ಕೂದಲಿನ ಸರ್ವರೋಗಕ್ಕೂ 'ಶುಂಠಿಯ' ಆರೈಕೆ!

By: Deepu
Subscribe to Boldsky

ಪ್ರತಿಯೊಬ್ಬ ಮಹಿಳೆಯು ಬಯಸುವುದು ಸುಂದರ ಹಾಗೂ ರೇಷ್ಮೆಯಂತಹ ಕೂದಲನ್ನು. ರೇಷ್ಮೆಯಂತಹ ಹೊಳೆಯುವ ಕೂದಲು ಬೇಕಿದ್ದರೆ ಅದಕ್ಕಾಗಿ ಕೂದಲಿನ ಆರೈಕೆಯನ್ನು ಚೆನ್ನಾಗಿ ಮಾಡಿಕೊಳ್ಳಬೇಕು. ಕೂದಲಿನ ಆರೈಕೆ ಮಾಡುವುದು ಎಂದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಎಲ್ಲಾ ಶಾಂಪೂಗಳನ್ನು ಬಳಸುವುದು ಎಂದರ್ಥವಲ್ಲ.  ಕೂದಲು ಸೊಂಪಾಗಿ ಬೆಳೆಯಬೇಕೇ? ಶುಂಠಿ ಹೇರ್ ಪ್ಯಾಕ್ ಪ್ರಯತ್ನಿಸಿ

ಶಾಂಪೂ ಬಳಸಿದರೆ ಅದರಲ್ಲಿರುವ ರಾಸಾಯನಿಕವು ಕೂದಲಿಗೆ ಹಾನಿಯನ್ನು ಉಂಟು ಮಾಡುತ್ತದೆ. ಕೆಲವು ಸಮಯ ಕೂದಲು ಸುಂದರವಾಗಿ ಕಂಡರೂ ಬಳಿಕ ಅದು ತನ್ನ ರೂಪ ಕಳೆದುಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ತಯಾರಿಸಿದ ಹೇರ್ ಪ್ಯಾಕ್‌ನಿಂದ ಕೂದಲಿನ ಆರೈಕೆ ಮಾಡುವುದು ತುಂಬಾ ಒಳ್ಳೆಯದು. ಕೂದಲಿನ ಆರೈಕೆಗಾಗಿ ಶುಂಠಿಯ ಬಳಕೆ ಬಗ್ಗೆ ನೀವು ಕೇಳಿರಬಹುದು. ಕೂದಲಿನ ಬೆಳವಣಿಗೆ ಮತ್ತು ಕೂದಲಿಗೆ ಬರುವ ಕೆಲವೊಂದು ಸಮಸ್ಯೆಗಳ ನಿವಾರಣೆಗೆ ಶುಂಠಿಯ ಬಳಕೆ ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ...

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ಅದನ್ನು ನೇರವಾಗಿ ತಲೆಬುರುಡೆಗೆ ಉಜ್ಜಿಕೊಳ್ಳಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು. ಶುಂಠಿಯ ರಸ ತಲೆಬುರುಡೆಯಲ್ಲಿ ಹಾಗೆ ಇರಲಿ. 10-15 ನಿಮಿಷ ಬಿಟ್ಟು ತಲೆ ಕೂದಲು ತೊಳೆಯಿರಿ, ನೈಸರ್ಗಿಕ ಕಂಡೀಷನರ್ ಬಳಸಲು ಮರೆಯಬೇಡಿ....

ತಲೆಹೊಟ್ಟು

ತಲೆಹೊಟ್ಟು

ಶುಂಠಿಯ ರಸದಲ್ಲಿ ಆ್ಯಂಟಿಬ್ಯಾಕ್ಟೀರಿಯಾ ಗುಣಗಳು ಇವೆ. ಇದು ತಲೆಬುರುಡೆಯಲ್ಲಿ ಮೇದೋಗ್ರಂಥಿಗಳ ಸ್ರಾವವನ್ನು ತಡೆಯುತ್ತದೆ. ಇದರಿಂದ ತಲೆಬುರುಡೆಯು ಸೋಂಕಿನಿಂದ ಮುಕ್ತವಾಗುತ್ತದೆ.ಹಳ್ಳಿ ಮದ್ದು ಇರಬೇಕಾದರೆ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?

ಕಾಂತಿಯುತ ಕೂದಲಿಗೆ

ಕಾಂತಿಯುತ ಕೂದಲಿಗೆ

ಶುಂಠಿಯ ರಸವನ್ನು ಆಲಿವ್ ತೈಲದೊಂದಿಗೆ ಸೇರಿಸಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ನಂತರ ಒಂದು ಗಂಟೆಗಳ ಕಾಲ ಅಥವಾ ಸಾಧ್ಯವಾದರೆ ರಾತ್ರಿಯಿಡಿ ಹಾಗೆ ಬಿಡಿ. ಇದು ನಿಮಗೆ ಕಾಂತಿಯುತ ಕೂದಲು ನೀಡುವುದು.

 ಒಣ ಕೂದಲಿಗೆ

ಒಣ ಕೂದಲಿಗೆ

ಒಣ ಕೂದಲು ಇರುವವರು ಆರ್ಗನ್ ತೈಲದೊಂದಿಗೆ ಶುಂಠಿ ರಸವನ್ನು ಸೇರಿಸಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ಕಾಲ ಹಾಗೆ ಬಿಡಿ. ಬಳಿಕ ಶಾಂಪೂ ಅಥವಾ ಕಂಡೀಷನರ್ ಹಾಕಿ ತೊಳೆಯಿರಿ. ಒಣ ಹಾಗೂ ಹಾನಿಗೊಳಗಾದ ಕೂದಲಿಗೆ ಆರ್ಗನ್ ತೈಲವು ಪೋಷಕಾಂಶವನ್ನು ಒದಗಿಸುವುದು.ಒಣ ಕೂದಲಿನ ಕಿರಿಕಿರಿಗೆ ನೈಸರ್ಗಿಕ ಹೇರ್ ಮಾಸ್ಕ್

 
English summary

How To Use Ginger For Your Hair

You must have heard about ginger being used for hair. We will tell you how you can use ginger for your hair to reap it's benefits. And every woman wants longer and stronger hair. And we are all always looking for simple home remedies to find better solutions to our beauty problems. Using ginger for the purpose of hair growth is a simple yet effective method which doesn't require you to spend as much money either. So, try using ginger for your hair and see the amazing effects of it yourself!
Please Wait while comments are loading...
Subscribe Newsletter