Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಥತ್! ಈ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಹೇಗೆ?
ಬಹುಶಃ ನೀವು ಸಹ ಗಮನಿಸಿರಬಹುದು. ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ.... ಇಂತಹ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ನೋಡಿ ಮನೆಮದ್ದು
ಬುದ್ಧ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಳಿದಾಗ ಹೇಗೆ ಯಾವ ಮನೆಯೂ ಸಿಗಲಿಲ್ಲವೋ ಹಾಗೆ ಈಗಿನ ಜಮಾನದಲ್ಲಿ ತಲೆಕೂದಲಿನ ಸಮಸ್ಯೆ ಯಾರ ಮನೆಯಲ್ಲಿ ಇಲ್ಲವೋ ಅಂತಹ ಮನೆ ಹುಡುಕೋಕೆ ಹೇಳಿದ್ರೆ ಅದೂ ಕೂಡ ಖಂಡಿತ ಅಸಾಧ್ಯವಾದ ಕೆಲಸವೇ..ಪುರುಷ, ಮಹಿಳೆ ಅನ್ನೋ ಬೇಧಭಾವವಿಲ್ಲದೆ ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ತಲೆಕೂದಲಿನ ಸಮಸ್ಯೆ ಎದುರಿಸಿಯೇ ಎದುರಿಸ್ತಾ ಇರುತ್ತಾರೆ.... ಅದರಲ್ಲೂ ಈ ತಲೆಹೊಟ್ಟಿನ ಸಮಸ್ಯೆಯಂತೂ ಕೇಳುವುದೇ ಬೇಡ! ಅಷ್ಟೊಂದು ಕಿರಿ ಕಿರಿ ನೀಡುತ್ತದೆ!
ಇದಕ್ಕಾಗಿ ತಲೆಹೊಟ್ಟು ನಿವಾರಕ ರಾಸಾಯನಿಕ ಶಾಂಪೂಗಳನ್ನು ಬಳಸಿದರೂ ಅವುಗಳು ಸ್ವಲ್ಪ ಸಮಯ ಮಾತ್ರವೇ ಪರಿಣಾಮವನ್ನು ಬೀರಿ ಸ್ವಲ್ಪ ಮಟ್ಟಿಗೆ ನಿಮಗೆ ನೆಮ್ಮದಿ ನೀಡಬಹುದು! ಆದರೆ ಇದರಿಂದಾಗಿ ಕೂದಲು ವಿಪರೀತ ರಾಸಾಯನಿಕ ಪರಿಣಾಮಕ್ಕೆ ಒಳಗಾಗಿ ಹಾನಿಗೊಳಗಾಗುವ ಸಾಧ್ಯತೆಯೇ ಹೆಚ್ಚು! ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ
ಹಾಗಿದ್ದರೆ ಕೋಲು ಮುರಿಯಬಾರದು ಹಾವು ಸಾಯಬಾರದೂ ಎಂಬಂತೆ ಕೂದಲಿಗೆ ಹಾನಿಯುಂಟಾಗದೆಯೇ ತಲೆಹೊಟ್ಟಿನ ನಿವಾರಣೆಯನ್ನು ಮಾಡಿಕೊಳ್ಳಬೇಕು ಎಂದಾದಲ್ಲಿ ಸಿಂಪಲ್ ಆಗಿರುವ ಮತ್ತು ಕೂಡಲೇ ಪರಿಹಾರ ನೀಡುವ ಮನೆಮದ್ದುಗಳು ನಿಮ್ಮ ಅಡುಗೆಮನೆಯಲ್ಲಿಯೇ ಇದೆ! ಬರೀ ಒಂದೇ ವಾರದಲ್ಲಿ 'ತಲೆಹೊಟ್ಟು ಸಮಸ್ಯೆ' ಮಂಗಮಾಯ!
ಹೌದು! ಸದಾ ಅಡುಗೆಮನೆಯಲ್ಲಿರುವ ಜೇನು, ಮೊಸರು ಮತ್ತು ಲಿಂಬೆಯನ್ನೊಳಗೊಂಡ ಹೇರ್ ಮಾಸ್ಕ್! ಇದು ತಲೆಹೊಟ್ಟನ್ನು ನಿವಾರಿಸುವುದರ ಜೊತೆಗೆ ಕೂದಲಿನ ಪೋಷಣೆಯನ್ನೂ ಮಾಡುತ್ತದೆ. ಹಾಗಿದ್ದರೆ ತಲೆಬುರುಡೆಯಿಂದ ಹೊಟ್ಟನ್ನು ನಿವಾರಿಸಿ ಕೂದಲಿಗೆ ಉತ್ತಮ ಆರೋಗ್ಯವನ್ನು ನೀಡುವುದಕ್ಕಾಗಿ ನೀಡಲಾದ ಹೇರ್ ಮಾಸ್ಕ್ ವಿಧಾವನ್ನು ಈ ಕೆಳಗೆ ಅರಿತುಕೊಳ್ಳಿ.

ಹಂತ 1
ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಳ್ಳಿ. ಇದಕ್ಕೆ ಸುವಾಸನೆ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹಂತ 2
1 ಚಮಚದಷ್ಟು ಲಿಂಬೆ ರಸವನ್ನು ಇದಕ್ಕೆ ಸೇರಿಸಿ. ಲಿಂಬೆಯನ್ನು ಅರ್ಧಭಾಗದಂತೆ ತುಂಡರಿಸಿ ಮತ್ತು ಚಮಚದ ಸಹಾಯದಿಂದ ಲಿಂಬೆಯ ತುಂಡನ್ನು 20 ನಿಮಿಷಗಳ ಕಾಲ ಬಿಸಿ ಮಾಡಿ. ಇದು ತಣ್ಣಗಾದ ನಂತರ ರಸವನ್ನು ಹಿಂಡಿಕೊಳ್ಳಿ.

ಹಂತ 3
ಈ ಮಿಶ್ರಣಕ್ಕೆ ಒಂದು ಚಮಚದಷ್ಟು ಜೇನು ಸೇರಿಸಿ. ಇದು ಕೂದಲಿನ ಬೇರುಗಳಿಗೆ ಮಾಯಿಶ್ಚರೈಸರ್ ಅನ್ನು ನೀಡುವುದು ಮಾತ್ರವಲ್ಲದೆ, ಇದರಲ್ಲಿರುವ ವಿಟಮಿನ್ ಸಿ ಅಂಶವು ಕೂದಲನ್ನು ರೇಷ್ಮೆಯಂತೆ ಮೃದುಗೊಳಿಸಲಿದೆ.

ಹಂತ 4
ಈ ಮಿಶ್ರಣಕ್ಕೆ ಬೇಕಾದಲ್ಲಿ 3-4 ಚಮಚ ಟಿ ಟ್ರಿ ಆಯಿಲ್ ಅನ್ನು ಸೇರಿಸಿಕೊಳ್ಳಬಹುದಾಗಿದೆ. ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಅಂಶಗಳಿಂದ ಸಮೃದ್ಧವಾಗಿದ್ದು, ಲಿಂಬೆ ರಸವು ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಿಸಿ ಸೂಕ್ಷ್ಮಾಣುಗಳನ್ನು ನಾಶಪಡಿಸಲಿದೆ.

ಹಂತ 5
ಅಗಲ ಹಲ್ಲಿನ ಬಾಣಣಿಗೆಯನ್ನು ಬಳಸಿಕೊಂಡು, ಕೂದಲಿನ ಸಿಕ್ಕನ್ನು ಬಿಡಿಸಿಕೊಳ್ಳಿ. ನಿಮ್ಮ ಕೂದಲು ತುಂಬಾ ಡ್ರೈ ಆಗಿದೆ ಎಂದಾದಲ್ಲಿ, ಕೆಲವು ಹನಿಗಳಷ್ಟು ತೆಂಗಿನೆಣ್ಣೆಯನ್ನು ತೆಗೆದುಕೊಂಡು ಕೂದಲಿಗೆ ಮಸಾಜ್ ಮಾಡಿಕೊಳ್ಳಿ. ಇದು ಸಿಕ್ಕನ್ನು ಬಿಡಿಸಲು ನೆರವನ್ನು ನೀಡಲಿದೆ.

ಹಂತ 6
ಮಾಸ್ಕ್‌ನಲ್ಲಿ ನಿಮ್ಮ ಬೆರಳುಗಳನ್ನು ಅದ್ದಿಕೊಳ್ಳಿ ಮತ್ತು ನಿಮ್ಮ ತಲೆಬುಡ ಮತ್ತು ಕೂದಲಿನ ತುದಿಗೆ ಮಾಸ್ಕ್ ಹಚ್ಚಿಕೊಳ್ಳಿ. ಕೂದಲನ್ನು ಸಣ್ಣ ವಿಭಾಗಗಳನ್ನಾಗಿ ಮಾಡಿಕೊಂಡು ಕೂಡ ಮಾಸ್ಕ್ ಅನ್ನು ನಿಮಗೆ ಹಚ್ಚಿಕೊಳ್ಳಬಹುದಾಗಿದೆ.

ಹಂತ 7
ನಿಮ್ಮ ಕೂದಲನ್ನು ಸಡಿಲವಾಗಿ ಗಂಟುಕಟ್ಟಿಕೊಳ್ಳಿ. ಒಂದು ಗಂಟೆಗಳ ಕಾಲ ಮಾಸ್ಕ್ ಕೂದಲಿನಲ್ಲಿ ಕೂರುವಂತೆ ಮಾಡಿ. ನಂತರ ಶಾಂಪೂ ಹಚ್ಚಿ ಕೂದಲಿನ ಕಂಡೀಷನಿಂಗ್ ಮಾಡಿ. ಕೂದಲಿನಿಂದ ಮಾಸ್ಕ್ ಸರಿಯಾಗಿ ನಿವಾರಣೆಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹಂತ 8
ಕೂದಲಿನಿಂದ ನೀರನ್ನು ನಿವಾರಿಸಿ. ಹಳೆಯ ಟಿಶರ್ಟ್‌ನಿಂದ ಕೂದಲನ್ನು ಗಂಟುಕಟ್ಟಿ ಇದರಿಂದ ನೈಸರ್ಗಿಕವಾಗಿ ಕೂದಲು ಒಣಗುತ್ತದೆ.

ಸಲಹೆಗಳು
ಹೇರ್ ಡ್ರೈಯರ್ ಅನ್ನು ಬಳಸುವ ಮುನ್ನ, ಹೀಟ್ ಪ್ರೊಟೆಕ್ಟಿಂಗ್ ಸೇರಮ್ ಹಚ್ಚುವಂತೆ ಅದನ್ನು ಹೊಂದಿಸಿಕೊಳ್ಳಿ ಕೂದಲು ಒದ್ದೆಯಾಗಿರುವಾಗ ಅದನ್ನು ಬಾಚಲು ಹೋಗದಿರಿ ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಇರುತ್ತದೆ ವಾರಕ್ಕೊಮ್ಮೆ ತೆಂಗಿನೆಣ್ಣೆಯ ಮಸಾಜ್ ಮಾಡಿಕೊಂಡು ಮಾಯಿಶ್ಚರೈಸ್ ಮಾಡಿಕೊಳ್ಳಿ

ಫಲಿತಾಂಶವೇನು?
ಈ ಲಿಂಬೆ ಹೇರ್ ಮಾಸ್ಕ್ ಅನ್ನು ನೀವು ನಿರಂತರವಾಗಿ ಬಳಸಿದಲ್ಲಿ, ನಿಮ್ಮ ಕೂದಲನ್ನು ಸೊಂಪಾಗಿಸಿ ಬುಡವನ್ನು ದೃಢಪಡಿಸಲಿದೆ. ವಾರಕ್ಕೊಮ್ಮೆ ಈ ಮಾಸ್ಕ್ ಅನ್ನು ಹಚ್ಚಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.



Click it and Unblock the Notifications
