For Quick Alerts
ALLOW NOTIFICATIONS  
For Daily Alerts

ದಟ್ಟ, ಕಪ್ಪು ಕೂದಲಿಗೆ ದಾಸವಾಳದ ಎಣ್ಣೆಯೇ ಸೈ

By Arhsad
|

ಕೂದಲಿಗೆ ಅತ್ಯುತ್ತಮವಾದ ಆರೈಕೆಯನ್ನು ನೀಡುವಲ್ಲಿ ದಾಸವಾಳ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಹಿರಿಯಜ್ಜಿಯರ ಕೂದಲು ನೀಳವಾಗಿರಲು ದಾಸವಾಳದ ಎಣ್ಣೆಯ ಬಳಕೆ ಮುಖ್ಯವಾಗಿದೆ. ದಾಸವಾಳದ ಎಣ್ಣೆಯ ಬಳಕೆಯಿಂದ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ಮತ್ತು ನೀಳವಾಗಿರಲು ಸಾಧ್ಯ. ಕೂದಲ ಆರೈಕೆಗೆ ಎಣ್ಣೆಯ ಬಳಕೆ ಎಷ್ಟು ಅಗತ್ಯವೆಂದು ಎಲ್ಲರೂ ಬಲ್ಲರು. ಕೂದಲಿಗೆ ಆರ್ದ್ರತೆ ನೀಡುವ ಮೂಲಕ ಕೂದಲಿಗೆ ಉತ್ತಮ ಪೋಷಣೆ ಹಾಗೂ ಕಾಂತಿ ದೊರಕುತ್ತದೆ.

ದಾಸವಾಳದ ಎಣ್ಣೆಯ ಪ್ರಯೋಜನಗಳು
ಕೂದಲಿಗೆ ಪೋಷಣೆ ನೀಡುವಲ್ಲಿ ಕೆಲವಾರು ಅವಶ್ಯಕ ಎಣ್ಣೆಗಳು ವಿವಿಧ ರೂಪದಲ್ಲಿ ಪ್ರಯೋಜನಕಾರಿಯಾಗಿವೆ. ಉದಾಹರಣೆಗೆ ಬಾದಾಮಿ ಎಣ್ಣೆಯ ಬಳಕೆಯಿಂದ ಕೂದಲು ಶೀಘ್ರವಾಗಿ ಬೆಳೆಯುತ್ತದೆ.
* ಇದೇ ರೀತಿಯಲ್ಲಿ ಕೂದಲ ಬಣ್ಣವನ್ನು ಗಾಢಗೊಳಿಸುವ ಕೆಲಸವನ್ನು ದಾಸವಾಳದ ಎಣ್ಣೆ ಮಾಡುತ್ತದೆ. ಕೂದಲಿನಲ್ಲಿ ಯಾವಾಗ ಕಂದು ಬಣ್ಣ ಕಂಡುಬರುತ್ತದೆಯೋ ಆಗ ಕೂದಲಿನ ಆರೋಗ್ಯ ಕುಂದಿದೆ ಎಂದು ತಿಳಿದುಕೊಳ್ಳಬೇಕು.

Hibiscus Oil

* ಕಂದು ಬಣ್ಣವೆಂದ ತಕ್ಷಣ ಕಂದು ಬಣ್ಣವನ್ನು ಕಪ್ಪು ಕೂದಲ ಮೇಲೆ ಲೇಪಿಸಿಕೊಂಡು ಬಣ್ಣವನ್ನು ಬದಲಿಸಿಕೊಂಡ ಕೂದಲಲ್ಲ. ಕೆಲವೊಮ್ಮೆ ಬಿಸಿಲು ಅತಿ ಹೆಚ್ಚಾದರೆ ಅಥವಾ ಆರ್ದ್ರತೆಯ ಕೊರತೆ ಇದ್ದರೆ ಕೂದಲು ಕೆಂಚಗಾಗುತ್ತದೆ. ಇಡಿಯ ದಿನ ಬಿಸಿಲಿನಲ್ಲಿ ಕಳೆಯುವ ಬೀದಿಯ ಮಕ್ಕಳ ಕೂದಲು ಕೆಂಚಗಾಗಲು ಇದೇ ಕಾರಣ.
* ಈ ತರಹದ ಕೆಂಚುಕೂದಲಿಗೆ ದಾಸವಾಳದ ಎಣ್ಣೆ ಅತ್ಯುತ್ತಮವಾದ ಪರಿಹಾರವಾಗಿದೆ.


ದಾಸವಾಳ ಹೂವಿನ ಹತ್ತಾರು ಔಷಧೀಯ ಗುಣಗಳು!

ದಾಸವಾಳದ ಎಣ್ಣೆಯನ್ನು ಬಳಸುವುದು ಹೇಗೆ?
* ಕೆಲವು ತಾಜಾ ದಾಸವಾಳದ ಹೂವುಗಳನ್ನು ಸಂಗ್ರಹಿಸಿ. ಇನ್ನೂ ಬಿರಿಯದಿರುವ ಮೊಗ್ಗುಗಳು ಇನ್ನೂ ಉತ್ತಮ.
* ಈ ಹೂವುಗಳನ್ನು ನೈಸರ್ಗಿಕ ಕೊಬ್ಬರಿ ಎಣ್ಣೆಯಲ್ಲಿ ಸುಮಾರು ನಾಲ್ಕೈದು ನಿಮಿಷ ಕುದಿಸಿ. ಉರಿ ಚಿಕ್ಕದಾಗಿಸಿ. ಯಾವುದೇ ಕಾರಣಕ್ಕೂ ಈ ಹೂವುಗಳು ಸುಡಬಾರದು.
* ಒಂದು ವೇಳೆ ದಾಸವಾಳದ ಗಿಡ ನಿಮ್ಮ ಮನೆಯಲ್ಲಿಯೇ ಇದ್ದರೆ ಕೆಲವು ಎಲೆಗಳನ್ನೂ ಈ ಎಣ್ಣೆಯಲ್ಲಿ ಬೆರೆಸಿ. ಈ ಎಲೆಗಳಲ್ಲಿಯೂ ಕೂದಲ ಪೋಷಣೆಗೆ ಪೂರಕವಾದ ಗುಣಗಳಿವೆ.


* ದಾಸವಾಳದ ಎಣ್ಣೆಯನ್ನು ಸಂಗ್ರಹಿಸುವ ಇನ್ನೊಂದು ವಿಧಾನವೆಂದರೆ ಈಗಾಗಲೇ ಬಿಸಿಯಾಗಿರುವ ಕೊಬ್ಬರಿ ಎಣ್ಣೆಯಲ್ಲಿ ಈ ಹೂವುಗಳನ್ನು ಹತ್ತು ನಿಮಿಷ ಇರಿಸಿ. ಇದರಿಂದ ಹೂವಿನಲ್ಲಿರುವ ಎಣ್ಣೆಯಂಶ ಕೊಬ್ಬರಿ ಎಣ್ಣೆಯಲ್ಲಿ ಬೆರೆಯುತ್ತದೆ.
* ಇನ್ನೊಂದು ವಿಧಾನದಲ್ಲಿ ಹೂವುಗಳನ್ನು ಬೆರೆಸಿದ ಎಣ್ಣೆಯನ್ನು ಮೈಕ್ರೋವೇವ್ ನಲ್ಲಿ ಐದು ನಿಮಿಷ ಇರಿಸಿ ಕನಿಷ್ಟ ಶಕ್ತಿಯಲ್ಲಿ ಬಿಸಿಮಾಡಿ. ಒಳಗಿಟ್ಟ ಗಾಜಿನ ಬೋಗುಣಿಯನ್ನು ಇನ್ನೊಂದು ಗಾಜಿನ ತಟ್ಟೆಯಿಂದ ಮುಚ್ಚುವುದನ್ನು ಮಾತ್ರ ಮರೆಯಬಾರದು. ಇಲ್ಲದಿದ್ದರೆ ಪ್ರಖರ ಕಿರಗಣಗಳು ಎಣ್ಣೆಯ ಶಕ್ತಿಗುಂದಿಸಬಹುದು.
* ಈ ಎಣ್ಣೆಯನ್ನು ತಣಿಸಿದ ಬಳಿಕ ಕನಿಷ್ಟ ವಾರಕ್ಕೊಮ್ಮೆ ತಲೆಗೆ ಹಚ್ಚಿಕೊಂಡು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ಕೂದಲು ಕಪ್ಪಗಾಗುವುದನ್ನು ಗಮನಿಸಬಹುದು. ಈ ಎಣ್ಣೆಯ ಹೇರ್ ಪ್ಯಾಕ್ ಸಹಾ ಉತ್ತಮ ಪರಿಣಾಮ ಒದಗಿಸುತ್ತದೆ ಹಾಗೂ ಕೂದಲು ಹೆಚ್ಚು ಘನ, ಗಾಢ ಹಾಗೂ ಶಕ್ತಿಯುತವಾಗುತ್ತದೆ.
* ಹೇರ್ ಪ್ಯಾಕ್ ತಯಾರಿಸಲು ಐದು ದಾಸವಾಳದ ದಳಗಳನ್ನು ಅಥವಾ ಗ್ರಂಥಿಗೆ ಅಂಗಡಿಯಲ್ಲಿ ಸಿಗುವ ಒಣ ದಾಸವಾಳ ಹೂವಿನ ದಳಗಳನ್ನು ಎರಡು ದೊಡ್ಡ ಚಮಚ ಜೇನು ಮತ್ತು ನಾಲ್ಕು ದೊಡ್ಡಚಮಚ ಮೊಸರಿನೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
* ಇದಕ್ಕೆ ಎರಡು ದೊಡ್ಡ ಚಮಚ ತೆಂಗಿನ ಹಾಲನ್ನು ಬೆರೆಸಿ. ಇದರಿಂದ ಈ ಮಿಶ್ರಣ ಇನ್ನಷ್ಟು ಬಲಯುತವಾಗುತ್ತದೆ ಹಾಗೂ ಕೂದಲಿಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಸುಮಾರು ಒಂದು ಘಂಟೆ ಬಿಟ್ಟು ತಣ್ಣೀರಿನಿಂದ ಹಾಗೂ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಈ ನೈಸರ್ಗಿಕ ವಿಧಾನಗಳಿಂದ ದಾಸವಾಳದ ಎಣ್ಣೆಯ ಬಳಕೆಯಿಂದ ನಿಮ್ಮ ಕೂದಲಿಗೆ ನೈಸರ್ಗಿಕ ಗಾಢವರ್ಣ ಹಾಗೂ ದೃಢತೆ ಶೀಘ್ರವೇ ದೊರಕುತ್ತದೆ.
English summary

Hibiscus Oil For Beautiful Black Hair

Hibiscus for hair is a very beneficial natural ingredient. It is secret behind the flowing black manes of our grandmothers. Hibiscus oil gives you naturally dark black and beautiful hair. As you know there is no alternative to oiling your hair for proper hair care. What oil use to moisturise your hair will impact its growth and nourishment in different ways.
Story first published: Thursday, August 31, 2017, 12:49 [IST]
X
Desktop Bottom Promotion