For Quick Alerts
ALLOW NOTIFICATIONS  
For Daily Alerts

ಕೂದಲಿನ ಅಂದ-ಚಂದಕ್ಕೆ ಮನೆಯಂಗಳದ 'ದಾಸವಾಳ ಹೂವು'

ದಾಸವಾಳದ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುವುದರ ಜೊತೆಗೆ ಉದ್ದವಾಗಿ,ಕಾಂತಿಯುಕ್ತವಾಗಿ ಬೆಳೆಯಲೂ ನೆರವಾಗುತ್ತದೆ. ಇದೇ ಕಾರಣಕ್ಕೆ ದಾಸವಾಳದ ಅಂಶವನ್ನು ಆಯುರ್ವೇದೀಯ ಶಾಂಪೂ ಅಥವಾ ಕೂದಲಿಗೆ ಉಪಯೋಗಿಸುವ ಎಣ್ಣೆಯಲ್ಲಿ ಪ್ರಮುಖವಾಗಿ ಬಳಸುತ್ತಾ

By Hemanth
|

ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಯಾಕೆಂದರೆ ನಮ್ಮ ಸುತ್ತಮುತ್ತಲು ಇರುವಂತಹ ಗಿಡಮೂಲಿಕೆಗಳು, ಹೂಗಳು ಹಾಗೂ ಇತರ ಔಷಧಿಯ ಸಸ್ಯಗಳನ್ನು ನಾವು ಕಡೆಗಣಿಸುತ್ತೇವೆ. ಯಾಕೆಂದರೆ ಅದರ ಬಗ್ಗೆ ತಾತ್ಸಾರ. ಇತ್ತೀಚಿನ ದಿನಗಳಲ್ಲಿ ಜನರ ಮನಸ್ಥಿತಿ ಹೇಗಾಗಿದೆಯೆಂದರೆ ಆಯುರ್ವೇದದ ಬಗ್ಗೆ ಒಳ್ಳೆಯ ಜ್ಞಾನ ಇರುವವರ ಮಾತನ್ನು ಕೇಳುವುದಿಲ್ಲ. ಆದರೆ ವಾಟ್ಸಪ್ ಮತ್ತು ಫೇಸ್ ಬುಕ್‌ನಲ್ಲಿ ಬಂದರೆ ಅದು ನಿಜವೆಂದೇ ನಂಬುತ್ತಾರೆ. ದಾಸವಾಳದಲ್ಲಿರುವ ಔಷಧೀಯ ಗುಣಗಳು
ಅದೇನೇ ಇರಲಿ. ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವುದು ದಾಸವಾಳದ ಹೂವಿನಿಂದ ಕೂದಲಿನ ಆರೈಕೆ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ. ದಾಸವಾಳದ ಎಣ್ಣೆಯನ್ನು ಬಳಸಿಕೊಂಡರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದು, ಕೂದಲು ತುಂಡಾಗುವುದು ಮತ್ತು ಉದುರುವುದನ್ನು ತಡೆಯಬಹುದು. ದಾಸವಾಳದಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಅಲ್ಫಾ ಹೈಡ್ರಾಕ್ಸಿ ಆಮ್ಲಗಳು ಸಮೃದ್ಧವಾಗಿದೆ. ದಾಸವಾಳದ ಹೂವಿನಿಂದ ತೆಗೆದ ಎಣ್ಣೆಯನ್ನು ಹಲವಾರು ರೀತಿಯ ಶಾಂಪೂ ಹಾಗೂ ಕೂದಲಿನ ಇತರ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಕೂದಲಿನ ಆರೈಕೆಯನ್ನು ದಾಸವಾಳದಿಂದ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ....

ತಲೆಬುರುಡೆಯ ತುರಿಕೆಗೆ

ತಲೆಬುರುಡೆಯ ತುರಿಕೆಗೆ

ತಲೆಬುರುಡೆಯಲ್ಲಿ ತುರಿಕೆಗಾಗಿ ದಾಸವಾಳದ ಎಣ್ಣೆ ಒಳ್ಳೆಯದು. ದಾಸವಾಳದಲ್ಲಿ ವಿಟಮಿನ್ ಎ ಮತ್ತು ಸಿ ಇರುವ ಕಾರಣದಿಂದಾಗಿ ತುರಿಕೆ ಕಡಿಮೆ ಮಾಡುತ್ತದೆ. ದಾಸವಾಳದ ಹೂವುಗಳನ್ನು ನೀರಿನಲ್ಲಿ ಕುದಿಸಬೇಕು. ಇದನ್ನು ಕುದಿಸಿದ ಬಳಿಕ ನೀರನ್ನು ತೆಗೆದು ತಣ್ಣಗಾಗಲು ಬಿಡಬೇಕು. ಸ್ನಾನದ ಅಂತ್ಯದಲ್ಲಿ ಈ ನೀರಿನಿಂದ ಕೂದಲು ತೊಳೆಯಿರಿ. ದಾಸವಾಳದ ಎಣ್ಣೆ ಮತ್ತು ದಾಸವಾಳದ ಹೂವಿನ ಹೂವನ್ನು ಬಳಸುವುದರಿಂದ ತಲೆಬುರುಡೆಯಲ್ಲಿನ ತುರಿಕೆ ಕಡಿಮೆಯಾಗುವುದು.ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?

ಬಲಿಷ್ಠ ಕೂದಲಿಗೆ...

ಬಲಿಷ್ಠ ಕೂದಲಿಗೆ...

ಕೂದಲಿನ ಕೋಶಗಳನ್ನು ಬಲಿಷ್ಠಗೊಳಿಸಬೇಕೆಂದಿದ್ದರೆ ದಾಸವಾಳದ ಎಣ್ಣೆಯೊಂದಿಗೆ ತೆಂಗಿನ ಎಣ್ಣೆಯನ್ನು ಬಳಸಿ. ಕೆಲವು ಹನಿ ದಾಸವಾಳದ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. ದಾಸವಾಳದ ಹುಡಿಯನ್ನು ಹಾಕಿಕೊಂಡು ಬಿಸಿ ಮಾಡಿ. ಇದನ್ನು ಕೂದಲಿಗೆ ಮಾಸ್ಕ್ ಆಗಿ ಬಳಸಿಕೊಂಡು ಸ್ವಲ್ಪ ಸಮಯ ಒಣಗಲು ಬಿಡಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ. ದಾಸವಾಳ ಮತ್ತು ತೆಂಗಿನ ಎಣ್ಣೆಯು ಕೂದಲನ್ನು ಬಲಿಷ್ಠವಾಗಿಸುವುದು.

ತಲೆಹೊಟ್ಟಿನ ಸಮಸ್ಯೆಗೆ

ತಲೆಹೊಟ್ಟಿನ ಸಮಸ್ಯೆಗೆ

ಮೆಂತೆಯ ಕಾಳಿನೊಂದಿಗೆ ದಾಸವಳವನ್ನು ಬಳಸಿದಾಗ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದು ಹಿಡಿ ಮೆಂತೆಯನ್ನು ರಾತ್ರಿ ನೀರಿನಲ್ಲಿ ಹಾಕಿ ನೆನೆಸಿಡಿ. ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಹಾಕಿಕೊಳ್ಳಿ. ಈಗ ಸ್ವಲ್ಪ ದಾಸವಾಳದ ಎಣ್ಣೆ ಹಾಕಿಕೊಂಡು ಅದನ್ನು ಮಿಶ್ರಣ ಮಾಡಿಕೊಳ್ಳಿ. ಎರಡು ಚಮಚ ದಾಸವಾಳದ ಹುಡಿಯನ್ನು ಮೆಂತೆಯ ಪೇಸ್ಟ್‌ಗೆ ಹಾಕಿಕೊಂಡು ತಲೆಗೆ ಹಚ್ಚಿಕೊಳ್ಳಿ. ಕೂದಲಿಗೆ ಬುಡಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಒಣಗಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ದಾಸವಾಳದ ಅತ್ಯುತ್ತಮ ಗುಣವೆಂದರೆ ಕೂದಲು ಉದುರುವುದನ್ನು ನಿಲ್ಲಿಸುವುದು. ಇದರ ನಿಯಮಿತ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗಿ ಬಕ್ಕತನ ಆವರಿಸುವುದರಿಂದ ತಡೆದಂತಾಗುತ್ತದೆ. ಇದಕ್ಕಾಗಿ ಕೆಲವು ದಾಸವಾಳದ ಹೂವಿನ ದಳಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಣಿಸಿ ಬಟ್ಟೆಯಲ್ಲಿ ಹಿಂಡಿ ಸೋಸಿ. ಪ್ರತಿಬಾರಿ ಸ್ನಾನಕ್ಕೂ ಒಂದು ಘಂಟೆಗೂ ಮುನ್ನ ಹೆಚ್ಚು ಪ್ರಮಾಣದಲ್ಲಿ ನಯವಾದ ಮಸಾಜ್ ನೊಂದಿಗೆ ತಲೆಗೆ ಹಚ್ಚಿ ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ. ಸೌಮ್ಯ ಶಾಂಪೂ ಬಳಸಿ.

ಕೂದಲಿಗೆ ದೃಢತೆ ಮತ್ತು ಕಾಂತಿ ನೀಡುತ್ತದೆ

ಕೂದಲಿಗೆ ದೃಢತೆ ಮತ್ತು ಕಾಂತಿ ನೀಡುತ್ತದೆ

ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಮೊಸರಿನಲ್ಲಿ ಸೇರಿಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಇಡಿಯ ತಲೆಗೆ ಹಚ್ಚಿ ಅರ್ಧ ಘಂಟೆ ಹಾಗೇ ಒಣಗಲು ಬಿಡಬೇಕು. ನಂತರ ಉಗುರುಬೆಚ್ಚನೆಯ ನೀರನ್ನು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಬೇಕು. ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸಿದರೆ ಕೂದಲ ಬುಡಕ್ಕೆ ಉತ್ತಮ ಪೋಷಣೆ ದೊರೆತು ಕೂದಲು ಹೆಚ್ಚು ದೃಢ ಮತ್ತು ಕಾಂತಿಯುಕ್ತವಾಗುತ್ತದೆ. ನೀಳತೆಯೂ ಹೆಚ್ಚುತ್ತದೆ.

English summary

How To Use Hibiscus Oil For Hair

Hibiscus flower contains a high amount of Vitamin C, Vitamin A, and alpha-hydroxyl acids along with other beneficial nutrients. Oil extracted from hibiscus is also used in several shampoos and hair care products, which claim to treat hair loss problems.
X
Desktop Bottom Promotion