Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕೂದಲುದುರುವ ಸಮಸ್ಯೆಗೆ, ಒಂದೇ ನಿಮಿಷದಲ್ಲಿ ಚಿಕಿತ್ಸೆ!
ಕೂದಲು ನಿಜಕ್ಕೂ ಮಾನವನ ನೈಸರ್ಗಿಕ ಆಭರಣವೇ ಸರಿ. ಕೂದಲ ಆರೈಕೆಯ ಬಗ್ಗೆ ಈಗಾಗಲೇ ಸಾಕಷ್ಟು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಒಟ್ಟಾರೆಯಾಗಿ ಕೂದಲ ಆರೈಕೆಯನ್ನು ನಿರ್ಲಕ್ಷಿಸದಿರಿ. ಕೂದಲು ಉದುರುವಿಕೆಯಿಂದ ನೀವು ಬಳಲುತ್ತಿದ್ದರೆ, ಕೂದಲಿನ ಬೇರಿನ ಭಾಗಕ್ಕೆ ಅವಶ್ಯಕತೆಗನುಸಾರ ರಕ್ತ ಸಂಚಾರ ಆಗುತ್ತಿರುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಒಂದು ಉಪಾಯ.
ಕೂದಲಿನ ಬೇರಿನ ಭಾಗದ ಚರ್ಮವನ್ನು ತಿಕ್ಕುವ ಪ್ರಕ್ರಿಯೆ. ಹೌದು, ಕೇಶ ತಜ್ಞರು ಹೇಳುವ ಪ್ರಕಾರ ಕೂದಲನ್ನು ಸ್ವಚ್ಛಗೊಳಿಸಿದ ನಂತರ ನಿಮ್ಮ ಬೆರಳುಗಳಿಂದ ಕೂದಲ ಬೇರಿನ ಚರ್ಮದ ಭಾಗವನ್ನು ಚೆನ್ನಾಗಿ ತಿಕ್ಕಿದರೆ ಕೇಶ ಉದುರುವ ಸಮಸ್ಯೆಯಿಂದ ದೂರವಾಗಬಹುದು. ಇದು ನಿಜಕ್ಕೂ ಉತ್ತಮ ಪರಿಹಾರ.

ಇದು ಹೇಗೆ ಉಪಯೋಗವಾಗುತ್ತದೆ
ಈ ಸಮಸ್ಯೆಗೆ ಮನೆಯಲ್ಲಿಯೇ ತಲೆಯ ಮೇಲ್ಭಾಗದ ಚರ್ಮವನ್ನು ತಿಕ್ಕುವ ಅಭ್ಯಾಸದಿಂದ ಸೂಕ್ತ ಪರಿಹಾರವು ತಕ್ಷಣದಲ್ಲೇ ಲಭಿಸುತ್ತದೆ. ಇದನ್ನು ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿದ ನಂತರ ತೇವಾಂಶ ಇರುವಾಗಲೇ ತಿಕ್ಕುವ ಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಇದು ಸಬಾಷಿಯಸ್ ಗ್ಲಾಂಡ್ ಗೆ ಚೈತನ್ಯ ತುಂಬಿ ಈ ಭಾಗಕ್ಕೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಇದರಿಂದ ನಿಮ್ಮ ಕೇಶವು ಹೆಚ್ಚು ಆರೋಗ್ಯದಿಂದ ಬೆಳವಣಿಗೆಯಾಗುತ್ತದೆ. ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು
ನೀವೇನು ಮಾಡಬೇಕು..?
ಮೊದಲು ನಿಮ್ಮ ಕೂದಲನ್ನು ಎಂದಿನಂತೆ ಸ್ವಚ್ಛಗೊಳಿಸಿ. ನಂತರ ತಣ್ಣನೆಯ ನೀರಿನಿಂದ ಕೊನೆಯದಾಗಿ ತೊಳೆದುಕೊಳ್ಳಿ. ಇದು ಚಿಕ್ಕಚಿಕ್ಕ ರಂಧ್ರಗಳನ್ನು ಮುಚ್ಚಿ, ಕೂದಲುಗಳು ಒಣಗದಂತೆ ತಡೆದು ಒರಟಾಗದಂತೆ ನೋಡಿಕೊಳ್ಳುತ್ತದೆ. ಹೀಗೆ ಮಾಡಿದ ಮೇಲೆ ವಸ್ತ್ರದಿಂದ ಕೇಶವನ್ನು ಒಣಗಿಸಿ. ಈಗ ನಿಮ್ಮ ಕೈ ಬೆರಳುಗಳನ್ನು ಕೂದಲ ಬೇರಿನ ಚರ್ಮದ ಭಾಗಕ್ಕೆ ವೃತ್ತಾಕಾರದಲ್ಲಿ ಚೆನ್ನಾಗಿ ತಿಕ್ಕಲು ಪ್ರಾರಂಭಿಸಿ.
ಎಚ್ಚರಿಕೆ, ಈ ಪ್ರಕ್ರಿಯೆಯನ್ನು ನಿಧಾನವಾಗಿ ಏಕರೂಪದ ಒತ್ತಡ ಹಾಕಿ ನಯವಾಗಿ ತಿಕ್ಕಿ. ನಿಮ್ಮ ಉಗುರುಗಳ ಬಗ್ಗೆ ಗಮನವಿರಲಿ. ಏಕೆಂದರೆ ಉಗುರುಗಳ ತಿಕ್ಕುವಿಕೆಯಿಂದ ಕೂದಲುಗಳು ತುಂಡಾಗುವ ಅಪಾಯವಿರುತ್ತದೆ. ಚರ್ಮಕ್ಕೂ ಹಾನಿಯುಂಟು ಮಾಡಿ ಅಪಾಯ ಉಂಟು ಮಾಡುತ್ತದೆ.



Click it and Unblock the Notifications

