ಸೋಪು-ಶಾಂಪೂ ಪಕ್ಕಕ್ಕಿಡಿ ಇಂತಹ 'ಹೇರ್ ಮಾಸ್ಕ್' ಮಾತ್ರ ಬಳಸಿ!

Posted By: Hemanth
Subscribe to Boldsky

ರೇಷ್ಮೆಯಂತಹ ಉದ್ದಗಿನ ಕೂದಲು ಪ್ರತಿಯೊಬ್ಬ ಮಹಿಳೆಯ ಕನಸು ಎನ್ನುವುದರಲ್ಲಿ ಸಂಶಯವೇ ಇಲ್ಲ.. ಇಂತಹ ಕೂದಲು ಪಡೆಯಲು ಅದರ ಆರೈಕೆ ಕೂಡ ಮಾಡಬೇಕಾಗುತ್ತದೆ. ಕೆಲವು ಮಹಿಳೆಯರ ಕೂದಲು ಎಷ್ಟೇ ಆರೈಕೆ ಮಾಡಿದರೂ ಅದು ತುಂಡಾಗಿ ಉದುರಿ ಹಾನಿಗೀಡಾಗುತ್ತದೆ. ಇಂತಹ ಸಮಸ್ಯೆಯಿರುವ ಮಹಿಳೆಯರು ಹಲವಾರು ರೀತಿಯ ಶಾಂಪೂ ಹಾಗೂ ಕಂಡೀಷನರ್‌ಗಳನ್ನು ಬಳಸಿಕೊಳ್ಳುತ್ತಾರೆ. 

ಉದ್ದ ಕೂದಲಿಗಾಗಿ-ಮನೆಯಲ್ಲಿಯೇ ಇದೆ ಮದ್ದು! ಪ್ರಯತ್ನಿಸಿ ನೋಡಿ

ಆದರೆ ಮಾರುಕಟ್ಟೆಯಲ್ಲಿ ಸಿಗುವ ಈ ಉತ್ಪನ್ನಗಳಲ್ಲಿ ಹೆಚ್ಚಾಗಿ ರಾಸಾಯನಿಕಗಳನ್ನು ಬಳಸಿರುತ್ತಾರೆ. ಇದು ಕೂದಲಿಗೆ ಮತ್ತಷ್ಟು ಹಾನಿ ಉಂಟು ಮಾಡುವುದು. ತೆಳು ಹಾಗೂ ಉದುರುವ ಕೂದಲು ಇದ್ದರೆ ಅದರಿಂದ ಮುಕ್ತಿ ಪಡೆಯಲು ಬೋಲ್ಡ್ ಸ್ಕೈ ನಿಮಗೆ ಮನೆಯಲ್ಲೇ ತಯಾರಿಸಬಹುದಾದ ಹಲವಾರು ರೀತಿಯ ಹೇರ್ ಪ್ಯಾಕ್ ಗಳನ್ನು ಹೇಳಿಕೊಡಲಿದೆ. ಇದನ್ನು ಬಳಸಿಕೊಂಡು ಕೂದಲಿನ ಆರೈಕೆಯನ್ನು ಮಾಡಬಹುದು. ಅದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ... 

ಚಾಕಲೇಟ್ ಮಾಸ್ಕ್

ಚಾಕಲೇಟ್ ಮಾಸ್ಕ್

ಕೂದಲು ತೆಳು ಆಗುವಂತಹ ಸಮಸ್ಯೆಯಿದ್ದರೆ ಇದನ್ನು ಹೋಗಲಾಡಿಸಲು ಚಾಕಲೇಟ್ ಮಾಸ್ಕ್ ತುಂಬಾ ಸುಲಭ ವಿಧಾನವಾಗಿದೆ. ಮೂರರಿಂದ ನಾಲ್ಕು ಚಮಚದಷ್ಟು ಕೋಕಾ ಹುಡಿಯನ್ನು ತೆಗೆದುಕೊಂಡು ಅದನ್ನು ಹಾಲಿಗೆ ಬೆರೆಸಿಕೊಳ್ಳಬೇಕು. ಇದಕ್ಕೆ ಒಂದು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಕ್ಯಾಸ್ಟರ್ ತೈಲ ಮತ್ತು ಒಂದು ಚಮಚ ಅಡುಗೆ ಸೋಡಾ ಹಾಕಿ ಬೆರೆಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ತಯಾರಿಸಿದ ಮಾಸ್ಕ್ ನ್ನು ಕೂದಲಿನ ಬುಡ ಹಾಗೂ ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಮಾಸ್ಕ್ ಸರಿಯಾಗಿ ಒಣಗಲು ಬಿಡಿ ಮತ್ತು ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

ಬಿಯರ್ ಮತ್ತು ಮೊಟ್ಟೆ ಲೋಳೆಯ ಚಿಕಿತ್ಸೆ

ಬಿಯರ್ ಮತ್ತು ಮೊಟ್ಟೆ ಲೋಳೆಯ ಚಿಕಿತ್ಸೆ

ಕೂದಲಿಗೆ ಪೋಷಣೆಯನ್ನು ನೀಡಲು ಮತ್ತು ಕೂದಲು ತೆಳುವಾಗುವುದನ್ನು ತಡೆಯಲು ಬಿಯರ್ ಮತ್ತು ಮೊಟ್ಟೆಯ ಲೋಳೆಯ ಚಿಕಿತ್ಸೆಯನ್ನು ಮಾಡಬಹುದು. ಒಂದು ಕಪ್ ಬಿಯರ್ ತೆಗೆದುಕೊಂಡು ಅದಕ್ಕೆ ಮೊಟ್ಟೆಯ ಲೋಳೆ ಹಾಕಿಕೊಳ್ಳಿ. ಅವೆರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಿ. ತಲೆಗೆ ಪ್ಲಾಸ್ಟಿಕ್ ಕಟ್ಟಿಕೊಳ್ಳಿ. ಒಂದು ಗಂಟೆ ಕಾಲ ಇದು ಹಾಗೆ ಇರಲಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿದ ತೊಳೆಯಿರಿ.

ಹೊಳೆಯುವ ಕೂದಲಿಗೂ, ತಂಪಾದ ಬಿಯರ್‌ಗೂ ಎತ್ತಿಂದೆತ್ತ ಸಂಬಂಧ?

ಅಡುಗೆ ಸೋಡಾದ ಮಾಸ್ಕ್

ಅಡುಗೆ ಸೋಡಾದ ಮಾಸ್ಕ್

ಅಡುಗೆ ಸೋಡಾದ ಮಾಸ್ಕ್ ನ್ನು ಬಳಸುವುದರಿಂದ ತಲೆಬುರುಡೆಯು ಆಳವಾಗಿ ಸ್ವಚ್ಛವಾಗುವುದು ಮಾತ್ರವಲ್ಲದೆ ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ಕೂದಲು ತೆಳುವಾಗದಂತೆ ತಡೆಯುವುದು. ಈ ಮಾಸ್ಕ್ ನ್ನು ಮನೆಯಲ್ಲೇ ತಯಾರಿಸಲು ಮೂರು ಚಮಚ ಅಡುಗೆ ಸೋಡಾ, ಒಂದು ಚಮಚ ಅಲೋವೆರಾ ಜೆಲ್, ಒಂದು ಚಮಚ ದಾಲ್ಚಿನ್ನಿ ಹುಡಿಯನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಪ್ಪಗಿನ ಪೇಸ್ಟ್ ಮಾಡಿಕೊಂಡು ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಮಸಾಜ್ ಮಾಡಿದ ಬಳಿಕ 30 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

ಮೊಟ್ಟೆಯ ಪ್ರೋಟೀನ್ ಹೇರ್ ಮಾಸ್ಕ್

ಮೊಟ್ಟೆಯ ಪ್ರೋಟೀನ್ ಹೇರ್ ಮಾಸ್ಕ್

ಕೂದಲು ತೆಳುವಾಗುವುದನ್ನು ತಡೆಯಬೇಕಾದರೆ ಮನೆಯಲ್ಲೇ ಮೊಟ್ಟೆಯ ಪ್ರೋಟೀನ್ ಮಾಸ್ಕ್ ಅನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಒಂದು ಮೊಟ್ಟೆ, ಒಂದು ಚಮಚ ಕ್ಯಾಸ್ಟರ್ ತೈಲ, ಒಂದು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಲಿಂಬೆರಸ ಬೇಕು. ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ತಲೆಬುರುಡೆಗೆ ಮೊಟ್ಟೆಯ ಮಾಸ್ಕ್ ನಿಂದ ಮಸಾಜ್ ಮಾಡಿಕೊಳ್ಳಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

ಆಲಿವ್ ತೈಲ ಮತ್ತು ಶುಂಠಿಯ ಹೇರ್ ಮಾಸ್ಕ್

ಆಲಿವ್ ತೈಲ ಮತ್ತು ಶುಂಠಿಯ ಹೇರ್ ಮಾಸ್ಕ್

ಆಲಿವ್ ಎಣ್ಣೆಯಲ್ಲಿ ಹೆಚ್ಚಿನ ವಿಟಮಿನ್ ಮತ್ತು ಪ್ರೋಟೀನ್ ಇದೆ. ಇದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಶುಂಠಿಯಲ್ಲಿ ಕೂದಲು ತೆಳ್ಳಗಾಗುವ ವಿರುದ್ಧ ಹೋರಾಡುವಂತಹ ಅಂಶಗಳಿವೆ. ಆಲಿವ್ ತೈಲ ಮತ್ತು ಶುಂಠಿಯ ಹೇರ್ ಮಾಸ್ಕ್ ನಿಂದ ಉದ್ದಗಿನ ಹಾಗೂ ರೇಷ್ಮೆಯಂತಹ ಕೂದಲನ್ನು ಪಡೆಯಬಹುದು. ನಾಲ್ಕರಿಂದ ಐದು ಚಮಚ ಆಲಿವ್ ತೈಲ ಮತ್ತು ಒಂದು ಚಮಚ ಶುಂಠಿ ಹುಡಿ ಸೇರಿಸಿಕೊಳ್ಳಿ. ಆಲಿವ್ ತೈಲಕ್ಕೆ ಶುಂಠಿಯ ತುರಿಯನ್ನು ಹಾಕಬಹುದು. ಈ ಮಾಸ್ಕ್ ನಿಂದ ತಲೆಗೆ ಮಸಾಜ್ ಮಾಡಿಕೊಳ್ಳಿ ಮತ್ತು ತಣ್ಣೀರಿನಿಂದ ತೊಳೆಯಿರಿ.

ಆಲಿವ್ ಎಣ್ಣೆ ಮತ್ತು ತೆಂಗಿನ ಹಾಲು

ಆಲಿವ್ ಎಣ್ಣೆ ಮತ್ತು ತೆಂಗಿನ ಹಾಲು

ಕೂದಲು ತೆಳ್ಳಗಾಗುವುದನ್ನು ತಡೆಯಲು ತೆಂಗಿನ ಹಾಲಿನ ಮಾಸ್ಕ್ ತುಂಬಾ ಒಳ್ಳೆಯ ಮನೆಮದ್ದಾಗಿದೆ. ತೆಂಗಿನ ಹಾಲಿನಲ್ಲಿ ಹೆಚ್ಚಿನ ವಿಟಮಿನ್ ಮತ್ತು ಕೊಬ್ಬು ಇರುತ್ತದೆ. ಇದು ಕೂದಲಿಗೆ ಹಲವಾರು ರೀತಿಯಿಂದ ನೆರವಾಗುತ್ತದೆ. ಅರ್ಧ ಕಪ್ ಆಲಿವ್ ಎಣ್ಣೆ ಮತ್ತು ಅರ್ಧ ಕಪ್ ತೆಂಗಿನ ಹಾಲನ್ನು ಬೆರೆಸಿಕೊಳ್ಳಿ. ಇದನ್ನು ತಲೆಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ಶಾವರ್ ಕ್ಯಾಪ್ ಧರಿಸಿ. ಇದರಿಂದ ಮಾಸ್ಕ್ ಆಳಕ್ಕೆ ಇಳಿಯುವುದು. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಕೂದಲುದುರುವ ಸಮಸ್ಯೆಗೆ, ಒಂದೇ ನಿಮಿಷದಲ್ಲಿ ಚಿಕಿತ್ಸೆ!

For Quick Alerts
ALLOW NOTIFICATIONS
For Daily Alerts

    English summary

    Hair Masks To Treat Super Thin & Damaged Hair

    If you are suffering from super thin and damaged hair, here we would like to mention some of the best hair packs to treat this problem. Using these hair packs can help to transform your tresses and also make them look beautiful and healthy. So, if you want to enjoy strong and healthy hair without spending a lot of money, try these easy homemade packs.
    Story first published: Tuesday, June 6, 2017, 23:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more