ ದಿನಗಳಲ್ಲಿ ಮದರಂಗಿಯನ್ನು ಕೂದಲಿನ ಆರೈಕೆಗೆ ಯಾಕೆ ಬಳಸಲಾಗುತ್ತಿತ್ತು ಎಂದು ನಿಮಗೆ ತಿಳಿದಿದೆಯಾ?

ಉತ್ತಮ ಕಂಡೀಶನರ್ ಆಗಿ ಮದರಂಗಿಯ ಬಳಕೆ
ಮದರಂಗಿಯ ಬಳಕೆಯಿಂದ ಕೂದಲಿಗೆ ಉತ್ತಮ ಕಂಡೀಶನಿಂಗ್ ಆರೈಕೆ ದೊರಕುತ್ತದೆ. ಇದು ಕೂದಲನ್ನು ಸೊಂಪಾಗಿಸುವುದು ಮಾತ್ರವಲ್ಲದೇ ಕಾಂತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೇ ಪ್ರತಿ ಕೂದಲ ಹೊರಭಾಗದಲ್ಲಿ ಕವಚವೊಂದನ್ನು ನಿರ್ಮಿಸುವ ಮೂಲಕ (ಕೂದಲಿಗೆ ಬಣ್ಣ ನೀಡುವುದೂ ಇದೇ) ದೃಢತೆಯನ್ನೂ ನೀಡುತ್ತದೆ.

Best Homemade Henna Hair Packs, which should surprise you

ಆಮ್ಲ-ಪ್ರತ್ಯಾಮ್ಲದ ಸಂತುಲತೆ ಕಾಪಾಡುತ್ತದೆ
ಯಾವುದೇ ಪ್ರಸಾದನ ತಟಸ್ಥವಾಗಿರುವುದಿಲ್ಲ. ಕೊಂಚವಾದರೂ ಆಮ್ಲೀಯ ಅಥವಾ ಪ್ರತ್ಯಾಮ್ಲೀಯವಾಗಿಯೇ ಇರುತ್ತದೆ. ಇವೆರಡೂ ಕೂದಲಿಗೆ ಹಾನಿಕರವಾಗಿವೆ. ಆದರೆ ಮದರಂಗಿ ನೀರಿನಂತೆಯೇ ಅಪ್ಪಟ ತಟಸ್ಥವಾಗಿದ್ದು ಯಾವುವೇ ರೀತಿಯಲ್ಲಿ ಕೂದಲಿಗೆ ಹಾನಿಕರವಲ್ಲ.

ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತದೆ
ಕೂದಲ ಬುಡಕ್ಕೆ ಉತ್ತಮ ಪೋಷಣ ನೀಡುವ ಮೂಲಕ ಮದರಂಗಿ ಕೂದಲ ಬೆಣವಣಿಗೆಗೆ ನೆರವಾಗುತ್ತದೆ. ಅಲ್ಲದೇ ತಲೆಹೊಟ್ಟು, ತುರಿಕೆ, ಕೂದಲ ಉದುರುವಿಕೆ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತದೆ. ಕೂದಲಿಗೆ ಕೆಂಪು ಬಣ್ಣ ಬರಲು ಮದರಂಗಿಗಿಂತ ಉತ್ತಮ ಪ್ರಸಾದನ ಈ ಜಗತ್ತಿನಲ್ಲಿಯೇ ಇಲ್ಲ.

ನೆರೆತದಿಂದ ತಪ್ಪಿಸುತ್ತದೆ
ವಯಸ್ಸಾಗುತ್ತಾ ಬಂದಂತೆ ಕೂದಲು ಅಲ್ಲಲ್ಲಿ ನೆರೆಯಲು ಪ್ರಾರಂಭಿಸುತ್ತದೆ. ಆದರೆ ನಿಯಮಿತವಾಗಿ ಮದರಂಗಿ ಹಚ್ಚಿಕೊಳ್ಳುವವರಲ್ಲಿ ಈ ಕ್ರಿಯೆ ಅತಿ ತಡವಾಗಿ ಆರಂಭವಾಗುತ್ತದೆ.

ಮೊಡವೆ, ಬೊಕ್ಕೆಗಳಿಗೂ ಔಷಧಿಯಾಗಿದೆ
ಕೂದಲ ಜೊತೆಗೆ ಮುಖದ ಸೌಂದರ್ಯ ಹೆಚ್ಚಿಸಲೂ ಮದರಂಗಿ ನೆರವಾಗುತ್ತದೆ. ಮೊಡವೆ, ಬೊಕ್ಕೆ, ಕೆಂಪಗಾದ ಚರ್ಮ, ನರೂಲಿ ಮೊದಲಾದವುಗಳನ್ನು ನಿವಾರಿಸಲು ನೆರವಾಗುತ್ತದೆ.

ಔಷಧೀಯ ರೂಪದಲ್ಲಿ ಮದರಂಗಿಯ ಬಳಕೆ:
* ಸುಟ್ಟಗಾಯಕ್ಕೆ :ಕೊಂಚ ಮದರಂಗಿ ಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ದಪ್ಪನೆಯ ಲೇಪನದಂತೆ ಹಚ್ಚಿದರೆ ಕೂಡಲೇ ಶಮನಗೊಳ್ಳುತ್ತದೆ. ಇದು ಗಾಯವನ್ನು ಬೇಗನೇ ವಾಸಿಯಾಗುವಂತೆ ಮಾಡುವ ಜೊತೆಗೇ ಸೋಂಕು ಹರಡದಂತೆ ತಡೆಯುತ್ತದೆ.
* ತಲೆಯಲ್ಲಿ ಹೊಟ್ಟು ವಿಪರೀತವಾಗಿದ್ದರೆ:
ಕೊಂಚ ಮೆಂತೆ ಕಾಳುಗಳನ್ನು (ಒಂದು ಚಿಕ್ಕಚಮಚ) ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ಕೊಂಚ ದೊರಗಾಗಿ ಇರುವಂತೆ ಅರೆಯಿರಿ. ಬಳಿಕ ಬಾಣಲೆಯಲ್ಲಿ ಕೊಂಚ ಸಾಸಿವೆ ಎಣ್ಣೆ ಬಿಸಿಮಾಡಿ ಇದರಲ್ಲಿ ಕೆಲವು ಮದರಂಗಿ ಎಲೆಗಳನ್ನು ಹಾಕಿ ಹುರಿಯಿರಿ. ತಕ್ಷಣವೇ ಉರಿ ಆರಿಸಿ ತಣಿಯಲು ಬಿಡಿ. ಈ ಎಲೆಗಳನ್ನು ಎಣ್ಣೆಯಿಂದ ನಿವಾರಿಸಿ. ಈ ಎಲೆಗಳನ್ನು ಮೊದಲು ದೊರಗಾಗಿ ಅರೆದಿದ್ದ ಮೆಂತೆಯಲ್ಲಿ ಸೇರಿಸಿ ನುಣ್ಣಗಾಗುವಂತೆ ಮತ್ತೊಮ್ಮೆ ಅರೆಯಿರಿ. ಈ ಲೇಪನವನ್ನು ಕೊಂಚ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆಹೊಟ್ಟಿರುವ ಕಡೆ ಬೆರಳುಗಳಿಂದ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಅರ್ಧಗಂಟೆಯ ಕಾಲ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು. ಈ ಕ್ರಮದಿಂದ ಕೆಲವೇ ದಿನಗಳಲ್ಲಿ ತಲೆಹೊಟ್ಟು ಇಲ್ಲವಾಗುತ್ತದೆ.


* ಕೂದಲು ಉದುರುವ ಸಮಸ್ಯೆ ಇದ್ದರೆ:
ಕೊಂಚ ಸಾಸಿವೆ ಎಣ್ಣೆ ಮತ್ತು ಮದರಂಗಿ ಎಲೆಗಳನ್ನು ಒಂದು ಚಿಕ್ಕ ಚಮಚ ಲಿಂಬೆರಸ ಅಥವಾ ಒಂದು ದೊಡ್ಡ ಚಮಚ ಮೊಸರಿನೊಂದಿಗೆ ನುಣ್ಣಗೆ ಅರೆಯಿರಿ. ಈ ಲೇಪನವನ್ನು ಕೂದಲ ಬುಡಕ್ಕೆ ನಯವಾಗಿ ಬೆರಳುಗಳಿಂದ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಅರ್ಧಘಂಟೆಯ ಕಾಲ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
* ಕೂದಲಿಗೆ ಕಂಡೀಶನಿಂಗ್ ಮಾಡಲು:
ಒಂದು ಕಪ್ ಹಸಿರು ಅಥವಾ ಕಪ್ಪು ಟೀ ಕುದಿಸಿ ಟೀ ಪುಡಿ ಸೋಸಿ. ಈ ನೀರಿಗೆ ಕೊಂಚ ಮದರಂಗಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಲೇಪನ ತಯಾರಿಸಿ. ಕೆಲವು ಹನಿ ನಿಮ್ಮ ಆಯ್ಕೆಯ ಅವಶ್ಯಕ ತೈಲ ಸೇರಿಸಿ. ಅವಶ್ಯಕ ತೈಲ ಇಲ್ಲದಿದ್ದಲ್ಲಿ ಕೂದಲಿಗೆ ಹಚ್ಚಿಕೊಳ್ಳುವ ಮುನ್ನ ಒಂದು ಮೊಟ್ಟೆಯನ್ನು ಮಿಶ್ರಣ ಮಾಡಬಹುದು. ಈ ಲೇಪನದಿಂದ ನಿಮ್ಮ ಕೂದಲನ್ನು ಪೂರ್ಣವಾಗಿ ಆವರಿಸಿಕೊಳ್ಳುವಂತೆ ಮಾಡಿ. ಒಂದು ಘಂಟೆ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲಿಗೆ ಉತ್ತಮ ಹೊಳಪು, ದೃಢತೆ ಮತ್ತು ನೇರವೂ ಆಗುತ್ತದೆ. ವಾರಕ್ಕೊಮ್ಮೆ ಅನುಸರಿಸುವ ಮೂಲಕ ಕೂದಲ ಬೆಳವಣಿಗೆ ಹೆಚ್ಚಿ ನಿಮ್ಮ ಸೌಂದರ್ಯವೂ, ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ.
English summary

Best Homemade Henna Hair Packs, which should surprise you

Henna is a great conditioner for your hair. ... It promotes hair growth, reduces hair fall, dandruff and other scalp problems, have a look...
X
Desktop Bottom Promotion